ಮಣಿಪುರದಿಂದ ಸಿಂಗಾಪುರಕ್ಕೆ ಸಂಚರಿಸಲಿದೆ ಈ ಟೂರಿಸ್ಟ್ ಬಸ್

ಹರಿಯಾಣದ ಗುರುಗ್ರಾಮ ಮೂಲದ ಖಾಸಗಿ ಕಂಪನಿಯೊಂದು ಭಾರತದಿಂದ ಸಿಂಗಾಪುರಕ್ಕೆ ಬಸ್ ಸೇವೆಯನ್ನು ಆರಂಭಿಸುವ ಯೋಜನೆಯನ್ನು ಪ್ರಕಟಿಸಿದೆ. ಈ ಬಸ್ ಮೂರು ದೇಶಗಳ ಮೂಲಕ ಪ್ರಯಾಣಿಸಲಿದೆ.

ಮಣಿಪುರದಿಂದ ಸಿಂಗಾಪುರಕ್ಕೆ ಸಂಚರಿಸಲಿದೆ ಈ ಟೂರಿಸ್ಟ್ ಬಸ್

ಈ ಯೋಜನೆಗೆ ಬಸ್'ನಲ್ಲಿ ಪ್ರಯಾಣ ಕೈಗೊಳ್ಳುವ ಉತ್ಸಾಹಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಡ್ವೆಂಚರ್ಸ್ ಓವರ್‌ಲ್ಯಾಂಡ್ ಕಂಪನಿಯು ಭಾರತದಿಂದ ಸಿಂಗಾಪುರಕ್ಕೆ ಬಸ್ ಸೇವೆಯನ್ನು ನೀಡಲಿದೆ. ಈ ಬಸ್ ಸೇವೆ ನವೆಂಬರ್ 14ರಂದು ಮಣಿಪುರದ ಇಂಫಾಲ್'ನಿಂದ ಆರಂಭವಾಗಲಿದೆ.

ಮಣಿಪುರದಿಂದ ಸಿಂಗಾಪುರಕ್ಕೆ ಸಂಚರಿಸಲಿದೆ ಈ ಟೂರಿಸ್ಟ್ ಬಸ್

ಅಡ್ವೆಂಚರ್ಸ್ ಓವರ್‌ಲ್ಯಾಂಡ್ ಈ ಪ್ರವಾಸಕ್ಕಾಗಿ ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರನ್ನು ಆಹ್ವಾನಿಸುತ್ತಿದೆ. ಸಿಂಗಾಪುರಕ್ಕೆ ಪ್ರವೇಶಿಸುವ ಮುನ್ನ ಈ ಬಸ್ ಮ್ಯಾನ್ಮಾರ್, ಥೈಲ್ಯಾಂಡ್ ಹಾಗೂ ಮಲೇಷ್ಯಾಗಳಲ್ಲಿ ಸಂಚರಿಸಲಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಮಣಿಪುರದಿಂದ ಸಿಂಗಾಪುರಕ್ಕೆ ಸಂಚರಿಸಲಿದೆ ಈ ಟೂರಿಸ್ಟ್ ಬಸ್

ಈ ಬಸ್ ಪ್ರಯಾಣಿಸುವ ಪ್ರಮುಖ ನಗರಗಳಲ್ಲಿ ಮ್ಯಾನ್ಮಾರ್‌ನ ಕೇಲ್, ಯಾಂಗೊನ್, ಬ್ಯಾಂಕಾಕ್ ಮತ್ತು ಥೈಲ್ಯಾಂಡ್‌ನ ಕ್ರಾಬಿ ಹಾಗೂ ಮಲೇಷ್ಯಾದ ಕೌಲಾಲಂಪುರ್'ಗಳು ಸೇರಿವೆ. ಈ ಬಸ್ ಸೇವೆ ಭಾರತದಿಂದ ಸಿಂಗಾಪುರಕ್ಕೆ ಹಾಗೂ ಸಿಂಗಾಪುರದಿಂದ ಭಾರತಕ್ಕೆ ಲಭ್ಯವಿರಲಿದೆ.

ಮಣಿಪುರದಿಂದ ಸಿಂಗಾಪುರಕ್ಕೆ ಸಂಚರಿಸಲಿದೆ ಈ ಟೂರಿಸ್ಟ್ ಬಸ್

ಪ್ರತಿ ಟ್ರಿಪ್'ನಲ್ಲಿ 20 ಸೀಟುಗಳ ವ್ಯವಸ್ಥೆ ಇರಲಿದೆ. ಮೊದಲು ಬಂದವರಿಗೆ ಮೊದಲ ಆದ್ಯತೆ ಆಧಾರದ ಮೇಲೆ ಬುಕ್ಕಿಂಗ್ ಸ್ವೀಕರಿಸಲಾಗುತ್ತದೆ. ಈ ಪ್ರಯಾಣದ ಪ್ರತಿ ಹಂತವನ್ನು ಪೂರ್ಣಗೊಳಿಸಲು ಬಸ್ ಸುಮಾರು 20 ದಿನಗಳನ್ನು ತೆಗೆದುಕೊಳ್ಳುತ್ತದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಮಣಿಪುರದಿಂದ ಸಿಂಗಾಪುರಕ್ಕೆ ಸಂಚರಿಸಲಿದೆ ಈ ಟೂರಿಸ್ಟ್ ಬಸ್

ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ನೀಡಲು ಈ ಬಸ್‌ನಲ್ಲಿ ಎಲ್ಲಾ ಸೌಲಭ್ಯಗಳನ್ನು ಅಳವಡಿಸಲಾಗುವುದು ಎಂದು ಅಡ್ವೆಂಚರ್ಸ್ ಓವರ್‌ಲ್ಯಾಂಡ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮಣಿಪುರದಿಂದ ಸಿಂಗಾಪುರಕ್ಕೆ ಸಂಚರಿಸಲಿದೆ ಈ ಟೂರಿಸ್ಟ್ ಬಸ್

ಈ ಬಸ್ 3 ದೇಶಗಳ ಮೂಲಕ ಪ್ರಯಾಣಿಸಲಿದೆ. ಈ ಬಸ್'ನಲ್ಲಿ ಸಂಚರಿಸುವ ಪ್ರಯಾಣಿಕರು ರಸ್ತೆಯ ಮೂಲಕ ಸುಮಾರು 4,500 ಕಿ.ಮೀ ಪ್ರಯಾಣಿಸಬಹುದು. ಈ ದೂರವನ್ನು ವಿಮಾನದ ಮೂಲಕ ಕೆಲವೇ ಗಂಟೆಗಳಲ್ಲಿ ಸಂಚರಿಸಬಹುದಾದರೂ, ರಸ್ತೆ ಪ್ರಯಾಣವು ಪ್ರಯಾಣಿಕರಿಗೆ ವಿಭಿನ್ನ ಅನುಭವವನ್ನು ನೀಡಲಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಮಣಿಪುರದಿಂದ ಸಿಂಗಾಪುರಕ್ಕೆ ಸಂಚರಿಸಲಿದೆ ಈ ಟೂರಿಸ್ಟ್ ಬಸ್

ಇದೇ ಅಡ್ವೆಂಚರ್ಸ್ ಓವರ್‌ಲ್ಯಾಂಡ್ ಕಂಪನಿಯು ಕೆಲ ತಿಂಗಳ ಹಿಂದೆ ದೆಹಲಿಯಿಂದ ಇಂಗ್ಲೆಂಡ್ ರಾಜಧಾನಿ ಲಂಡನ್‌ಗೆ ಬಸ್ ಸೇವೆ ಒದಗಿಸುವ ಯೋಜನೆಯನ್ನು ಪ್ರಕಟಿಸಿತ್ತು. ಈ ಪ್ರಯಾಣವು ವಿಶ್ವದ ಅತಿ ಉದ್ದದ ರಸ್ತೆ ಪ್ರಯಾಣಗಳಲ್ಲಿ ಒಂದಾಗಿದೆ.

ಮಣಿಪುರದಿಂದ ಸಿಂಗಾಪುರಕ್ಕೆ ಸಂಚರಿಸಲಿದೆ ಈ ಟೂರಿಸ್ಟ್ ಬಸ್

ವಿಶ್ವದಾದ್ಯಂತ ಸುಮಾರು 195 ದೇಶಗಳ ಪ್ರವಾಸಿಗರು ದೆಹಲಿಯಿಂದ ಲಂಡನ್‌ಗೆ ತೆರಳುವ ಬಸ್'ನಲ್ಲಿ ಸಂಚರಿಸಲು ಮುಂದಾಗಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಇಂತಹ ದೂರದ ಪ್ರಯಾಣವು ಪ್ರಯಾಣಿಕರಿಗೆ ಹೊಸ ಅನುಭವವನ್ನು ನೀಡುತ್ತದೆ.

Most Read Articles

Kannada
English summary
Adventures Overland company to run bus from India to Singapore. Read in Kannada.
Story first published: Thursday, January 28, 2021, 15:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X