ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಖರೀದಿಸಿದ ಜನಪ್ರಿಯ ನಟ

ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಅರ್ಜುನ್ ಅಶೋಕನ್ ಅವರು ಕಾರುಗಳ ಮೇಲೆ ಹೆಚ್ಚು ಕ್ರೇಜ್ ಹೊಂದಿದ್ದಾರೆ. ನಟ ಅರ್ಜುನ್ ಅಶೋಕನ್ ಅವರ ಬಳಿ ಹಲವಾರು ಕಾರುಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ. ಇದೀಗ ನಟ ಅರ್ಜುನ್ ಅವರು ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರನ್ನು ಖರೀದಿಸಿದ್ದಾರೆ.

ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಖರೀದಿಸಿದ ಜನಪ್ರಿಯ ನಟ

ನಟ ಅರ್ಜುನ್ ಅಶೋಕನ್ ಅವರು ಮಲಯಾಳಂ ಚಿತ್ರರಂಗದ ಜನಪ್ರಿಯ ಮತ್ತು ಹಿರಿಯ ನಟ ಹರಿಶ್ರೀ ಅಶೋಕನ್ ಅವರ ಮಗ. ನಟ ಅರ್ಜುನ್ ಅವರು ಜೂನ್, ಮಂದಾರಂ ಮತ್ತು ಸೂಪರ್ ಶರಣ್ಯ ನಂತಹ ಜನಪ್ರಿಯ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಟ ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಜಿಟಿ ಪ್ಲಸ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದು ಮಿಡ್ ಸೈಜ್ ಸೆಡಾನ್ ಆಗಿದೆ. ನಟ ಅರ್ಜುನ್ ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಜಿಟಿ ಪ್ಲಸ್ ಕಾರಿನ ಜೊತೆಗಿನ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಖರೀದಿಸಿದ ಜನಪ್ರಿಯ ನಟ

ನಟ ಅರ್ಜುನ್ ಅಶೋಕನ್ ಅವರು ಖರೀದಿಸಿದ ಫೋಕ್ಸ್‌ವ್ಯಾಗನ್ ವರ್ಟಸ್ ಕಾರಿನ ಬಗ್ಗೆ ಹೇಳುವುದಾದರೆ, ಫೋಕ್ಸ್‌ವ್ಯಾಗನ್ ವರ್ಟಸ್ ಕಾರನ್ನು ವೆಂಟೊಗೆ ಬದಲಿಯಾಗಿ ಕಾಂಪ್ಯಾಕ್ಟ್ ಸೆಡಾನ್ ಅನ್ನು ವಿಶೇಷವಾಗಿ ಭಾರತೀಯ ಮಾರುಕಟ್ಟೆಗಾಗಿ ವಿನ್ಯಾಸಗೊಳಿಸಲಾಗಿದೆ. ಈ ಕಾರನ್ನು ಉತ್ಪಾದನೆಯು ಪುಣೆಯಲ್ಲಿರುವ ಕಂಪನಿಯ ಚಕನ್ ಸ್ಥಾವರದಲ್ಲಿ ಮಾಡಲಾಗಿದೆ.

ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಖರೀದಿಸಿದ ಜನಪ್ರಿಯ ನಟ

ಈ ಫೋಕ್ಸ್‌ವ್ಯಾಗನ್ ವರ್ಟಸ್ ಕಳೆದ ವರ್ಷ ಬಿಡುಗಡೆಯಾ ಫೋಕ್ಸ್‌ವ್ಯಾಗನ್ ಟೈಗನ್ ಕಾಂಪ್ಯಾಕ್ಟ್ ಎಸ್‍ಯುವಿ ನಂತರ ಭಾರತ 2.0 ಯೋಜನೆಯ ಅಡಿಯಲ್ಲಿ ಬಿಡುಗಡೆಯಾದ ಫೋಕ್ಸ್‌ವ್ಯಾಗನ್‌ನ ಎರಡನೇ ಉತ್ಪನ್ನವಾಗಿದೆ. ಈ ಫೋಕ್ಸ್‌ವ್ಯಾಗನ್ ವರ್ಟಸ್ MQB A0 IN ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ,

ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಖರೀದಿಸಿದ ಜನಪ್ರಿಯ ನಟ

ಇದು ಬ್ರ್ಯಾಂಡ್‌ನ ಮಾಡ್ಯುಲರ್ ಆರ್ಕಿಟೆಕ್ಚರ್‌ನ ಸ್ಥಳೀಯ ಆವೃತ್ತಿಯಾಗಿದ್ದು, ಭಾರತಕ್ಕಾಗಿ ವಿಶೇಷವಾಗಿ ಅಭಿವೃದ್ಧಿಪಡಿಸಲಾಗಿದೆ. ನಾವು ಈಗಾಗಲೇ ಫೋಕ್ಸ್‌ವ್ಯಾಗನ್ ಟೈಗನ್ ಅನ್ನು ಹೊಂದಿದ್ದೇವೆ, ಇದು ಅದೇ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ, ವರ್ಟಸ್ ಅನ್ನು ಕಾಂಪ್ಯಾಕ್ಟ್ ಎಸ್‌ಯುವಿ ಅಡಿಯಲ್ಲಿ ಇರಿಸಲಾಗಿದೆ.

ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಖರೀದಿಸಿದ ಜನಪ್ರಿಯ ನಟ

ಈ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಮುಂಭಾಗ ಮಸ್ಕಲರ್ ಲುಕ್ ಅನ್ನು ಹೂಂದಿದ್ದು, ಸಿಂಗಲ್ ಸ್ಲ್ಯಾಟ್ ಗ್ರಿಲ್, ಸುತ್ತಲೂ ಕ್ರೋಮ್ ಗಾರ್ನಿಶ್ ಮತ್ತು ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದೆ. ಎಲ್-ಆಕಾರದ ಎಲ್ಇಡಿ ಡಿಆರ್ಎಲ್ ಗಳು ಸ್ಪೋರ್ಟಿಯಾಗಿ ಕಾಣುತ್ತವೆ. ಚೂಪಾದ ಲೈನ್ ಗಳು ಮತ್ತು ಹರಿತವಾದ ವಿನ್ಯಾಸವು ಫೋಕ್ಸ್‌ವ್ಯಾಗನ್ ಕಾರುಗಳ ಸಾಮಾನ್ಯ ಲಕ್ಷಣವಾಗಿದೆ,

ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಖರೀದಿಸಿದ ಜನಪ್ರಿಯ ನಟ

ಈ ವರ್ಟಸ್ ಜಿಟಿ ಬ್ಯಾಡ್ಜ್ ಹೊಂದಿರುವ ಪರ್ಫಾಮೆನ್ಸ್ ವೆರಿಯೆಂಟ್ ಅನ್ನು ಹೊಂದಿದೆ. ಈ ಕಾರಿನಲ್ಲಿ ಅಲಾಯ್ ವ್ಹೀಲ್ ಗಳು ಕಾರಿನ ಒಟ್ಟಾರೆ ನಿಲುವಿಗೆ ಪೂರಕವಾಗಿವೆ. ಡೋರ್ ಹ್ಯಾಂಡಲ್‌ಗಳು, ಕಾಂಟ್ರಾಸ್ಟ್ ಕಪ್ಪು ORVM ಗಳು ಮತ್ತು ರೂಪ್ ಗಾಗಿ ಕ್ರೋಮ್ ಅನ್ನು ಹೊಂದಿದೆ.

ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಖರೀದಿಸಿದ ಜನಪ್ರಿಯ ನಟ

ಇದರೊಂದಿಗೆ ಪ್ರೊಫೈಲ್ ಅನ್ನು ಪೂರ್ಣಗೊಳಿಸಿದಾಗ ಎಲ್ಇಡಿ ಟೈಲ್‌ಲೈಟ್‌ಗಳು, ಬೂಟ್ ಲಿಡ್‌ನಲ್ಲಿ ವರ್ಟಸ್ ಬ್ಯಾಡ್ಜ್ ಮತ್ತು ಬೂಟ್-ಮೌಂಟೆಡ್ ನಂಬರ್ ಪ್ಲೇಟ್ ರಿಸೆಸ್ ಕಾರಿನ ಹಿಂಭಾಗವನ್ನು ಆವರಿಸುತ್ತದೆ. ಇನ್ನು ಫೋಕ್ಸ್‌ವ್ಯಾಗನ್ ವಿರ್ಟಸ್ ಸ್ಟ್ಯಾಂಡರ್ಡ್ ವೆರಿಯೆಂಟ್ ಮತ್ತು ಜಿಟಿ ವೇರಿಯಂಟ್ ನಡುವೆ ವಿಭಿನ್ನ ಸ್ಟೈಲಿಂಗ್ ಬಿಟ್‌ಗಳನ್ನು ಕೂಡ ಸೇರಿಸಿದೆ. ಅತ್ಯಂತ ಪ್ರಮುಖವಾದ ಬದಲಾವಣೆಯು ಮುಂಭಾಗದಲ್ಲಿದೆ. ವಿರ್ಟಸ್ ಫಾಸಿಕ ಬ್ಲ್ಯಾಕ್ ಇನಸರ್ಟ್ ಹೊಂದಿದೆ,

ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಖರೀದಿಸಿದ ಜನಪ್ರಿಯ ನಟ

ಫೋಕ್ಸ್‌ವ್ಯಾಗನ್ ವರ್ಟಸ್ ಕಾರಿನ ವೈಶಿಷ್ಟ್ಯಗಳ ವಿಷಯದಲ್ಲಿ, ಕಾರು ವೈರ್‌ಲೆಸ್ ಫೋನ್ ಚಾರ್ಜರ್, ವೆಂಟಿಲೆಟರ್ ಮುಂಭಾಗದ ಸೀಟುಗಳು, ಹಿಂಭಾಗದ ಏರ್-ಕಾನ್ ವೆಂಟ್‌ಗಳು ಮತ್ತು ಎಲೆಕ್ಟ್ರಿಕ್ ಸನ್‌ರೂಫ್‌ನೊಂದಿಗೆ ಬರುತ್ತದೆ. ವರ್ಟಸ್ ಕ್ಲಾಸ್-ಲೀಡಿಂಗ್ 521-ಲೀಟರ್ ಬೂಟ್ ಸ್ಪೇಸ್‌ನೊಂದಿಗೆ ಬರುತ್ತದೆ, ಇದನ್ನು ಎರಡನೇ ಸಾಲಿನ ಆಸನವನ್ನು ಮಡಿಸುವ ಮೂಲಕ 1,050-ಲೀಟರ್‌ಗೆ ವಿಸ್ತರಿಸಬಹುದು. ಪರ್ಫಾರ್ಮೆನ್ಸ್ ಲೈನ್ ಕೂಡ 60:40 ಸ್ಪ್ಲಿಟ್ ಫಂಕ್ಷನ್‌ ಹೊಂದಿದೆ.

ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಖರೀದಿಸಿದ ಜನಪ್ರಿಯ ನಟ

ಒಳಗೆ, ಫೋಕ್ಸ್‌ವ್ಯಾಗನ್ ವರ್ಟಸ್ ವಿಶಾಲವಾದ ಮತ್ತು ಉತ್ತಮವಾದ ಕ್ಯಾಬಿನ್‌ನೊಂದಿಗೆ ಬರುತ್ತದೆ, ಡ್ಯುಯಲ್-ಟೋನ್ ಕಪ್ಪು ಮತ್ತು ಬೀಜ್ ಒಳಾಂಗಣದಲ್ಲಿ ಪೂರ್ಣಗೊಂಡಿದೆ. ವೈಲ್ಡ್ ಚೆರ್ರಿ ರೆಡ್ ಪೇಂಟ್ ಸ್ಕೀಮ್‌ಗೆ ನಿರ್ದಿಷ್ಟವಾದ ಡ್ಯಾಶ್‌ಬೋರ್ಡ್‌ನಲ್ಲಿ ಪರ್ಫಾರ್ಮೆನ್ಸ್ ಲೈನ್ ವರ್ಟಸ್ ಕೆಂಪು ಮುಖ್ಯಾಂಶಗಳನ್ನು ಸಹ ಪಡೆಯುತ್ತದೆ. ಚಾಲಕ-ಕೇಂದ್ರಿತ ಡ್ಯಾಶ್‌ಬೋರ್ಡ್ ದೊಡ್ಡ 10.1-ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಜೊತೆಗೆ ವೈರ್‌ಲೆಸ್ ಆಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಜೊತೆಗೆ ಸಂಪೂರ್ಣ ಡಿಜಿಟಲ್ ವರ್ಚುವಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಫ್ಲಾಟ್-ಬಾಟಮ್ ಸ್ಟೀರಿಂಗ್ ವೀಲ್ ಅನ್ನು ಒಳಗೊಂಡಿದೆ.

ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಖರೀದಿಸಿದ ಜನಪ್ರಿಯ ನಟ

ಈ ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ದೇಶದಲ್ಲಿ ವೆಂಟೊ ಮಾದರಿಯ ಬದಲಿಯಾಗಿದೆ, ಇದು ಅದರ ಬದಲಿಗಿಂತ ದೊಡ್ಡದಾಗಿದೆ ಮತ್ತು ಸುಸಜ್ಜಿತವಾಗಿದೆ. ಈ ಹೊಸ ಫೋಕ್ಸ್‌ವ್ಯಾಗನ್ ಸೆಡಾನ್ 4561 ಮಿಮೀ ಉದ್ದ, 1752 ಎಂಎಂ ಅಗಲ ಮತ್ತು 1507 ಎಂಎಂ ಎತ್ತರವನ್ನು 2651 ಎಂಎಂ ವೀಲ್‌ಬೇಸ್‌ ಅನ್ನು ಒಳಗೊಂಡಿದೆ.

ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಖರೀದಿಸಿದ ಜನಪ್ರಿಯ ನಟ

ಫೋಕ್ಸ್‌ವ್ಯಾಗನ್ ವಿರ್ಟಸ್ ಕಾಂಪ್ಯಾಕ್ಟ್ ಸೆಡಾನ್ ಎರಡು ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ. ಇದರಲ್ಲಿ 1.0 ಲೀಟರ್ TSI ಪೆಟ್ರೋಲ್ ಎಂಜಿನ್ 113 ಬಿಹೆಚ್‍ಪಿ ಪವರ್ ಮತ್ತು 175 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಮ್ಯಾನುವಲ್ ಅಥವಾ ಆಯ್ಕೆಯ 6-ಸ್ಪೀಡ್ ಟಾರ್ಕ್ ಕರ್ನ್ವಾಟರ್ ಅನ್ನು ಪಡೆಯುತ್ತದೆ. ಇನ್ನು 1.5 ಲೀಟರ್ TSI ಪೆಟ್ರೋಲ್ ಎಂಜಿನ್ 148 ಬಿಹೆಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ DSG ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ,

ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಖರೀದಿಸಿದ ಜನಪ್ರಿಯ ನಟ

ಫೋಕ್ಸ್‌ವ್ಯಾಗನ್ ಕಂಪನಿಯು ವರ್ಟಸ್ ಕಾರಿನ ಸುರಕ್ಷತೆಗಾಗಿ, ಡ್ಯುಯಲ್ ಏರ್‌ಬ್ಯಾಗ್‌ಗಳು, EBS ಜೊತೆಗೆ ABS, ಪಾರ್ಕಿಂಗ್ ಸೆನ್ಸರ್ ಮತ್ತು ಹೆಚ್ಚಿನವು. ಇತರ ಸುರಕ್ಷತಾ ವೈಶಿಷ್ಟ್ಯಗಳಲ್ಲಿ ಎಲ್ಲಾ ಪ್ರಯಾಣಿಕರಿಗೆ 3-ಪಾಯಿಂಟ್ ಸೀಟ್ ಬೆಲ್ಟ್‌ಗಳು, ಹಿಂಭಾಗದ ಪಾರ್ಕಿಂಗ್ ಕ್ಯಾಮೆರಾ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ (ESC),ಟೈರ್ ಒತ್ತಡದ ಡಿಫ್ಲೇಶನ್ ಅಲರ್ಟ್, ಹಿಲ್ ಹೋಲ್ಡ್ ಕಂಟ್ರೋಲ್ ಮತ್ತು ಹೆಚ್ಚಿನವು ಸೇರಿವೆ. ಇನ್ನು ಈ ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾಂಪ್ಯಾಕ್ಟ್ ಸೈಜ್ ಸೆಡಾನ್ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ ಮತ್ತು ಮಾರುತಿ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಹೊಸ ಫೋಕ್ಸ್‌ವ್ಯಾಗನ್ ವರ್ಟಸ್ ಕಾರು ಖರೀದಿಸಿದ ಜನಪ್ರಿಯ ನಟ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ನಟ ಅರ್ಜುನ್ ಅಶೋಕನ್ ಅವರು ಅತ್ಯುತ್ತಮ ಫೋಕ್ಸ್‌ವ್ಯಾಗನ್ ವರ್ಟಸ್ ಕಾರನ್ನು ಖರೀದಿಸಿದ್ದಾರೆ. ಹೊಸ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರು ಆಕರ್ಷಕ ವಿನ್ಯಾಸ ಮತ್ತು ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿವೆ. ಪರ್ಪಾಮೆನ್ಸ್ ಪ್ರಿಯರಿಗಾಗಿ ಫೋಕ್ಸ್‌ವ್ಯಾಗನ್ ವಿರ್ಟಸ್ ಕಾರಿನ ಜಿಟಿ ಪರ್ಪಾಮೆನ್ಸ್ ವೆರಿಯೆಂಟ್ ಲಭ್ಯವಿದೆ.

Most Read Articles

Kannada
English summary
Actor arjun ashok buy new volkswagen virtus details
Story first published: Thursday, June 23, 2022, 16:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X