ಗ್ರಾಹಕರಿಗೆ ವಿಮಾನ ಪ್ರಯಾಣದ ಅನುಭವ ನೀಡುತ್ತದೆ ಈ ಏರೋಪ್ಲೇನ್ ರೆಸ್ಟೋರೆಂಟ್

ಜನರಿಗೆ ಜೀವನದಲ್ಲಿ ಒಮ್ಮೆಯಾದರೂ ವಿಮಾನ ಸಂಚರಿಸಬೇಕೆಂಬ ಆಸೆ ಇರುತ್ತದೆ. ಹೀಗಿರುವಾಗ ವಿಮಾನದಲ್ಲಿ ಆರಾಮವಾಗಿ ಕುಳಿತುಕೊಳ್ಳುವ ಅವಕಾಶ ಸಿಕ್ಕರೆ ರೋಮಾಂಚನವಾಗುವುದು ಖಚಿತ. ಗುಜರಾತಿನ ವಡೋದರ ಜನತೆಗೆ ಈಗ ಅಂತಹ ಅವಕಾಶ ಸಿಕ್ಕಿದೆ. ಅಲ್ಲಿ ವಿಮಾನವನ್ನು ರೆಸ್ಟೋರೆಂಟ್ ಆಗಿ ಬದಲಿಸಲಾಗಿದೆ. ಗುಜರಾತ್‌ನಲ್ಲಿ ಇದೇ ಮೊದಲ ಬಾರಿಗೆ ಏರೋಪ್ಲೇನ್ ಮಾದರಿಯ ರೆಸ್ಟೋರೆಂಟ್ ತೆರೆಯಲಾಗಿದೆ.

ವಡೋದರಾದಲ್ಲಿ ತಲೆ ಎತ್ತಿದ ಏರೋಪ್ಲೇನ್ ರೆಸ್ಟೋರೆಂಟ್

ಏರೋಪ್ಲೇನ್ ರೆಸ್ಟೋರೆಂಟ್ ಅಕ್ಟೋಬರ್ 25 ರಂದು ಆರಂಭವಾಗಿದೆ. ಏರೋಪ್ಲೇನ್ ರೆಸ್ಟೋರೆಂಟ್ ವಡೋದರದ ದರ್ಸಾಲಿ ಬೈಪಾಸ್ ಪ್ರದೇಶದಲ್ಲಿ ತಲೆ ಎತ್ತಿದೆ. ಭಾರತವೂ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಈ ಹಿಂದೆ ಹಲವಾರು ಏರೋಪ್ಲೇನ್ ರೆಸ್ಟೋರೆಂಟ್‌ಗಳನ್ನು ತೆರೆಯಲಾಗಿದೆ. ಈಗ ಗುಜರಾತ್‌ನಲ್ಲಿ ಆರಂಭವಾಗಿರುವ ರೆಸ್ಟೋರೆಂಟ್ ಜಗತ್ತಿನ 9 ನೇ ಏರೋಪ್ಲೇನ್ ರೆಸ್ಟೋರೆಂಟ್ ಆಗಿದೆ.

ವಡೋದರಾದಲ್ಲಿ ತಲೆ ಎತ್ತಿದ ಏರೋಪ್ಲೇನ್ ರೆಸ್ಟೋರೆಂಟ್

ಇದು ಭಾರತದ 4ನೇ ಏರೋಪ್ಲೇನ್ ರೆಸ್ಟೋರೆಂಟ್ ಆಗಿದೆ. ಈ ಮೂಲಕ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಏರೋಪ್ಲೇನ್ ರೆಸ್ಟೋರೆಂಟ್‌ಗಳನ್ನು ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಊಟ ಮಾಡಲು ಬಯಸುವವರಿಗೆ ಈ ರೆಸ್ಟೋರೆಂಟ್ ವಿಭಿನ್ನ ಅನುಭವವನ್ನು ನೀಡುತ್ತದೆ. ಈ ರೆಸ್ಟೋರೆಂಟ್ ಸ್ಥಾಪಿಸಲು ಏರ್‌ಬಸ್ 320 ಅನ್ನು ಬೆಂಗಳೂರು ಮೂಲದ ಕಂಪನಿಯಿಂದ ಖರೀದಿಸಲಾಗಿದೆ.

ವಡೋದರಾದಲ್ಲಿ ತಲೆ ಎತ್ತಿದ ಏರೋಪ್ಲೇನ್ ರೆಸ್ಟೋರೆಂಟ್

ವರದಿಗಳ ಪ್ರಕಾರ ರೂ. 1.40 ಕೋಟಿ ನೀಡಿ ಈ ವಿಮಾನವನ್ನು ಖರೀದಿಸಲಾಗಿದೆ. ವಿಮಾನದ ಪ್ರತಿಯೊಂದು ಭಾಗವನ್ನು ವಡೋದರಾಕ್ಕೆ ತಂದು ರೆಸ್ಟೋರೆಂಟ್ ಸ್ಥಾಪಿಸಲಾಗಿದೆ. ಈ ಏರೋಪ್ಲೇನ್ ರೆಸ್ಟೊರೆಂಟ್ ನಿರ್ಮಾಣಕ್ಕೆ ಸುಮಾರು 2 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಹೇಳಲಾಗಿದೆ. ಈ ಏರೋಪ್ಲೇನ್ ರೆಸ್ಟೋರೆಂಟ್‌ನಲ್ಲಿ ಒಟ್ಟು 102 ಜನರು ಕುಳಿತು ಊಟ ಮಾಡಬಹುದು.

ವಡೋದರಾದಲ್ಲಿ ತಲೆ ಎತ್ತಿದ ಏರೋಪ್ಲೇನ್ ರೆಸ್ಟೋರೆಂಟ್

ಇಲ್ಲಿಗೆ ಬಂದವರಿಗೆ ನಿಜವಾದ ವಿಮಾನದಲ್ಲಿ ಸಿಗುವ ಅನುಭವಗಳು ಸಿಗುತ್ತವೆ. ಈ ರೆಸ್ಟೋರೆಂಟ್‌ನ ಸರ್ವರ್‌ಗಳು ಹಾಗೂ ಸಿಬ್ಬಂದಿಗಳು ವಿಮಾನಗಳಲ್ಲಿ ಕೆಲಸ ಮಾಡುವವರಂತೆ ಉಡುಪು ಧರಿಸುತ್ತಾರೆ. ಏರೋಪ್ಲೇನ್ ರೆಸ್ಟೋರೆಂಟ್‌ನಲ್ಲಿ ಸರಣಿ ವಿಮಾನಗಳ ರೀತಿಯಲ್ಲಿ ಪ್ರಕಟಣೆಗಳನ್ನು ಮಾಡಲಾಗುತ್ತದೆ. ಈ ಮೂಲಕ ಈ ರೆಸ್ಟೋರೆಂಟ್ ನಲ್ಲಿ ವಿಮಾನದ ಅನುಭವವನ್ನು ಪಡೆಯಬಹುದು.

ವಡೋದರಾದಲ್ಲಿ ತಲೆ ಎತ್ತಿದ ಏರೋಪ್ಲೇನ್ ರೆಸ್ಟೋರೆಂಟ್

ಈ ಏರೋಪ್ಲೇನ್ ರೆಸ್ಟೋರೆಂಟ್‌ನಲ್ಲಿ ವಿವಿಧ ಬಗೆಯ ಖಾದ್ಯಗಳನ್ನು ನೀಡಲಾಗುತ್ತದೆ. ಇವುಗಳಲ್ಲಿ ಪಂಜಾಬಿ, ಚೈನೀಸ್, ಇಟಾಲಿಯನ್, ಮೆಕ್ಸಿಕನ್ ಹಾಗೂ ಥಾಯ್ ಖಾದ್ಯಗಳು ಸೇರಿವೆ. ಈ ಏರೋಪ್ಲೇನ್ ರೆಸ್ಟೊರೆಂಟ್‌ಗೆ ಬರೋಡದಿಂದ ಸಾಕಷ್ಟು ಮಂದಿ ಆಗಮಿಸುತ್ತಿದ್ದಾರೆ ಎಂದು ವರದಿಯಾಗಿದೆ. ಬರೋಡ ಮಾತ್ರವಲ್ಲದೆ, ಗುಜರಾತ್ ರಾಜ್ಯದ ವಿವಿಧ ಭಾಗಗಳ ಜನರು ಈ ಏರ್‌ಪ್ಲೇನ್ ರೆಸ್ಟೋರೆಂಟ್‌ನಲ್ಲಿ ಊಟ ಮಾಡಲು ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ.

ವಡೋದರಾದಲ್ಲಿ ತಲೆ ಎತ್ತಿದ ಏರೋಪ್ಲೇನ್ ರೆಸ್ಟೋರೆಂಟ್

ಬೋಯಿಂಗ್ ಮತ್ತು ಏರ್‌ಬಸ್ ವಿಶ್ವದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಸೇರಿವೆ. ಏರ್‌ಬಸ್ ತನ್ನ ಪ್ರಸಿದ್ಧ ವಿಮಾನಗಳಲ್ಲಿ ಒಂದನ್ನು ರೆಸ್ಟೋರೆಂಟ್ ಆಗಿಪರಿವರ್ತಿಸಿರುವುದರಿಂದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಏರೋಪ್ಲೇನ್ ರೆಸ್ಟೊರೆಂಟ್ ಗೆ ಒಮ್ಮೆಯಾದರೂ ಹೋಗಬೇಕು ಎಂದು ಸಾಮಾಜಿಕಜಾಲತಾಣಗಳಲ್ಲಿ ಹಲವರು ಹೇಳುತ್ತಿದ್ದಾರೆ.

ವಡೋದರಾದಲ್ಲಿ ತಲೆ ಎತ್ತಿದ ಏರೋಪ್ಲೇನ್ ರೆಸ್ಟೋರೆಂಟ್

ಕರೋನಾ ವೈರಸ್ ಹರಡುವಿಕೆಯ ನಂತರ ಇತರ ಹಲವು ಕ್ಷೇತ್ರಗಳಂತೆ ಹೋಟೆಲ್ ಉದ್ಯಮವು ಸಹ ತೀವ್ರ ಕುಸಿತವನ್ನು ಅನುಭವಿಸಿದೆ. ಅನೇಕರು ಹೋಟೆಲ್‌ಗಳನ್ನು ಮುಚ್ಚಿ ಬೇರೆ ಉದ್ಯೋಗಗಳತ್ತ ಮುಖ ಮಾಡಿದಾರೆ. ಈ ಹಿನ್ನೆಲೆಯಲ್ಲಿ ಈ ಏರೋಪ್ಲೇನ್ ರೆಸ್ಟೋರೆಂಟ್ ಮಾಲೀಕರು ವಿಭಿನ್ನ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಈ ತಂತ್ರವು ಗ್ರಾಹಕರನ್ನು ಆಕರ್ಷಿಸುತ್ತಿದೆ.

ವಡೋದರಾದಲ್ಲಿ ತಲೆ ಎತ್ತಿದ ಏರೋಪ್ಲೇನ್ ರೆಸ್ಟೋರೆಂಟ್

ಕಾರುಗಳಲ್ಲಿ ಇರುವಂತೆಯೇ ವಿಮಾನಗಳ ಮುಂಭಾಗದಲ್ಲಿ ಮಿರರ್ ಗಳಿರುತ್ತವೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇದನ್ನು ವಿಂಡ್‌ಶೀಲ್ಡ್ ಎಂದು ಕರೆಯಲಾಗುತ್ತದೆ. ಈ ವಿಂಡ್ ಶೀಲ್ಡ್ ಮಧ್ಯದಲ್ಲಿ ಪಿಲ್ಲರ್ ನಂತಹ ರಚನೆಯನ್ನು ನೀಡಲಾಗಿರುತ್ತದೆ. ಇದರಲ್ಲಿ ಮೂರು ಚೆಂಡುಗಳನ್ನು ಕಾಣಬಹುದು. ಇದನ್ನು ನೇರವಾಗಿ ಅಥವಾ ಫೋಟೋಗಳಲ್ಲಿ ನೋಡಿರಬಹುದು.

ವಡೋದರಾದಲ್ಲಿ ತಲೆ ಎತ್ತಿದ ಏರೋಪ್ಲೇನ್ ರೆಸ್ಟೋರೆಂಟ್

ಇದರಲ್ಲಿ ಮಧ್ಯದಲ್ಲಿರುವ ಚೆಂಡು ಕೆಂಪಾಗಿದ್ದರೆ ಅದರ ಎರಡು ಬದಿಯಲ್ಲಿ ಎರಡು ಬಿಳಿ ಚೆಂಡುಗಳಿರುತ್ತವೆ. ಇದರಿಂದ ಒಟ್ಟಾರೆಯಾಗಿ ವಿಂಡ್ ಶೀಲ್ಡ್ ಕಂಬದ ಮಧ್ಯದಲ್ಲಿ ಮೂರು ಚೆಂಡುಗಳನ್ನು ನೋಡಬಹುದು. ಇಲ್ಲಿ ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವಿದೆ. ಮಧ್ಯದಲ್ಲಿರುವ ಚೆಂಡು ಹೆಚ್ಚಾಗಿ ಕೆಂಪು ಬಣ್ಣದಲ್ಲಿರುತ್ತದೆ. ಕೆಲವೊಮ್ಮೆ ಕಿತ್ತಳೆ ಬಣ್ಣದ ಚೆಂಡನ್ನು ಮಧ್ಯದಲ್ಲಿ ಇಡಲಾಗುತ್ತದೆ.

ವಡೋದರಾದಲ್ಲಿ ತಲೆ ಎತ್ತಿದ ಏರೋಪ್ಲೇನ್ ರೆಸ್ಟೋರೆಂಟ್

ಆದರೆ ಹೆಚ್ಚಿನ ವಿಮಾನಗಳಲ್ಲಿ ಕೆಂಪು ಚೆಂಡು ಮಧ್ಯದಲ್ಲಿರುತ್ತದೆ. ವಿಮಾನಗಳು ಏಕೆ ಬಿಳಿ ಹಾಗೂ ಕೆಂಪು ಚೆಂಡುಗಳನ್ನು ಹೊಂದಿರುತ್ತವೆ ಎಂಬ ಪ್ರಶ್ನೆ ಉದ್ಭವಿಸಬಹುದು. ಕೆಲವು ಜನರು ಈ ಚೆಂಡುಗಳನ್ನು ಸ್ವಿಚ್ ಎಂದು ಭಾವಿಸುತ್ತಾರೆ. ಈ ಕಾರಣಕ್ಕೆ ಇದು ಪ್ರಕಾಶಮಾನವಾಗಿರುತ್ತದೆ ಎಂದು ನಂಬಲಾಗಿದೆ. ಆದರೆ ಇದು ನಿಜವಲ್ಲ.ಇವು ಕೇವಲ ಚೆಂಡುಗಳು. ಈ ಚಿಕ್ಕ ಚೆಂಡುಗಳನ್ನು ಇಡುವ ಹಿಂದೆ ಒಂದು ದೊಡ್ಡ ಕಾರಣವಿದೆ.

ವಡೋದರಾದಲ್ಲಿ ತಲೆ ಎತ್ತಿದ ಏರೋಪ್ಲೇನ್ ರೆಸ್ಟೋರೆಂಟ್

ಈ ಚೆಂಡುಗಳನ್ನು ಐ ಪೊಸಿಷನ್ ಇಂಡಿಕೇಟರ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಯಾವುದೇ ವಾಹನವಾದರೂ ಕಾರು, ಬಸ್, ಟ್ರಕ್, ಸೀಟುಗಳು ಬಹಳ ಮುಖ್ಯ. ಚಾಲಕ ಸರಿಯಾದ ಸ್ಥಾನದಲ್ಲಿ ಕುಳಿತಿದ್ದರೆ ಮಾತ್ರ ವಾಹನವನ್ನು ಸುರಕ್ಷಿತವಾಗಿ ಹಾಗೂ ಆರಾಮವಾಗಿ ನಿರ್ವಹಿಸಬಹುದು. ವಿಮಾನದ ಪೈಲಟ್‌ಗಳಿಗೆ ಈ ಸೀಟ್ ಬಹಳ ಮುಖ್ಯವಾಗಿರುತ್ತದೆ. ಪೈಲಟ್‌ಗಳು ಸರಿಯಾದ ಸ್ಥಾನವನ್ನು ಕಂಡುಕೊಳ್ಳಲಿ ಎಂಬ ಕಾರಣಕ್ಕೆ ಈ ಚೆಂಡುಗಳನ್ನು ನೀಡಲಾಗುತ್ತದೆ.

ವಡೋದರಾದಲ್ಲಿ ತಲೆ ಎತ್ತಿದ ಏರೋಪ್ಲೇನ್ ರೆಸ್ಟೋರೆಂಟ್

ವಿಮಾನಗಳಲ್ಲಿ ಸೀಟುಗಳನ್ನು ಕಾರುಗಳಂತೆ ಹಿಂದಕ್ಕೆ, ಮುಂದಕ್ಕೆ, ಮೇಲಕ್ಕೆ ಹಾಗೂ ಕೆಳಕ್ಕೆ ಅಡ್ಜಸ್ಟ್ ಮಾಡಬಹುದು. ಮಧ್ಯದಲ್ಲಿರುವ ಕೆಂಪು ಚೆಂಡನ್ನು ನೋಡುವಾಗ ಪೈಲಟ್‌ಗಳು ಸೀಟುಗಳನ್ನು ಹಿಂದಕ್ಕೆ, ಮುಂದಕ್ಕೆ ಅಥವಾ ಕೆಳಕ್ಕೆ ಅಡ್ಜಸ್ಟ್ ಮಾಡುತ್ತಾರೆ. ಕೆಂಪು ಚೆಂಡಿನ ಹಿಂದಿರುವ ಬಿಳಿ ಚೆಂಡು ಕಣ್ಮರೆಯಾಗುವಂತೆ, ಮತ್ತೊಂದು ಬಿಳಿ ಚೆಂಡು ಕೆಂಪು ಚೆಂಡಿಗೆ ಸಮಾನಾಂತರವಾಗಿ ಒಂದೇ ಸಾಲಿನಲ್ಲಿರುವಂತೆ ಅಡ್ಜಸ್ಟ್ ಮಾಡಲಾಗುತ್ತದೆ.ಸೀಟ್ ಅನ್ನು ಗೋಚರಿಸುವಂತೆ ಅಡ್ಜಸ್ಟ್ ಮಾಡಿದರೆ ಸರಿಯಾದ ಸೀಟ್ ಪೊಸಿಷನ್ ಪಡೆಯಬಹುದು. ಇದರಿಂದ ಪೈಲಟ್‌ಗಳಿಗೆ ಸರಿಯಾದ ನೋಟ ಸಿಗುತ್ತದೆ. ಇದರಿಂದ ಪೈಲಟ್‌ಗಳು ಪ್ರೈಮರಿ ಫ್ಲೈಟ್ ಡಿಸ್ ಪ್ಲೇ (ಪಿಎಫ್‌ಡಿ) ಹಾಗೂ ನ್ಯಾವಿಗೇಷನ್ ಡಿಸ್‌ಪ್ಲೇ (ಎನ್‌ಡಿ) ನಂತಹ ಸಾಧನಗಳನ್ನು ಸುಲಭವಾಗಿ ಕಾಣಬಹುದು. ಇದರ ಜೊತೆಗೆ ಹೊರಭಾಗವನ್ನು ಪೈಲಟ್ ಗಳು ಸ್ಪಷ್ಟವಾಗಿ ನೋಡಬಹುದು. ವಿಂಡ್ ಶೀಲ್ಡ್ ಕಂಬದ ಮಧ್ಯದಲ್ಲಿರುವ ಚೆಂಡುಗಳನ್ನು ನೋಡುವಾಗ ಸೀಟ್ ಅನ್ನು ಅಡ್ಜಸ್ಟ್ ಮಾಡಿದರೆ ಸರಿಯಾದ ಸೀಟ್ ಪೊಸಿಷನ್ ಪಡೆಯಬಹುದು. ಇದಕ್ಕಾಗಿಯೇ ವಿಮಾನಗಳಲ್ಲಿ ಬಿಳಿ ಹಾಗೂ ಕೆಂಪು ಚೆಂಡುಗಳನ್ನು ನೀಡಲಾಗುತ್ತದೆ.

Most Read Articles

Kannada
Read more on ವಿಮಾನ plane
English summary
Airplane restaurant started in vadodara details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X