ವಿಶ್ವದ ಮೊದಲ ಹೈಡ್ರೋಜನ್ ವಿಮಾನ ಬಿಡುಗಡೆಗೊಳಿಸಲು ಮುಂದಾದ ಏರ್‌ಬಸ್

ವಿಶ್ವದ ಪ್ರಮುಖ ವಿಮಾನಯಾನ ಕಂಪನಿಗಳಲ್ಲಿ ಒಂದಾದ ಏರ್‌ಬಸ್ ಶೀಘ್ರದಲ್ಲೇ ವಿಶ್ವದ ಮೊದಲ ಹೈಡ್ರೋಜನ್ ವಿಮಾನವನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದೆ. ಈ ವಿಮಾನವನ್ನು ಕಮರ್ಷಿಯಲ್ ಬಳಕೆಗಾಗಿ ಮಾತ್ರ ಬಿಡುಗಡೆಗೊಳಿಸಲಾಗುವುದು.

ವಿಶ್ವದ ಮೊದಲ ಹೈಡ್ರೋಜನ್ ವಿಮಾನ ಬಿಡುಗಡೆಗೊಳಿಸಲು ಮುಂದಾದ ಏರ್‌ಬಸ್

ಈ ವಿಮಾನವು 2035ರ ವೇಳೆಗೆ ಕಾರ್ಯನಿರ್ವಹಿಸುವ ನಿರೀಕ್ಷೆಗಳಿವೆ. ಫ್ರೆಂಚ್ ವಿಮಾನ ತಯಾರಕ ಕಂಪನಿಯು ಈ ಮಾಹಿತಿಯನ್ನು ಖಚಿತಪಡಿಸಿದೆ. ಕಂಪನಿಯು ಕಳೆದ ಸೋಮವಾರ ಈ ಮಾಹಿತಿಯನ್ನು ಬಿಡುಗಡೆಗೊಳಿಸಿದೆ. ಪರಿಸರ ಮಾಲಿನ್ಯದಿಂದಾಗಿ ವಿಶ್ವದಾದ್ಯಂತ ದೇಶಗಳು ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳ ಬದಲು ಎಲೆಕ್ಟ್ರಿಕ್ ವಾಹನಗಳ ಬಳಕೆಯತ್ತ ಸಾಗುತ್ತಿವೆ.

ವಿಶ್ವದ ಮೊದಲ ಹೈಡ್ರೋಜನ್ ವಿಮಾನ ಬಿಡುಗಡೆಗೊಳಿಸಲು ಮುಂದಾದ ಏರ್‌ಬಸ್

ಇದರ ಜೊತೆಗೆ ವಾಯು ಮಾಲಿನ್ಯಕ್ಕೆ ಕಾರಣವಾಗುವ ವಾಹನಗಳನ್ನು ತ್ಯಜಿಸುವ ನಿಟ್ಟಿನಲ್ಲಿ ತೊಡಗಿವೆ. ಈ ವಾಹನಗಳ ಬದಲು ಸಿಎನ್‌ಜಿ, ವಿದ್ಯುತ್, ಹೈಡ್ರೋಜನ್ ವಾಹನಗಳ ಬಳಕೆಯನ್ನು ಉತ್ತೇಜಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ವಿಶ್ವದ ಮೊದಲ ಹೈಡ್ರೋಜನ್ ವಿಮಾನ ಬಿಡುಗಡೆಗೊಳಿಸಲು ಮುಂದಾದ ಏರ್‌ಬಸ್

ಇದೇ ವೇಳೆ ಹೈಡ್ರೋಜನ್ ವಿಮಾನವನ್ನು ಬಳಕೆಗೆ ಬಿಡುಗಡೆಗೊಳಿಸಲು ಉದ್ದೇಶಿಸಿರುವುದಾಗಿ ಏರ್‌ಬಸ್ ಘೋಷಿಸಿದೆ. ಈ ಮೂಲಕ ಏರ್‌ಬಸ್ ಹೈಡ್ರೋಜನ್ ಚಾಲಿತ ವಿಮಾನವನ್ನು ಉಡಾವಣೆ ಮಾಡಲಿರುವ ವಿಶ್ವದ ಮೊದಲ ಕಂಪನಿಯಾಗಲಿದೆ.

ವಿಶ್ವದ ಮೊದಲ ಹೈಡ್ರೋಜನ್ ವಿಮಾನ ಬಿಡುಗಡೆಗೊಳಿಸಲು ಮುಂದಾದ ಏರ್‌ಬಸ್

ಹೈಡ್ರೋಜನ್ ಶುದ್ಧ ಇಂಧನವಾಗಿದ್ದು, ಇದರಿಂದ ಪರಿಸರಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಈ ಕಾರಣಕ್ಕೆ ವಾಹನ ತಯಾರಕ ಕಂಪನಿಗಳು ಹೈಡ್ರೋಜನ್ ಚಾಲಿತ ವಾಹನಗಳನ್ನು ತಯಾರಿಸಲು ಮುಂದೆ ಬರುತ್ತಿವೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ವಿಶ್ವದ ಮೊದಲ ಹೈಡ್ರೋಜನ್ ವಿಮಾನ ಬಿಡುಗಡೆಗೊಳಿಸಲು ಮುಂದಾದ ಏರ್‌ಬಸ್

ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಫ್ರಾನ್ಸ್ ಹಾಗೂ ಯುರೋಪಿಯನ್ ರಾಷ್ಟ್ರಗಳು ಹೈಡ್ರೋಜನ್ ಗಾಗಿ ಶತಕೋಟಿ ಯುರೋಗಳನ್ನು ಖರ್ಚು ಮಾಡುತ್ತಿವೆ. ಹೈಡ್ರೋಜನ್ ಪ್ರಸ್ತುತ ಹೆಚ್ಚು ಮಾಲಿನ್ಯಸೂಸುವ ವಾಹನಗಳಿಗೆ ಪರ್ಯಾಯವೆಂದು ಹೇಳಲಾಗಿದೆ. ಹೈಡ್ರೋಜನ್ ವಿಮಾನವನ್ನು ಆರಂಭಿಸಲು ಏರ್‌ಬಸ್ ಹೊಸ ಯೋಜನೆಯನ್ನು ಆರಂಭಿಸಿದೆ.

ವಿಶ್ವದ ಮೊದಲ ಹೈಡ್ರೋಜನ್ ವಿಮಾನ ಬಿಡುಗಡೆಗೊಳಿಸಲು ಮುಂದಾದ ಏರ್‌ಬಸ್

ಏರ್‌ಬಸ್‌ನ ಸಿಇಒ ಗುಯಿಲೌಮ್ ಫೌರಿ, ಲೆ ಪ್ಯಾರಿಸ್ ಪತ್ರಿಕೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಮೊದಲ ಹೈಡ್ರೋಜನ್ ವಿಮಾನವನ್ನು ಉಡಾವಣೆ ಮಾಡುವುದು ನಮ್ಮ ಮಹತ್ವಾಕಾಂಕ್ಷೆಯಾಗಿದೆ. ನಾವು ಅದನ್ನು 2035ರ ವೇಳೆಗೆ ಕಾರ್ಯರೂಪಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ವಿಶ್ವದ ಮೊದಲ ಹೈಡ್ರೋಜನ್ ವಿಮಾನ ಬಿಡುಗಡೆಗೊಳಿಸಲು ಮುಂದಾದ ಏರ್‌ಬಸ್

ಏರ್‌ಬಸ್ ಈಗಾಗಲೇ ಹೈಡ್ರೋಜನ್-ಚಾಲಿತ ಉಪಗ್ರಹ ಹಾಗೂ ರಾಕೆಟ್ ಗಳನ್ನು ಬಳಸುತ್ತಿದೆ. ಇದನ್ನು ಅನುಸರಿಸಿ ಕಮರ್ಷಿಯಲ್ ಬಳಕೆಗಾಗಿ ಹೈಡ್ರೋಜನ್ ವಿಮಾನವನ್ನು ಉಡಾವಣೆ ಮಾಡುವ ಯೋಜನೆಯನ್ನು ಆರಂಭಿಸಿದೆ.

ವಿಶ್ವದ ಮೊದಲ ಹೈಡ್ರೋಜನ್ ವಿಮಾನ ಬಿಡುಗಡೆಗೊಳಿಸಲು ಮುಂದಾದ ಏರ್‌ಬಸ್

ವಿಮಾನವನ್ನು ನಿರ್ಮಿಸಲು ಯಾವುದೇ ವಿಶೇಷ ತಾಂತ್ರಿಕ ನೆರವಿನ ಅಗತ್ಯವಿಲ್ಲವೆಂದು ಕಂಪನಿ ಹೇಳಿದೆ. ಏರ್‌ಬಸ್ ಕಂಪನಿಯು ವಿನ್ಯಾಸ ಹಾಗೂ ಇನ್ನಿತರ ಉತ್ಪಾದನಾ ಕಾರಣಗಳಿಗಾಗಿ ಪ್ರತ್ಯೇಕವಾಗಿ ಇತರ ಉತ್ಪನ್ನಗಳನ್ನು ವಿನ್ಯಾಸಗೊಳಿಸಲು ಹಾಗೂ ಆರಂಭಿಸಲು ಎರಡು ವರ್ಷಗಳು ಬೇಕಾಗುತ್ತದೆ ಎಂದು ಹೇಳಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ವಿಶ್ವದ ಮೊದಲ ಹೈಡ್ರೋಜನ್ ವಿಮಾನ ಬಿಡುಗಡೆಗೊಳಿಸಲು ಮುಂದಾದ ಏರ್‌ಬಸ್

ಆದ್ದರಿಂದ 2028ರ ವರ್ಷದ ನಂತರವೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಫೌರಿ ಹೇಳಿದ್ದಾರೆ. ಇದಕ್ಕೂ ಮುನ್ನ ಏರ್‌ಬಸ್, ಹೈಡ್ರೋಜನ್ ವಿಮಾನಗಳ ಬಗ್ಗೆ ಎಲ್ಲಾ ರೀತಿಯ ಸಂಶೋಧನೆಯಲ್ಲಿ ತೊಡಗಿದೆ.

ವಿಶ್ವದ ಮೊದಲ ಹೈಡ್ರೋಜನ್ ವಿಮಾನ ಬಿಡುಗಡೆಗೊಳಿಸಲು ಮುಂದಾದ ಏರ್‌ಬಸ್

ಎಲ್ಲಾ ಸಂಭಾವ್ಯ ಘಟಕಗಳನ್ನು ರಚಿಸಿದ ನಂತರವೇ ಸಂಪೂರ್ಣ ಹೈಡ್ರೋಜನ್ ವಿಮಾನವನ್ನು ಕಮರ್ಷಿಯಲ್ ಬಳಕೆಗೆ ತರಬೇಕಾಗುತ್ತದೆ. ಫ್ರಾನ್ಸ್ ಸರ್ಕಾರವು ಇಂಗಾಲ ಮುಕ್ತ ವಿಮಾನಗಳನ್ನು ಅಭಿವೃದ್ಧಿಪಡಿಸಲು 1.5 ಬಿಲಿಯನ್ ಯುರೋಗಳನ್ನು ಮೀಸಲಿಟ್ಟಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ವಿಶ್ವದ ಮೊದಲ ಹೈಡ್ರೋಜನ್ ವಿಮಾನ ಬಿಡುಗಡೆಗೊಳಿಸಲು ಮುಂದಾದ ಏರ್‌ಬಸ್

ವಿಮಾನಯಾನ ಕ್ಷೇತ್ರಕ್ಕೆ ಬೆಂಬಲ ನೀಡುವ ಸಲುವಾಗಿ ಸರ್ಕಾರವು ಇಷ್ಟು ಭಾರೀ ಮೊತ್ತವನ್ನು ಮೀಸಲಿಟ್ಟಿದೆ. ಕರೋನಾ ವೈರಸ್‌ನಿಂದ ಉಂಟಾಗಿರುವ ಸಂದಿಗ್ಧತೆಗಳನ್ನು ಎದುರಿಸಲು ಫ್ರಾನ್ಸ್ ಸರ್ಕಾರವು ತೆಗೆದುಕೊಳ್ಳುತ್ತಿರುವ ಕ್ರಮಗಳು ಬೇರೆ ದೇಶಗಳನ್ನು ಅಚ್ಚರಿಪಡಿಸಿವೆ.

ವಿಶ್ವದ ಮೊದಲ ಹೈಡ್ರೋಜನ್ ವಿಮಾನ ಬಿಡುಗಡೆಗೊಳಿಸಲು ಮುಂದಾದ ಏರ್‌ಬಸ್

ಇದರ ಜೊತೆಗೆ ಹೈಡ್ರೋಜನ್ ಸೊಲ್ಯುಷನ್ ಗಳನ್ನು ಅಭಿವೃದ್ಧಿಪಡಿಸಲು ಫ್ರಾನ್ಸ್ ಸರ್ಕಾರವು ಏಳು ಶತಕೋಟಿ ಯುರೋಗಳಷ್ಟು ಹೂಡಿಕೆ ಮಾಡಲು ಚಿಂತನೆ ನಡೆಸಿದೆ. ಫ್ರಾನ್ಸ್ ನ ನೆರೆಯ ದೇಶಗಳಾದ ಜರ್ಮನಿ ಈಗಾಗಲೇ ಒಂಬತ್ತು ಶತಕೋಟಿ ಯೂರೊಗಳನ್ನು ಮೀಸಲಿಟ್ಟಿದೆ.

ಚಿತ್ರ ಕೃಪೆ:ಏರ್‌ಬಸ್

Most Read Articles

Kannada
English summary
Airbus to develop worlds first hydrogen powered commercial plane. Read in Kannada.
Story first published: Wednesday, September 23, 2020, 14:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X