ದುಬಾರಿ ಬೆಲೆಯ ಐಷಾರಾಮಿ ಕ್ಯಾರವ್ಯಾನ್ ಖರೀದಿಸಿದ ನಟ ಮೋಹನ್‌ಲಾಲ್

ಮಲಯಾಳಂ ಸಿನಿರಂಗದ ಸೂಪರ್​ ಸ್ಟಾರ್ ಮೋಹನ್‌ಲಾಲ್​ ತಮ್ಮ ಅಭಿನಯದಿಂದಲೇ ಮಲಯಾಳಂ ಮಾತ್ರವಲ್ಲದೆ ಇತರೆ ಭಾಷೆಯ ಸಿನಿ ರಸಿಕರ ಮನಸ್ಸಿನಲ್ಲಿ ಮನೆ ಮಾಡಿಕೊಂಡಿದ್ದಾರೆ. ಬಾಕ್ಸಾಫಿಸ್​ ಕಿಂಗ್​ ಮೋಹನ್‌ಲಾಲ್​ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ.

ದುಬಾರಿ ಬೆಲೆಯ ಐಷಾರಾಮಿ ಕ್ಯಾರವ್ಯಾನ್ ಖರೀದಿಸಿದ ನಟ ಮೋಹನ್‌ಲಾಲ್

ಇಂದಿಗೂ ಮಲಯಾಳಂ ಸಿನಿರಂಗದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಮೋಹನ್​ ಲಾಲ್​ ಅವರ ಅಭಿನಯದ್ದೇ ಆಗಿದೆ. ನಟ ಮೋಹನ್‌ಲಾಲ್​ ಅವರ ಬಳಿ ಟೊಯೊಟಾ ವೆಲ್‌ಫೈರ್ ಮತ್ತು ಮರ್ಸಿಡಿಸ್ ಬೆಂಝ್ ನಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇದೀಗ ಅವರು ಕಂದು ಬಣ್ಣದ ಐಷಾರಾಮಿ ಕ್ಯಾರವ್ಯಾನ್ ಅನ್ನು ಖರೀದಿಸಿದ್ದಾರೆ. ಹಲವು ಜನಪ್ರಿಯ ಸಿನಿಮಾ ಸೆಲೆಬ್ರಿಟಿಗಳ ಜೊತೆ ಕ್ಯಾರವ್ಯಾನ್‌ಗಳನ್ನು ಹೆಚ್ಚಾಗಿ ನೋಡಬಹುದು. ಶೂಟಿಂಗ್‌ ಸಮಯದಲ್ಲಿ ವಿಶ್ರಾಂತಿ ಪಡೆಯಲು ಅವರು ಕ್ಯಾರವ್ಯಾನ್‌ಗಳನ್ನು ಖರೀದಿಸುತ್ತಾರೆ.

ದುಬಾರಿ ಬೆಲೆಯ ಐಷಾರಾಮಿ ಕ್ಯಾರವ್ಯಾನ್ ಖರೀದಿಸಿದ ನಟ ಮೋಹನ್‌ಲಾಲ್

ಸಿನಿಮಾ ಸೆಲೆಬ್ರಿಟಿಗಳು ವಾಹನ ಖರೀದಿ ಮಾಡಿದರೆ ಅದು ಸುದ್ದಿಯಾಗೋದು ಸಾಮಾನ್ಯ. ಅವರು ಖರೀದಿಸಿದ ವಾಹನ ಯಾವ ಕಂಪನಿಯದ್ದು, ಯಾವ ಮಾಡೆಲ್​, ಅದಕ್ಕೆ ಎಷ್ಟು ಬೆಲೆ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ಆಗುತ್ತದೆ. ಇದೀಗ ಮೋಹನ್‌ಲಾಲ್​ ಅವರ ಹೊಸ ಕ್ಯಾರವ್ಯಾನ್ ಇದಕ್ಕೆ ಸೇರ್ಪಡೆಯಾಗಿದೆ.

ದುಬಾರಿ ಬೆಲೆಯ ಐಷಾರಾಮಿ ಕ್ಯಾರವ್ಯಾನ್ ಖರೀದಿಸಿದ ನಟ ಮೋಹನ್‌ಲಾಲ್

ಮೋಹನ್‌ಲಾಲ್​ ಅವರು ಖರೀದಿಸಿದ ಕ್ಯಾರವ್ಯಾನ್, ಜನಪ್ರಿಯ ವಾಹನ ತಯಾರಕ ಕಂಪನಿಯಾದ ಭಾರತ್ ಬೆಂಝ್‌ನ 1017 ಬಸ್ ಚಾಸಿಸ್‌ನಲ್ಲಿ ನಿರ್ಮಿಸಲಾದ ಮಾದರಿಯಾಗಿದೆ, ಈ ಹೊಸ ಕ್ಯಾರವ್ಯಾನ್ ಚಿತ್ರಗಳು ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದೆ,

ದುಬಾರಿ ಬೆಲೆಯ ಐಷಾರಾಮಿ ಕ್ಯಾರವ್ಯಾನ್ ಖರೀದಿಸಿದ ನಟ ಮೋಹನ್‌ಲಾಲ್

ಕೇರಳದ ವಿಶೇಷ ಉದ್ದೇಶದ ವಾಹನಗಳ ಪ್ರಮುಖ ತಯಾರಕರಲ್ಲಿ ಒಂದಾದ ಓಜಸ್ ಆಟೋಮೊಬೈಲ್ಸ್, ಭಾರತ್ ಬೆಂಜ್‌ನ 1017 ಬಸ್ ಅನ್ನು ಐಷಾರಾಮಿ ಕ್ಯಾರವ್ಯಾನ್ ಆಗಿ ಪರಿವರ್ತಿಸಿದೆ. ಮೋಹನ್‌ಲಾಲ್​ ಈ ಹೊಚ್ಚ ಹೊಸ ವಾಹನವನ್ನು ಸಿನಿಮಾ ಶೋಟಿಂಗ್ ಪ್ರದೇಶಕ್ಕೆ ತೆರಳಲು ಬಳಸಬಹುದು.

ದುಬಾರಿ ಬೆಲೆಯ ಐಷಾರಾಮಿ ಕ್ಯಾರವ್ಯಾನ್ ಖರೀದಿಸಿದ ನಟ ಮೋಹನ್‌ಲಾಲ್

ಎರ್ನಾಕುಲಂ RTO ಅಡಿಯಲ್ಲಿ ಖಾಸಗಿ ವಾಹನವಾಗಿ ನೋಂದಾಯಿಸಲಾದ ಈ ವಾಹನವನ್ನು ಅವರು ಹೊಂದಿದ್ದಾರೆ. ನಟ ಮೋಹನ್‌ಲಾಲ್​ ಅವರ ನೆಚ್ಚಿನ ಸಂಖ್ಯೆ 2255 ಸಹ ಈ ವಾಹನದ ಮಾಲೀಕತ್ವದಲ್ಲಿದೆ. ವಾಹನದ ಬದಿಗಳಲ್ಲಿ ದೊಡ್ಡ ಗ್ರಾಫಿಕ್ಸ್ ಸ್ಟಿಕ್ಕರ್‌ಗಳಿಂದ ಅಲಂಕರಿಸಲ್ಪಟ್ಟಿದೆ.

ದುಬಾರಿ ಬೆಲೆಯ ಐಷಾರಾಮಿ ಕ್ಯಾರವ್ಯಾನ್ ಖರೀದಿಸಿದ ನಟ ಮೋಹನ್‌ಲಾಲ್

ಈ ಹೊಸ ಕ್ಯಾರವ್ಯಾನ್ ಕಂದು ಬಣ್ಣವನ್ನು ಹೊಂದಿದೆ. ಈ ವಾಹನವು ಮಲಗುವ ಕೋಣೆ ಸೇರಿದಂತೆ ಮೂಲ ಸೌಕರ್ಯಗಳನ್ನು ಹೊಂದಿದೆ ಎಂದು ವರದಿಯಾಗಿದೆ. ಈ ವಾಹನವು 3907cc ನಾಲ್ಕು ಸಿಲಿಂಡರ್ 4d34i CRDi ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಫೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ,

ದುಬಾರಿ ಬೆಲೆಯ ಐಷಾರಾಮಿ ಕ್ಯಾರವ್ಯಾನ್ ಖರೀದಿಸಿದ ನಟ ಮೋಹನ್‌ಲಾಲ್

ಇನ್ನು ಕೇರಳದ ಮೊದಲ ಟೊಯೊಟಾ ವೆಲ್‌ಫೈರ್ ವಾಹನ ನಟ ಮೊಹನ್‌ಲಾಲ್ ಅವರು 2020ರ ಮಾರ್ಚ್ ತಿಂಗಳಿನಲ್ಲಿ ಖರಿದಿಸಿದ್ದರು. ಈ ಟೊಯೊಟಾ ವೆಲ್‌ಫೈರ್‌ ಬಗ್ಗೆ ಹೇಳುವುದಾದರೆ, 2.5 ಲೀಟರ್ ನಾಲ್ಕು ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಇದು ಎರಡು ಎಲೆಕ್ಟ್ರಿಕ್ ಮೋಟರ್‌ಗಳೊಂದಿಗೆ ಜೋಡಿಸಲ್ಪಟ್ಟಿದೆ,

ದುಬಾರಿ ಬೆಲೆಯ ಐಷಾರಾಮಿ ಕ್ಯಾರವ್ಯಾನ್ ಖರೀದಿಸಿದ ನಟ ಮೋಹನ್‌ಲಾಲ್

ಇದು ಎಂಜಿನ್ ಒಟ್ಟಾಗಿ 198 ಬಿಹೆಚ್‍ಪಿ ಪವರ್ ಮತ್ತು 235 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ಸಿವಿಟಿ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಈ ವೆಲ್‌ಫೈರ್‌ನ ಒಳಭಾಗದಲ್ಲಿ ಎರಡನೇ ಸಾಲಿನಲ್ಲಿ ಎರಡು ಬೆಲೆಬಾಳುವ ಎಲೆಕ್ಟ್ರಿಕ್ ಆಗಿ ಅಡೆಜೆಸ್ಟ್ ಮಾಡುವ ವಿಐಪಿ ಸೀಟುಗಳನು ಒಳಗೊಂಡಿವೆ.

ದುಬಾರಿ ಬೆಲೆಯ ಐಷಾರಾಮಿ ಕ್ಯಾರವ್ಯಾನ್ ಖರೀದಿಸಿದ ನಟ ಮೋಹನ್‌ಲಾಲ್

ಇನ್ನು ಇದರಲ್ಲಿ ಕೂಲಿಂಗ್ ಫಂಕ್ಷನ್ ಅನ್ನು ಕೂಡ ಒಳಗೊಂಡಿದೆ. ಜೊತೆಗೆ ಲೆಗ್ ರೆಸ್ಟ್ ಮತ್ತು ರೆಕ್ಲೈನಬಲ್ ಬ್ಯಾಕ್‌ರೆಸ್ಟ್ ಮತ್ತು ಮೆಮೊರಿ ಫಂಕ್ಷನ್ ಅನ್ನು ಒಳಗೊಂಡಿದೆ. ಈ ಐಷಾರಾಮಿ ಎಂಪಿವಿಯಲ್ಲಿ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ನೊಂದಿಗೆ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಯೊಂದಿಗೆ 13 ಇಂಚಿನ ಹಿಂಭಾಗದ ಡಿಸ್ ಪ್ಲೇಯನ್ನು ರೂಫ್ ಮೇಲೆ ನೀಡಲಾಗಿದೆ. ಇದರೊಂದಿಗೆ ಸ್ಪೀಕರ್ ಜೆಬಿಎಲ್ ಸೌಂಡ್ ಸಿಸ್ಟಂ, ಎರಡನೇ ಮತ್ತು ಮೂರನೇ ಸಾಲುಗಳಿಗೆ ಸನ್ ಬ್ಲೈಂಡ್ಸ್, 16-ಬಣ್ಣದ ಆಂಬಿಯೆಂಟ್ ಲೈಟಿಂಗ್, ಮೂರು ಹಂತಹ ಆಟೋ ಕ್ಲೈಮೇಟ್ ಕಂಟ್ರೋಲ್, ಆಟೋಮ್ಯಾಟಿಕ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳುನ್ನು ಒಳಗೊಂಡಿದೆ.

ದುಬಾರಿ ಬೆಲೆಯ ಐಷಾರಾಮಿ ಕ್ಯಾರವ್ಯಾನ್ ಖರೀದಿಸಿದ ನಟ ಮೋಹನ್‌ಲಾಲ್

ಸುರಕ್ಷತೆಗಾಗಿ ಈ ಐಷಾರಾಮಿ ಟೊಯೊಟಾ ವೆಲ್‌ಫೈರ್‌ ಎಂಪಿವಿಯಲ್ಲಿ 7 ಏರ್‌ಬ್ಯಾಗ್‌ಗಳು, ಪನೋರಮಿಕ್ ವ್ಯೂ ಮಾನಿಟರ್, ಫ್ರಂಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸರ್‌ಗಳನ್ನು ಹೊಂದಿವೆ. ಇದರ ಜೊತೆಗೆ ಎಬಿಎಸ್ ವಿಥ್ ಇಬಿಡಿ ಮತ್ತು ಬ್ರೇಕ್ ಅಸಿಸ್ಟ್, ವೆಹಿಕಲ್ ಡೈನಾಮಿಕ್ ಇಂಟಿಗ್ರೇಟೆಡ್ ಮ್ಯಾನೇಜ್‌ಮೆಂಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಹೋಲ್ಡ್, ಎ ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮತ್ತು ಹೀಗೆ ಇನ್ನಷ್ಟು ಅತ್ಯಾಧುನಿಕ ಸುರಕ್ಷತಾ ಫೀಚರ್ಸ್ ಗಳನ್ನು ಹೊಂದಿವೆ.

ದುಬಾರಿ ಬೆಲೆಯ ಐಷಾರಾಮಿ ಕ್ಯಾರವ್ಯಾನ್ ಖರೀದಿಸಿದ ನಟ ಮೋಹನ್‌ಲಾಲ್

ಜರ್ಮನ್ ಐಷಾರಾಮಿ ಕಾರು ತಯಾರಕ ಮರ್ಸಿಡಿಸ್-ಎಬಂಝ್ ಎಸ್-ಕ್ಲಾಸ್ ಸೆಡಾನ್ ಮೋಹನ್‌ಲಾಲ್​ ಅವರ ನೆಚ್ಚಿನ ಕಾರು. ಇದು 2006 ರಿಂದ 2013 ರವರೆಗೆ ಮಾರುಕಟ್ಟೆಯಲ್ಲಿದ್ದ ಐದನೇ ತಲೆಮಾರಿನ (W221) ಮಾದರಿಯಾಗಿದೆ. ಇನ್ನು ನಟ ಮೋಹನ್‌ಲಾಲ್​ ಅವರು 2015-2016ರ ಅವಧಿಯಲ್ಲಿ ಮಿಟ್ಸುಬಿಷಿ ಪಜೆರೊ ಸ್ಪೋರ್ಟ್ ಖರೀದಿಸಿದ್ದರು.

Most Read Articles

Kannada
English summary
Actor mohanlal buys new caravan with his favorite number details
Story first published: Tuesday, September 27, 2022, 13:43 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X