ವಾಹನಗಳಲ್ಲಿ ಯಾಕೆ ಕಡ್ಡಾಯವಾಗಿ ಎಬಿಎಸ್ ಇರಬೇಕು? ಈ ವಿಡಿಯೋ ನೋಡಿ...

By Praveen Sannamani

ದೇಶದಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳಿಗೆ ಪ್ರಮುಖ ಕಾರಣ ವಾಹನಗಳಲ್ಲಿ ಜೋಡಿಸಲಾಗುವ ತಾಂತ್ರಿಕ ಸೌಲಭ್ಯಗಳ ಕೊರತೆ ಅಂದ್ರೆ ತಪ್ಪಾಗುವುದಿಲ್ಲ. ಯಾಕೆಂದ್ರೆ ಅಗ್ಗದ ಬೆಲೆಯ ವಾಹನಗಳಿಂದಾಗಿ ಅಮಾಯಕರ ಜೀವಗಳು ಬಲಿಯಾಗುತ್ತಿದ್ದು, ಕೇಂದ್ರ ಸರ್ಕಾರವು ಜಾರಿ ಮಾಡಲು ಹೊರಟಿರುವ ಹೊಸ ಸುರಕ್ಷಾ ಮಾರ್ಗಸೂಚಿಯ ಮಹತ್ವವನ್ನ ಈ ವಿಡಿಯೋದಲ್ಲಿ ನೀವು ನೋಡಬಹುದಾಗಿದೆ.

ವಾಹನಗಳಲ್ಲಿ ಯಾಕೆ ಕಡ್ಡಾಯವಾಗಿ ಎಬಿಎಸ್ ಇರಬೇಕು? ಈ ವಿಡಿಯೋ ನೋಡಿ...

ಕೇಂದ್ರ ಸರ್ಕಾರವು 2019ರಿಂದ 125ಸಿಸಿ ಮೇಲ್ಪಟ್ಟ ಪ್ರತಿಯೊಂದು ವಾಹನಕ್ಕೂ ಎಬಿಎಸ್ ಕಡ್ಡಾಯಗೊಳಿಸುತ್ತಿದ್ದು, ಹೊಸ ಸುರಕ್ಷಾ ಮಾರ್ಗಸೂಚಿಯಿಂದ ಅಪಘಾತಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ತಗ್ಗಿಸಬಹುದು ಎಂದು ಅಂದಾಜಿಸಲಾಗುತ್ತಿದೆ. ಹಾಗಾದ್ರೆ ಎಬಿಎಸ್‌ನಿಂದ ವಾಹನ ಸವಾರರಿಗೆ ಏನು ಪ್ರಯೋಜನ? ಇದರಿಂದ ಅಪಘಾತಗಳ ಸಂಖ್ಯೆ ಹೇಗೆ ತಗ್ಗಿಸಬಹುದು ಎನ್ನುವುದನ್ನು ತಿಳಿಯುವುದು ಅತ್ಯಅವಶ್ಯಕವಾಗಿದೆ.

ವಾಹನಗಳಲ್ಲಿ ಯಾಕೆ ಕಡ್ಡಾಯವಾಗಿ ಎಬಿಎಸ್ ಇರಬೇಕು? ಈ ವಿಡಿಯೋ ನೋಡಿ...

ಈ ಹಿಂದೆ ಏಪ್ರಿಲ್ 1 ರಿಂದ ಭಾರತದಲ್ಲಿ ಸಂಪೂರ್ಣವಾಗಿ ಬಿಎಸ್ 3 ಎಂಜಿನ್ ವಾಹನಗಳನ್ನು ನಿಷೇಧ ಮಾಡಿರುವ ಕೇಂದ್ರ ಸರ್ಕಾರವು, ಇದೀಗ ಎಬಿಎಸ್ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್) ತಂತ್ರಜ್ಞಾನವನ್ನು ಕಡ್ಡಾಯಗೊಳಿಸುತ್ತಿದೆ.

ವಾಹನಗಳಲ್ಲಿ ಯಾಕೆ ಕಡ್ಡಾಯವಾಗಿ ಎಬಿಎಸ್ ಇರಬೇಕು? ಈ ವಿಡಿಯೋ ನೋಡಿ...

ಎಬಿಎಸ್‌ನಿಂದ ಏನು ಲಾಭ?

ಹೌದು. ಇದು ಪ್ರತಿಯೊಬ್ಬರ ಮನಸ್ಸಿನಲ್ಲೂ ಮೂಡಬಹುದಾದ ಸಹಜ ಪ್ರಶ್ನೆ. ಒಂದು ವೇಳೆ ನಿಮ್ಮ ಬೈಕ್‌ ಮತ್ತು ಕಾರುಗಳಲ್ಲಿ ಎಬಿಎಸ್ ತಂತ್ರಜ್ಞಾನ ಅಳವಡಿಕೆ ಇದ್ದಲ್ಲಿ ಅಪಘಾತಗಳ ತೀವ್ರತೆಯನ್ನು ತಡೆಯಬಹುದಾಗಿದ್ದು, ಜೊತೆಗೆ ಬ್ರೇಕಿಂಗ್ ವ್ಯವಸ್ಥೆ ಮೇಲೆ ಸಂಪೂರ್ಣ ಹಿಡಿದ ಸಾಧಿಸಬಹುದಾಗಿದೆ.

ವಾಹನಗಳಲ್ಲಿ ಯಾಕೆ ಕಡ್ಡಾಯವಾಗಿ ಎಬಿಎಸ್ ಇರಬೇಕು? ಈ ವಿಡಿಯೋ ನೋಡಿ...

ಮತ್ತೊಂದು ಮುಖ್ಯ ವಿಚಾರ ಏನೆಂದರೆ ಎಬಿಎಸ್ ತಂತ್ರಜ್ಞಾನವು ಸವಾರಿಗೆ ಸಂಪೂರ್ಣ ಸುರಕ್ಷತೆಯನ್ನು ನೀಡಲಿದ್ದು, ಹೊಸ ನಿಮಯದಿಂದ ನಗರಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಪಘಾತಗಳ ಸಂಖ್ಯೆಯನ್ನು ಕೂಡಾ ತಡೆಯಬಹುದಾಗಿದೆ.

ವಾಹನಗಳಲ್ಲಿ ಯಾಕೆ ಕಡ್ಡಾಯವಾಗಿ ಎಬಿಎಸ್ ಇರಬೇಕು? ಈ ವಿಡಿಯೋ ನೋಡಿ...

ಇದಕ್ಕೆ ಸ್ಪಷ್ಟ ಉದಾಹರಣೆ ಅಂದ್ರೆ, ಕಳೆದ ಕೆಲ ದಿನಗಳ ಹಿಂದೆ ಇನೋವಾ ಕ್ರಿಸ್ಟಾ ಕಾರೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು 140 ರಿಂದ 150 ಕಿ.ಮಿ ವೇಗದಲ್ಲಿ ಚಲಿಸುತ್ತಿತ್ತು. ಆದ್ರೆ ಇದೇ ವೇಳೆ ರಸ್ತೆ ಕಾಮಗಾರಿ ನಡೆಯುತ್ತಿದ್ದ ಪರಿಣಾಮ ವೇಗದಲ್ಲಿದ್ದ ಕಾರು ನಿಯಂತ್ರಣ ಕಳೆದುಕೊಳ್ಳಬೇಕಿತ್ತಲ್ಲದೇ ಕಾರಿನ ಪಕ್ಕದಲ್ಲೇ ಇದ್ದ ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆಯಬೇಕಾದ ಪರಿಸ್ಥಿತಿ ಎದುರಾಗಿತ್ತು.

ವಾಹನಗಳಲ್ಲಿ ಯಾಕೆ ಕಡ್ಡಾಯವಾಗಿ ಎಬಿಎಸ್ ಇರಬೇಕು? ಈ ವಿಡಿಯೋ ನೋಡಿ...

ಆದ್ರೆ ಅದೃಷ್ಟವಶಾತ್ ಅಂತಹ ಯಾವುದೇ ಅವವಢಗಳು ಸಂಭವಿಸಲಿಲ್ಲ ಅಂದ್ರೆ ನೀವು ನಂಬಲೇಬೇಕು. ಇದಕ್ಕೆ ಕಾರಣ ಆ ಕಾರಿನಲ್ಲಿ ಅಳವಡಿಸಲಾಗಿದ್ದ ಎಬಿಎಸ್ ವ್ಯವಸ್ಥೆಯು ಕಾರಿನಲ್ಲಿದ್ದವರ ಪ್ರಾಣ ಉಳಿಯಲು ಸಹಾಕರಿಯಾಯ್ತು ಅನ್ನುವುದು ವಾಸ್ತವ.

ಇದು ಹೇಗೆ ಸಾಧ್ಯ ಅನ್ನುವುದಾದರೇ ಈ ವಿಡಿಯೋ ನೋಡಿ. ಎಬಿಎಸ್ ತಂತ್ರಜ್ಞಾನದ ಮಹತ್ವದ ನೀವು ಅರಿಯಬಹುದಾಗಿದೆ.

ವಾಹನಗಳಲ್ಲಿ ಯಾಕೆ ಕಡ್ಡಾಯವಾಗಿ ಎಬಿಎಸ್ ಇರಬೇಕು? ಈ ವಿಡಿಯೋ ನೋಡಿ...

ಇದೇ ಕಾರಣಕ್ಕೆ ಕೇಂದ್ರ ಸರ್ಕಾರವು ಎಬಿಎಸ್ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಮಹತ್ವದ ಮಾರ್ಗಸೂಚಿ ಹೊರಡಿಸಲು ಸಿದ್ದಗೊಳ್ಳುತ್ತಿದ್ದು, ಒಂದು ವೇಳೆ ಪ್ರತಿಯೊಂದು ವಾಹನಗಳು ಸಹ ಎಬಿಎಸ್ ಪಡೆದುಕೊಂಡಲ್ಲಿ ಆಗಾಬಹುದಾದ ನೂರಾರು ದುರಂತಗಳಿಗೆ ಬ್ರೇಕ್ ಬಿಳಲಿದೆ ಎನ್ನಬಹುದು.

ವಾಹನಗಳಲ್ಲಿ ಯಾಕೆ ಕಡ್ಡಾಯವಾಗಿ ಎಬಿಎಸ್ ಇರಬೇಕು? ಈ ವಿಡಿಯೋ ನೋಡಿ...

ಕೇಂದ್ರ ಸರ್ಕಾರವೇ ಎಬಿಎಸ್ ಅನ್ನು ಕಡ್ಡಾಯಗೊಳಿಸುವ ಮುನ್ನ ನಾವೇ ಅಳವಡಿಸಿಕೊಳ್ಳುವುದು ಇಂದಿನ ಅನಿವಾರ್ಯತೆಗಳಲ್ಲಿ ಒಂದಾಗಿದ್ದು, ಈ ನಿಟ್ಟಿನಲ್ಲಿ ಕೆಲವು ವಾಹನ ಉತ್ಪಾದನಾ ಸಂಸ್ಥೆಗಳು ಪ್ರತಿ ವಾಹನಗಳಲ್ಲೂ ಸ್ವಯಂಪ್ರೇರಿತವಾಗಿ ಎಬಿಎಸ್ ಆಯ್ಕೆಯನ್ನು ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎನ್ನಬಹುದು.

ವಾಹನಗಳಲ್ಲಿ ಯಾಕೆ ಕಡ್ಡಾಯವಾಗಿ ಎಬಿಎಸ್ ಇರಬೇಕು? ಈ ವಿಡಿಯೋ ನೋಡಿ...

ಒಂದು ವೇಳೆ ನೀವು ಕೂಡಾ ನಿಮ್ಮ ವಾಹನದಲ್ಲಿ ಎಬಿಎಸ್ ಇಲ್ಲವಾದಲ್ಲಿ ಹೊಸ ಸುರಕ್ಷಾ ಸೌಲಭ್ಯವನ್ನು ಅಳವಡಿಸಿಕೊಳ್ಳುವುದು ಉತ್ತಮ ಎನ್ನುವುದು ನಮ್ಮ ಅಭಿಪ್ರಾಯ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಳ್ಳಬಹುದು.

ಎಬಿಎಸ್ ಕಡ್ಡಾಯ

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಅಟಲ್ ಜೀ ಅವರು ಅಂಬಾಸಿಡರ್ ಬಿಟ್ಟು ಬಿಎಂಡಬ್ಲ್ಯು 7 ಸೀರಿಸ್ ಕಾರು ಏರಿದ್ದೇಕೆ ಗೊತ್ತಾ?

ಮೊದಲ ಬಾರಿಗೆ ಭಾರತೀಯ ಸೇನೆಗೆ ಲಗ್ಗೆ ಇಟ್ಟ 'ರೆನಾಲ್ಟ್ ಶೆರ್ಪಾ' ವಿಶೇಷತೆ ಏನು?

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಭಾರತದಲ್ಲಿ ಮಿಟ್ಸುಬಿಸಿ ಎಕ್ಸ್‌ಪ್ಯಾಂಡರ್ ಬಿಡುಗಡೆಯಾಗುವುದು ಪಕ್ಕಾ ಅಂತೆ..!

ಹೊಸ ಬಿಎಂಡಬ್ಲ್ಯು ಕಾರಿನೊಂದಿಗೆ ತಂದೆಯ ಶವಸಂಸ್ಕಾರ ಮಾಡಿದ ಪುಣ್ಯಾತ್ಮ

Most Read Articles

Kannada
English summary
Toyota Innova Crysta at 150 Kmph saved from certain crash thanks to ABS.
Story first published: Wednesday, August 22, 2018, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X