ಟೊಯೊಟೊ ವೆಲ್‌ಫೈರ್ ಕಾರಿಗಾಗಿ ಫ್ಯಾನ್ಸಿ ನಂಬರ್ ಪಡೆದುಕೊಂಡ ನಟ ಮೋಹನ್‌ಲಾಲ್

ಐಷಾರಾಮಿ ಎಂಪಿವಿ ವಿಭಾಗದಲ್ಲಿ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ ಕಾರಿಗೆ ಪೈಪೋಟಿಯಾಗಿ ಬಿಡುಗಡೆಯಾಗಿರುವ ಟೊಯೊಟಾ ವೆಲ್‌ಫೈರ್ ಕಾರು ಮಾದರಿಯು ಸದ್ಯ ಚಿತ್ರ ನಟರು ಮತ್ತು ಉದ್ಯಮಿಗಳಿಂದ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಮಲಯಾಳಂ ಸಿನಿಮಾ ರಂಗದ ಜನಪ್ರಿಯ ನಟ ಮತ್ತು ನಿರ್ಮಾಪಕ ಮೋಹನ್‌ಲಾಲ್ ವೆಲ್‌ಫೈರ್ ಕಾರಿನ ಮೊದಲ ಯುನಿಟ್ ಅನ್ನು ತಮ್ಮದಾಗಿಸಿಕೊಂಡಿದ್ದರು.

ಟೊಯೊಟೊ ವೆಲ್‌ಫೈರ್ ಕಾರಿಗಾಗಿ ಫ್ಯಾನ್ಸಿ ನಂಬರ್ ಪಡೆದುಕೊಂಡ ನಟ ಮೋಹನ್‌ಲಾಲ್

ಹೊಸ ವೆಲ್‌ಫೈರ್ ಕಾರಿಗಾಗಿ ನಟ ಮೋಹನ್‌ಲಾಲ್ ಅವರು ವಿಶೇಷ ಸಂಖ್ಯೆಯಳ್ಳ ಫ್ಯಾನ್ಸಿ ನಂಬರ್ ಪ್ಲೇಟ್ ಪಡೆದುಕೊಂಡಿದ್ದು, ಹೊಸ ಕಾರಿಗೆ 2020 ವಿಶೇಷ ಸಂಖ್ಯೆ ಸಿಕ್ಕಿದೆ. ನಟ ಮೋಹನ್‌ಲಾಲ್ ಬಳಿಯಿರುವ ವಿವಿಧ ಮಾದರಿಯ ಹಲವು ಐಷಾರಾಮಿ ಕಾರುಗಳು ಒಂದೇ ಮಾದರಿಯ ಫ್ಯಾನ್ಸಿ ನಂಬರ್ ಪಡೆದುಕೊಂಡಿದ್ದು, ಇದೀಗ ಹೊಸದಾಗಿ ಖರೀದಿ ಮಾಡಲಾದ ವೆಲ್‌ಫೈರ್ ಕಾರು ಕೂಡಾ ಆಕರ್ಷಕವಾದ ನೋಂದಣಿ ಸಂಖ್ಯೆಯನ್ನು ಪಡೆದುಕೊಂಡಿದೆ.

ಟೊಯೊಟೊ ವೆಲ್‌ಫೈರ್ ಕಾರಿಗಾಗಿ ಫ್ಯಾನ್ಸಿ ನಂಬರ್ ಪಡೆದುಕೊಂಡ ನಟ ಮೋಹನ್‌ಲಾಲ್

ಸೂಪರ್‌ಸ್ಟಾರ್ ಮೋಹನ್‌ಲಾಲ್ ಸಂಗ್ರಹ ಐಷಾರಾಮಿ ಕಾರುಗಳು ಮತ್ತು ಕ್ಯಾರ್‌ವ್ಯಾನ್‌ಗೆ '2255', 999, 1 ನಂಬರ್ ನೀಡಲಾಗಿದ್ದು, ಇದೀಗ ವೆಲ್‌ಫೈರ್ ಎಂಪಿವಿ ಕಾರು ಮಾದರಿಯು 2020 ಫ್ಯಾನ್ಸಿ ನಂಬರ್ ಗಿಟ್ಟಿಸಿಕೊಂಡಿದೆ.

ಟೊಯೊಟೊ ವೆಲ್‌ಫೈರ್ ಕಾರಿಗಾಗಿ ಫ್ಯಾನ್ಸಿ ನಂಬರ್ ಪಡೆದುಕೊಂಡ ನಟ ಮೋಹನ್‌ಲಾಲ್

ಭಾರತದಲ್ಲಿ ಟೊಯೊಟಾ ವೆಲ್‌ಫೈರ್ ಕಾರಿನ ವಿತರಣೆ ಪಡೆದ ಮೊದಲ ಗ್ರಾಹಕ ಎಂಬ ಖ್ಯಾತಿ ಪಡೆದುಕೊಂಡಿರುವ ನಟ ಮೋಹನ್‌ಲಾಲ್ ಅವರು ಟೊಯೊಟಾ ನಿರ್ಮಾಣದ ಹಲವು ಕಾರುಗಳ ಮಾಲೀಕತ್ವ ಹೊಂದಿದ್ದು, ಐಷಾರಾಮಿ ಎಂಪಿವಿಯಾಗಿರುವ ವೆಲ್‌ಫೈರ್ ಇದೀಗ ಪ್ರಮುಖ ಆಕರ್ಷಣೆಯಾಗಿದೆ.

ಟೊಯೊಟೊ ವೆಲ್‌ಫೈರ್ ಕಾರಿಗಾಗಿ ಫ್ಯಾನ್ಸಿ ನಂಬರ್ ಪಡೆದುಕೊಂಡ ನಟ ಮೋಹನ್‌ಲಾಲ್

ವೆಲ್‌ಫೈರ್ ಎಂಪಿವಿ ಖರೀದಿ ನಂತರ ಹಲವಾರು ಹೊಸ ವಿನ್ಯಾಸದೊಂದಿಗೆ ಮಾಡಿಫೈಗೊಳಿಸಲಾಗಿದ್ದು, ವೆಲ್‌ಫೈರ್ ಕಾರು ಸದ್ಯಕ್ಕೆ 'ಎಕ್ಸಿಕ್ಯೂಟಿವ್ ಲೌಂಜ್' ಎನ್ನುವ ಸಿಂಗಲ್ ವೆರಿಯೆಂಟ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದೆ.

ಟೊಯೊಟೊ ವೆಲ್‌ಫೈರ್ ಕಾರಿಗಾಗಿ ಫ್ಯಾನ್ಸಿ ನಂಬರ್ ಪಡೆದುಕೊಂಡ ನಟ ಮೋಹನ್‌ಲಾಲ್

ಹೊಸ ವೆಲ್‌ಫೈರ್ ಕಾರು ಪ್ಯಾನ್ ಇಂಡಿಯಾ ಎಕ್ಸ್‌ಶೋರೂಂ ಪ್ರಕಾರ ರೂ.79.50 ಲಕ್ಷ ಬೆಲೆ ಪಡೆದುಕೊಂಡಿದ್ದು, ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಹೊಂದಿರುವ ಈ ಎಂಪಿವಿ ಕಾರು ಅಲ್ಫಾರ್ಡ್ ಲಗ್ಷುರಿ ಮಿನಿ ವ್ಯಾನ್ ಡಿಸೈನ್ ಆಧಾರದ ಅಭಿವೃದ್ದಿಗೊಂಡಿದೆ.

ಟೊಯೊಟೊ ವೆಲ್‌ಫೈರ್ ಕಾರಿಗಾಗಿ ಫ್ಯಾನ್ಸಿ ನಂಬರ್ ಪಡೆದುಕೊಂಡ ನಟ ಮೋಹನ್‌ಲಾಲ್

ಹೊಸ ವೆಲ್‌ಫೈರ್ ಕಾರು 4,935-ಎಂಎಂ ಉದ್ದ, 1,850-ಎಂಎಂ ಅಗಲ, 1,895-ಎಂಎಂ ಎತ್ತರ ಮತ್ತು 3,000-ಎಂಎಂ ವೀಲ್ಹ್ ಬೆಸ್‌ನೊಂದಿಗೆ 2,815 ಕೆಜಿ ತೂಕ ಹೊಂದಿದ್ದು, ಗ್ರಾಹಕರ ತಮ್ಮ ಬೇಡಿಕೆಗೆ ಅನುಗುಣವಾಗಿ ಬರ್ನಿಂಗ್ ಬ್ಲ್ಯಾಕ್, ವೈಟ್ ಪರ್ಲ್, ಗ್ರಾಫೈಟ್ ಮತ್ತು ಬ್ಲ್ಯಾಕ್ ಬಣ್ಣಗಳನ್ನು ಆಯ್ಕೆ ಮಾಡಬಹುದಾಗಿದೆ.

ಟೊಯೊಟೊ ವೆಲ್‌ಫೈರ್ ಕಾರಿಗಾಗಿ ಫ್ಯಾನ್ಸಿ ನಂಬರ್ ಪಡೆದುಕೊಂಡ ನಟ ಮೋಹನ್‌ಲಾಲ್

ಹೊಸ ಕಾರಿನ ಮುಂಭಾಗದಲ್ಲಿ ಕ್ರೋಮ್ ಪಟ್ಟಿಗಳು, ಬಲಿಷ್ಠವಾದ ಬಂಪರ್, ಸ್ಪ್ಲಿಟ್ ಎಲ್ಇಡಿ ಹೆಡ್‌ಲೈಟ್‌ಗಳು ಮತ್ತು ಹಗಲಿನಲ್ಲಿ ಬೆಳಕು ಹೊರಸೂಸುವ ಗ್ರಿಲ್ ಸಿಸ್ಟಂ ನೀಡಲಾಗಿದ್ದು, 17 ಇಂಚಿನ ಅಲಾಯ್ ಚಕ್ರಗಳು, ಎಲೆಕ್ಟ್ರಿಕ್ ಕಂಟ್ರೊಲ್ ಸ್ಲೈಡಿಂಗ್ ಬಾಗಿಲುಗಳು, ದೊಡ್ಡದಾದ ಟೈಲ್ ಲೈಟ್ ಕ್ಲಸ್ಟರ್‌ಗಳು ಬಹಳ ಆಕರ್ಷಕವಾಗಿವೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಟೊಯೊಟೊ ವೆಲ್‌ಫೈರ್ ಕಾರಿಗಾಗಿ ಫ್ಯಾನ್ಸಿ ನಂಬರ್ ಪಡೆದುಕೊಂಡ ನಟ ಮೋಹನ್‌ಲಾಲ್

ಹಾಗೆಯೇ ಕಾರಿನ ಒಳಭಾಗವು ಕೂಡಾ ಸಾಕಷ್ಟು ಐಷಾರಾಮಿ ಫೀಚರ್ಸ್‌ಗಳನ್ನು ಹೊಂದಿದ್ದು, 7 ಸೀಟರ್ ಸೌಲಭ್ಯದೊಂದಿಗೆ 10-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಎಚ್‌ಡಿಎಂಐನೊಂದಿಗ ವೈ-ಪೈ ಸೌಲಭ್ಯವನ್ನು ಹೊಂದಿರುವ 13-ಇಂಚಿನ ಎಂಟರ್‌ಟೈನ್‌ಮೆಂಟ್ ಸ್ಕ್ರೀನ್‌ಗಳು, ಆ್ಯಪಲ್ ಕಾರ್ ಪ್ಲೇ ಮತ್ತು ಅಂಡ್ರಾಯಿಡ್ ಆಟೋ, ತ್ರೀ ಜೋನ್ ಕ್ಲೈಮೆಟ್ ಕಂಟ್ರೋಲ್, ಆಂಬಿಯೆಂಟ್ ರೂಫ್ ಲೈಟ್ ಸಿಸ್ಟಂ ಮತ್ತು 17-ಸ್ಪೀಕರ್ಸ್ ಹೊಂದಿರುವ ಜೆಬಿಎಲ್ ಆಡಿಯೋ ಸಿಸ್ಟಂ ಹೊಂದಿದೆ.

ಟೊಯೊಟೊ ವೆಲ್‌ಫೈರ್ ಕಾರಿಗಾಗಿ ಫ್ಯಾನ್ಸಿ ನಂಬರ್ ಪಡೆದುಕೊಂಡ ನಟ ಮೋಹನ್‌ಲಾಲ್

ಇದರಲ್ಲಿ ಕ್ಯಾಪ್ಟನ್ ಸೀಟುಗಳು ಪ್ರಮುಖ ಆಕರ್ಷಣೆಯಾಗಿದ್ದು, ಪುಷ್‌ಬ್ಯಾಕ್ ಸೌಲಭ್ಯವಲ್ಲದೆ ಆರ್ಮ್‌ರೆಸ್ಟ್ ಮತ್ತು ಲೆಗ್ ರೆಸ್ಟ್ ಒದಗಿಸುತ್ತದೆ. ಜೊತೆಗೆ ಕ್ಯಾಪ್ಟನ್ ಸೀಟುಗಳ ಮತ್ತೊಂದು ವೈಶಿಷ್ಟ್ಯತೆ ಅಂದರೆ ಚಳಿಗಾಲದಲ್ಲಿ ಬಿಸಿಯಾಗುತ್ತವೆ ಮತ್ತು ಬಿಸಿಯಾದ ವಾತಾವರಣವಿದ್ದಲ್ಲಿ ತಂಪು ಹೊರಸೂಸುವ ತಂತ್ರಜ್ಞಾನವನ್ನು ಹೊಂದಿವೆ.

MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಟೊಯೊಟೊ ವೆಲ್‌ಫೈರ್ ಕಾರಿಗಾಗಿ ಫ್ಯಾನ್ಸಿ ನಂಬರ್ ಪಡೆದುಕೊಂಡ ನಟ ಮೋಹನ್‌ಲಾಲ್

ವಿದೇಶಿ ಮಾರುಕಟ್ಟೆಗಳಲ್ಲಿ ವೆಲ್‌ಫೈರ್ ಕಾರು 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 3.5-ಲೀಟರ್ ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಭಾರತದಲ್ಲಿ ಬಿಡುಗಡೆಯಾಗಿರುವ ಹೊಸ ಕಾರಿನಲ್ಲಿ ಸದ್ಯಕ್ಕೆ 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ವರ್ಷನ್(ಸೆಲ್ಫ್ ಚಾರ್ಜಿಂಗ್ ಹೈಬ್ರಿಡ್ ಪವರ್‌ಟ್ರೈನ್) ಮಾತ್ರವೇ ಬಿಡುಗಡೆ ಮಾಡಲಾಗಿದೆ.

ಟೊಯೊಟೊ ವೆಲ್‌ಫೈರ್ ಕಾರಿಗಾಗಿ ಫ್ಯಾನ್ಸಿ ನಂಬರ್ ಪಡೆದುಕೊಂಡ ನಟ ಮೋಹನ್‌ಲಾಲ್

ಹೊಸ ಎಂಜಿನ್ ಮಾದರಿಯು 115-ಬಿಎಚ್‌ಪಿ ಮತ್ತು 198-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಮುಂಭಾಗ ಚಕ್ರಗಳಿಗೆ ಎಲೆಕ್ಟ್ರಿಕ್ ಮೋಟಾರ್ ಒದಗಿಸುವ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ಗೆ 16.35 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

Most Read Articles

Kannada
English summary
Mohanlal Toyota Vellfire Luxury MPV Fancy Number. Read in Kannada.
Story first published: Tuesday, October 13, 2020, 21:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X