ಏರೋಮೊಬೈಲ್ ವರ್ಷನ್ 3.0 ಹಾರುವ ಕಾರು ಅನಾವರಣ

By Nagaraja

ಭವಿಷ್ಯದ ಸಂಚಾರ ವಾಹಕಗಳಲ್ಲಿ 'ಫೈಯಿಂಗ್ ಕಾರು' ಅಥವಾ ಹಾರುವ ಕಾರಿಗೆ ಅತಿ ಹೆಚ್ಚಿನ ಮಹತ್ವವಿದೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು ನಿರಂತರ ಅಧ್ಯಯನದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ.

ನಾವು ಈ ಹಿಂದೆಯೇ ಮಾಹಿತಿ ನೀಡಿರುವಂತೆಯೇ ಏರೋಮೊಬೈಲ್ ಹೊಸತಾದ ಫೈಯಿಂಗ್ ಕಾರು ವರ್ಷನ್ 3.0 ಅನಾವರಣಗೊಳಿಸಿದೆ. ಇದು ತಾಜಾ ವಿನ್ಯಾಸ ಮಾದರಿಯನ್ನು ಹೊಂದಿದೆ.

ಏರೋಮೊಬೈಲ್ ವರ್ಷನ್ 3.0 ಹಾರುವ ಕಾರು ಅನಾವರಣ

ಏರೋಮೊಬೈಲ್ ವರ್ಷನ್ 2.5 ಒಂದು ವರ್ಷದ ಹಿಂದೆ ಹಾರಾಟ ನಡೆಸಿತ್ತು. ಇದಕ್ಕೆ ಹೋಲಿಸಿದಾಗ ವರ್ಷನ್ 3.0 ಗಮನಾರ್ಹ ಬದಲಾವಣೆಗಳನ್ನು ಪಡೆದುಕೊಂಡಿದೆ.

ಏರೋಮೊಬೈಲ್ ವರ್ಷನ್ 3.0 ಹಾರುವ ಕಾರು ಅನಾವರಣ

ಹೊಸತಾದ ಏರೋಮೊಬೈಲ್ ವರ್ಷನ್ 3.0 ಹಾರುವ ಕಾರನ್ನು ಕೇವಲ 10 ತಿಂಗಳ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇದು ಸ್ಲೋವಕಿಯಾ ಮೂಲದ ಸಂಸ್ಥೆಯ ಯಶಸ್ಸನ್ನು ಎತ್ತಿ ಹಿಡಿದಿದೆ.

ಏರೋಮೊಬೈಲ್ ವರ್ಷನ್ 3.0 ಹಾರುವ ಕಾರು ಅನಾವರಣ

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಹ ಸ್ಥಾಪಕ ಹಾಗೂ ಸಿಟಿಒ ಆಗಿರುವ ಸ್ಟಿಫನ್ ಕ್ಲೆನ್, 12 ಮಂದಿನ ನಮ್ಮ ತಂಡ ಅತ್ಯಂತ ಕಡಿಮೆ ಸಮಯದಲ್ಲಿ ಇಂತಹದೊಂದು ಮೈಲುಗಲ್ಲು ತಲುಪಿರುವುದಕ್ಕೆ ಅತೀವ ಸಂತೋಷವಾಗುತ್ತಿದೆ ಎಂದಿದ್ದಾರೆ.

ಏರೋಮೊಬೈಲ್ ವರ್ಷನ್ 3.0 ಹಾರುವ ಕಾರು ಅನಾವರಣ

ಇಲ್ಲಿಗೆ ಏರೋಮೊಬೈಲ್ 3.0 ಸವಾಲು ಕೊನೆಯಾಗುತ್ತಿಲ್ಲ. ಇದು ಸಾಹಸಗಾಥೆಯ ಪ್ರಾರಂಭವಾಗಿದ್ದು, ಭವಿಷ್ಯದ ವೈಯಕ್ತಿಕ ಸಂಚಾರ ರೂಪಿಸುವುದರಲ್ಲಿ ಕಾರ್ಯಮಗ್ನರಾಗಿದ್ದೇವೆ ಎಂದು ವಿವರಿಸಿದ್ದಾರೆ.

ಏರೋಮೊಬೈಲ್ ವರ್ಷನ್ 3.0 ಹಾರುವ ಕಾರು ಅನಾವರಣ

ಲಿಮೊಸಿನ್ ಅಥವಾ ದೊಡ್ಡದಾದ ಐಷಾರಾಮಿ ಸೆಡಾನ್ ಕಾರಿಗಳಿಗೆ ಸಮಾನವಾದ ಆಕಾರವನ್ನು ಹೊಂದಿರುವ ಈ ಹಾರುವ ಕಾರನ್ನು ಸಾಮಾನ್ಯ ಪಾರ್ಕಿಂಗ್ ಪ್ರದೇಶದಲ್ಲಿ ನಿಲುಗಡೆಗೊಳಿಸಬಹುದಾಗಿದೆ.

ಏರೋಮೊಬೈಲ್ ವರ್ಷನ್ 3.0 ಹಾರುವ ಕಾರು ಅನಾವರಣ

ಅಂತೆಯೇ ಸುಲಭವಾಗಿ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಆಗುವ ನಿಟ್ಟಿನಲ್ಲಿ ವಿಶೇಷ ವಿನ್ಯಾಸ ಕಲ್ಪಿಸಿ ಕೊಡಲಾಗಿದೆ.

ಏರೋಮೊಬೈಲ್ ವರ್ಷನ್ 3.0 ಹಾರುವ ಕಾರು ಅನಾವರಣ

ಇನ್ನು ಸಂಚಾರ ವೆಚ್ಚ ಕಡಿಮೆ ಮಾಡುವ ನಿಟ್ಟಿನಲ್ಲಿ ಸಹಜ ಪೆಟ್ರೋಲ್ ಇಂಧನಗಳಿಂದಲೇ ಇದು ಓಡಾಟ ನಡೆಸಲಿದೆ.

ತಾಂತ್ರಿಕ ಮಾಹಿತಿ

ತಾಂತ್ರಿಕ ಮಾಹಿತಿ

ಎಂಜಿನ್: ರೊಟಕ್ಸ್ 912

ಗರಿಷ್ಠ ವೇಗತೆ: 200 km/h (ಗಾಳಿಯಲ್ಲಿ), 160 km/h (ನೆಲದಲ್ಲಿ)

ಟೇಕ್ ಆಫ್ ವೇಗ: 130 km/h

ತಾಂತ್ರಿಕ ಮಾಹಿತಿ

ತಾಂತ್ರಿಕ ಮಾಹಿತಿ

ವ್ಯಾಪ್ತಿ: 700 ಕೀ.ಮೀ. (ಗಾಳಿಯಲ್ಲಿ), 875 ಕೀ.ಮೀ. (ನೆಲದಲ್ಲಿ)

ನಿರ್ಮಾಣ: ಸ್ಟೀಲ್ ಫ್ರೇಮ್ ವರ್ಕ್ ಮತ್ತು ಕಾರ್ಬನ್ ಕೋಟಿಂಗ್

ಆಯಾಮ

ಆಯಾಮ

ಹಾರುವ ವೇಳೆ

ಅಗಲ: 8320 ಎಂಎಂ

ಅಗಲ: 6000 ಎಂಎಂ

ನೆಲದಲ್ಲಿ

ಅಗಲ: 2240 ಎಂಎಂ

ಅಗಲ: 6000 ಎಂಎಂ

ಸಾಮರ್ಥ್ಯ: ಎರಡು ಸೀಟು

Most Read Articles

Kannada
English summary
The AeroMobil 3.0, as the company calls the latest prototype design was premiered at the Pioneers Festival in Vienna. The roadster-cum-light-aircraft is being fine tuned for final performance.
Story first published: Thursday, October 30, 2014, 17:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X