ಪ್ಲೇನ್ ಲ್ಯಾಂಡಿಂಗ್‍‍ನಲ್ಲಿ ಪವಾಡ ಮಾಡಿದ ಪೈಲಟ್

ಇತ್ತೀಚಿಗೆ ಎಥಿಹಾದ್ ಏರ್‍‍ಬಸ್ ಎ380 ವಿಮಾನದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಈ ವಿಮಾನದ ಪೈಲಟ್ ವಿಮಾನವನ್ನು ವಿಭಿನ್ನವಾಗಿ ಹಾಗೂ ಆಶ್ಚರ್ಯಕರ ರೀತಿಯಲ್ಲಿ ಲ್ಯಾಂಡ್ ಮಾಡುತ್ತಿರುವುದನ್ನು ಕಾಣಬಹುದು.

ಪ್ಲೇನ್ ಲ್ಯಾಂಡಿಂಗ್‍‍ನಲ್ಲಿ ಪವಾಡ ಮಾಡಿದ ಪೈಲಟ್

ಈ ಘಟನೆ ನಡೆದಿರುವುದು ಲಂಡನ್‍‍ನ ಹಿಥ್ರೋ ವಿಮಾನ ನಿಲ್ದಾಣದಲ್ಲಿ. ಏರ್‍‍ಬಸ್ ಎ380 ವಿಮಾನದ ಪೈಲಟ್ ವಿಮಾನವನ್ನು ಲ್ಯಾಂಡ್ ಮಾಡುವಾಗ ಎಡಭಾಗಕ್ಕೆ ಹೆಚ್ಚು ತಿರುಗಿಸಿದ್ದಾನೆ. ಇದರ ಬಗ್ಗೆ ಪ್ಯಾಡಲ್‍‍ಯುವರ್‍ಒನ್‍‍ಕಾನೂ ವರದಿ ಮಾಡಿದೆ.

ಪ್ಲೇನ್ ಲ್ಯಾಂಡಿಂಗ್‍‍ನಲ್ಲಿ ಪವಾಡ ಮಾಡಿದ ಪೈಲಟ್

ಸಾಮಾನ್ಯವಾಗಿ ವಿಮಾನಗಳನ್ನು ಲ್ಯಾಂಡಿಂಗ್ ಮಾಡುವಾಗ ಪೈಲಟ್‍‍ಗಳು ವಿಮಾನಗಳನ್ನು ಸ್ವಲ್ಪ ಪ್ರಮಾಣದಲ್ಲಿ ಬಲಕ್ಕೆ ಅಥವಾ ಎಡಕ್ಕೆ ತಿರುಗಿಸುತ್ತಾರೆ. ಈ ಏರ್‍‍ಬಸ್ ಎ 380 ವಿಮಾನದ ಪೈಲಟ್ ವಿಮಾನವನ್ನು ಉದ್ದೇಶಪೂರ್ವಕವಾಗಿ ತಿರುಗಿಸಿಲ್ಲ.

ಪ್ಲೇನ್ ಲ್ಯಾಂಡಿಂಗ್‍‍ನಲ್ಲಿ ಪವಾಡ ಮಾಡಿದ ಪೈಲಟ್

ಲಂಡನ್‍‍ನಲ್ಲಿ ಈಗ ಡೆನ್ನಿಸ್ ಬಿರುಗಾಳಿಯ ಆರ್ಭಟ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವ ಕಾರಣಕ್ಕೆ ಈ ರೀತಿ ಮಾಡಲಾಗಿದೆ. ಈ ವಿಮಾನಕ್ಕೆ ಯಾವುದೇ ರೀತಿಯ ತೊಂದರೆಯಾಗಿಲ್ಲ.

ಪ್ಲೇನ್ ಲ್ಯಾಂಡಿಂಗ್‍‍ನಲ್ಲಿ ಪವಾಡ ಮಾಡಿದ ಪೈಲಟ್

ಕೊನೆಗೂ ಈ ವಿಮಾನದ ಪೈಲಟ್ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾನೆ. ಎಥಿಹಾದ್‍‍ನಲ್ಲಿರುವ ಬೋಯಿಂಗ್ ಫ್ಲೈಟ್ ಕ್ರ್ಯೂ ಟ್ರೇನಿಂಗ್‍‍ನ ಮ್ಯಾನೇಜರ್ ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆಗೊಳಿಸಿದ್ದಾರೆ.

ಪ್ಲೇನ್ ಲ್ಯಾಂಡಿಂಗ್‍‍ನಲ್ಲಿ ಪವಾಡ ಮಾಡಿದ ಪೈಲಟ್

ಈ ಹೇಳಿಕೆಯಲ್ಲಿ ತೀವ್ರ ಸ್ವರೂಪದ ಬಿರುಗಾಳಿಯ ಮಧ್ಯೆ ಏರ್‍‍ಬಸ್ ಎ380 ವಿಮಾನವು ಲಂಡನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಮಾಡುತ್ತಿರುವ ವೀಡಿಯೊವನ್ನು ಕಾಣಬಹುದು. ಟ್ರೇನಿಂಗ್ ನೀಡುವ ಉದ್ದೇಶವು ಈ ರೀತಿಯ ಘಟನೆಯು ನಡೆಯದಂತೆ ತಡೆಯುವುದಾಗಿದೆ. ಆದರೆ ಸುರಕ್ಷತೆಯ ದೃಷ್ಟಿಯಿಂದ ಈ ರೀತಿಯಾಗಿದೆ ಎಂದು ಹೇಳಿದ್ದಾರೆ.

ಇತ್ತೀಚಿಗೆ ವೈರಲ್ ಆಗುತ್ತಿರುವ ಈ ವೀಡಿಯೊದಲ್ಲಿ, ಪೈಲಟ್‌ನ ಅದ್ಭುತ ಕುಶಲತೆಯನ್ನು ಕಾಣಬಹುದು.ಈ ವೀಡಿಯೊದಲ್ಲಿ, ಸುರಕ್ಷಿತವಾಗಿ ಇಳಿಯುವ ಮೊದಲು ವಿಶ್ವದ ಅತಿದೊಡ್ಡ ವಿಮಾನವು ಗಾಳಿಯಲ್ಲಿ ಹೇಗೆ ಸುಳಿದಾಡುತ್ತಿದೆ ಎಂಬುದನ್ನು ಕಾಣಬಹುದು.

ಪ್ಲೇನ್ ಲ್ಯಾಂಡಿಂಗ್‍‍ನಲ್ಲಿ ಪವಾಡ ಮಾಡಿದ ಪೈಲಟ್

ಸಾಮಾನ್ಯವಾಗಿ ಬಿರುಗಾಳಿಯ ಸಂದರ್ಭಗಳಲ್ಲಿ ಲ್ಯಾಂಡಿಂಗ್‌ಗಳನ್ನು ಮುಂದೂಡಲಾಗುತ್ತದೆ. ವಿಮಾನಗಳು ಹೆಚ್ಚು ತೂಕವನ್ನು ಹೊಂದಿರುತ್ತವೆ. ಆದರೆ ಈ ವಿಮಾನದ ಪೈಲಟ್ ತನ್ನ ಚಾಕಚಾಕ್ಯತೆಯಿಂದ ಹಾಗೂ ಕುಶಲತೆಯಿಂದ ಈ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಿದ್ದಾನೆ.

Most Read Articles

Kannada
English summary
Airbus A380 pulling off an extraordinary landing at Heathrow Airport. Read in Kannada.
Story first published: Thursday, February 27, 2020, 13:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X