Just In
Don't Miss!
- Finance
"ಐಡಿಎಫ್ ಸಿ ಫಸ್ಟ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲಿನ ನಗದು ಸಾಲಕ್ಕೆ ಬಡ್ಡಿ ಇಲ್ಲ"
- News
ನಷ್ಟದಲ್ಲಿದ್ದ ನಮ್ಮ ಮೆಟ್ರೋಗೆ ವರವಾದ ವಿದ್ಯಾರ್ಥಿಗಳು
- Sports
ಭಾರತ vs ಆಸ್ಟ್ರೇಲಿಯಾ: 91 ರನ್ ಗಳಿಸಿ ವಿಕೆಟ್ ಒಪ್ಪಿಸಿದ ಶುಬ್ಮನ್ ಗಿಲ್
- Lifestyle
ಕೂದಲು ಬೇಗನೆ ಬೆಳ್ಳಗಾಗುವುದು: ಇದು ನಿಮ್ಮ ದೇಹದ ಕುರಿತು ಏನು ಸೂಚಿಸುತ್ತದೆ?
- Education
Indian Forest Service Recruitment 2021: 70 ಡಿಐಜಿಎಫ್/ಎಐಜಿಎಫ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ಚಿತ್ರೀಕರಣ ವೇಳೆ ಅಸ್ವಸ್ಥ: ನಟಿ ಅಲಿಯಾ ಭಟ್ ಆಸ್ಪತ್ರೆಗೆ ದಾಖಲು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬೆಂಗಳೂರು ಟು ಸ್ಯಾನ್ ಫ್ರಾನ್ಸಿಸ್ಕೋ ನಡುವಿನ ಪ್ರಯಾಣ ಅವಧಿಯನ್ನು ತಗ್ಗಿಸಿದ ಏರ್ ಇಂಡಿಯಾ
ವಿಶ್ವದ ಪ್ರಮುಖ ನಗರಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಸರಳಗೊಳಿಸುತ್ತಿರುವ ವಿಮಾನಯಾನ ಸೇವೆಗಳು ಇದೀಗ ಮತ್ತೊಂದು ಹಂತದತ್ತ ಬೆಳವಣಿಗೆ ಸಾಧಿಸುತ್ತಿದ್ದು, ಬೇಡಿಕೆಯ ಆಧಾರದ ಮೇಲೆ ತಡೆರಹಿತ ವಿಮಾನಯಾನ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ.

ಐಟಿ ಉದ್ಯಮದಲ್ಲಿ ವೇಗವಾಗಿ ಬೆಳೆಯುತ್ತಿರುವ ನಮ್ಮ ಬೆಂಗಳೂರು ಜಾಗತಿಕವಾಗಿ ಗುರುತಿಸಿಕೊಂಡಿದ್ದು, ಉದ್ಯಮ ವ್ಯವಹಾರಗಳಿಗೆ ಪೂರಕವಾಗಿ ವಿಮಾನಯಾನ ಸೇವೆಗಳು ಕೂಡಾ ಪ್ರಮುಖ ಪಾತ್ರವಹಿಸುತ್ತಿವೆ. ವಿಶ್ವದ ಪ್ರಮುಖ ನಗರಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಸರಳಗೊಳಿಸುತ್ತಿರುವ ವಿಮಾನಯಾನ ಸೇವೆಗಳು ತನ್ನದೆ ಪಾಮುಖ್ಯತೆ ಹೊಂದಿದ್ದು, ನಮ್ಮ ಬೆಂಗಳೂರಿನಿಂದ ಮತ್ತೊಂದು ಹೊಸ ವಿಮಾನಯಾನ ಸೌಲಭ್ಯವು ಶೀಘ್ರದಲ್ಲೇ ಚಾಲನೆ ಪಡೆದುಕೊಳ್ಳಲಿದೆ.

ವ್ಯಾಪಾರ, ಉದ್ಯೋಗ ಮತ್ತು ಪ್ರವಾಸ ನಿಮಿತ್ತ ವಿಮಾನಯಾನ ಸೇವೆಗಳಿಗೆ ಅತಿ ಹೆಚ್ಚು ಬೇಡಿಕೆ ಉಂಟಾಗುತ್ತಿದ್ದು, ಈ ನಿಟ್ಟಿನಲ್ಲಿ ಏರ್ ಇಂಡಿಯಾ ಸಂಸ್ಥೆಯು ಬೆಂಗಳೂರಿನಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ನಗರಕ್ಕೆ ತಡೆರಹಿತ ವಿಮಾನಯಾನ ಆರಂಭಿಸಲು ಸಿದ್ದತೆ ನಡೆಸಿದೆ.

ವಿಶ್ವಾದ್ಯಂತ ಈಗಾಗಲೇ ಹಲವು ವಿಮಾನಯಾನ ಸಂಸ್ಥೆಗಳು ಅಮೆರಿಕ ಪ್ರಮುಖ ನಗರಗಳಿಗೆ ಹತ್ತಾರು ತಡೆರಹಿತ ವಿಮಾನಯಾನ ಸೌಲಭ್ಯಗಳನ್ನು ಕಲ್ಪಿಸಿದ್ದು, ಭಾರತದಿಂದ ಇದೇ ಮೊದಲ ಬಾರಿಗೆ ಬೆಂಗಳೂರಿನಿಂದ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋಗೆ ಏರ್ ಇಂಡಿಯಾ ಕಂಪನಿಯು ಹೊಸ ವಿಮಾನಯಾನ ಸೇವೆಯನ್ನು ಆರಂಭಿಸುತ್ತಿದೆ.

ತಡೆಹರಿತ ವಿಮಾನಯಾನ ಸೌಲಭ್ಯದ ಮೂಲಕ 14 ಸಾವಿರ ಕಿ.ಮೀ ಅಂತರವನ್ನು ಕೇವಲ 16 ಗಂಟೆಗಳಲ್ಲಿ ಪೂರ್ಣಗೊಳಿಸುವ ಏರ್ ಇಂಡಿಯಾ ಸಂಸ್ಥೆಯ ಬೋಯಿಂಗ್ 777 200 ಎಲ್ಆರ್ ವಿಮಾನವು ಎರಡು ನಗರಗಳ ನಡುವಿನ ಪ್ರಯಾಣದ ಅವಧಿಯಲ್ಲಿ ಸಾಕಷ್ಟು ಕಡಿತಗೊಳಿಸಲಿದ್ದು, ಮೊದಲ ವಿಮಾನ ಪ್ರಯಾಣವನ್ನು 2021ರ ಜನವರಿ 11ರಿಂದ ಅಧಿಕೃತವಾಗಿ ಹಾರಾಟ ನಡೆಸಲಿದೆ.

ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಿಂದ ಬೆಂಗಳೂರಿಗೆ ನಿಗದಿತ ಅವಧಿಯ ವಿಮಾನಯಾನ ಸೇವೆಗಳು ವಾಣಿಜ್ಯ ವ್ಯವಹಾರಗಳಿಗೆ ಮತ್ತಷ್ಟು ಪೂರಕವಾಗಿದ್ದು, ಕಾರ್ಪೊರೇಟ್ ಉದ್ಯೋಗಿಗಳಿಗೆ ಇದು ಸಾಕಷ್ಟು ಅನುಕೂಲಕವಾಗಲಿದೆ.

ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಹಲವಾರು ಐಟಿ ಬಿಟಿ ಕಂಪನಿಗಳು ಬೆಂಗಳೂರಿನಲ್ಲಿ ನೆಲೆಯೂರಿದ್ದು, ಈ ಹಿಂದೆ ಸ್ಯಾನ್ ಫ್ರಾನ್ಸಿಸ್ಕೋಗೆ ನೇರ ಪ್ರಯಾಣ ಬೆಳೆಸಲು ಬೆಂಗಳೂರಿನಿಂದ ಸಿಂಗಪೂರ್ ಮತ್ತು ಸಿಂಗಪೂರ್‌ನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳುತ್ತಿದ್ದರು.

ಆದರೆ ಪ್ರಯಾಣ ದಟ್ಟಣೆ ಹೆಚ್ಚುತ್ತಿದ್ದಂತೆ ಏರ್ ಇಂಡಿಯಾ ಕಂಪನಿಯು ವಾರಕ್ಕೆ ಎರಡು ಬಾರಿ ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಹೈದ್ರಾಬಾದ್‌ನಿಂದ ಚಿಕಾಗೊಗೆ ಪ್ರತ್ಯೇಕವಾಗಿ ಎರಡು ವಿಮಾನಯಾನ ಸೇವೆಗಳನ್ನು ಆರಂಭಿಸಲು ನಿರ್ಧರಿಸಿದೆ.
MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ಬೆಂಗಳೂರು ಟು ಸ್ಯಾನ್ ಫ್ರಾನ್ಸಿಸ್ಕೋ ನಡುವಿನ ವಿಮಾನಯಾನ ಆರಂಭಕ್ಕಿಂತ ಮುಂಚಿತವಾಗಿ ಹೈದ್ರಾಬಾದ್‌ನಿಂದ ಚಿಕಾಗೊಗೆ 2021ರ ಜನವರಿ 9ರಿಂದ ಅಧಿಕೃತ ಹಾರಾಟ ಆರಂಭವಾಗಲಿದ್ದು, 13,301 ಕಿ.ಮೀ ಅಂತರವನ್ನು ಬೋಯಿಂಗ್ 777 200ಎಲ್ಆರ್‌ನ ಮತ್ತೊಂದು ವಿಮಾನವು ಹಾರಾಟ ನಡೆಸಲಿದೆ.

ಬೋಯಿಂಗ್ 777 200 ಎಲ್ಆರ್ ವಿಮಾನ ಮಾದರಿಯು 238 ಪ್ರಯಾಣಿಕರ ಸಾಮಾರ್ಥ್ಯ ಹೊಂದಿದ್ದು, ಏರ್ ಇಂಡಿಯಾ ಸಂಸ್ಥೆಯು ದೂರದ ಪ್ರಯಾಣಗಳಲ್ಲಿ ಮಾತ್ರವೇ ಬೋಯಿಂಗ್ 777 200 ಎಲ್ಆರ್ ಮಾದರಿಯನ್ನು ಬಳಕೆ ಮಾಡುತ್ತದೆ.
MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

ಫ್ಲೈ-ಬೈ-ವೈರ್ ಎಲೆಕ್ಟ್ರಾನಿಕ್ ನಿಯಂತ್ರಣ ವ್ಯವಸ್ಥೆಯನ್ನು ಹೊಂದಿರುವ ಬೋಯಿಂಗ್ 777 200 ಎಲ್ಆರ್ ವಿಮಾನ ಮಾದರಿಗಳು ಹೆಚ್ಚಿನ ವೇಗದಲ್ಲೂ ಉತ್ತಮ ನಿಯಂತ್ರಣ ಸೌಲಭ್ಯವನ್ನು ಹೊಂದಿದ್ದು, ಡ್ಯುಯಲ್ ಎಂಜಿನ್ ಮೂಲಕ ಪ್ರತಿ ಗಂಟೆಗೆ 892 ಕಿ.ಮೀ ವೇಗದಲ್ಲಿ ಚಲಿಸುತ್ತವೆ.

ಬೋಯಿಂಗ್ 777 200 ಎಲ್ಆರ್ ವಿಮಾನ ಮಾದರಿಗಳು ಅಮೆರಿಕದ ಜನಪ್ರಿಯ ಜನರಲ್ ಎಲೆಕ್ಟ್ರಿಕ್ ಕಂಪನಿಯ ಎಂಜಿನ್ ಸೌಲಭ್ಯವನ್ನು ಹೊಂದಿದ್ದು, ಈ ವಿಮಾನಗಳು 348 ಟನ್ ತೂಕದೊಂದಿದೆ 138 ಟನ್‌ನಷ್ಟು ಇಂಧನ ಟ್ಯಾಂಕ್ ಪಡೆದುಕೊಂಡಿರುತ್ತದೆ.