ಆಂಬ್ಯುಲೆನ್ಸ್ ಚಾಲನೆ ಮಾಡಿದ ನಟಿ ರೋಜಾ

ಮಹಿಳೆಯರು ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುವುದನ್ನು ದಿನ ನಿತ್ಯವೂ ನೋಡುತ್ತಲೇ ಇರುತ್ತೇವೆ. ಆದರೆ ಮಹಿಳೆಯರು ಟ್ರಕ್ ಹಾಗೂ ಆಂಬ್ಯುಲೆನ್ಸ್‌ಗಳಂತಹ ಭಾರೀ ವಾಹನಗಳನ್ನು ಚಾಲನೆ ಮಾಡುವುದು ತೀರಾ ಅಪರೂಪ.

ಆಂಬ್ಯುಲೆನ್ಸ್ ಚಾಲನೆ ಮಾಡಿದ ನಟಿ ರೋಜಾ

ಭಾರತದಲ್ಲಿ ಕೆಲವೇ ಮಹಿಳೆಯರು ಮಾತ್ರ ಭಾರಿ ಗಾತ್ರದ ವಾಹನಗಳನ್ನು ಚಾಲನೆ ಮಾಡುತ್ತಾರೆ. ಈ ಸಾಲಿಗೆ ನಟಿಯೊಬ್ಬರು ಸೇರ್ಪಡೆಯಾಗಿದ್ದಾರೆ. ಕನ್ನಡದ ಮೌರ್ಯ ಚಿತ್ರವೂ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಅಭಿನಯಿಸಿರುವ ಖ್ಯಾತ ನಟಿ ಹಾಗೂ ಹಾಲಿ ಶಾಸಕಿ ರೋಜಾ ಆಂಬುಲೆನ್ಸ್ ಚಾಲನೆ ಮಾಡುವ ಮೂಲಕ ನೆರೆದಿದ್ದವರನ್ನು ಅಚ್ಚರಿಗೊಳಿಸಿದ್ದಾರೆ. ರೋಜಾರವರ ಈ ನಡೆಯನ್ನು ಕೆಲವರು ಪ್ರಶಂಸಿದ್ದರೆ, ಇನ್ನೂ ಕೆಲವರು ಟೀಕಿಸಿದ್ದಾರೆ.

ಆಂಬ್ಯುಲೆನ್ಸ್ ಚಾಲನೆ ಮಾಡಿದ ನಟಿ ರೋಜಾ

ಭಾರತದ ಇತರ ರಾಜ್ಯಗಳಂತೆ ಆಂಧ್ರ ಪ್ರದೇಶದಲ್ಲಿಯೂ ಕರೋನಾ ವೈರಸ್ ಆರ್ಭಟ ಹೆಚ್ಚಾಗಿದೆ. ಪರಿಸ್ಥಿತಿಯನ್ನು ನಿಭಾಯಿಸಲು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿರವರು ಕೆಲವು ದಿನಗಳ ಹಿಂದಷ್ಟೇ ಒಂದೇ ದಿನ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಿದ್ದರು.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಆಂಬ್ಯುಲೆನ್ಸ್ ಚಾಲನೆ ಮಾಡಿದ ನಟಿ ರೋಜಾ

ಇವುಗಳಲ್ಲಿ ಕೆಲವು ಆಂಬ್ಯುಲೆನ್ಸ್ ಗಳನ್ನು ಚಿತ್ತೂರು ಜಿಲ್ಲೆಯ ನಗರಿ ವಿಧಾನಸಭಾ ಕ್ಷೇತ್ರಕ್ಕೂ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಜುಲೈ 7ರಂದು ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಗರಿ ಕ್ಷೇತ್ರದ ಶಾಸಕರಾದ ರೋಜಾರವರು ಸಹ ಉಪಸ್ಥಿತರಿದ್ದರು.

ಆಂಬ್ಯುಲೆನ್ಸ್ ಚಾಲನೆ ಮಾಡಿದ ನಟಿ ರೋಜಾ

ಸಮಾರಂಭದ ನಂತರ ಆಂಬುಲೆನ್ಸ್‌ಗಳನ್ನು ವಿವಿಧ ಸ್ಥಳಗಳಿಗೆ ನಿಯೋಜಿಸಲಾಗಿದೆ. ಶಾಸಕಿ ರೋಜಾರವರಿಂದಾಗಿ ಆಂಬ್ಯುಲೆನ್ಸ್‌ಗಳ ನಿರ್ಗಮನವು ವಿಳಂಬವಾಗಿದೆ ಎಂದು ಹೇಳಲಾಗಿದೆ. ರೋಜಾರವರೇ ಸ್ವತಃ ಆಂಬ್ಯುಲೆನ್ಸ್‌ ಚಾಲನೆ ಮಾಡಿದ್ದೇ ಇದಕ್ಕೆ ಮುಖ್ಯ ಕಾರಣ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಆಂಬ್ಯುಲೆನ್ಸ್ ಚಾಲನೆ ಮಾಡಿದ ನಟಿ ರೋಜಾ

ತಾವು ಆಂಬ್ಯುಲೆನ್ಸ್ ಚಾಲನೆ ಮಾಡುವುದರ ಫೋಟೋ ಹಾಗೂ ವೀಡಿಯೊ ತೆಗೆಯುವಂತೆ ಅಲ್ಲಿದ್ದವರನ್ನು ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ. ಈ ವಿಷಯವು ಆಂಧ್ರಪ್ರದೇಶದಲ್ಲಿ ಭಾರೀ ಕೋಲಾಹಲವನ್ನುಂಟು ಮಾಡಿದೆ. ಶಾಸಕಿ ರೋಜಾರವರ ನಡೆಯನ್ನು ತೆಲುಗು ದೇಶಂ ಪಕ್ಷವು ಟೀಕಿಸಿದೆ.

ಆಂಬ್ಯುಲೆನ್ಸ್ ಚಾಲನೆ ಮಾಡಿದ ನಟಿ ರೋಜಾ

ಆದರೆ ಆಂಬ್ಯುಲೆನ್ಸ್ ಚಾಲನೆ ಮಾಡುವಂತೆ ಕೆಲವು ಚಾಲಕರು ಒತ್ತಾಯಿಸಿದ ಕಾರಣಕ್ಕೆ ರೋಜಾರವರು ಆಂಬ್ಯುಲೆನ್ಸ್ ಚಾಲನೆ ಮಾಡಿದರೆಂದು ಅವರ ಬೆಂಬಲಿಗರು ಹಾಗೂ ವೈಎಸ್ಆರ್ ಕಾಂಗ್ರೆಸ್ ಪಕ್ಷದವರು ಈ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ರೋಜಾರವರು ಆಂಬ್ಯುಲೆನ್ಸ್ ಚಾಲನೆ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಂಬ್ಯುಲೆನ್ಸ್ ಸೇವೆಗಳ ಉದ್ಘಾಟನಾ ಸಮಾರಂಭದಲ್ಲಿ ಹಾಗೂ ಆಂಬ್ಯುಲೆನ್ಸ್ ಚಾಲನೆ ವೇಳೆ ರೋಜಾರವರು ಫೇಸ್ ಮಾಸ್ಕ್ ಧರಿಸಿರಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸುವುದು ಎಷ್ಟು ಮುಖ್ಯವೋ ಎಲ್ಲಾ ಸಮಯದಲ್ಲೂ ಫೇಸ್ ಮಾಸ್ಕ್ ಧರಿಸುವುದು ಅಷ್ಟೇ ಮುಖ್ಯ.

ಆಂಬ್ಯುಲೆನ್ಸ್ ಚಾಲನೆ ಮಾಡಿದ ನಟಿ ರೋಜಾ

ಸಾರ್ವಜನಿಕ ಸ್ಥಳಗಳಲ್ಲಿ ಫೇಸ್ ಮಾಸ್ಕ್ ಧರಿಸುವುದರಿಂದ ಕರೋನಾ ವೈರಸ್ ಹರಡುವುದನ್ನು ಸಾಧ್ಯವಾದಷ್ಟು ಮಟ್ಟಿಗೆ ತಡೆಯಬಹುದು. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ ರೋಜಾರವರು ಫೇಸ್ ಮಾಸ್ಕ್ ಧರಿಸದಿರುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

Most Read Articles

Kannada
English summary
Actor turned politician Roja drives new ambulance. Read in Kannada.
Story first published: Thursday, July 9, 2020, 10:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X