ಜನಪ್ರಿಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಾರಿಗೆ ಸ್ಪೇನ್‌ನಲ್ಲಿ ಅಪಘಾತ

ಜನಪ್ರಿಯ ಫುಟ್ಬಾಲ್ ಆಟಗಾರ ರೊನಾಲ್ಡೊ ಅವರ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾದ ಬುಗಾಟಿ ವೆರಾನ್ ಸೋಮವಾರ ಬೆಳಿಗ್ಗೆ ಸ್ಪ್ಯಾನಿಷ್ ನಗರದ ಮಜೋರ್ಕಾದಲ್ಲಿ ಮನೆಯೊಂದರ ಪ್ರವೇಶದ್ವಾರಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾವುದೇ ಜೀವ ಹಾನಿಯಾಗಿಲ್ಲ ಎಂದು ಸ್ಪೇನ್‌ ವರದಿಗಳು ತಿಳಿಸಿವೆ.

ಜನಪ್ರಿಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಾರಿಗೆ ಅಪಘಾತ

ಪ್ರತಿಯೊಬ್ಬರಿಗೂ ದುಬಾರಿ ಸ್ಪೋರ್ಟ್ಸ್‌ ಕಾರುಗಳನ್ನು ಓಡಿಸುವ ಆಸೆಯಿರುತ್ತದೆ. ಅಂತೆಯೇ ಸ್ಟಾರ್ ನಟರು, ಉದ್ಯಮಿಗಳು, ಕ್ರಿಕೆಟ್, ಫುಟ್ಬಾಲ್ ಆಟಗಾರರು ತಮ್ಮ ಕನಸಿನ ಕಾರನ್ನು ಖರೀದಿಸಿ ಬಯಕೆಯನ್ನು ಈಡೇರಿಸಿಕೊಳ್ಳುತ್ತಾರೆ. ಈ ಪಟ್ಟಿಯಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಸ್ಟಾರ್ ಸ್ಟ್ರೈಕರ್ ಆಟಗಾರರಾದ ಕ್ರಿಸ್ಟಿಯಾನೋ ರೊನಾಲ್ಡೊ ಕೂಡ ಒಬ್ಬರು.

ಜನಪ್ರಿಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಾರಿಗೆ ಅಪಘಾತ

ಪ್ರಸ್ತುತ ಅವರು ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಫುಟ್‌ಬಾಲ್ ಆಟಗಾರರಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ವಿಶ್ವದಾದ್ಯಂತ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಅವರು, ಬಹುತೇಕ ಸಂಪಾದನೆಯನ್ನು ಜಾಹಿರಾತುಗಳ ಮೂಲಕ ಗಳಿಸುತ್ತಾರೆ. ಇವರಿಗೆ ಕಾರುಗಳೆಂದರೆ ಬಹಳ ಪ್ರೀತಿ. ಹಾಗಾಗಿಯೇ ತಮ್ಮಿಷ್ಟದ ಒಂದಷ್ಟು ಕಾರುಗಳನ್ನು ಖರೀದಿಸಿದ್ದಾರೆ.

ಜನಪ್ರಿಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಾರಿಗೆ ಅಪಘಾತ

ಅವರ ಕಾರುಗಳ ಲಿಸ್ಟ್‌ನಲ್ಲಿ ವಿಶ್ವದ ಕೆಲವು ವೇಗದ ಕಾರುಗಳಿದ್ದು, ಅವರ ಕಾರ್‌ ಕಲೆಕ್ಷೆನ್ ಕಂಡು ಬೆರಗಾದವರೇ ಹೆಚ್ಚು. ಏಕೆಂದರೆ ಇವರ ಬಳಿಯಿರುವ ಪ್ರತಿಯೊಂದು ಕಾರು ಕೂಡ ಕೋಟಿ ರೂ.ಗು ಅಧಿಕ ಮೌಲ್ಯದ್ದಾಗಿವೆ. ಇವುಗಳಲ್ಲಿ ಬಹುತೇಕ ಕಾರುಗಳನ್ನು ಅವರೇ ಡ್ರೈವ್ ಮಾಡುತ್ತಾ ಆಗಾಗ ಕಾಣಿಸಿಕೊಂಡು ಸುದ್ದಿಯಾಗಿದ್ದರು.

ಜನಪ್ರಿಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಾರಿಗೆ ಅಪಘಾತ

ಎಷ್ಟೇ ಕೆಲಸವಿದ್ದರೂ ಕುಟುಂಬಕ್ಕಾಗಿ ಸಮಯ ನೀಡುವ ರೊನಾಲ್ಡೊ, ಪತ್ನಿ ಹಾಗೂ ಮಕ್ಕಳೊಂದಿಗೆ ಪ್ರವಾಸ ಹೋಗುವುದನ್ನು ರೂಢಿಸಿಕೊಂಡಿದ್ದಾರೆ. ಪ್ರಸ್ತುತ ಈ ಮಾಜಿ ರಿಯಲ್ ಮ್ಯಾಡ್ರಿಡ್ ಫಾರ್ವರ್ಡ್ ಆಟಗಾರ ತನ್ನ ಕುಟುಂಬದೊಂದಿಗೆ ಸ್ಪೇನ್‌ನಲ್ಲಿ ರಜಾದಿನಗಳನ್ನು ಕಳೆಯುತ್ತಿದ್ದಾರೆ.

ಜನಪ್ರಿಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಾರಿಗೆ ಅಪಘಾತ

ರೊನಾಲ್ಡೊ ಅವರ ದುಬಾರಿ ಕಾರಿಗೆ ಅಪಘಾತ

ಸ್ಪೇನ್‌ನ ಇತ್ತೀಚಿನ ವರದಿಗಳ ಪ್ರಕಾರ, ರೊನಾಲ್ಡೊ ಅವರ ಅತ್ಯಂತ ಅಮೂಲ್ಯವಾದ ಆಸ್ತಿಗಳಲ್ಲಿ ಒಂದಾದ ಅವರ ಬುಗಾಟ್ಟಿ ವೆರಾನ್ ಸೋಮವಾರ ಬೆಳಿಗ್ಗೆ ಸ್ಪ್ಯಾನಿಷ್ ನಗರದ ಮಜೋರ್ಕಾದಲ್ಲಿ ಮನೆಯೊಂದರ ಪ್ರವೇಶದ್ವಾರಕ್ಕೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್, ಘಟನೆ ಸಂಭವಿಸಿದಾಗ ರೊನಾಲ್ಡೊ ಅವರು ಕಾರಿನಲ್ಲಿ ಇರಲಿಲ್ಲ. ಅವರು ಪ್ರವಾಸದಲ್ಲಿದ್ದ ಕಾರಣ ಬೇರೊಬ್ಬರು ಕಾರನ್ನು ಬಳಸುತ್ತಿದ್ದರು.

ಜನಪ್ರಿಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಾರಿಗೆ ಅಪಘಾತ

ವರದಿಗಳ ಪ್ರಕಾರ, ರೊನಾಲ್ಡೊ ಅವರ ಉದ್ಯೋಗಿಯೊಬ್ಬರು ಕಾರನ್ನು ಚಲಾಯಿಸುತ್ತಿದ್ದರು ಎಂದು ತಿಳಿದುಬಂದಿದೆ. ಕಾರು ನಿಯಂತ್ರಣವನ್ನು ಕಳೆದುಕೊಂಡಿರುವುದು ಅಪಘಾತಕ್ಕೆ ಕಾರಣವಾಗಿದೆ. ಘಟನೆಯಲ್ಲಿ ಬುಗಾಟಿ ವೇರಾನ್‌ನ ಮುಂಭಾಗ ಹಾನಿಯಾಗಿದೆ. ಇದರ ಬೆಲೆ ಸುಮಾರು 16.25 ಕೋಟಿ ರೂ. ಇರಬಹುದು ಎನ್ನಲಾಗಿದೆ. ಈ ಅಪಘಾತವು ಕಾರಿಗೆ ದೊಡ್ಡ ಹಾನಿಯನ್ನುಂಟುಮಾಡಿದ್ದರೂ ಚಾಲಕನಿಗೆ ಅಥವಾ ವೇರಾನ್ ಅಪಘಾತಕ್ಕೊಳಗಾದ ಪ್ರದೇಶದಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ.

ಜನಪ್ರಿಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಾರಿಗೆ ಅಪಘಾತ

ಬುಗಾಟಿ ವೇರಾನ್ ಕಾರು ಪ್ರಪಂಚದಲ್ಲಿರುವ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಈ ಕಾರ್ ಅನ್ನು ಹೈಪರ್ ಕಾರು ಎಂದೂ ಸಹ ಕರೆಯಲಾಗುತ್ತದೆ. ಈ ಕಾರಿನ ಬಿಡುಗಡೆಯ ನಂತರ ಬುಗಾಟಿ ಕಂಪನಿಯು ತನ್ನ ಕಳೆದುಹೋಗಿದ್ದ ಗತವೈಭವವನ್ನು ಮರಳಿ ಪಡೆದು, ಆಟೋ ಮೋಬೈಲ್ ಉದ್ಯಮದಲ್ಲಿ ಮತ್ತೆ ಮುಂಚೂಣಿಗೆ ಬಂದಿತು.

ಜನಪ್ರಿಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಾರಿಗೆ ಅಪಘಾತ

ಫೋಕ್ಸ್ ವ್ಯಾಗನ್ ಕಂಪನಿಯು ಈ ಕಾರಿನ ಮಾಲೀಕತ್ವವನ್ನು ಹೊಂದಿದೆ. ಭಾರತದಲ್ಲಿ ಈ ಕಾರನ್ನು 2010ರಲ್ಲಿ ಬಿಡುಗಡೆ ಮಾಡಲಾಗಿತ್ತು. ಬ್ಲಾಕ್ ವೇರಾನ್ ಕಾರನ್ನು ಬಿಡುಗಡೆಗೊಳಿಸಿ ಆಸಕ್ತಿ ಹೊಂದಿದ್ದ ಗ್ರಾಹಕರಿಗೆ ಟೆಸ್ಟ್ ಡ್ರೈವ್ ಕೂಡ ನೀಡಲಾಗಿತ್ತು.

ಜನಪ್ರಿಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಾರಿಗೆ ಅಪಘಾತ

ಬುಗಾಟಿ ಕಾರು ಪ್ರಪಂಚದಲ್ಲಿರುವ ಅತಿ ಹೆಚ್ಚಿನ ಪವರ್ ಹೊಂದಿರುವ ಹಾಗೂ ಅತಿ ವೇಗದ ಕಾರ್ ಆಗಿದೆ. 2010ರಲ್ಲಿ ಭಾರತದಲ್ಲಿ ಈ ಕಾರು ಬಿಡುಗಡೆಯಾದಾಗ, ಅನೇಕ ಟೆಸ್ಟ್ ಡ್ರೈವ್‍‍ಗಳನ್ನು ನೀಡಿದ್ದರೂ ಈ ಕಾರ್ ಅನ್ನು ಯಾರೂ ಖರೀದಿಸಿರಲಿಲ್ಲ.

ಜನಪ್ರಿಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಾರಿಗೆ ಅಪಘಾತ

ಈ ಕಾರಿನ ಬೆಲೆಯನ್ನು ಆಗ ರೂ.16 ಕೋಟಿಗಳೆಂದು ಹೇಳಲಾಗಿತ್ತು. ಆಗ ಇದರ ಬೆಲೆಯು ಭಾರತದಲ್ಲಿದ್ದ ಇತರ ದುಬಾರಿ ಕಾರುಗಳಿಗಿಂತ ಮೂರು ಪಟ್ಟು ಹೆಚ್ಚಾಗಿತ್ತು. ಬುಗಾಟಿ ವೇರಾನ್ ಕಾರು ಪ್ರಪಂಚದಲ್ಲಿರುವ ಕಾರುಗಳಿಗೆ ಹೋಲಿಸಿದರೆ, ತನ್ನದೇ ಆದ ವಿಭಿನ್ನತೆಯನ್ನು ಹೊಂದಿದೆ.

ಜನಪ್ರಿಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಾರಿಗೆ ಅಪಘಾತ

ಬುಗಾಟಿ ವೇರಾನ್ 16.4 ಗ್ರಾಂಡ್ ಸ್ಪೋರ್ಟ್ ಕಾರಿನಲ್ಲಿ 8.0 ಲೀಟರಿನ ಎಂಜಿನ್‌ ಇದ್ದು, 1001 ಬಿ‍‍ಹೆಚ್‍‍ಪಿ ಹಾಗೂ 1,250 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. 0-100 ಕಿ.ಮೀ ವೇಗವನ್ನು ಕೇವಲ 2.7 ಸೆಕೆಂಡುಗಳಲ್ಲಿ ಕ್ರಮಿಸುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಅನ್ನು ಪ್ರತಿ ಗಂಟೆಗೆ 407 ಕಿ.ಮೀ ಎಂದು ನಿಗದಿಪಡಿಸಲಾಗಿದೆ. ಈ ಕಾರಿನ ಉತ್ಪಾದನೆಯನ್ನು ಸೀಮಿತ ಪ್ರಮಾಣದಲ್ಲಿ ಮಾಡಲಾಗಿದೆ.

ಜನಪ್ರಿಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಾರಿಗೆ ಅಪಘಾತ

ವೇರಾನ್ ಕಾರ್ ಅನ್ನು ಟಿಟಾನಿಯಂ, ಕಾರ್ಬನ್ ಫೈಬರ್ ಹಾಗೂ ಮ್ಯಾಗ್ನೆಷಿಯಂ ಮುಂತಾದ ಬಿಡಿ ಭಾಗಗಳನ್ನು ಬಳಸಿ ಉತ್ಪಾದಿಸಲಾಗಿದೆ. ಇದರಲ್ಲಿರುವ ಡಬ್ಲ್ಯು16, 8 ಲೀಟರಿನ ಎಂಜಿನ್ ಅನ್ನು ಕಂಪನಿಯ ಮುಖ್ಯ ಕಚೇರಿಯಿರುವ ಫ್ರಾನ್ಸ್ ನ ಮೊಲ್‍‍ಶಿಮ್‍‍ನಲ್ಲಿ ತಯಾರಿಸಲಾಗಿದೆ.

ಜನಪ್ರಿಯ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕಾರಿಗೆ ಅಪಘಾತ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಬುಗಾಟಿ ವೇರಾನ್ ಬೆಲೆಯು ಹೆಚ್ಚಾಗಿದ್ದರೂ, ಉನ್ನತ ದರ್ಜೆಯ ಆರ್ ಅಂಡ್ ಡಿ ಹಾಗೂ ನಿರ್ಮಾಣ ವೆಚ್ಚದಿಂದಾಗಿ, ಫೋಕ್ಸ್ ವ್ಯಾಗನ್ ಕಂಪನಿಗೆ ಮಾರಾಟವಾದ ಪ್ರತಿಯೊಂದು ಬುಗಾಟಿ ವೇರಾನ್ ಕಾರಿನ ಮೇಲೆ 6.25 ಮಿಲಿಯನ್ ಡಾಲರ್ ನಷ್ಟವಾಗಿದೆ. ಈ ಕಾರಿನಲ್ಲಿ ಅಳವಡಿಸಲಾಗಿರುವ ಪೈಲಟ್ ಸ್ಪೋರ್ಟ್ 2ಎಸ್ ಹೆಸರಿನ ಟಯರ್‍‍ಗಳನ್ನು ಮಿಚೆಲಿನ್ ಕಂಪನಿಯು ಈ ಕಾರುಗಳಿಗಾಗಿಯೇ ವಿಶೇಷವಾಗಿ ತಯಾರಿಸಿದೆ.

Most Read Articles

Kannada
English summary
Accident to the car of popular footballer Cristiano Ronaldo
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X