ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಹಿಂದೆ ಸ್ವಾಜಿಲ್ಯಾಂಡ್ ಎಂದು ಕರೆಯಲಾಗುತ್ತಿದ್ದ, ಎಸ್ವಾಟಿನಿ ದೇಶದ ರಾಜ ಹಾಗೂ ಸ್ವಾಜಿ ರಾಜಮನೆತನದ ಮುಖ್ಯಸ್ಥ ಎಂಸ್ವತಿ 3 ತನ್ನ 15 ಜನ ಮಡದಿಯರಿಗಾಗಿ 19 ರೋಲ್ಸ್ ರಾಯ್ಸ್ ಸೂಪರ್ ಐಷಾರಾಮಿ ಕಾರುಗಳನ್ನು ಖರೀದಿಸಲು ರೂ.175 ಕೋಟಿ ಅಂದರೆ 24.4 ಮಿಲಿಯನ್ ಅಮೇರಿಕನ್ ಡಾಲರ್‍‍ಗಳನ್ನು ಖರ್ಚು ಮಾಡಿದ್ದಾರೆ.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಈ 19 ರೋಲ್ಸ್ ರಾಯ್ಸ್ ಕಾರುಗಳಲ್ಲಿ ತಮಗಾಗಿ ವಿಶೇಷವಾಗಿ ಮಾಡಿಫೈ ಮಾಡಲಾದ ರೋಲ್ಸ್ ರಾಯ್ಸ್ ಕುಲಿನನ್ ಎಸ್‍‍ಯುವಿಯು ಸೇರಿರುವುದು ವಿಶೇಷ. ಅಂದ ಹಾಗೆ ಈ ರಾಜನಿರುವ ದೇಶವು ಆಫ್ರಿಕಾದ ಬಡ ರಾಷ್ಟ್ರಗಳಲ್ಲಿ ಒಂದಾಗಿದೆ.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ರಾಜನು 120 ಬಿಎಂಡಬ್ಲ್ಯು ಸೆಡಾನ್ ಮತ್ತು ಎಸ್‌ಯುವಿಗಳನ್ನು ಬಳಸಲು ಸ್ವಾಜಿ ರಾಯಲ್ ಫ್ಯಾಮಿಲಿಗೆ ಆದೇಶಿಸಿದ್ದಾರೆ. ಈ ರಾಯಲ್ ಫ್ಯಾಮಿಲಿಯಲ್ಲಿ ಆತನ 23 ಮಕ್ಕಳೂ ಇರುವುದು ವಿಶೇಷ. ರೋಲ್ಸ್ ರಾಯ್ಸ್ ಹಾಗೂ ಬಿಎಂಡಬ್ಲ್ಯು ಕಾರುಗಳು ಎಂಸ್ವತಿ 3ರ ಐಷಾರಾಮಿ ಕಾರ್ ಗ್ಯಾರೇಜಿಗೆ ಹೊಸ ಸೇರ್ಪಡೆಯಾಗಿವೆ.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಈ ಗ್ಯಾರೇಜಿನಲ್ಲಿ ಈಗಾಗಲೇ 20 ಮರ್ಸಿಡಿಸ್ ಮೇಬ್ಯಾಕ್ ಪುಲ್ಮಾನ್ಸ್, ಮೇಬ್ಯಾಕ್ 62 ಹಾಗೂ ಬಿಎಂಡಬ್ಲ್ಯು ಎಕ್ಸ್ 6 ಕಾರುಗಳಿವೆ. ಇದರ ಜೊತೆಗೆ ಈ ರಾಜನ ಬಳಿ ವೈಯಕ್ತಿಕ ಬಳಕೆಗಾಗಿ ಒಂದೆರಡು ಖಾಸಗಿ ಜೆಟ್‌ಗಳಿವೆ.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಈ ಎಲ್ಲಾ ವಾಹನಗಳನ್ನು ಖರೀದಿಸುವುದಕ್ಕೆ ಸಾಕಷ್ಟು ವೆಚ್ಚವಾಗುವುದಲ್ಲದೆ ನಿರ್ವಹಣೆಯು ಸಹ ದುಬಾರಿಯಾಗಿದೆ. ರೋಲ್ಸ್ ರಾಯ್ಸ್, ಮೇಬ್ಯಾಚ್ಸ್ ಹಾಗೂ ಬಿಎಂಡಬ್ಲ್ಯು ಕಾರುಗಳ ನಿರ್ವಹಣೆಗಾಗಿ ದೊಡ್ಡ ಸರ್ವಿಸ್ ಸೆಂಟರ್‍‍ಗಳ ಅಗತ್ಯವಿದೆ.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಈ ಹಿಂದೆ ಹಿಂದೆ ಸ್ವಾಜಿಲ್ಯಾಂಡ್ ಎಂದು ಕರೆಯಲಾಗುತ್ತಿದ್ದ ಎಸ್ವಾಟಿನಿ ದೇಶವು ದಕ್ಷಿಣ ಆಫ್ರಿಕಾ ಹಾಗೂ ಮೊಜಾಂಬಿಕ್ ದೇಶಗಳ ಮಧ್ಯದಲ್ಲಿದೆ. ರಾಜನ ಕಾರು ಖರೀದಿಯ ಶೋಕಿಯನ್ನು ಅಲ್ಲಿರುವ ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಪೀಪಲ್ಸ್ ಯುನೈಟೆಡ್ ಡೆಮಾಕ್ರಟಿಕ್ ಮೂವ್‍‍ಮೆಂಟ್ ವಿರೋಧ ಪಕ್ಷದ ಪ್ರಧಾನ ಕಾರ್ಯದರ್ಶಿ ವಾಂಡಿಲೆ ಡುಡ್ಲು, ರಾಜನ ಕಾರು ಶೋಕಿಗಳ ಬಗ್ಗೆ ಮಾತನಾಡಿ, ನವೆಂಬರ್ ಆರಂಭದಲ್ಲಿ, ರಾಜ, ಆತನ ತಾಯಿ ಹಾಗೂ ಆತನ ಹೆಂಡತಿಯರ ವಿಶೇಷ ಬಳಕೆಗಾಗಿ ಒಟ್ಟು 19 ರೋಲ್ಸ್ ರಾಯ್ಸ್ ಕಾರುಗಳನ್ನು ಸ್ವಾಜಿಲ್ಯಾಂಡ್‌ಗೆ ತರಲಾಯಿತು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಇದು ದುರಹಂಕಾರದ ಪ್ರದರ್ಶನವಾಗಿದ್ದು, ಸ್ವಾಜಿಲ್ಯಾಂಡ್‌ನ ರಾಜನು ಬಡ ಜನರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದ್ದಾನೆ. ಒಂದು ಪಕ್ಷವಾಗಿ ನಾವು ಆತನಿಗೆ ಎಷ್ಟು ಹೆಂಡತಿಯರು ಹಾಗೂ ಮಕ್ಕಳಿದ್ದಾರೆ ಎಂಬ ಬಗ್ಗೆ ಕನಿಷ್ಠ ಕಾಳಜಿ ವಹಿಸುತ್ತೇವೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ದೊಡ್ಡ ರಾಜಕೀಯ ವಿಷಯವೆಂದರೆ ಆಧುನಿಕ ರಾಜಕೀಯದಲ್ಲಿ ಸಾಮಾನ್ಯವಾಗಿ ಅವರ ಖಾಸಗಿ ಸಂಪನ್ಮೂಲಗಳು ಹಾಗೂ ಸಾರ್ವಜನಿಕ ಹಣದ ನಡುವೆ ಪ್ರತ್ಯೇಕತೆಯಿರಬೇಕಾದರೆ ಜನರ ಹಣದಿಂದ ಇನ್ನೊಬ್ಬರ ಮಕ್ಕಳನ್ನು ನೋಡಿಕೊಳ್ಳಬೇಕು. ಸ್ವಾಜಿ ರಾಜಕೀಯ ವ್ಯವಸ್ಥೆಯಲ್ಲಿ ರಾಜಪ್ರಭುತ್ವ ಹಾಗೂ ಅದರ ಸಹಚರರು ಉದ್ದಾರವಾಗುತ್ತಿದ್ದಾರೆಯೇ ಹೊರತು ಸಾಮಾನ್ಯ ಜನರಲ್ಲ ಎಂದು ಹೇಳಿದರು.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ರೋಲ್ಸ್ ರಾಯ್ಸ್ ಹಾಗೂ ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಿರುವ ರಾಜನ ನಿರ್ಧಾರವನ್ನು ಎಸ್ವಾಟಿನಿಯ ಪ್ರಧಾನ ಮಂತ್ರಿ ಆಂಬ್ರೋಸ್ ಮಾಂಡ್ವುಲೊ ಡ್ಲಮಿನಿರವರು ಸಮರ್ಥಿಸಿದ್ದಾರೆ. ಇದು ಸಾಮ್ರಾಜ್ಯದ ಅಧಿಕೃತ ನೀತಿಯಾಗಿದೆ ಎಂದು ಹೇಳಿದರು.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ರಾಜನು 5 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಬಳಸುತ್ತಿದ್ದರಿಂದ ಹೊಸ ವಾಹನಗಳನ್ನು ಖರೀದಿಸಲಾಗಿದೆ ಎಂದು ಹೇಳಿದರು. ಎಸ್ವಾಟಿನಿಯಲ್ಲಿ 63%ಗೂ ಅಧಿಕ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ.

ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಇದರಿಂದ ದೇಶದ ಬಡತನದ ಮಟ್ಟವು ತಿಳಿಯುತ್ತದೆ. ಹಸಿವು ಹಾಗೂ ರೋಗದ ವಿರುದ್ಧ ಹೋರಾಡಲು ಸಂಪನ್ಮೂಲಗಳು ಬೇಕಾಗುತ್ತವೆ. ಹದಗೆಟ್ಟ ಆರ್ಥಿಕ ಪರಿಸ್ಥಿತಿಗಳಿಂದಾಗಿ ಹಾಗೂ ಸರ್ಕಾರಿ ಸಂಸ್ಥೆಗಳ ಕುಸಿತದಿಂದಾಗಿ ಎಸ್ವಾಟಿನಿ ದೇಶವು ನಾಗರಿಕ ಅಶಾಂತಿಯನ್ನು ಎದುರಿಸುತ್ತಿದೆ ಎಂದು ಹೇಳಲಾಗುತ್ತಿದೆ.

Image Courtesy: Mzilikazi wa AfrikaVerified account/Twitter

Most Read Articles

Kannada
English summary
African king buys 19 rolls royce cars worth rs 175 crore for wives - Read in Kannada
Story first published: Tuesday, November 19, 2019, 13:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X