ಸರ್ವಿಸ್‌ ಸೆಂಟರ್‌ನಲ್ಲಿ ಮೆಕಾನಿಕ್‌ನಿಂದ ಅಪಘಾತ: ವಿಮೆ ಕ್ಲೈಮ್ ಮಾಡಲು ಹೇಳಿ...

ಕಾರು ಸರ್ವಿಸ್ ಮಾಡಲು ನೀಡಿದಾಗ ಆಗುವ ಅಪಘಾತಗಳು ಅದರ ಮಾಲೀಕರಿಗೆ ಸಾಕಷ್ಟು ಬೇಸರವನ್ನು ತರಿಸುತ್ತದೆ. ಅಂತಹದ್ದೇ ಒಂದು ಘಟನೆ ಇಲ್ಲಿದೆ. 'ಕಿಯಾ ಸೊನೆಟ್' ಕಾರಿನ ಮಾಲೀಕ ಜಲಜ್ ಅಗರ್ವಾಲ್ ತಾನು ಖರೀದಿ ಮಾಡಿದ್ದ ಒಂದು ವರ್ಷಕ್ಕಿಂತ ಹಳೆಯ ಕಾರಿಗೆ ಸರ್ವಿಸ್‌ಗೆ ನೀಡಿದ್ದಾಗ ಏನಾಯಿತು ಎಂಬುದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸಿದ್ದಾರೆ.

ರಾಜಸ್ಥಾನದ ಜೈಪುರದ ರಾಜೇಶ್ ಕಿಯಾ ಮೋಟಾರ್ಸ್ ಸರ್ವಿಸ್ ಸೆಂಟರ್‌ನಲ್ಲಿ ನವೆಂಬರ್ 17, 2022ರಂದು ಅಗರ್ವಾಲ್ ತಮ್ಮ ಕಾರನ್ನು ಸರ್ವಿಸ್‌ಗೆ ನೀಡಿದ್ದರು. ಅವರು ತಮ್ಮ ಕಾರನ್ನು ಹಿಂಪಡೆಯುವುವ ನಿರೀಕ್ಷೆಯಲ್ಲಿದ್ದರು. ಆದರೆ, ಅವರ ಕಾರಿಗೆ ಅಪಘಾತವಾಗಿದೆ ಎಂದು ಹೇಳಿ, ಸರ್ವಿಸ್ ಸೆಂಟರ್‌ನಿಂದ ಕರೆ ಬಂದಿತ್ತು. ಅಲ್ಲಿನ ಸಿಬ್ಬಂದಿ ಕಾರನ್ನು ಸರ್ವಿಸ್ ಬಳಿಕ, ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡು ಹೋಗಲಾಯಿತು. ಆಗ ಹಸುವಿಗೆ ಡಿಕ್ಕಿ ಹೊಡೆದಿದೆ ಎಂದು ಮಾಲೀಕರಿಗೆ ತಿಳಿಸಿದ್ದರು.

ಸರ್ವೀಸ್ ಸೆಂಟರ್‌ನ ಮ್ಯಾನೇಜರ್ ಹಾನಿಗೊಳಗಾದ ಕಾರಿನ ಫೋಟೋಗಳನ್ನು ಅಗರ್ವಾಲ್ ಅವರಿಗೆ ಕಳುಹಿಸುತ್ತಾರೆ. ಆ ಫೋಟೋಗಳಲ್ಲಿ ವಾಹನದ ಮುಂಭಾಗವು ಸಂಪೂರ್ಣವಾಗಿ ಜಖಂ ಆಗಿದೆ ಎಂದು ಅವರಿಗೆ ತಿಳಿಯುತ್ತದೆ. ಬಳಿಕ, ಅಗರ್ವಾಲ್ ಸರ್ವೀಸ್ ಸೆಂಟರ್‌ಗೆ ಭೇಟಿ ನೀಡಿದಾಗ ಮ್ಯಾನೇಜರ್ ಅಲ್ಲಿ ಬೇರೆಯದ್ದೇ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾರೆ. ಕಾರ್ ಕ್ಲೀನರ್ ವಾಹನ ಚಲಾಯಿಸಿಕೊಂಡು ಹೋಗಿ, ಸರ್ವೀಸ್ ಸೆಂಟರ್ ಗೋಡೆಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ ಎಂದು ಹೇಳುತ್ತಾರೆ.

ಅಗರ್ವಾಲ್ ಸಿಸಿಟಿವಿ ದೃಶ್ಯಾವಳಿ ನೋಡುತ್ತೇನೆ ಎಂದು ಕೇಳಿದಾಗ, ಅಲ್ಲಿನ ಸಿಬ್ಬಂದಿ ತೋರಿಸಲು ಹಿಂಜರಿಯುತ್ತಾರೆ. ನಂತರ ಒಪ್ಪಿಕೊಂಡು ವೀಡಿಯೊವನ್ನು ತೋರಿಸಿದ್ದಾರೆ. ದೃಶ್ಯಾವಳಿಗಳಲ್ಲಿ, ಸರ್ವೀಸ್ ಸೆಂಟರ್‌ ಸಿಬ್ಬಂದಿ ಕಾರನ್ನು ಓಡಿಸುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಇನ್ನೂ ಸರ್ವೀಸ್ ಸೆಂಟರ್‌ ಸಿಬ್ಬಂದಿ, ಕಾರನ್ನು ರಿಪೇರಿ ಮಾಡಲು ವಿಮೆಯನ್ನು ಕ್ಲೈಮ್ ಮಾಡುವಂತೆ ಅಗರ್ವಾಲ್ ಅವರಿಗೆ ಕೇಳುತ್ತಾರೆ. ಈ ಮಧ್ಯೆ, ಅಲ್ಲಿನ ಸಿಬ್ಬಂದಿ ಕಾರನನ್ನು ವಾಪಸ್ ನೀಡುವ ಭರವಸೆ ನೀಡಿದ್ದಾರೆ. ಆದರೆ, ಈವರೆಗೆ ನೀಡಿಲ್ಲ.

ಸಿಸಿಟಿವಿ ದೃಶ್ಯಾವಳಿಗಳಲ್ಲಿ ವಾಹನವನ್ನು ಸರ್ವಿಸ್ ಸೆಂಟರ್‌ನ ಕಾಂಪೌಂಡ್‌ನೊಳಗೆ ಅತಿವೇಗದಲ್ಲಿ ಡಿಕ್ಕಿಯಾಗಿರುವುದನ್ನು ನೋಡಬಹುದು. ನಿಜವಾಗಿ ಅಲ್ಲಿ ಏನು ನಡೆಯಿತು ಎಂಬುದು ಸರಿಯಾಗಿ ಕಾಣುವುದಿಲ್ಲ. ಆದರೆ, ಅದೇ ಕಾಂಪೌಂಡ್‌ನಲ್ಲಿ ಸರ್ವಿಸ್ ಮಾಡುತ್ತಿದ್ದ ಇತರೆ ಕಾರುಗಳಿಗೆ ಡಿಕ್ಕಿಯಾಗಿ ಹಾನಿಯಾಗುವುದು ಮಾತ್ರ ತಪ್ಪಿದೆ. ಅಲ್ಲದೆ, ಈ ಘಟನೆಗೆ ಬಗ್ಗೆ ಗ್ರಾಹಕ ಜಲಜ್ ಅಗರ್ವಾಲ್, ಸೋಷಿಯಲ್ ಮೀಡಿಯಾದಲ್ಲಿ ಹಾನಿಗೊಳಗಾದ 'ಕಿಯಾ ಸೊನೆಟ್' ಕಾರಿನ ಫೋಟೋಗಳನ್ನು ಶೇರ್ ಮಾಡಿ, ತನ್ನ ನೋವನ್ನು ಹೇಳಿಕೊಂಡಿದ್ದಾರೆ.

ಇಂತಹ ದುರ್ಘಟನೆಗಳಿಗೆ ತಾವು ಜವಾಬ್ದಾರರಲ್ಲ ಎಂದು ಎಲ್ಲಾ ಸರ್ವಿಸ್ ಸೆಂಟರ್‌ಗಳು ಸ್ಪಷ್ಟವಾಗಿ ತಿಳಿಸುತ್ತವೆ. ಈ ಸಂದರ್ಭದಲ್ಲಿ ವಿವಿಧ ಕಾಗದ ಪತ್ರಗಳಿಗೆ ಸಹಿ ಮಾಡಿರುವುದರಿಂದ ಗ್ರಾಹಕರು ಅಂತಹ ಹಾನಿಗಳಿಗೆ ಪಾವತಿಸಲು ಹೊಣೆಗಾರರಾಗುವುದಿಲ್ಲ.ಇಂತಹ ಪ್ರಕರಣಗಳಲ್ಲಿ, ಎಫ್ಐಆರ್ ದಾಖಲಿಸಬೇಕು. ಜೊತೆಗೆ ವಾಹನಗಳ ಮಾಲೀಕರು ಸರ್ವಿಸ್ ಸೆಂಟರ್‌ ನ್ಯಾಯಾಲಯಕ್ಕೆ ಎಳೆಯಬಹುದು. ಅದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ ಗ್ರಾಹಕರು ತಮ್ಮ ಕಾರು ಇಲ್ಲದೆ ಉಳಿಯಬೇಕಾಗುತ್ತದೆ. ಈ ಬಗ್ಗೆ ಕಿಯಾ ಇನ್ನೂ ಅಧಿಕೃತವಾಗಿ ಹೇಳಿಕೆ ನೀಡಿಲ್ಲ.

ದೇಶದಲ್ಲಿ ಕೊರಿಯಾ ಮೂಲದ ಕಿಯಾ ಕಂಪನಿ ಕಾರುಗಳು ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವುದು ಇದೇ ಮೊದಲೇನು ಅಲ್ಲ. ಈ ವರ್ಷದ ಆರಂಭದಲ್ಲಿ, ಕಿಯಾ ಸೆಲ್ಟೋಸ್‌ ಕಾರನ್ನು ಮಾಲೀಕರೊಬ್ಬರು ಡೆಲಿವರಿ ತೆಗೆದುಕೊಂಡ ತಕ್ಷಣ, ತಮ್ಮ ವಾಹನ ಕೆಟ್ಟುಹೋಗಿದೆ ಎಂದು ದೂರು ನೀಡಿದ್ದರು. ನಂತರ, ಕಿಯಾ ಸಮಸ್ಯೆಯನ್ನು ಪರಿಹರಿಸಿತು. ಆದರೆ, ವಾಹನವು ಒಂದೇ ದಿನದಲ್ಲಿ ಮತ್ತೆ ಎರಡು ಬಾರಿ ಸ್ಟಾರ್ಟ್ ಆಗಲೇ ಇಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ.

ಭಾರತದಲ್ಲಿ ಕೆಟ್ಟ ಉತ್ಪನ್ನಗಳು ಮತ್ತು ಅವುಗಳಿಂದ ಆಗುವ ಸಮಸ್ಯೆಗಳಿಂದ ಗ್ರಾಹಕರನ್ನು ರಕ್ಷಿಸಲು ಯಾವುದೇ ಕಾನೂನುಗಳು ಇಲ್ಲ. ಗ್ರಾಹಕರು ದೂರು ಸಲ್ಲಿಸಬಹುದಾದ ಗ್ರಾಹಕ ನ್ಯಾಯಾಲಯಗಳಿದ್ದರೂ, ವಾಹನವನ್ನು ಹೊಸದರೊಂದಿಗೆ ಬದಲಾಯಿಸಿ ನೀಡಲು ತಯಾರಕರಿಗೆ ನಿರ್ದೇಶಿಸುವ ಯಾವುದೇ ಕಾನೂನು ಇಲ್ಲ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಂತಹ ಕಾನೂನುಗಳಿದ್ದು, ಯಾವುದೇ ಸಾಧನ, ಕಾರು, ಟ್ರಕ್ ಅಥವಾ ಬೈಕ್ ದೋಷಯುಕ್ತವೆಂದು ಕಂಡುಬಂದರೆ ತಕ್ಷಣವೇ ಅವುಗಳನ್ನು ಬದಲಾಯಿಸಬೇಕು ಅಥವಾ ಗ್ರಾಹಕರಿಗೆ ಪರಿಹಾರವನ್ನು ನೀಡಬೇಕು.

Most Read Articles

Kannada
English summary
Accident by mechanic at service center ask for insurance claim
Story first published: Friday, November 25, 2022, 18:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X