ಲಾಕ್ ಡೌನ್ ವೇಳೆ ಜಾಲಿ ಡ್ರೈವ್ ಮಾಡಿ ಅವಾಂತರ ಸೃಷ್ಠಿಸಿದ ನಟಿ ಶರ್ಮಿಳಾ ಮಾಂಡ್ರೆ

ಮಹಾಮಾರಿ ಕರೋನಾ ವೈರಸ್ ತೊಡೆದುಹಾಕಲು ಸರ್ಕಾರಗಳು ಹಲವು ಕಠಿಣ ಕ್ರಮಗಳೊಂದಿಗೆ ಲಾಕ್ ಡೌನ್ ವಿಧಿಸಿದ್ದು, ವೈರಸ್‌ಗೆ ತುತ್ತಾಗದಂತೆ ಪದೇ ಪದೇ ಎಚ್ಚರಿಸುತ್ತಲೇ ಇದೆ. ಆದ್ರೆ ಗಂಭೀರ ಪರಿಸ್ಥಿತಿಯಲ್ಲೂ ಲಾಕ್ ಡೌನ್ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಲೇ ಇದ್ದು, ಕನ್ನಡ ಟಾಪ್ ನಟಿರೊಬ್ಬರು ಕೂಡಾ ಲಾಕ್ ಡೌನ್ ಸಂದರ್ಭದಲ್ಲಿ ಅವಾಂತರವೊಂದನ್ನು ಸೃಷ್ಠಿಸಿದ್ದಾರೆ.

ಲಾಕ್ ಡೌನ್ ವೇಳೆ ಜಾಲಿ ಡ್ರೈವ್ ಮಾಡಿ ಅವಾಂತರ ಸೃಷ್ಠಿಸಿದ ನಟಿ ಶರ್ಮಿಳಾ ಮಾಂಡ್ರೆ

ಲಾಕ್ ಡೌನ್ ವೇಳೆ ಎಲ್ಲರೂ ಮನೆಯಲ್ಲೆ ಇದ್ದು ಸುರಕ್ಷಿತರಾಗಿರಿ, ಹೊರಗೆ ಅನಗತ್ಯವಾಗಿ ಓಡಾಡಬೇಡಿ ಎಂಬ ಸರ್ಕಾರದ ಸೂಚನೆಗಳ ನಡುವೆಯೂ ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿದ್ದು, ಅನಗತ್ಯವಾಗಿ ರಸ್ತೆಗಿಳಿಯುವ ವಾಹನಗಳನ್ನು ಸೀಜ್ ಕೂಡಾ ಮಾಡಲಾಗುತ್ತಿದೆ. ಹೀಗಿರುವಾಗ ಕನ್ನಡದ ಜನಪ್ರಿಯ ನಟಿರಲ್ಲಿ ಒಬ್ಬಾಗಿರುವ ಶರ್ಮಿಳಾ ಮಾಂಡ್ರೆ ಕೂಡಾ ಲಾಕ್ ಡೌನ್ ಉಲ್ಲಂಘಿಸಿ ತಮ್ಮ ಕಾರಿನಲ್ಲಿ ಜಾಲಿ ಡ್ರೈವ್ ಮಾಡುತ್ತಿದ್ದಾಗ ನಿಯಂತ್ರಣ ತಪ್ಪಿ ಅಪಘಾತ ಮಾಡಿದ್ದಾರೆ.

ಲಾಕ್ ಡೌನ್ ವೇಳೆ ಜಾಲಿ ಡ್ರೈವ್ ಮಾಡಿ ಅವಾಂತರ ಸೃಷ್ಠಿಸಿದ ನಟಿ ಶರ್ಮಿಳಾ ಮಾಂಡ್ರೆ

ನಟಿ ಶರ್ಮಿಳಾ ಮಾಂಡ್ರೆ ಅವರ ಡ್ರೈವ್ ಮಾಡುತ್ತಿದ್ದ ಐಷಾರಾಮಿ ಜಾಗ್ವಾರ್ ಸೆಡಾನ್ ಕಾರು ಶನಿವಾರ ಬೆಳ್ಳಂಬೆಳಿಗ್ಗೆ ವಸಂತನಗರ ಫ್ಲೈಓವರ್ ಬಳಿ ಮೆಟ್ರೋ ಪಿಲ್ಲರ್‌ ಒಂದಕ್ಕೆ ರಭಸವಾಗಿ ಢಿಕ್ಕಿ ಹೊಡೆದಿದೆ.

ಲಾಕ್ ಡೌನ್ ವೇಳೆ ಜಾಲಿ ಡ್ರೈವ್ ಮಾಡಿ ಅವಾಂತರ ಸೃಷ್ಠಿಸಿದ ನಟಿ ಶರ್ಮಿಳಾ ಮಾಂಡ್ರೆ

ಅಪಘಾತದಲ್ಲಿ ನಟಿ ಶರ್ಮಿಳಾ ಮತ್ತು ಕಾರಿನಲ್ಲಿದ್ದ ನಟಿಯ ಗೆಳೆಯರಿಗೂ ಗಂಭೀರವಾದ ಗಾಯಗಳಾಗಿದ್ದು, ಢಿಕ್ಕಿ ರಭಸಕ್ಕೆ ಕಾರಿನ ಮುಂಭಾಗವು ಸಂಪೂರ್ಣ ಜಖಂಗೊಂಡಿದೆ. ಈ ವೇಳೆ ಮೆಟ್ರೋ ಪಿಲ್ಲರ್‌ ಗೂ ಅಲ್ಪ-ಸ್ವಲ್ಪ ಹಾನಿಯಾಗಿದ್ದು, ನಟಿಯ ಅಪಘಾತ ಪ್ರಕರಣವನ್ನು ಬೆಂಗಳೂರು ನಗರ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

ಲಾಕ್ ಡೌನ್ ವೇಳೆ ಜಾಲಿ ಡ್ರೈವ್ ಮಾಡಿ ಅವಾಂತರ ಸೃಷ್ಠಿಸಿದ ನಟಿ ಶರ್ಮಿಳಾ ಮಾಂಡ್ರೆ

ಗೆಳೆಯರ ಜೊತೆ ಪಾರ್ಟಿ ಮುಗಿಸಿ ಜಾಲಿ ಡ್ರೈವ್?

ಲಾಕ್‌ಡೌನ್ ವೇಳೆ ನಿಯಮ ಉಲ್ಲಂಘಿಸಿ ಶರ್ಮಿಳಾ ಮಾಂಡ್ರೆ ಮತ್ತು ಸ್ನೇಹಿತರು ಹೊರಗೆ ಬಂದಿದ್ದು ಹೇಗೆ? ಪಾರ್ಟಿ ಮಾಡಿದ್ದು ಎಲ್ಲಿ? ಎಂಬ ಹಲವು ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಪಾರ್ಟಿ ನಂತರ ಬೆಳಗಿನ ಜಾವ ಸುಮಾರು ಮೂರು ಗಂಟೆಗೆ ಜಾಲಿ ಡ್ರೈವ್‌ಗೆ ತೆರಳಿದ್ದ ಶರ್ಮಿಳಾ ಮಾಂಡ್ರೆ ಮತ್ತು ಗೆಳೆಯರು ವಸಂತನಗರ ಫ್ಲೈಓವರ್ ಬಳಿ ಮೆಟ್ರೋ ಪಿಲ್ಲರ್‌ ಒಂದಕ್ಕೆ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆಸಿದ್ದಾರೆ.

ಲಾಕ್ ಡೌನ್ ವೇಳೆ ಜಾಲಿ ಡ್ರೈವ್ ಮಾಡಿ ಅವಾಂತರ ಸೃಷ್ಠಿಸಿದ ನಟಿ ಶರ್ಮಿಳಾ ಮಾಂಡ್ರೆ

ಇದಲ್ಲದೇ ಅಪಘಾತವಾದ ಐಷಾರಾಮಿ ಕಾರಿನಲ್ಲಿ ಬೆಂಗಳೂರು ಪೊಲೀಸರು ನೀಡುವ ತುರ್ತು ಸೇವಾ ವಾಹನಗಳ ಪಾಸ್ ಸಹ ಲಭ್ಯವಾಗಿದ್ದು, ಇದರ ಕುರಿತಾಗಿ ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಲಾಕ್ ಡೌನ್ ವೇಳೆ ಜಾಲಿ ಡ್ರೈವ್ ಮಾಡಿ ಅವಾಂತರ ಸೃಷ್ಠಿಸಿದ ನಟಿ ಶರ್ಮಿಳಾ ಮಾಂಡ್ರೆ

ಮನೆಯಲ್ಲೇ ಇರಿ ಎಂದಿದ್ದ ನಟಿ..!

ಅಪಘಾತ ನಡೆಯುವುದಕ್ಕೂ ಎರಡು ದಿನಗಳ ಮುಂಚಿತವಷ್ಟೇ ಲಾಕ್ ಡೌನ್ ಅನ್ನು ಸರಿಯಾಗಿ ಪಾಲನೆ ಮಾಡುವ ಕುರಿತು ತಮ್ಮ ಅಭಿಮಾನಿಗಳಲ್ಲಿ ಹಲವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದರು. ಲಾಕ್ ಡೌನ್ ಪಾಲನೆಯೊಂದಿಗೆ ಮನೆಯಲ್ಲೇ ಇದ್ದು ಏನೆಲ್ಲಾ ಉತ್ತಮ ಕಾರ್ಯಗಳನ್ನು ಮಾಡಬಹುದು ಎಂಬುವುದನ್ನು ಹಂಚಿಕೊಂಡಿದ್ದರು.

ಲಾಕ್ ಡೌನ್ ವೇಳೆ ಜಾಲಿ ಡ್ರೈವ್ ಮಾಡಿ ಅವಾಂತರ ಸೃಷ್ಠಿಸಿದ ನಟಿ ಶರ್ಮಿಳಾ ಮಾಂಡ್ರೆ

ಆದ್ರೆ ಹೇಳುವುದೇ ಒಂದು ಮಾಡುವುದೇ ಇನ್ನೊಂದು ಎಂಬ ಗಾದೆಯೆಂತೆ ಲಾಕ್ ಡೌನ್ ಪಾಲನೆ ಮಾಡಿ ಸುರಕ್ಷಿತವಾಗಿರಿ ಎಂದು ಹೇಳಿದ್ದ ನಟಿ ಮಧ್ಯರಾತ್ರಿ ಗೆಳೆಯರೊಂದಿಗೆ ಪಾರ್ಟಿ ಮಾಡಿ ಆಸ್ಪತ್ರೆ ಸೇರಿರುವುದು ನಿಜಕ್ಕೂ ದುರಂತವೇ ಸರಿ.

ಲಾಕ್ ಡೌನ್ ವೇಳೆ ಜಾಲಿ ಡ್ರೈವ್ ಮಾಡಿ ಅವಾಂತರ ಸೃಷ್ಠಿಸಿದ ನಟಿ ಶರ್ಮಿಳಾ ಮಾಂಡ್ರೆ

ಇನ್ನು ಅಪಘಾತದ ಬಳಿಕ ಶರ್ಮಿಳಾ ಮಾಂಡ್ರೆ ಮತ್ತು ಅವರ ಸ್ನೇಹಿತರು ಕಾರ್‌ ಅನ್ನು ಅಪಘಾತದ ಸ್ಥಳದಲ್ಲೇ ಬಿಟ್ಟು ವಿಕ್ರಂ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿಂದ ಫೋರ್ಟಿಸ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಈ ವೇಳೆಯೂ ತಮ್ಮ ಚಾಲಾಕಿ ಬುದ್ದಿ ತೊರಿದ ನಟಿಮಣಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡು ಅಲ್ಲಿಂದ ಗೆಳೆಯರ ಜೊತೆ ಪಾರಾರಿಯಾಗಿದ್ದಾರೆ.

ಲಾಕ್ ಡೌನ್ ವೇಳೆ ಜಾಲಿ ಡ್ರೈವ್ ಮಾಡಿ ಅವಾಂತರ ಸೃಷ್ಠಿಸಿದ ನಟಿ ಶರ್ಮಿಳಾ ಮಾಂಡ್ರೆ

ಸುಮೊಟೊ ಕೇಸ್ ದಾಖಲಿಸಿದ ಪೊಲೀಸರು

ನಟಿ ಶರ್ಮಿಳಾ ಮತ್ತು ಕಾರಿನಲ್ಲಿದ್ದ ನಟಿಯ ಗೆಳೆಯರ ವಿರುದ್ಧ ಹೈಗ್ರೌಂಡ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದು, ಅಪಘಾತ ಪ್ರಕರಣ ಮಾತ್ರವಲ್ಲದೆ ಲಾಕ್‌ಡೌನ್ ನಿಯಮ ಉಲ್ಲಂಘನೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಜೊತೆಗೆ ಅಪಘಾತದ ವೇಳೆ ಮದ್ಯ ಸೇವನೆ ಮಾಡಿದ್ದರೇ ಎನ್ನುವ ಖಚಿತತೆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Source: Deccan Herald

Most Read Articles

Kannada
Read more on ಅಪಘಾತ accident
English summary
Actress Sharmila Mandre injured in accident in Bengaluru. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X