ದುಬೈಗೆ ಸೆಡ್ಡು ನೀಡಿದ ಅಬುದಾಬಿ ಪೊಲೀಸ್

By Nagaraja

ಒಂದರ ಬಳಿಕ ಒಂದರಂತೆ ಸೂಪರ್ ಹಾಗೂ ಐಷಾರಾಮಿ ವಾಹನಗಳನ್ನು ಖರೀದಿಸುತ್ತಲೇ ಇರುವ ದುಬೈ ಪೊಲೀಸ್‌ಗೆ ಅಬುದಾಬಿ ಪೊಲೀಸ್ ಸೆಡ್ಡು ನೀಡಿದೆ. ನಿಮಗೆಲ್ಲರಿಗೂ ತಿಳಿದಿರುವಂತೆಯೇ ದುಬೈ ಹಾಗೂ ಅಬುದಾಬಿ ನಗರಗಳು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಭಾಗವಾಗಿದೆ.

ಇವನ್ನೂ ಓದಿ: ದುಬೈ ಪೊಲೀಸ್ ವಿಶೇಷ ಪುಟಕ್ಕೆ ಭೇಟಿ ಕೊಡಿರಿ

ಆದರೆ ಶ್ರೀಮಂತಿಕೆಯ ವಿಚಾರ ಬಂದಾಗ ಒಂದಕ್ಕೊಂದು ಪೈಪೋಟಿಯಲ್ಲಿ ತೊಡಗಿದೆ. ಅಬುದಾಬಿ ಪೊಲೀಸ್‌ಗೆ ಹೋಲಿಸಿದಾಗ ದುಬೈ ಪೊಲೀಸ್ ಐಷಾರಾಮಿ ವಾಹನಗಳ ಸಂಖ್ಯೆಯಲ್ಲಿ 10 ಪಟ್ಟು ಮುಂದೆ ಇರಬಹುದು. ಆದರೆ ಈಗ ಲೈಕನ್ ಹೈಪರ್ ಸ್ಪೋರ್ಟ್ ಖರೀದಿಸಿರುವ ಅಬುದಾಬಿ ಸಣ್ಣ ಪ್ರಮಾಣದಲ್ಲಿ ಮುಯ್ಯಿ ತೀರಿಸಿಕೊಂಡಿದೆ.

ದುಬೈಗೆ ಸೆಡ್ಡು ನೀಡಿದ ಅಬುದಾಬಿ ಪೊಲೀಸ್

ಈ ಎಲ್ಲ ಸೂಪರ್ ಕಾರುಗಳನ್ನು ಯಾವ ಉದ್ದೇಶಕ್ಕಾದರೂ ಅಬುದಾಬಿ ಅಥವಾ ದುಬೈ ಪೊಲೀಸ್ ಖರೀದಿಸುತ್ತಿದೆ ಎಂಬುದು ಇನ್ನೂ ನಿಗೂಢ. ಯಾಕೆಂದರೆ ಗಸ್ತು ವಾಹನಗಳ ವಿಚಾರದಲ್ಲಿ ಈ ಎರಡು ನಗರಗಳು ಆಗಲೇ ಸರ್ವ ರೀತಿಯ ಸೌಲಭ್ಯಗಳನ್ನು ಒಳಗೊಂಡಿದೆ.

ದುಬೈಗೆ ಸೆಡ್ಡು ನೀಡಿದ ಅಬುದಾಬಿ ಪೊಲೀಸ್

ಇದರಿಂದ ತನ್ನ ಪ್ರತಿಷ್ಠಿಯನ್ನು ಹೆಚ್ಚಿಸಿಕೊಳ್ಳಲು ಹೊಸ ಹೊಸ ಸೂಪರ್ ಕಾರುಗಳನ್ನು ಖರೀದಿಸಲಾಗುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ. ಕೆಲವು ಸಮಯಗಳ ಹಿಂದೆಯಷ್ಟೇ ದುಬೈ ಪೊಲೀಸ್ ದುಬಾರಿ ರೋಲ್ಸ್ ರಾಯ್ಸ್ ಫಾಟಂ ಕಾರನ್ನು ತನ್ನದಾಗಿಸಿಕೊಂಡಿತ್ತು.

ದುಬೈಗೆ ಸೆಡ್ಡು ನೀಡಿದ ಅಬುದಾಬಿ ಪೊಲೀಸ್

ಅಬುದಾಬಿ ನಗರದಲ್ಲಿ ದೈನಂದಿನ ಗಸ್ತು ಕಾಯಲು ಫೋರ್ಡ್ ಎಫ್-150 ರಾಪ್ಟರ್, ನಿಸ್ಸಾನ ಜಿಟಿ-ಆರ್ ಹಾಗೂ ಷೆವರ್ಲೆ ಕ್ಯಾಮರೊ ವಾಹನಗಳನ್ನು ಬಳಕೆ ಮಾಡಲಾಗುತ್ತದೆ ಎಂಬ ಬಗ್ಗೆಯೂ ಮಾಹಿತಿಯಿದೆ.

ದುಬೈಗೆ ಸೆಡ್ಡು ನೀಡಿದ ಅಬುದಾಬಿ ಪೊಲೀಸ್

ಭರ್ಜರಿ 770 ಅಶ್ವಶಕ್ತಿ ಉತ್ಪಾದಿಸಲು ಸಾಮರ್ಥ್ಯ ಹೊಂದಿರುವ ಲೈಕನ್ ಸೂಪರ್ ಕಾರು 2.8 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ಹಾಗೂ ಗಂಟೆಗೆ ಗರಿಷ್ಠ 395 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ದುಬೈಗೆ ಸೆಡ್ಡು ನೀಡಿದ ಅಬುದಾಬಿ ಪೊಲೀಸ್

ವಿಶೇಷವೆಂದರೆ ಸೀಮಿತ ಏಳು ಯುನಿಟ್ ಗಳಷ್ಟು ಲೈಕನ್ ಹೈಪರ್ ಸ್ಪೋರ್ಟ್ ನಿರ್ಮಾಣವಾಗಲಿದೆ. ಇದರಂತೆ ಬರೋಬ್ಬರಿ 3.4 ಮಿಲಿಟನ್ ಅಮೆರಿಕನ್ ಡಾಲರ್ ತೆತ್ತು ದುಬೈ ಪೊಲೀಸ್ ಇದನ್ನು ಖರೀದಿಸಿದೆ.

ದುಬೈಗೆ ಸೆಡ್ಡು ನೀಡಿದ ಅಬುದಾಬಿ ಪೊಲೀಸ್

ದುಬೈ ಪೊಲೀಸ್ ಹಸಿರು ಹಾಗೂ ಶ್ವೇತ ವರ್ಣಗಳ ಮಿಶ್ರಣವನ್ನು ಹೊಂದಿದ್ದರೆ ಅಬುಬಾದಿ ಪೊಲೀಸ್ ಕೆಂಪು ಹಾಗೂ ಬಿಳುಪು ವರ್ಣಗಳ ಮಿಶ್ರಣವನ್ನು ತನ್ನದಾಗಿಸಿಕೊಂಡಿದೆ.

ದುಬೈಗೆ ಸೆಡ್ಡು ನೀಡಿದ ಅಬುದಾಬಿ ಪೊಲೀಸ್

ಅಬುದಾಬಿ ಪೊಲೀಸ್ ತೆಕ್ಕೆಗೆ ರೋಲ್ಸ್ ರಾಯ್ಸ್ ಫಾಟಂ

Most Read Articles

Kannada
English summary
Abu Dhabi Police buys Lykan Hypersport
Story first published: Thursday, June 4, 2015, 11:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X