ಈ ದೇಶಗಳಲ್ಲಿ ಕತ್ತಲಾದರೆ ವಿಮಾನ ಸೇವೆ ಇರುವುದಿಲ್ಲ..ಕಾರಣ ಇಲ್ಲಿದೆ !

ಕೊರೊನಾ ವೈರಸ್ ಬಂದ ನಂತರ ಸಾರ್ವಜನಿಕ ಜೀವನದಲ್ಲಿ ಹಲವು ಹೊಸ ಸಂಗತಿಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಇದರಲ್ಲಿ ಕರ್ಫ್ಯೂ ಕೂಡಾ ಒಂದು. ವಿಶ್ವದ ಹಲವು ದೇಶಗಳಲ್ಲಿ ಕೊರೊನಾ ಹೆಚ್ಚಳ ಸಂದರ್ಭದಲ್ಲಿ ಪ್ರಯಾಣದ ಮೇಲೆ ವಿವಿಧ ನಿರ್ಬಂಧಗಳನ್ನು ಹೇರಿದ್ದವು. ರಾತ್ರಿ ವೇಳೆ ಪ್ರಯಾಣಿಸುವುದನ್ನು ನಿಷೇಧಿಸಿ ಕಠಿಣ ಕ್ರಮ ಜಾರಿಗೆ ತಂದಿದ್ದವು.

ಈ ದೇಶಗಳಲ್ಲಿ ಕತ್ತಲಾದರೆ ವಿಮಾನ ಸೇವೆ ಇರುವುದಿಲ್ಲ..ಕಾರಣ ಇಲ್ಲಿದೆ !

ಇವೆಲ್ಲವು ಕೊರೊನಾ ಕಾರಣದಿಂದಾಗಿ ನಿರ್ಬಂಧಗಳನ್ನು ಹೇರಲಾಗಿದೆ ಎಂದರೆ ಒಪ್ಪುವ ವಿಚಾರವೇ ಹೌದು. ಆದರೆ ಕೆಲ ದೇಶಗಳಲ್ಲಿ ಕೊರೊನಾ ಬರುವ ಮುಂಚೆಯಿಂದಲೂ ವಿಮಾನಗಳನ್ನು ರಾತ್ರಿ ವೇಳೆ ನಿಷೇಧಿಸಿ ವಿಮಾನಾಶ್ರಯಗಳನ್ನು ಮುಚ್ಚಲಾಗುತ್ತಿದೆ. ಕೇವಲ ತುರ್ತು ವಿಮಾನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

ಈ ದೇಶಗಳಲ್ಲಿ ಕತ್ತಲಾದರೆ ವಿಮಾನ ಸೇವೆ ಇರುವುದಿಲ್ಲ..ಕಾರಣ ಇಲ್ಲಿದೆ !

ಸಾಮಾನ್ಯವಾಗಿ ರೈಲ್ವೆ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳು ಎಲ್ಲಾ ಸಮಯದಲ್ಲೂ ತಡೆರಹಿತವಾಗಿ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ. ವರ್ಷದ 365 ದಿನಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಕಾರಣ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಿಗೆ ವಿಶ್ರಾಂತಿ ಇರುವುದಿಲ್ಲ. ಆದರೆ ವಿಮಾನ ನಿಲ್ದಾಣಗಳು ಹಾಗಲ್ಲ.

ಈ ದೇಶಗಳಲ್ಲಿ ಕತ್ತಲಾದರೆ ವಿಮಾನ ಸೇವೆ ಇರುವುದಿಲ್ಲ..ಕಾರಣ ಇಲ್ಲಿದೆ !

ವಿಶ್ವದ ಕೆಲವು ವಿಮಾನ ನಿಲ್ದಾಣಗಳು ರಾತ್ರಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಅವುಗಳನ್ನು ರಾತ್ರಿಯಲ್ಲಿ ಮುಚ್ಚಲಾಗುತ್ತದೆ. ಈ ವಿಮಾನ ನಿಲ್ದಾಣಗಳು ಹಗಲಿನಲ್ಲಿ ಮಾತ್ರ ಕಾರ್ಯಾಚರಣೆ ನಡೆಸುತ್ತವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಶಬ್ದ ಮಾಲಿನ್ಯ. ವಿಶೇಷವಾಗಿ ಈ ಸಮಸ್ಯೆ ಎದುರಾಗುವುದು ವಿಮಾನಾಶ್ರಯಗಳಿಗೆ ಹತ್ತಿರವಿದ್ದವರಿಗೆ ಮಾತ್ರ.

ಈ ದೇಶಗಳಲ್ಲಿ ಕತ್ತಲಾದರೆ ವಿಮಾನ ಸೇವೆ ಇರುವುದಿಲ್ಲ..ಕಾರಣ ಇಲ್ಲಿದೆ !

ಯುಎಸ್ಎ, ಸ್ವಿಟ್ಜರ್ಲ್ಯಾಂಡ್, ಜರ್ಮನಿ ಮತ್ತು ಆಸ್ಟ್ರೇಲಿಯಾದಂತಹ ವಿವಿಧ ದೇಶಗಳ ಕೆಲವು ವಿಮಾನ ನಿಲ್ದಾಣಗಳನ್ನು ರಾತ್ರಿಯಲ್ಲಿ ಮುಚ್ಚಲಾಗುತ್ತದೆ. ಈ ವಿಮಾನ ನಿಲ್ದಾಣಗಳಲ್ಲಿ ರಾತ್ರಿ ವೇಳೆ ಯಾವುದೇ ಸೇವೆ ಇರುವುದಿಲ್ಲ. ರಾತ್ರಿ 11 ರಿಂದ ಬೆಳಿಗ್ಗೆ 5ರ ವರೆಗೆ ಕಾರ್ಯನಿರ್ವಹಿಸುವುದಿಲ್ಲ.

ಈ ದೇಶಗಳಲ್ಲಿ ಕತ್ತಲಾದರೆ ವಿಮಾನ ಸೇವೆ ಇರುವುದಿಲ್ಲ..ಕಾರಣ ಇಲ್ಲಿದೆ !

ಕೆಲವೊಮ್ಮೆ ವಿಮಾನ ನಿಲ್ದಾಣಗಳ ಸುತ್ತಮುತ್ತಲ ಪರಿಸರ, ಹವಾಮಾನವನ್ನು ಅವಲಂಬಿಸಿ ರಾತ್ರಿಯಲ್ಲಿ ಮುಚ್ಚುವ ಸಮಯ ಬದಲಾಗುತ್ತದೆ. ಈ ಸಮಯದಲ್ಲಿ ತುರ್ತು ವಿಮಾನಗಳಿಗೆ ಮಾತ್ರ ಅನುಮತಿ ನೀಡಲಾಗುವುದು. ಅಂದರೆ ತಾಂತ್ರಿಕ ಸಮಸ್ಯೆಯಿಂದಾಗಿ ತಕ್ಷಣ ಇಳಿಯಬೇಕಾದ ವಿಮಾನಗಳಿಗೆ ಮಾತ್ರ ಅನುಮತಿ ನೀಡಲಾಗುವುದು. ಇತರ ವಿಮಾನಗಳನ್ನು ಇಳಿಯಲು ಅಥವಾ ಟೇಕ್ ಆಫ್ ಮಾಡಲು ಅನುಮತಿಸಲಾಗುವುದಿಲ್ಲ.

ಈ ದೇಶಗಳಲ್ಲಿ ಕತ್ತಲಾದರೆ ವಿಮಾನ ಸೇವೆ ಇರುವುದಿಲ್ಲ..ಕಾರಣ ಇಲ್ಲಿದೆ !

ವಿಮಾನಗಳು ಟೇಕ್ ಆಫ್ ಆದಾಗ ಹೊರ ಹೊಮ್ಮುವ ಶಬ್ದವು ಭಾರೀ ಪ್ರಮಾಣದಲ್ಲಿರುತ್ತದೆ. ಇದರಿಂದ ವಿಮಾನ ನಿಲ್ದಾಣಗಳ ಬಳಿ ನೆಲೆಸಿರುವ ನಿವಾಸಿಗಳಿಗೆ ಸಮಸ್ಯೆ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ಹಗಲಿನಲ್ಲಾದರೂ ಸ್ವಲ್ಪ ಮಟ್ಟಿಗೆ ನಿವಾರಿಸಬಹುದು. ಆದರೆ ರಾತ್ರಿ ಸಮಯದಲ್ಲಿ ದೊಡ್ಡ ಶಬ್ದದಿಂದಾಗಿ ಜನರಿಗೆ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ.

ಈ ದೇಶಗಳಲ್ಲಿ ಕತ್ತಲಾದರೆ ವಿಮಾನ ಸೇವೆ ಇರುವುದಿಲ್ಲ..ಕಾರಣ ಇಲ್ಲಿದೆ !

ಇದೇ ಕಾರಣಕ್ಕೆ ಹಲವು ದೇಶಗಳ ಕೆಲ ವಿಮಾಶ್ರಯಗಳಿಂದ ಬರುವ ಹೆಚ್ಚಿನ ಶಬ್ದದ ವಿರುದ್ಧ ಸಾರ್ವಜನಿಕರು ಪ್ರತಿಭಟನೆಗಳನ್ನು ಸಹ ಮಾಡಿದ್ದಾರೆ. ಆ ನಂತರವೇ ರಾತ್ರಿ ಸಮಯದಲ್ಲಿ ವಿಮಾನ ನಿಲ್ದಾಣಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ಪರಿಚಯಿಸಲಾಯಿತು. ಇದನ್ನು ಮೊದಲ ಬಾರಿಗೆ 1960ರ ದಶಕದಲ್ಲಿ ಮಾಡಲಾಯಿತು. ಆ ಸಮಯದಲ್ಲಿ ವಿಮಾನಗಳ ಎಂಜಿನ್‌ನಿಂದ ಬರುವ ಶಬ್ದ ಪ್ರಸ್ತುತ ಮಟ್ಟಕ್ಕಿಂತ ಹೆಚ್ಚಾಗಿತ್ತು.

ಈ ದೇಶಗಳಲ್ಲಿ ಕತ್ತಲಾದರೆ ವಿಮಾನ ಸೇವೆ ಇರುವುದಿಲ್ಲ..ಕಾರಣ ಇಲ್ಲಿದೆ !

ಆದರೆ ಈಗ ತಂತ್ರಜ್ಞಾನ ಬೆಳೆದಿರುವುದರಿಂದ ವಿಮಾನದ ಎಂಜಿನ್‌ಗಳು ಮಾಡುವ ಶಬ್ದ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೂ ಹೇಳಿಕೊಳ್ಳುವ ಮಟ್ಟಿಗೆ ಕಡಿಮೆಯಾಗಿಲ್ಲ, ಸಾಕಷ್ಟು ಶಬ್ದವನ್ನು ಉಂಟುಮಾಡುತ್ತಿವೆ.

ಈ ದೇಶಗಳಲ್ಲಿ ಕತ್ತಲಾದರೆ ವಿಮಾನ ಸೇವೆ ಇರುವುದಿಲ್ಲ..ಕಾರಣ ಇಲ್ಲಿದೆ !

ವಿಶ್ವದ ವಿವಿಧ ಭಾಗಗಳಲ್ಲಿ, ವಿಮಾನ ನಿಲ್ದಾಣಗಳಿಂದ ಬರುವ ಶಬ್ದದಿಂದ ರಾತ್ರಿಯಲ್ಲಿ ಮಲಗಲು ಸಾಧ್ಯವಾಗುತ್ತಿಲ್ಲ ಎಂದು ಹಲವರು ಇನ್ನೂ ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ವಾಸ್ತವವಾಗಿ, ಇದು ವಿಮಾನ ನಿಲ್ದಾಣದ ಬಳಿ ವಾಸಿಸುವ ಜನರ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಹೀಗೆ ನಿದ್ದೆ ಕೆಟ್ಟರೆ ಭವಿಷ್ಯದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಬರಬಹುದು.

ಈ ದೇಶಗಳಲ್ಲಿ ಕತ್ತಲಾದರೆ ವಿಮಾನ ಸೇವೆ ಇರುವುದಿಲ್ಲ..ಕಾರಣ ಇಲ್ಲಿದೆ !

ಇದಲ್ಲದೆ, ವಿಮಾನಗಳಿಂದ ಬಿಡುಗಡೆಯಾಗುವ ಹಾನಿಕಾರಕ ಅನಿಲಗಳಿಂದಲೂ ಆರೋಗ್ಯ ಹದಗೆಡುತ್ತದೆ. ವಿಮಾನಗಳಲ್ಲಿ ಶಬ್ದ ಮಾಲಿನ್ಯ ಮಾತ್ರವಲ್ಲ, ವಾಯು ಮಾಲಿನ್ಯವೂ ಉಂಟಾಗುತ್ತದೆ. ಇದನ್ನು ಸ್ವಲ್ಪ ಮಟ್ಟಿಗೆ ನಿಯಂತ್ರಿಸುವ ಸಲುವಾಗಿ ಕೆಲವು ವಿಮಾನ ನಿಲ್ದಾಣಗಳನ್ನು ರಾತ್ರಿಯಲ್ಲಿ ಮುಚ್ಚಲಾಗುತ್ತದೆ.

Most Read Articles

Kannada
Read more on ವಿಮಾನ plane
English summary
Airport night flight curfews detail explanation
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X