ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡಲು ಮೆಚ್ಚಿನ ಬೈಕ್ ಮಾರಾಟ ಮಾಡಿದ ಜನಪ್ರಿಯ ನಟ

ಭಾರತದಲ್ಲಿ ಕೊರೋನಾ ಎರಡನೇ ಅಲೆಯು ಪ್ರತಿದಿನ ಸಾವಿರಾರು ಜೀವಗಳನ್ನು ಬಲಿ ಪಡೆದಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವುದರಿಂದ ಆಕ್ಸಿಜನ್ ಕೊರತೆಯಿಂದಾಗಿ ಕೊನೆಯುಸಿರು ಎಳೆದಿದ್ದಾರೆ. ಇದರಿಂದಾಗಿಯೇ ಕೆಲವು ಸೆಲೆಬ್ರಿಟಿಗಳು ತಮ್ಮ ಕೈಲಾದಷ್ಟು ಸೋಂಕಿತರ ನೆರವಾಗುತ್ತಿದ್ದಾರೆ.

ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡಲು ಮೆಚ್ಚಿನ ಬೈಕ್ ಮಾರಾಟ ಮಾಡಿದ ಜನಪ್ರಿಯ ನಟ

ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಕೊರೊನಾ ವಾರಿಯರ್ಸ್‌, ರೋಗಿಗಳಿಗೆ ಆಹಾರ, ಆರ್ಥಿಕ ಸಹಾಯ, ಬೆಡ್ , ಆಕ್ಸಿಜನ್ ವ್ಯವಸ್ಥೆಯನ್ನು ಒದಗಿಸಿದ್ದಾರೆ. ಸನಮ್ ತೇರಿ ಕಸಮ್' ಸಿನಿಮಾ ಖ್ಯಾತಿಯ ನಟ ಹರ್ಷವರ್ಧನ್ ರಾಣೆ ಅವರು ಆಕ್ಸಿಜನ್ ಪೂರೈಕೆ ಮಾಡುವ ಸಲುವಾಗಿ ಮೆಚ್ಚಿನ ಬೈಕನ್ನು ಮಾರಾಟ ಮಾಡಿದ್ದಾರೆ. ತೆಲುಗು ಹಾಗೂ ಹಿಂದಿ ಸಿನಿಮಾ ಮೂಲಕ ಜನಪ್ರಿಯತೆ ಪಡೆದಿರುವ ಹರ್ಷವರ್ಧನ್ ರಾಣೆ ಅವರು ತಮ್ಮ ಮೆಚ್ಚಿನ ರಾಯಲ್ ಎನ್‌ಫೀಲ್ಡ್ ಜಿಟಿ 535 ಬೈಕ್ ಜೊತೆಗಿನ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಈ ವಿಷಯ ತಿಳಿಸಿದ್ದಾರೆ.

ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡಲು ಮೆಚ್ಚಿನ ಬೈಕ್ ಮಾರಾಟ ಮಾಡಿದ ಜನಪ್ರಿಯ ನಟ

ನನ್ನ ಬೈಕ್ ಮಾರಾಟ ಮಾಡಿ ಆಕ್ಸಿಜನ್ ಪಡೆಯಲು ನಿರ್ಧಾರ ಮಾಡಿದ್ದೇನೆ. ಇದರಿಂದ ನಾವು ಅವಶ್ಯಕತೆಯಿದ್ದವರಿಗೆ ಆಕ್ಸಿಜನ್ ನೀಡಬಹುದು. ಹೈದರಾಬಾದ್‌ನಲ್ಲಿ ಉತ್ತಮ ಆಕ್ಸಿಜನ್ ಕಾನ್ಸನ್‌ಟ್ರೇಟರ್ ಪಡೆಯಲು ಸಹಾಯ ಮಾಡಿ ಎಂದು ಹರ್ಷವರ್ಧನ್ ರಾಣೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದಾರೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡಲು ಮೆಚ್ಚಿನ ಬೈಕ್ ಮಾರಾಟ ಮಾಡಿದ ಜನಪ್ರಿಯ ನಟ

ನಂತರ 3 ಆಕ್ಸಿಜನ್ ಕಾನ್ಸನ್‌ಟ್ರೇಟರ್ ಪಡೆಯಲು ಸಾಧ್ಯವಾಗಿದೆ. ಇದನ್ನು ಈಗಗಾಲೇ ಹೈದರಾಬಾದ್ ತಲುಪಿದೆ. ಶೀಘ್ರದಲ್ಲೇ ಇನ್ನಷ್ಟು ಆಕ್ಸಿಜನ್ ಕಾನ್ಸನ್‌ಟ್ರೇಟರ್ ನಿರೀಕ್ಷಿಸುತ್ತಿದ್ದೇನೆ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡಲು ಮೆಚ್ಚಿನ ಬೈಕ್ ಮಾರಾಟ ಮಾಡಿದ ಜನಪ್ರಿಯ ನಟ

2016ರಲ್ಲಿ ತೆರೆಕಂಡ ಬಾಲಿವುಡ್ ಸಿನಿಮಾ 'ಸನಮ್ ತೇರಿ ಕಸಂ' ಚಿತ್ರ ಅವರ ಮೊದಲ ಬಾಲಿವುಡ್ ಸಿನಿಮಾ ಆಗಿತ್ತು. ನಂತರ ಪಲ್ತಾನ್', 'ತೈಶ್' ನಂತಹ ಹಿಟ್ ಸಿನಿಮಾಗಳಲ್ಲಿಯೂ ಹರ್ಷವರ್ಧನ್ ಕಾಣಿಸಿಕೊಂಡಿದ್ದರು.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡಲು ಮೆಚ್ಚಿನ ಬೈಕ್ ಮಾರಾಟ ಮಾಡಿದ ಜನಪ್ರಿಯ ನಟ

ನಟ ಹರ್ಷವರ್ಧನ್ ರಾಣೆ ಅವರು ಮಾರಟ ಮಾಡಿರುವುದು ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 535 ಬೈಕ್ ಆಗಿದೆ. ಈ ಬೈಕಿನ ಮಾರಾಟವನ್ನು ರಾಯಲ್ ಎನ್‌ಫೀಲ್ಡ್ ಕಂಪನಿಯು 2018ರಲ್ಲಿ ಸ್ಥಗಿತಗೊಳಿಸಿತು. ಜಿಟಿ 535 ಭಾರತೀಯ ಮಾರುಕಟ್ಟೆಯಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾದ ಜನಪ್ರಿಯ ಕೆಫೆ ರೇಸರ್ ಬೈಕುಗಳಲ್ಲಿ ಒಂದಾಗಿದೆ.

ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡಲು ಮೆಚ್ಚಿನ ಬೈಕ್ ಮಾರಾಟ ಮಾಡಿದ ಜನಪ್ರಿಯ ನಟ

ನಂತರ ರಾಯಲ್ ಎನ್‌ಫೀಲ್ಡ್ 650 ಟ್ವಿನ್ ಬೈಕುಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸಿದ್ದರು. ಇನ್ನು ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 535 ಬೈಕಿನಲ್ಲಿ 535 ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್, ಫ್ಯೂಯಲ್ ಇಂಜೆಕ್ಷನ್ ಎಂಜಿನ್ ಹೊಂದಿದ್ದು. ಇದೇ ಎಂಜಿನ್ ಬುಲೆಟ್ 500 ಬೈಕಿನಲ್ಲಿ ಇತ್ತು.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡಲು ಮೆಚ್ಚಿನ ಬೈಕ್ ಮಾರಾಟ ಮಾಡಿದ ಜನಪ್ರಿಯ ನಟ

ಈ ಬೈಕ್ 29 ಬಿಹೆಚ್‌ಪಿ ಪವರ್ ಮತ್ತು 44 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಬೈಕಿನ ಪಿರೆಲ್ಲಿ ಟೈರ್‌ಗಳು, ಬ್ರೆಂಬೊ ಬ್ರೇಕ್‌ಗಳು ಮತ್ತು ಕಸ್ಟಮ್ ಇಸಿಯು ಅನ್ನು ಒಳಗೊಂಡಿತ್ತು.

ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆ ಮಾಡಲು ಮೆಚ್ಚಿನ ಬೈಕ್ ಮಾರಾಟ ಮಾಡಿದ ಜನಪ್ರಿಯ ನಟ

ಜಿಟಿ 535ರ ಚಾಸಿಸ್ ಅಪಾರ ಸಾಮರ್ಥ್ಯವನ್ನು ಹೊಂದಿತ್ತು. ಈ ಬೈಕಿನ ವಿಭಿನ್ನವಾದ ವಿನ್ಯಾಸದ ಶೈಲಿಯು ಸಾಕಷ್ಟು ಜನಪ್ರಿಯತೆಯನ್ನು ಗಳಿಸಿತ್ತು. ಈ ಬೈಕಿಗೆ ದೊಡ್ಡ ಅಭಿಮಾನಿ ವರ್ಗವನ್ನೇ ಹೊಂದಿತ್ತು. ಇದೇ ಕಾರಣಕ್ಕೆ ರಾಯಲ್ ಎನ್‌ಫೀಲ್ಡ್ ಕಂಪನಿಯು ಜಿಟಿ ಹೆಸರಿನೊಂದಿಗೆ 650ಸಿಸಿಯ ಬೈಕುಗಳನ್ನು ಅದೇ ವಿನ್ಯಾಸದಲ್ಲಿ ಬಿಡುಗಡೆಗೊಳಿಸಿದ್ದರು. ನಂತರ ಕಾಂಟಿನೆಂಟಲ್ ಜಿಟಿ 535 ಬೈಕನ್ನು ಸ್ಥಗಿತಗೊಳಿಸಲಾಯಿತು,

Most Read Articles

Kannada
English summary
Bollywood Actor Harshvardhan Rane sells Gis Royal Enfield Toxygen Concentrators. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X