ಕಾಮಿಡಿ ಶೋಗಳಲ್ಲಿ ನಟಿಸಿಕೊಂಡು ಅತಿ ಕಡಿಮೆ ಸಮಯದಲ್ಲೇ ಹೊಸ ಕಾರು ಖರೀದಿಸಿದ ಹಾಸ್ಯ ನಟಿ

ಕಡಿಮೆ ಸಮಯದಲ್ಲಿ ಜನಪ್ರಿಯವಾಗಿದ್ದ ತೆಲುಗಿನ ಕಾಮಿಡಿ ಶೋ ಜಬರ್ದಸ್ತ ಹಲವರಿಗೆ ಹೆಸರು ತಂದುಕೊಟ್ಟಿದೆ. ಇದರಲ್ಲಿ ನಟಿಸಿರುವ ಹಲವರು ಇಂದು ಬೆಳ್ಳಿ ತೆರೆಗೂ ಪರಿಚಯವಾಗಿದ್ದಾರೆ. ಅಂಥವರಲ್ಲಿ ಜಬರ್ದಸ್ತ್ ಪವಿತ್ರಿ ಕೂಡ ಒಬ್ಬರು. ಇತ್ತೀಚೆಗೆ ಜಬರ್ದಸ್ತ್ ಪವಿತ್ರಾ ಹೊಸ ಕಾರು ಖರೀದಿಸಿದ್ದಾರೆ.

ಕಾಮಿಡಿ ಶೋಗಳಲ್ಲಿ ನಟಿಸಿಕೊಂಡು ಅತಿ ಕಡಿಮೆ ಸಮಯದಲ್ಲೇ ಹೊಸ ಕಾರು ಖರೀದಿಸಿದ ಹಾಸ್ಯ ನಟಿ

ಸಣ್ಣ ಫ್ಯಾಮಿಲಿ ಹಿನ್ನೆಲೆ ಹೊಂದಿರುವ ಪವಿತ್ರಾ ಸಣ್ಣ ಸಣ್ಣ ಪಾತ್ರಗಳನ್ನು ಮಾಡಿಕೊಂಡು ಇಂದು ಹೊಸ ಕಾರನ್ನು ಖರೀದಿಸಿರುವುದು ಹಲವರನ್ನು ಅಚ್ಚರಿಗೊಳಿಸಿದೆ. ಸದ್ಯ ಅವರು ಖರೀಸಿರುವ ಬ್ರ್ಯಾಂಡ್ ಮತ್ತು ಕಾರಿನ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಕಾಮಿಡಿ ಶೋಗಳಲ್ಲಿ ನಟಿಸಿಕೊಂಡು ಅತಿ ಕಡಿಮೆ ಸಮಯದಲ್ಲೇ ಹೊಸ ಕಾರು ಖರೀದಿಸಿದ ಹಾಸ್ಯ ನಟಿ

ವರದಿಗಳ ಪ್ರಕಾರ, ಜಬರ್ದಸ್ತ್ ಪವಿತ್ರಾ ಖರೀದಿಸಿದ ಕಾರು 'ಹ್ಯುಂಡೈ' ಕಂಪನಿಯ 'ಐ20' ಎಂದು ತಿಳಿದುಬಂದಿದೆ. ಇದು ಕಂಪನಿಯ ಅತ್ಯಂತ ಜನಪ್ರಿಯ ಕಾರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದರಲ್ಲಿ ಪವಿತ್ರಾ ತನ್ನ ಹೊಸ ಕಾರಿನಲ್ಲಿ ಹಾಸ್ಯ ನಟಿ ರೋಹಿಣಿ ಜೊತೆ ಕಾಣಿಸಿಕೊಂಡಿದ್ದಾರೆ.

ಕಾಮಿಡಿ ಶೋಗಳಲ್ಲಿ ನಟಿಸಿಕೊಂಡು ಅತಿ ಕಡಿಮೆ ಸಮಯದಲ್ಲೇ ಹೊಸ ಕಾರು ಖರೀದಿಸಿದ ಹಾಸ್ಯ ನಟಿ

ಜಬರ್ದಸ್ತ್ ಪವಿತ್ರಾ ಖರೀದಿಸಿರುವ ಈ ಕಾರು ಕೂಡ ಉತ್ತಮ ಬಣ್ಣದ ವಿನ್ಯಾಸದೊಂದಿಗೆ ನೋಡಲು ಆಕರ್ಷಕವಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿದೆ. ರೋಹಿಣಿ ಮತ್ತು ಪವಿತ್ರಾ ನಡುವಿನ ತಮಾಷೆಯ ಗಲಾಟೆಯನ್ನೂ ಇದರಲ್ಲಿ ಕಾಣಬಹುದು. ಈ ವೀಡಿಯೋದಲ್ಲಿ ನೀವು ಕಾರು ಶೋರೂಮ್‌ಗೆ ಆಗಮಿಸಿ ಡೆಲಿವರಿ ತೆಗೆದುಕೊಳ್ಳುವವರೆಗೂ ನೋಡಬಹುದು.

ಕಾಮಿಡಿ ಶೋಗಳಲ್ಲಿ ನಟಿಸಿಕೊಂಡು ಅತಿ ಕಡಿಮೆ ಸಮಯದಲ್ಲೇ ಹೊಸ ಕಾರು ಖರೀದಿಸಿದ ಹಾಸ್ಯ ನಟಿ

ಹ್ಯುಂಡೈ ಐ20 ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದ್ದು, ಇದು ಈಗ ಅದ್ಭುತ ವಿನ್ಯಾಸ ಮತ್ತು ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಬ್ರ್ಯಾಂಡ್‌ನ ಇತ್ತೀಚಿನ ವಿನ್ಯಾಸವನ್ನು ಸಾಗಿಸಲು ಪಿಯಾನೋ-ಬ್ಲಾಕ್ ಕ್ಯಾಸ್ಕೇಡಿಂಗ್ ಫ್ರಂಟ್ ಗ್ರಿಲ್ ಅನ್ನು ಹೊಂದಿದೆ. ಗ್ರಿಲ್‌ನ ಎರಡೂ ಬದಿಯಲ್ಲಿ ಎಲ್‌ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಇಂಟಿಗ್ರೇಟೆಡ್ ಎಲ್‌ಇಡಿ ಡಿಆರ್‌ಎಲ್‌ಗಳು, ಟರ್ನ್ ಇಂಡಿಕೇಟರ್‌ಗಳು ಮತ್ತು ಕಾರ್ನರಿಂಗ್ ಲ್ಯಾಂಪ್‌ಗಳಿವೆ.

ಕಾಮಿಡಿ ಶೋಗಳಲ್ಲಿ ನಟಿಸಿಕೊಂಡು ಅತಿ ಕಡಿಮೆ ಸಮಯದಲ್ಲೇ ಹೊಸ ಕಾರು ಖರೀದಿಸಿದ ಹಾಸ್ಯ ನಟಿ

ಸೈಡ್ ಪ್ರೊಫೈಲ್ 16-ಇಂಚಿನ ಡ್ಯುಯಲ್-ಟೋನ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ, ಜೊತೆಗೆ ಕ್ರೋಮ್ ಸ್ಟ್ರಿಪ್ ವಿಂಡೋ ಲೈನ್ ಕೆಳಗೆ ಚಲಿಸುತ್ತದೆ. ಹಿಂಭಾಗದ ಪ್ರೊಫೈಲ್ Z-ಆಕಾರದ LED ಟೈಲ್ ಲೈಟ್‌ಗಳು ಮತ್ತು ವೇರಿಯಂಟ್ ಬ್ಯಾಡ್ಜಿಂಗ್ ಅನ್ನು ಸಹ ಒಳಗೊಂಡಿದೆ. ಒಟ್ಟಾರೆಯಾಗಿ ಇದು ಅದ್ಭುತ ಡಿಸೈನ್‌ ಅನ್ನು ಹೊಂದಿದೆ.

ಕಾಮಿಡಿ ಶೋಗಳಲ್ಲಿ ನಟಿಸಿಕೊಂಡು ಅತಿ ಕಡಿಮೆ ಸಮಯದಲ್ಲೇ ಹೊಸ ಕಾರು ಖರೀದಿಸಿದ ಹಾಸ್ಯ ನಟಿ

ಹುಂಡೈ ಐ20 ಮೂರು ಎಂಜಿನ್ ಆಯ್ಕೆಗಳನ್ನು ಪಡೆಯಲಿದೆ. ಅವುಗಳೆಂದರೆ 1.2-ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್, 1.0-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಗಳಾಗಿದ್ದು ಎಲ್ಲಾ ಮೂರು ಎಂಜಿನ್‌ಗಳು ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತವೆ.

ಕಾಮಿಡಿ ಶೋಗಳಲ್ಲಿ ನಟಿಸಿಕೊಂಡು ಅತಿ ಕಡಿಮೆ ಸಮಯದಲ್ಲೇ ಹೊಸ ಕಾರು ಖರೀದಿಸಿದ ಹಾಸ್ಯ ನಟಿ

ವೈಶಿಷ್ಟ್ಯಗಳ ವಿಷಯದಲ್ಲಿ, ಇದು 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್ಪ್ಲೇ, ಆಂಡ್ರಾಯ್ಡ್ ಆಟೋ ಮತ್ತು ಬ್ಲೂ ಲಿಂಕ್ ಕನೆಕ್ಟ್, ವೈರ್‌ಲೆಸ್ ಚಾರ್ಜಿಂಗ್, ಆಂಬಿಯೆಂಟ್ ಲೈಟಿಂಗ್, ಬೋಸ್ ಸರೌಂಡ್ ಸೌಂಡ್ ಸಿಸ್ಟಮ್ ಅನ್ನು ಒಳಗೊಂಡಿದೆ. ಇವೆಲ್ಲವೂ ವಾಹನ ಬಳಕೆದಾರರಿಗೆ ತುಂಬಾ ಸೂಕ್ತವಾಗಿದೆ.

ಕಾಮಿಡಿ ಶೋಗಳಲ್ಲಿ ನಟಿಸಿಕೊಂಡು ಅತಿ ಕಡಿಮೆ ಸಮಯದಲ್ಲೇ ಹೊಸ ಕಾರು ಖರೀದಿಸಿದ ಹಾಸ್ಯ ನಟಿ

ಹ್ಯುಂಡೈ ಐ20 ಕಾರು ಹೆಚ್ಚು ಸ್ಪೋರ್ಟಿ ಮತ್ತು ಬೋಲ್ಡ್ ಲುಕ್ ಅನ್ನು ಹೊಂದಿದೆ. ಹ್ಯುಂಡೈ ಐ20 ಹ್ಯಾಚ್‌ಬ್ಯಾಕ್‌ ಕಾರಿನ ಹಿಂದಿನ ಮಾದರಿಯು ಕೂಡ ಆಕರ್ಷಕ ಲುಕ್ ಅನ್ನು ಹೊಂದಿತ್ತು. ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ಹ್ಯುಂಡೈ ಐ20 ಗ್ರಾಹಕರನ್ನು ತನ್ನತ ಸೆಳೆಯುವಂತಹ ಆಕರ್ಷಕ ಲುಕ್ ಮತ್ತು ಸ್ಟೈಲಿಶ್ ನಿಂದ ಹೆಚ್ಚು ಜನಪ್ರಿಯವಾಗಿದೆ.

ಕಾಮಿಡಿ ಶೋಗಳಲ್ಲಿ ನಟಿಸಿಕೊಂಡು ಅತಿ ಕಡಿಮೆ ಸಮಯದಲ್ಲೇ ಹೊಸ ಕಾರು ಖರೀದಿಸಿದ ಹಾಸ್ಯ ನಟಿ

ಹ್ಯುಂಡೈ ಕ್ರೆಟಾ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಅತ್ಯಂತ ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಜನಪ್ರಿಯ ಮಾದರಿಯಾಗಿದೆ. ಕ್ರೆಟಾ ಮಾದರಿಯನ್ನು ಭಾರತದಲ್ಲಿ ಮೊದಲ ಬಾರಿಗೆ 2016ರಲ್ಲಿ ಪರಿಚಯಿಸಿದ್ದ ಹ್ಯುಂಡೈ ಕಂಪನಿಯು 2020ರ ಮಾರ್ಚ್‌ನಲ್ಲಿ ನ್ಯೂ ಜನರೇಷನ್ ಮಾದರಿಯೊಂದಿಗೆ ಬಿಡುಗಡೆ ಮಾಡಿತ್ತು.

ಕಾಮಿಡಿ ಶೋಗಳಲ್ಲಿ ನಟಿಸಿಕೊಂಡು ಅತಿ ಕಡಿಮೆ ಸಮಯದಲ್ಲೇ ಹೊಸ ಕಾರು ಖರೀದಿಸಿದ ಹಾಸ್ಯ ನಟಿ

ಸದ್ಯ ಮಾರುಕಟ್ಟೆಯಲ್ಲಿ ಮಾರಟವಾಗುತ್ತಿರುವ ಹೊಸ ಕ್ರೆಟಾ ಕಾರು ಗ್ರಾಹಕರ ಬೇಡಿಕೆಯೆಂತೆ ಹಲವು 5 ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಹೊಸ ನವೀಕರಣಗಳೊಂದಿಗೆ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಪ್ರತಿಸ್ಪರ್ಧಿಗಳಿಗೆ ಭರ್ಜರಿ ಪೈಪೋಟಿಯನ್ನು ನೀಡುತ್ತದೆ. ಹ್ಯುಂಡೈ ಕ್ರೆಟಾ ಭಾರತೀಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ರೆನಾಲ್ಟ್ ಡಸ್ಟರ್, ಎಂಜಿ ಹೆಕ್ಟರ್ ಹಾಗೂ ಟಾಟಾ ಹ್ಯಾರಿಯರ್‍ ಎಸ್‍ಯುವಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಕಾಮಿಡಿ ಶೋಗಳಲ್ಲಿ ನಟಿಸಿಕೊಂಡು ಅತಿ ಕಡಿಮೆ ಸಮಯದಲ್ಲೇ ಹೊಸ ಕಾರು ಖರೀದಿಸಿದ ಹಾಸ್ಯ ನಟಿ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈಟಿವಿಯಲ್ಲಿ ಪ್ರಸಾರವಾಗುವ ಜಬರ್ದಸ್ತ್ ಕಾರ್ಯಕ್ರಮದ ಮೂಲಕ ಅನೇಕ ಸೆಲೆಬ್ರಿಟಿಗಳು ಜನಮನ್ನಣೆ ಗಳಿಸಿದ್ದಾರೆ. ಒಳ್ಳೆಯ ಹೆಸರು ಗಳಿಸುವುದಲ್ಲದೆ, ತಮ್ಮ ಪ್ರತಿಭೆಯಿಂದ ಸಣ್ಣ ಪುಟ್ಟ ಆಸ್ತಿಗಳನ್ನೂ ಸಂಪಾದಿಸುತ್ತಿದ್ದಾರೆ. ಒಟ್ಟಿನಲ್ಲಿ ಪ್ರತಿಭಾವಂತರನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುತ್ತಿದೆ.

Most Read Articles

Kannada
English summary
A comedy actress who bought a new car in a very short time after acting in comedy shows
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X