ಕಸ್ಟಮ್ ಜಾವಾ 42 ಬೈಕ್ ಖರೀದಿಸಿದ ಬಾಲಿವುಡ್ ನಟಿ ಗುಲ್ ಪನಾಗ್

ಗುಲ್ ಪನಾಗ್ ಬಾಲಿವುಡ್‌ನ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಅವರು ಜನಪ್ರಿಯ ಮಾಡೆಲ್ ಸಹ ಹೌದು. ಇದರ ಜೊತೆಗೆ ಅವರು ವೃತ್ತಿಪರ ವಿಮಾನಯಾನ ಪೈಲಟ್, ಮ್ಯಾರಥಾನ್ ಪಟು ಹಾಗೂ ಪ್ರಾಣಿ ಪ್ರೇಮಿ ಸಹ ಹೌದು. ಇವೆಲ್ಲವುಗಳ ಹೊರತಾಗಿ ಗುಲ್ ಪನಾಗ್ ಆಟೋ ಉತ್ಸಾಹಿಯಾಗಿದ್ದು, ಬೈಕ್ ಸವಾರಿಯನ್ನು ಇಷ್ಟಪಡುತ್ತಾರೆ.

ಕಸ್ಟಮ್ ಜಾವಾ 42 ಬೈಕ್ ಖರೀದಿಸಿದ ಬಾಲಿವುಡ್ ನಟಿ

ಇತ್ತೀಚಿನ ಮಾಹಿತಿಗಳ ಪ್ರಕಾರ, ನಟಿ ಗುಲ್ ಪನಾಗ್ ತಮ್ಮ ಗ್ಯಾರೇಜ್‌ಗೆ ಹೊಸ ಜಾವಾ (Jawa) 42 ರೆಟ್ರೋ ಬೈಕ್ ಅನ್ನು ಸೇರಿಸಿದ್ದಾರೆ. ಅವರು ಲುಮೋಸ್ ಲೈಮ್ ಬಣ್ಣದಲ್ಲಿರುವ ಕಸ್ಟಮ್ ಜಾವಾ 42 ಬೈಕ್ ಅನ್ನು ಖರೀದಿಸಿದ್ದಾರೆ. ಅವರು ಈ ಹೊಸ ಜಾವಾ 42 ಬೈಕಿನೊಂದಿಗಿರುವ ಚಿತ್ರಗಳು ಅವರ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಕಾಣಿಸಿಕೊಂಡಿವೆ.

ಕಸ್ಟಮ್ ಜಾವಾ 42 ಬೈಕ್ ಖರೀದಿಸಿದ ಬಾಲಿವುಡ್ ನಟಿ

ಈ ಪೋಸ್ಟ್‌ನಲ್ಲಿ ಗುಲ್ ಪನಾಗ್ ರವರು ಈ ಬೈಕ್ ಜಾವಾ 42 ಅಥವಾ ಜಾವಾ ಪೆರಾಕ್ (Perak) ಎಂಬ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆ ಎಂದು ಹೇಳಲಾಗಿದೆ. ಭಾರತದ ರಾಷ್ಟ್ರ ಧ್ವಜದ ಬಣ್ಣದಲ್ಲಿರುವ ವರ್ಣರಂಜಿತ ಪಟ್ಟೆಗಳನ್ನು ಈ ಜಾವಾ 42 ಬೈಕಿನಲ್ಲಿರುವ ಲೋಗೋ ಸುತ್ತ, ಫ್ಯೂಯಲ್ ಟ್ಯಾಂಕ್ ಸುತ್ತಲೂ ಹಾಗೂ ಸೈಡ್ ಪ್ಯಾನಲ್‌ಗಳ ಮೇಲೆ ಕಾಣಬಹುದು.

ಕಸ್ಟಮ್ ಜಾವಾ 42 ಬೈಕ್ ಖರೀದಿಸಿದ ಬಾಲಿವುಡ್ ನಟಿ

ಈ ಬೈಕಿನ ಫ್ಯೂಯಲ್ ಟ್ಯಾಂಕ್ ಮೇಲೆ ಗುಲ್ ಪನಾಗ್ ರವರ ಹೆಸರು ಹಾಗೂ ಹುಟ್ಟಿದ ವರ್ಷವನ್ನು ನಮೂದಿಸಲಾಗಿದೆ. ಗುಲ್ ಪನಾಗ್ ತಮ್ಮ ಹೊಸ ಜಾವಾ 42 ಬೈಕಿನಲ್ಲಿ ಕೆಲವು ಅಧಿಕೃತ ಜಾವಾ ಪರಿಕರಗಳನ್ನು ಬಳಸಿರುವುದನ್ನು ಕಾಣಬಹುದು. ಮ್ಯಾಟ್ ಬ್ಲಾಕ್ ಕ್ರ್ಯಾಶ್ ಗಾರ್ಡ್, ಶಾರ್ಟ್ ಫ್ಲೈ ಸ್ಕ್ರೀನ್, ಹೆಡ್ ಲೈಟ್ ಗ್ರಿಲ್ ಹಾಗೂ ಹ್ಯಾಮರ್ ಹೆಡ್ ಸ್ಪಾಯ್ಲರ್ ಗಳನ್ನು ಈ ಬೈಕಿನಲ್ಲಿ ಕಾಣಬಹುದು.

ಕಸ್ಟಮ್ ಜಾವಾ 42 ಬೈಕ್ ಖರೀದಿಸಿದ ಬಾಲಿವುಡ್ ನಟಿ

ಜಾವಾ 42 ಬೈಕಿನಲ್ಲಿ 293 ಸಿಸಿಯ ಫ್ಯೂಯಲ್ ಇಂಜೆಕ್ಟೆಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಲಿಕ್ವಿಡ್ ಕೂಲಿಂಗ್ ಸಿಸ್ಟಂ ಹೊಂದಿದೆ. ಈ ಎಂಜಿನ್ ಗರಿಷ್ಠ 27.3 ಬಿಹೆಚ್‌ಪಿ ಪವರ್ ಹಾಗೂ 27.05 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ 6 ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ.

ಕಸ್ಟಮ್ ಜಾವಾ 42 ಬೈಕ್ ಖರೀದಿಸಿದ ಬಾಲಿವುಡ್ ನಟಿ

ಜಾವಾ ಮೋಟಾರ್‌ಸೈಕಲ್ಸ್ ಕಂಪನಿಯು 2021ರ ಹೊಸ ಜಾವಾ 42 ಬೈಕ್ ಅನ್ನು ಈ ವರ್ಷದ ಫೆಬ್ರವರಿ ತಿಂಗಳಲ್ಲಿ ಬಿಡುಗಡೆಗೊಳಿಸಿದೆ. ಈ ಬೈಕಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 1.69 ಲಕ್ಷಗಳಿಂದ ರೂ. 1.83 ಲಕ್ಷಗಳಾಗಿದೆ. ಈ ಇನ್‌ಸ್ಟಾಗ್ರಾಮ್‌ ಪೋಸ್ಟ್ ಪ್ರಕಾರ ಗುಲ್ ಪನಾಗ್ ಜಾವಾ ಪೆರಾಕ್ ಬೈಕ್ ಅನ್ನು ಖರೀದಿಸಲು ಬಯಸಿದ್ದರು.

ಕಸ್ಟಮ್ ಜಾವಾ 42 ಬೈಕ್ ಖರೀದಿಸಿದ ಬಾಲಿವುಡ್ ನಟಿ

ಜಾವಾ ಪೆರಾಕ್ ಜಾವಾ ಮೋಟಾರ್‌ಸೈಕಲ್ಸ್ ಕಂಪನಿಯ ಪ್ರಮುಖ ಬೈಕ್ ಆಗಿದೆ. ಈ ಬೈಕ್ ಭಾರತದಲ್ಲಿ ಮಾರಾಟವಾಗುವ ಒಳ್ಳೆಯ ಬಾಬರ್ ಶೈಲಿಯ ಬೈಕ್ ಆಗಿದೆ. ಈ ಬೈಕ್ ಆಕರ್ಷಕವಾಗಿ ವಿನ್ಯಾಸಗೊಳಿಸಲಾದ ಸಿಂಗಲ್ ಸೀಟರ್ ಬೈಕ್ ಆಗಿದೆ. ಪೆರಾಕ್ ಬೈಕಿನಲ್ಲಿ 334 ಸಿಸಿ, ಲಿಕ್ವಿಡ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಲಿಕ್ವಿಡ್ ಕೂಲ್ಡ್ ಕೂಡ ಆಗಿದೆ.

ಕಸ್ಟಮ್ ಜಾವಾ 42 ಬೈಕ್ ಖರೀದಿಸಿದ ಬಾಲಿವುಡ್ ನಟಿ

ಜಾವಾ ಪೆರಾಕ್ ಬೈಕಿನಲ್ಲಿರುವ 334 ಸಿಸಿ ಎಂಜಿನ್ 30.64 ಬಿಹೆಚ್‌ಪಿ ಪವರ್ ಹಾಗೂ 32.74 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 6 ಸ್ಪೀಡ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ. ಈ ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 2.06 ಲಕ್ಷಗಳಾಗಿದೆ. ನಟಿ ಗುಲ್ ಪನಾಗ್ ರವರ ಬಳಿ ಹೊಸ ಜಾವಾ 42 ಬೈಕಿನ ಹೊರತಾಗಿ ಇನ್ನೂ ಹಲವು ಬೈಕ್ ಗಳಿವೆ.

ಕಸ್ಟಮ್ ಜಾವಾ 42 ಬೈಕ್ ಖರೀದಿಸಿದ ಬಾಲಿವುಡ್ ನಟಿ

ಈ ಬೈಕ್‌ಗಳಲ್ಲಿ Royal Enfield Bullet Electra, BMW F 650 Funduro ಹಾಗೂ Triumph Bonneville T 120 ಬೈಕ್ ಗಳು ಸಹ ಸೇರಿವೆ. ಪಂಜಾಬಿಮೂಲದ ನಟಿ ಗುಲ್ ಪನಾಗ್ ರವರು 2003 ರಲ್ಲಿ ತೆರೆ ಕಂಡ ಧೂಪ್ ಸಿನಿಮಾದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಅವರು ಕೆಲವು ಪಂಜಾಬಿ ಭಾಷೆಯ ಚಿತ್ರಗಳಲ್ಲೂ ನಟಿಸಿದ್ದಾರೆ.

ಕಸ್ಟಮ್ ಜಾವಾ 42 ಬೈಕ್ ಖರೀದಿಸಿದ ಬಾಲಿವುಡ್ ನಟಿ

ಗುಲ್ ಪನಾಗ್ ರವರು 2014 ರಲ್ಲಿ ಆಮ್ ಆದ್ಮಿ ಪಕ್ಷ ಅಭ್ಯರ್ಥಿಯಾಗಿ ಚಂಡೀಗಢ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಗುಲ್ ಪನಾಗ್ ರವರ ತಂದೆ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿದ್ದ ಕಾರಣ ಗುಲ್ ಪನಾಗ್ ರವರು ತಮ್ಮ ಶಾಲಾ ಶಿಕ್ಷಣವನ್ನು ತಮಿಳು ನಾಡಿನ ಶಾಲೆಗಳು ಸೇರಿದಂತೆ ಒಟ್ಟು 14 ವಿವಿಧ ಶಾಲೆಗಳಲ್ಲಿ ಪೂರೈಸಿದರು.

ಕಸ್ಟಮ್ ಜಾವಾ 42 ಬೈಕ್ ಖರೀದಿಸಿದ ಬಾಲಿವುಡ್ ನಟಿ

ಗುಲ್ ಪನಾಗ್ 1999 ರಲ್ಲಿ ಮಿಸ್ ಇಂಡಿಯಾ ಪ್ರಶಸ್ತಿಯನ್ನು ಗೆದ್ದಿದ್ದರು. ಜೊತೆಗೆ ಅದೇ ಸ್ಪರ್ಧೆಯಲ್ಲಿ ಮಿಸ್ ಬ್ಯೂಟಿಫುಲ್ ಸ್ಮೈಲ್ ಪ್ರಶಸ್ತಿಯನ್ನು ಪಡೆದಿದ್ದರು. ನಂತರ ಅವರು 1999ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಗುಲ್ ಪನಾಗ್ ರವರು ಕಿರುತೆರೆಯಲ್ಲಿ ಹಲವಾರು ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಗುಲ್ ಪನಾಗ್ ರವರಂತೆ ಹಲವು ಬಾಲಿವುಡ್ ನಟ ನಟಿಯರು ಬೈಕ್ ಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಬಾಲಿವುಡ್ ನಟ ಜಾನ್ ಅಬ್ರಹಾಂ ಸಹ ಬೈಕ್ ಗಳ ಬಗ್ಗೆ ಕ್ರೇಜ್ ಹೊಂದಿದ್ದಾರೆ.

Most Read Articles

Kannada
English summary
Actress gul panag buys custom jawa 42 bike details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X