90ನೇ ವಯಸ್ಸಿನಲ್ಲಿ ಕಾರು ಚಾಲನೆ ಮಾಡಿದ ಅಜ್ಜಿ, ವೃದ್ಧೆಯ ಜೀವನೋತ್ಸಾಹಕ್ಕೆ ಬಹು ಪರಾಕ್ ಹೇಳಿದ ಸಿಎಂ

ಹಲವು ಬಾರಿ ಅಪ್ರಾಪ್ತ ವಯಸ್ಕ ಬಾಲಕರು, ಬಾಲಕಿಯರು ವಾಹನಗಳನ್ನು ಚಾಲನೆ ಮಾಡುವ ಸುದ್ದಿಗಳು ವರದಿಯಾಗುತ್ತಲೇ ಇರುತ್ತವೆ. ಕೆಲವು ತಿಂಗಳುಗಳ ಹಿಂದೆ ಬೆಂಗಳೂರಿನ 9 ವರ್ಷದ ಬಾಲಕನೊಬ್ಬ ಕಾರು ಚಾಲನೆ ಮಾಡಿದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈಗ ಮಧ್ಯಪ್ರದೇಶದಲ್ಲಿ 90 ವರ್ಷದ ಅಜ್ಜಿಯೊಬ್ಬರು ಕಾರು ಚಾಲನೆ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

90ನೇ ವಯಸ್ಸಿನಲ್ಲಿ ಕಾರು ಚಾಲನೆ ಮಾಡಿದ ಅಜ್ಜಿ, ವೃದ್ಧೆಯ ಜೀವನೋತ್ಸಾಹಕ್ಕೆ ಬಹು ಪರಾಕ್ ಹೇಳಿದ ಸಿಎಂ

ರೇಶಮ್ ಬಾಯ್ ದನ್ಸ್ವರ್, ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ಬಿಲಾವಲಿ ಪ್ರದೇಶಕ್ಕೆ ಸೇರಿದವರು. ಅವರಿಗೆ ಈಗ 90 ವರ್ಷ ವಯಸ್ಸು. ಅವರು ಹಳೆಯ Maruti 800 ಕಾರ್ ಅನ್ನು ಸಾರ್ವಜನಿಕ ರಸ್ತೆಯಲ್ಲಿ ಚಾಲನೆ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊವನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರವರೇ ತಮ್ಮ ಟ್ವಿಟರ್ ಖಾತೆಯ ಮೂಲಕ ಶೇರ್ ಮಾಡಿದ್ದಾರೆ.

90ನೇ ವಯಸ್ಸಿನಲ್ಲಿ ಕಾರು ಚಾಲನೆ ಮಾಡಿದ ಅಜ್ಜಿ, ವೃದ್ಧೆಯ ಜೀವನೋತ್ಸಾಹಕ್ಕೆ ಬಹು ಪರಾಕ್ ಹೇಳಿದ ಸಿಎಂ

ಈ ವೀಡಿಯೊ ಶೇರ್ ಮಾಡಿರುವ ಅವರು, ಈ ಅಜ್ಜಿ 90ನೇ ವಯಸ್ಸಿನಲ್ಲಿ ಕಾರು ಚಾಲನೆ ಮಾಡುವ ಮೂಲಕ ಜೀವನದಲ್ಲಿ ಆಸೆಯನ್ನು ಪೂರೈಸಲು ವಯಸ್ಸಿನ ಮಿತಿಯಿಲ್ಲವೆಂದು ತೋರಿಸಿದ್ದಾರೆ. ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ. ಜೀವನವನ್ನು ನಡೆಸಲು ಉತ್ಸಾಹ ಇರಬೇಕು ಎಂದು ಪೋಸ್ಟ್ ಮಾಡಿದ್ದಾರೆ.

90ನೇ ವಯಸ್ಸಿನಲ್ಲಿ ಕಾರು ಚಾಲನೆ ಮಾಡಿದ ಅಜ್ಜಿ, ವೃದ್ಧೆಯ ಜೀವನೋತ್ಸಾಹಕ್ಕೆ ಬಹು ಪರಾಕ್ ಹೇಳಿದ ಸಿಎಂ

ಸುದ್ದಿ ಸಂಸ್ಥೆಯೊಂದರ ಜೊತೆಗೆ ಮಾತನಾಡಿದ ರೇಶಮ್ ಬಾಯ್, ತಮ್ಮ ಮಗಳು ಸೊಸೆ ಸೇರಿದಂತೆ ಕುಟುಂಬದ ಸದಸ್ಯರೆಲ್ಲರಿಗೂ ಕಾರು ಚಾಲನೆ ಮಾಡಲು ತಿಳಿದಿರುವುದರಿಂದ ನಾನು ಸಹ ಕಾರ್ ಅನ್ನು ಚಾಲನೆ ಮಾಡಲು ಕಲಿತೆ ಎಂದು ಹೇಳಿದ್ದಾರೆ. ನನಗೆ ಡ್ರೈವಿಂಗ್ ಮಾಡುವುದು ತುಂಬಾ ಇಷ್ಟ. ನಾನು ಕಾರುಗಳನ್ನು ಮಾತ್ರವಲ್ಲದೇ ಟ್ರ್ಯಾಕ್ಟರ್‌ಗಳನ್ನು ಸಹ ಚಾಲನೆ ಮಾಡಿದ್ದೇನೆ ಎಂದು ಅವರು ಹೇಳಿದ್ದಾರೆ.

90ನೇ ವಯಸ್ಸಿನಲ್ಲಿ ಕಾರು ಚಾಲನೆ ಮಾಡಿದ ಅಜ್ಜಿ, ವೃದ್ಧೆಯ ಜೀವನೋತ್ಸಾಹಕ್ಕೆ ಬಹು ಪರಾಕ್ ಹೇಳಿದ ಸಿಎಂ

ಮಧ್ಯಪ್ರದೇಶದ ಮುಖ್ಯಮಂತ್ರಿರವರೇ ಈ ವೀಡಿಯೊವನ್ನು ಶೇರ್ ಮಾಡಿದ ನಂತರ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವಾರು ಜನರು ಈ ವೀಡಿಯೊವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದೇ ವೇಳೆ ಕೆಲವರು 90 ವರ್ಷದ ಅಜ್ಜಿ ಸಾರ್ವಜನಿಕ ರಸ್ತೆಯಲ್ಲಿ ಕಾರು ಚಾಲನೆ ಮಾಡುವುದನ್ನು ವಿರೋಧಿಸಿದ್ದಾರೆ.

90ನೇ ವಯಸ್ಸಿನಲ್ಲಿ ಕಾರು ಚಾಲನೆ ಮಾಡಿದ ಅಜ್ಜಿ, ವೃದ್ಧೆಯ ಜೀವನೋತ್ಸಾಹಕ್ಕೆ ಬಹು ಪರಾಕ್ ಹೇಳಿದ ಸಿಎಂ

ಈ ರೀತಿಯ ಸಾರ್ವಜನಿಕ ರಸ್ತೆಯಲ್ಲಿ ಕಾರ್ ಅನ್ನು ಚಾಲನೆ ಮಾಡಲು ಅವರಿಗೆ ಮಾನ್ಯವಾದ ಚಾಲನಾ ಪರವಾನಗಿ ಇದೆಯೇ ಎಂದು ಸಾಕಷ್ಟು ಜನರು ಪ್ರಶ್ನಿಸಿದ್ದಾರೆ. ಮಧ್ಯಪ್ರದೇಶದ ಸಾರಿಗೆ ಇಲಾಖೆಯ ನಿಯಮಗಳ ಪ್ರಕಾರ, ಶಾಶ್ವತ ಚಾಲನಾ ಪರವಾನಗಿಯನ್ನು 20 ವರ್ಷಗಳವರೆಗೆ ಅಥವಾ 50 ವರ್ಷ ವಯಸ್ಸಾಗುವವರೆಗೆ, ಯಾವುದು ಮೊದಲೋ ಅಲ್ಲಿಯವರೆಗೂ ನೀಡಲಾಗುತ್ತದೆ.

90ನೇ ವಯಸ್ಸಿನಲ್ಲಿ ಕಾರು ಚಾಲನೆ ಮಾಡಿದ ಅಜ್ಜಿ, ವೃದ್ಧೆಯ ಜೀವನೋತ್ಸಾಹಕ್ಕೆ ಬಹು ಪರಾಕ್ ಹೇಳಿದ ಸಿಎಂ

ವಾಣಿಜ್ಯ ವಾಹನಗಳಿಗೆ ನೀಡಲಾಗುವ ಶಾಶ್ವತ ಚಾಲನಾ ಪರವಾನಗಿಯನ್ನು ಮೂರು ವರ್ಷಗಳ ನಂತರ ನವೀಕರಿಸಬೇಕಾಗುತ್ತದೆ. ಭಾರತದಲ್ಲಿ ಚಾಲನಾ ಪರವಾನಗಿಗಳನ್ನು 75 ವರ್ಷ ವಯೋಮಿತಿಯವರೆಗೆ ನವೀಕರಿಸಲು ಕೇಂದ್ರ ಸರ್ಕಾರವು ಚಿಂತನೆ ನಡೆಸುತ್ತಿದೆ. ಮೋಟಾರು ವಾಹನ ಕಾಯ್ದೆಯಲ್ಲಿ ಪರವಾನಗಿ ನವೀಕರಣಕ್ಕೆ 75 ವರ್ಷಗಳ ಗರಿಷ್ಠ ವಯೋಮಿತಿ ನಿಗದಿ ಪಡಿಸಲು ಕೇಂದ್ರವು ನಿರ್ಧರಿಸಿದೆ ಎಂದು ಹೇಳಲಾಗಿದೆ.

90ನೇ ವಯಸ್ಸಿನಲ್ಲಿ ಕಾರು ಚಾಲನೆ ಮಾಡಿದ ಅಜ್ಜಿ, ವೃದ್ಧೆಯ ಜೀವನೋತ್ಸಾಹಕ್ಕೆ ಬಹು ಪರಾಕ್ ಹೇಳಿದ ಸಿಎಂ

ಸರ್ಕಾರವು ಎಲ್ಲಿಯೂ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟವರು ವಾಹನ ಚಾಲನೆ ಮಾಡಬಾರದು ಹಾಗೂ ವಯಸ್ಸಾದವರಿಗೆ ಚಾಲನಾ ಪರವಾನಗಿಯನ್ನು ನೀಡಬಾರದು ಎಂದು ಹೇಳಿಲ್ಲ. ಆದರೆ ಭಾರತದಲ್ಲಿ ವಾಹನ ಚಾಲನೆ ಮಾಡಲು 18 ವರ್ಷ ಕನಿಷ್ಠ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. ಮಧ್ಯಪ್ರದೇಶದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ಶಾಶ್ವತ ಚಾಲನಾ ಪರವಾನಗಿ ನೀಡಲಾಗುವುದಿಲ್ಲ.

90ನೇ ವಯಸ್ಸಿನಲ್ಲಿ ಕಾರು ಚಾಲನೆ ಮಾಡಿದ ಅಜ್ಜಿ, ವೃದ್ಧೆಯ ಜೀವನೋತ್ಸಾಹಕ್ಕೆ ಬಹು ಪರಾಕ್ ಹೇಳಿದ ಸಿಎಂ

ಮೋಟಾರು ವಾಹನ ಕಾಯ್ದೆಗೆ ಸರ್ಕಾರವು ತರಲು ಬಯಸಿರುವ ಈ ಬದಲಾವಣೆಯು ರಾಜಕೀಯ ವಲಯದಲ್ಲಿ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ನಮ್ಮ ದೇಶದ ಬಹುತೇಕ ರಾಜಕಾರಣಿಗಳು 70 ವರ್ಷಕ್ಕಿಂತ ಮೇಲ್ಪಟ್ಟವರು ಎಂಬುದು ಗಮನಾರ್ಹ.

ವಾಹನ ಸವಾರರು ಡ್ರೈವಿಂಗ್ ಲೈಸೆನ್ಸ್ ಪಡೆಯುವ ಪ್ರಕ್ರಿಯೆಯನ್ನು ಸರ್ಕಾರಗಳು ನಿರಂತರವಾಗಿ ಸುಲಭಗೊಳಿಸುತ್ತಿವೆ. ದೆಹಲಿ ಸರ್ಕಾರವು ಪರವಾನಗಿ ಪಡೆಯುವಪ್ರಕ್ರಿಯೆಯನ್ನು ಮತ್ತಷ್ಟು ತ್ವರಿತಗೊಳಿಸಲು ಪ್ರಮುಖ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ದೆಹಲಿಯಲ್ಲಿ ಚಾಲನಾ ಪರೀಕ್ಷೆಗೆ ಬೇಡಿಕೆ ಹೆಚ್ಚುತ್ತಿದೆ. ಈ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ದೆಹಲಿ ಸಾರಿಗೆ ಇಲಾಖೆ ಇನ್ನು ಮುಂದೆ ರಾತ್ರಿ 10 ಗಂಟೆಯವರೆಗೆ ಚಾಲನಾ ಪರೀಕ್ಷೆಯನ್ನು ನಡೆಸಲು ನಿರ್ಧರಿಸಿದೆ.

90ನೇ ವಯಸ್ಸಿನಲ್ಲಿ ಕಾರು ಚಾಲನೆ ಮಾಡಿದ ಅಜ್ಜಿ, ವೃದ್ಧೆಯ ಜೀವನೋತ್ಸಾಹಕ್ಕೆ ಬಹು ಪರಾಕ್ ಹೇಳಿದ ಸಿಎಂ

ದೆಹಲಿ ಸಾರಿಗೆ ಇಲಾಖೆಯ ಪ್ರಕಾರ, ಚಾಲನಾ ಪರೀಕ್ಷೆಗೆ ಕಾಯುವ ಸಮಯವನ್ನು ಕಡಿಮೆ ಮಾಡಲು ಹಲವಾರು ಕ್ರಮಗಳನ್ನು ತೆಗೆದು ಕೊಳ್ಳಲಾಗುತ್ತಿದೆ. ಭಾನುವಾರವೂ ಚಾಲನಾ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಇದರಿಂದ ಜನರು ಪರೀಕ್ಷೆ ತೆಗೆದುಕೊಳ್ಳಲು ಹೆಚ್ಚು ಸಮಯ ಕಾಯಬೇಕಾಗಿಲ್ಲ. ಇಲಾಖೆಯ ಪ್ರಕಾರ, ಭಾನುವಾರ ಚಾಲನಾ ಪರೀಕ್ಷೆಯನ್ನು ತೆಗೆದು ಕೊಳ್ಳುವುದರಿಂದ ಡ್ರೈವಿಂಗ್ ಟೆಸ್ಟ್ ಗಾಗಿ ದೀರ್ಘ ಕಾಲ ಕಾಯುವ ಅವಧಿಯನ್ನು ಕಡಿಮೆ ಮಾಡಬಹುದು.

ಗಮನಿಸಿ: ಕೊನೆಯ ಮೂರು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
90 year old woman drives maruti 800 car video goes viral details
Story first published: Friday, September 24, 2021, 17:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X