ಪೆಟ್ರೋಲ್ ಕಾರಿಗೆ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ... ಕೃತಜ್ಞತೆ ಸಲ್ಲಿಸಿದ ಕಾರ್ ಮಾಲೀಕ

ಪೆಟ್ರೋಲ್ ಬಂಕ್‌ಗಳಲ್ಲಿ ಕೆಲವೊಮ್ಮೆ ಸರಿಯಾದ ಸಂವಹನವಿಲ್ಲದೇ ಅಥವಾ ಕೆಲ ಅಸಡ್ಡೆಗಳಿಂದಾಗಿ ತಮ್ಮ ವಾಹನಗಳಲ್ಲಿ ತಪ್ಪು ಇಂಧನವನ್ನು ತುಂಬಿಸುತ್ತಾರೆ. ಇಂತಹ ಹಲವು ಉದಾಹರಣೆಗಳನ್ನು ಈಗಾಗಲೇ ನಾವು ನೋಡಿದ್ದೇವೆ. ಅಂತಹದ್ದೇ ಮತ್ತೊಂದು ಘಟನೆ ಒಡಿಸ್ಸಾದಲ್ಲಿ ಬೆಳಕಿಗೆ ಬಂದಿದ್ದು, ಕಾರ್ ಮಾಲೀಕ ಕಂಪನಿ ಮಾಡಿದ ಸಹಾಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

ಈ ಅನುಭವವನ್ನು ಮಿಶ್ರಾ ರಂಜನ್ ಆರ್.ಎನ್ ಎಂಬುವವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಜನವರಿ 17 ರಂದು ಬಾಲಸೋರ್‌ನಿಂದ ತಮ್ಮ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ಅವರು, ಕಾರಿನಲ್ಲಿ 7 ವಯಸ್ಕರು ಮತ್ತು 1 ಮಗು ಇತ್ತು. ರಾತ್ರಿ 9:35 ರ ಸುಮಾರಿಗೆ ಕಾರು ಇಲ್ಲಿನ ಭದ್ರಕ್ ತಲುಪಿತು. ಭದ್ರಕ್‌ನಲ್ಲಿ, ಮಾಲೀಕ ಇಂಧನ ತುಂಬಲು ಪೆಟ್ರೋಲ್ ಬಂಕ್‌ಗೆ ಹೋಗಿದ್ದರು. ಅಲ್ಲಿ ಅಟೆಂಡೆಂಟ್ ಆಕಸ್ಮಿಕವಾಗಿ ಪೆಟ್ರೋಲ್ ಬದಲಿಗೆ ತನ್ನ SUV ಯ ಇಂಧನ ಟ್ಯಾಂಕ್‌ಗೆ ಡೀಸೆಲ್ ಅನ್ನು ತುಂಬಿದ್ದಾನೆ.

ಪೆಟ್ರೋಲ್ ಕಾರಿಗೆ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ... ಕೃತಜ್ಞತೆ ಸಲ್ಲಿಸಿದ ಕಾರ್ ಮಾಲೀಕ

ಅದೃಷ್ಟವಶಾತ್ ಅದನ್ನು ಗಮನಿಸಿದ ಮಾಲೀಕ ಕಾರನ್ನು ಚಲಾಯಿಸಲಿಲ್ಲ. ಕಾರನ್ನು ಅಲ್ಲಿಯೇ ನಿಲ್ಲಿಸಿ ನಂತರ ಸಹಾಯಕ್ಕಾಗಿ ಸೇವಾ ಕೇಂದ್ರವನ್ನು ಸಂಪರ್ಕಿಸಿದರು. ಸೇವಾ ಮುಖ್ಯಸ್ಥರೊಂದಿಗೆ ಮಾತನಾಡಿದಾಗ, ರಸ್ತೆಬದಿಯ ಸಹಾಯಕ್ಕಾಗಿ (RSA) ಆನ್‌ಲೈನ್‌ನಲ್ಲಿ ಟಿಕೆಟ್ ಅನ್ನು ಸಂಗ್ರಹಿಸಲು ಮಾಲೀಕರಿಗೆ ಹೇಳಿದರು. ಅವರು ದೂರು ನೀಡಿದ ತಕ್ಷಣ, ತಂಡದಿಂದ ಪ್ರತಿಕ್ರಿಯೆ ಪಡೆದರು. ಅಲ್ಲದೇ 90 ನಿಮಿಷಗಳಲ್ಲಿ ಈ ತುರ್ತು ಪರಿಸ್ಥಿತಿಗೆ ಗರಿಷ್ಠ ಸಹಾಯವನ್ನು ನೀಡಿದರು. ಈ ಘಟನೆ ಸಂಭವಿಸಿದಾಗ ಅವರು ತಮ್ಮ ಗಮ್ಯಸ್ಥಾನದಿಂದ ಸುಮಾರು 150 ಕಿಮೀ ದೂರದಲ್ಲಿದ್ದರು.

ತಂಡವು XUV700 ಮಾಲೀಕರೊಂದಿಗೆ ಸಂಪರ್ಕದಲ್ಲಿದ್ದುಕೊಂಡೆ, ರಸ್ತೆಯಲ್ಲಿ ಸಿಲುಕಿರುವ ಅವರಿಗೆ ಮತ್ತು ಅವರ ಕುಟುಂಬಕ್ಕೆ ಡ್ರಾಪ್ ಸೌಲಭ್ಯವನ್ನು ಸಹ ನೀಡಿದರು. XUV700 ಮಾಲೀಕರು ಒಟ್ಟಾರೆ ಪ್ರತಿಕ್ರಿಯೆಯಿಂದ ತುಂಬಾ ಸಂತೋಷಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ. ಅವರು ಈ ಸಹಾಯಕ್ಕಾಗಿ ಮಹೀಂದ್ರಾದ ಸಂಪೂರ್ಣ ತಂಡಕ್ಕೆ ಧನ್ಯವಾದ ತಿಳಿಸಿದರು. ಇಂತಹ ಘಟನೆಗಳು ಹೆಚ್ಚಾಗಿ ಸರಿಯಾದ ಸಂವಹನವಿಲ್ಲದೇ ನಡೆಯುತ್ತದೆ. ಅಲ್ಲದೇ ಬಂಕ್‌ಗಳಲ್ಲಿ ಕೆಲಸ ಮಾಡುವವರಿಗೆ ವಾಹನಗಳ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದಿದ್ದಾಗ ನಡೆಯುತ್ತದೆ.

ಪೆಟ್ರೋಲ್ ಕಾರಿಗೆ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ... ಕೃತಜ್ಞತೆ ಸಲ್ಲಿಸಿದ ಕಾರ್ ಮಾಲೀಕ

ಕೂಡಲೇ ಮಾಡಬೇಕಾದ ಕೆಲಸ
ಇದು ನಮ್ಮಲ್ಲಿ ಅನೇಕರು ಮಾಡುವ ಸಾಮಾನ್ಯ ತಪ್ಪು. ಇಂಧನವನ್ನು ತುಂಬುವಾಗ ನೀವು ಇದನ್ನು ಅರಿತುಕೊಂಡರೆ, ಮೊದಲು ಮಾಡಬಹುದಾದ ಉತ್ತಮ ಕೆಲಸವೆಂದರೆ ಇಗ್ನಿಷನ್ ಆಫ್ ಮಾಡುವುದು. ನಂತರ ಸೇವಾ ಕೇಂದ್ರವನ್ನು ಸಂಪರ್ಕಿಸಿ ಸಮಸ್ಯೆಯ ಬಗ್ಗೆ ಅವರಿಗೆ ತಿಳಿಸಿ. ಈ ಸಂದರ್ಭದಲ್ಲಿ, ಅವರು ಸಹಾಯವನ್ನು ನೀಡುತ್ತಾರೆ. ಒಂದು ವೇಳೆ ಈ ಸಹಾಯ ಸಿಗದಿದ್ದಾಗ ಸ್ಥಳೀಯ ಮೆಕ್ಯಾನಿಕ್ ಅನ್ನು ಸಂಪರ್ಕಿಸಿ, ಅವರು ಬರುವಷ್ಟರಲ್ಲಿ ತಪ್ಪು ಇಂಧನವನ್ನು ತಪ್ಪಿಸಲು ಎಂಜಿನ್‌ನಿಂದ ಮುಖ್ಯ ಇಂಧನ ಮಾರ್ಗದ ಸಂಪರ್ಕ ಕಡಿತಗೊಳಿಸಿ.

ಒಂದು ವೇಳೆ ನೀವೆ ಸಮಸ್ಯೆ ಬಗೆಹರಿಸಿಕೊಳ್ಳುವ ತವಕವಿದ್ದರೇ, ಕಾರಿನ ಫಿಲ್ಲರ್ ಕ್ಯಾಪ್ ಮೂಲಕ ಸಾಧ್ಯವಾದರೆ ಮೆದುಗೊಳವೆ ಬಳಸಿ ಇಂಧನ ಟ್ಯಾಂಕ್ ಅನ್ನು ಸಾಧ್ಯವಾದಷ್ಟು ಖಾಲಿ ಮಾಡಲು ಪ್ರಯತ್ನಿಸಿ. ಜೊತೆಗೆ ಮುಖ್ಯ ಇಂಧನ ಮಾರ್ಗದ ಮೂಲಕ ಉಳಿದಿರುವ ಎಲ್ಲವನ್ನೂ ಹೊರತೆಗೆಯಿರಿ. ಒಮ್ಮೆ ನೀವು ಇಂಧನವನ್ನು ಹೊರ ಹರಿಸಿದ ನಂತರ, ಇಂಧನ ಪಂಪ್ ಅನ್ನು ಆನ್ ಮಾಡಲು ಕೀ ಇಗ್ನಿಷನ್ ಕೀಲಿಯನ್ನು ತಿರುಗಿಸಿ. ಈ ಮೂಲಕ ಲೈನ್‌ನಿಂದ ಉಳಿದಿರುವ ಎಲ್ಲಾ ಇಂಧನವು ಹೊರಬರುವುದನ್ನು ಇದು ಖಚಿತಪಡಿಸುತ್ತದೆ.

ಇದರ ನಂತರ 2 ಲೀಟರ್ ಸರಿಯಾದ ಇಂಧನವನ್ನು ತುಂಬಿಸಿ ಲೈನ್‌ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಎಂಜಿನ್ ಅನ್ನು ಕ್ರ್ಯಾಂಕ್ ಮಾಡಿ. ಈ ಪ್ರಕ್ರಿಯೆ ಮುಗಿದ ನಂತರ, ಇಂಧನ ಲೈನ್‌ಗಳನ್ನು ಸಂಪರ್ಕಿಸಿ ಡೀಸೆಲ್ ಎಂಜಿನ್‌ನಲ್ಲಿನ ಇಂಜೆಕ್ಟರ್‌ಗಳನ್ನು ಸ್ವಚ್ಛಗೊಳಿಸಲು ಸೇರ್ಪಡೆಗಳನ್ನು ಸೇರಿಸಲು ಮರೆಯದಿರಿ. ಈ ವೇಳೆ ನೀವು ಇಂಧನ ಫಿಲ್ಟರ್ ಅನ್ನು ಬದಲಾಯಿಸಿ ಸ್ಪಾರ್ಕ್ ಪ್ಲಗ್‌ಗಳನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ನಂತರ ಕೊನೆಯದಾಗಿ ಫಿಲ್ಟರ್‌ನ ಕೆಳಭಾಗದಲ್ಲಿರುವ ಡ್ರೈನ್ ಪ್ಲಗ್ ಅನ್ನು ತೆರೆದು ಫಿಲ್ಟರ್‌ನಲ್ಲಿ ಉಳಿದಿರುವ ಇಂಧನವನ್ನು ಹೊರಹಾಕಿ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಸಾಮಾನ್ಯವಾಗಿ ಪೆಟ್ರೋಲ್ ಪಂಪ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ವಾಹನ ಮಾಲೀಕರೊಂದಿಗೆ ಕೇಳಿ ಇಂಧನ ತುಂಬುತ್ತಾರೆ. ಆದರೆ ಕೆಲವೊಮ್ಮೆ ಕೇಳದೆ ಮನಬಂದಂತೆ ವ್ಯವರಿಸುತ್ತಾರೆ, ಇನ್ನು ಕೆಲವು ಸಂದರ್ಭಗಳಲ್ಲಿ ವಾಹನ ಮಾಲೀಕರ ನಿರ್ಲಕ್ಷ್ಯದಿಂದಲೇ ಇಂತಹ ಘಟನೆಗಳು ಸಂಭವಿಸುತ್ತವೆ. ಏನೇ ಆಗಲಿ ಇಂಧನ ತುಂಬಿಸುವ ವೇಳೆ ವಾಹನ ಮಾಲೀಕರೇ ತುಸು ಎಚ್ಚರ ವಹಿಸಬೇಕು. ಏಕೆಂದರೆ ಇಂತಹ ಘಟನೆಗಳು ಸಂಭವಿಸಿದಾಗ ಅದರ ನಷ್ಟವನ್ನು ಮಾಲೀಕರೆ ಅನುಭವಿಸುವುದರಿಂದ ಎಚ್ಚರದಿಂದಿರುವುದು ಉತ್ತಮ.

Most Read Articles

Kannada
English summary
A man filled with diesel for mahindra petrol car
Story first published: Tuesday, January 24, 2023, 15:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X