ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಮರೆಯಲಾಗದ 10 ಸತ್ಯಗಳು

By Nagaraja

ಭಾರತೀಯ ರಸ್ತೆಗಳ ಅಥವಾ ಕಾರುಗಳ ರಾಜ 'ಅಂಬಾಸಿಡರ್' ನಿರ್ಮಾಣ ಪ್ರಕ್ರಿಯೆ ಸ್ಥಗಿತಗೊಂಡಿರುವುದು ಬಹುತೇಕ ವಾಹನ ಪ್ರೇಮಿಗಳಲ್ಲಿ ಬೇಸರವನ್ನುಂಟು ಮಾಡಿದೆ. ಆಧುನಿಕ ವಾಹನಗಳಿಗೆ ತನ್ನ ಹಾದಿ ಬಿಟ್ಟು ಕೊಟ್ಟಿರುವ ದಶಕಗಳ ಹೀರೊ ಅಂಬಾಸಿಡರ್ ಮುಂದೊಂದು ದಿನ ಮರಳಿ ಬರಳಿ ಎಂಬುದೇ ಬಹುತೇಕರ ಪ್ರಾರ್ಥನೆಯಾಗಿದೆ.

ಆರ್ಥಿಕ ಬಿಕ್ಕಟ್ಟಿನಲ್ಲಿ ಮುಳುಗಿರುವ ಹಿಂದೂಸ್ತಾನ್ ಸಂಸ್ಥೆಯು ತನ್ನ ಐಕಾನಿಕ್ ಅಂಬಾಸಿಡರ್ ನಿರ್ಮಾಣವನ್ನು ಪ್ರಕ್ರಿಯೆಯನ್ನು 2014ರಲ್ಲಿ ತಾತ್ಕಾಲಿಕವಾಗಿ ನಿಲುಗಡೆಗೊಳಿಸಿದೆ. ಬೆಲೆ, ನಿರ್ವಹಣೆ, ನಿರ್ಮಾಣ ಗುಣಮಟ್ಟ, ಆರಾಮದಾಯಕ, ಅನುಕೂಲ ಹೀಗೆ ಒಂದು ಕಾರಿನ ಎಲ್ಲ ವಿಭಾಗದಲ್ಲೂ ಸೈ ಎನಿಸಿಕೊಂಡಿರುವ ಅಂಬಾಸಿಡರ್ ಬಗ್ಗೆ ಮರೆಯಲಾಗದ 10 ಸತ್ಯಗಳನ್ನು ನಾವಿಲ್ಲಿ ಬಹಿರಂಗಪಡಿಸಲಿದ್ದೇವೆ. ಇದಕ್ಕಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಮರೆಯಲಾಗದ 10 ಸತ್ಯಗಳು

ಬ್ರಿಟನ್‌ನ ಮೋರಿಸ್ ಆಕ್ಸ್‌ಫರ್ಡ್ 3 ಕಾರಿನ ಮೂಲ ವಿನ್ಯಾಸದಿಂದ ನಿರ್ಮಾಣಗೊಂಡಿರುವ ಅಂಬಾಸಿಡರ್ 1957ರ ಇಸವಿಯಿಂದಲೇ ದೇಶದಲ್ಲಿ ಮಾರಾಟದಲ್ಲಿದೆ. ಅಲ್ಲದೆ ಕಳೆದ ಹಲವಾರು ವರ್ಷಗಳಲ್ಲಿ ಅತ್ಯಂತ ವಿಶ್ವಾಸಾರ್ಹ ಕಾರೆಂದು ಗುರುತಿಸಿಕೊಂಡಿತ್ತು.

ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಮರೆಯಲಾಗದ 10 ಸತ್ಯಗಳು

ಹಿಂದುಸ್ತಾನ್ ಮೋಟರ್ಸ್ ಅದರ ಜೋಡಣಾ ಕಾರ್ಖಾನೆಯನ್ನು ಗುಜರಾತ್ ನಲ್ಲಿರುವ ಪೋರ್ಟ್ ಓಕಾ ದಿಂದ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ಉತ್ತರಪಾರಾಕ್ಕೆ 1948 ರಲ್ಲಿ ಬದಲಾಯಿಸಿತು. ಅಲ್ಲದೇ ಮೋಟಾರು ಕಾರಿನ ವಿಭಾಗದಲ್ಲಿ ಇದರ ಉತ್ಪಾದನಾ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಾಯಿತು.

ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಮರೆಯಲಾಗದ 10 ಸತ್ಯಗಳು

ಬಿರ್ಲಾ, ಮೋರಿಸ್ ಆಕ್ಸ್ ಫರ್ಡ್ ಸೀರಿಸ್ II ರ (ಹಿಂದುಸ್ತಾನ್ ಲ್ಯಾಂಡ್ ಮಾಸ್ಟರ್ ) ಮಾದರಿಯಲ್ಲಿ ತಯಾರಿಸಲಾಗಿದ್ದ ಹಳೆಯ ಹಿಂದುಸ್ತಾನ್ ಮಾದರಿಯನ್ನು ಬದಲಾಯಿಸಬೇಕೆಂದಾಗ, ಅನಂತರದ ಹೊಸ ಮೋರಿಸ್ ಆಕ್ಸ್ ಫರ್ಡ್ ಸೀರಿಸ್ III ಅನ್ನು ಪರಿಚಯಿಲಾಗಿತ್ತು.

ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಮರೆಯಲಾಗದ 10 ಸತ್ಯಗಳು

ಮೋರಿಸ್ ಆಕ್ಸ್ ಫರ್ಡ್ ಸರಣಿ II ರ ಮಾದರಿಯನ್ನು ಭಾರತದಲ್ಲಿ ತಯಾರಿಸಲು 1954 ರಲ್ಲಿ ಅನುಮತಿ ದೊರೆಯಿತು. ಅಲ್ಲದೆ ಇಂಗ್ಲೆಂಡ್ ನಲ್ಲಿ ಈ ಕಾರನ್ನು ಪ್ರಥಮ ಬಾರಿಗೆ ನಿರ್ಮಿಸಿದ ಮೂರು ವರ್ಷಗಳ ನಂತರ, ಇದನ್ನು ಪಶ್ಚಿಮ ಬಂಗಾಳದ ಉತ್ತರಪಾರದಲ್ಲಿ ನಿರ್ಮಿಸಲಾಯಿತು.

ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಮರೆಯಲಾಗದ 10 ಸತ್ಯಗಳು

ಅಂಬಾಸಿಡರ್ ದೇಶದ ಮೊದಲ ಡೀಸೆಲ್ ಕಾರಾಗಿದ್ದು, 1489 ಸಿಸಿ, ಬಿಎಂಸಿ ಡೀಸೆಲ್ ಎಂಜಿನ್ ನಿಯಂತ್ರಿಸ್ಪಟ್ಟಿತ್ತು. ಬಳಿಕ 1.5 ಲೀಟರ್ ಬದಲು 1900ರ ಪೂರ್ವಾರ್ಧದಲ್ಲಿ ಇಸುಝು 1.8 ಲೀಟರ್ ಬಳಸಲಾಯಿತು. ತದಾ ಬಳಿಕ 1.8 ಲೀಟರ್ (75 ಬಿಎಚ್ ಪಿ) ಎಂಪಿಎಫ್ ಐ ಪೆಟ್ರೋಲ್ ಹಾಗೂ ಇಸುಝು 2.0 ಲೀಟರ್ (50 ಬಿಎಚ್ ಪಿ) ಡೀಸೆಲ್ ಎಂಜಿನ್ ಗಳು ಜೋಡಣೆಯಾಗಿತ್ತು.

ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಮರೆಯಲಾಗದ 10 ಸತ್ಯಗಳು

ರಾಜಕಾರಣಿ ಅಧಿಕಾರಿಗಳು ಹಾಗೂ ಗಣ್ಯ ವ್ಯಕ್ತಿಗಳ ನೆಚ್ಚಿನ ಕಾರೆನಿಸಿಕೊಂಡಿರುವ ಅಂಬಾಸಿಡರ್ ಮಾರಾಟದ ಶೇಕಡಾ 16ರಷ್ಟು ಆದಾಯ ಸರಕಾರದಿಂದಲೇ ಬರುತ್ತಿದ್ದವು.

ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಮರೆಯಲಾಗದ 10 ಸತ್ಯಗಳು

2013ರಲ್ಲಿ ಫೋಕ್ಸ್ ವ್ಯಾಗನ್ ಬೀಟ್ಲ್, ರಷ್ಯಾ ಲಿಮೊಸಿನ್ ಹಾಗೂ ಬ್ಲ್ಯಾಕ್ ಲಂಡನ್ ಕ್ಲಾಬ್ ಗಳನ್ನು ಹಿಂದಿಕ್ಕಿದ ಹಿಂದೂಸ್ತಾನ್, 2013ರಲ್ಲಿ ವಿಶ್ವದ ಅತ್ಯುತ್ತಮ ಟ್ಯಾಕ್ಸಿ ಪ್ರಶಸ್ತಿಗೆ ಪಾತ್ರವಾಗಿತ್ತು.

ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಮರೆಯಲಾಗದ 10 ಸತ್ಯಗಳು

ದೃಢವಾದ ನಿರ್ಮಾಣ ಗುಣಮಟ್ಟತೆಯನ್ನು ಕಾಯ್ದುಕೊಂಡಿರುವ ಅಂಬಾಸಿಡರ್ ಈಗಲೂ ಅತ್ಯಂತ ಸುರಕ್ಷಿತ ಕಾರೆನಿಸಿಕೊಂಡಿದೆ. ಇನ್ನು ಕಾರಿನೊಳಗೆ ಹೆಚ್ಚು ಸ್ಥಳಾವಕಾಶ ಕಲ್ಪಿಸಿದ್ದು, ಆರಾಮ ಹಾಗೂ ಹೆಚ್ಚು ಅನುಕೂಲದ ಪಯಣವನ್ನು ಖಾತ್ರಿಪಡಿಸುತ್ತದೆ.

ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಮರೆಯಲಾಗದ 10 ಸತ್ಯಗಳು

50 ವರ್ಷಕ್ಕೂ ಹೆಚ್ಚು ಕಾಲ ಭಾರತೀಯ ರಸ್ತೆಗಳಲ್ಲಿ ರಾರಾಜಿಸಿರುವ ಅಂಬಾಸಿಡರ್, ದೇಶದ ಅತ್ಯಂತ ಜನಪ್ರಿಯ ಕಾರಾಗಿದೆ. ಕಾಲ ಕಾಲಕ್ಕೆ ತನ್ನ ವಿನ್ಯಾಸದಲ್ಲಿ ಬದಲಾವಣೆ ಪಡೆದುಕೊಳ್ಳುತ್ತಿದ್ದ ಅಂಬಾಸಿಡರ್, 1957ರಲ್ಲಿ ಮಾರ್ಕ್ I, 1962ರಲ್ಲಿ ಮಾರ್ಕ್-II, 1977ರಲ್ಲಿ ಮಾರ್ಕ್- III, 1979ರಲ್ಲಿ ಮಾರ್ಕ್ IV, 1990ರಲ್ಲಿ ಹೆಚ್ಚು ಪ್ರೀಮಿಯಂ ಸೌಲಭ್ಯಗಳುಳ್ಳು ಅಂಬಾಸಿಡರ್ ನೋವಾ, 1992ರಲ್ಲಿ ಅಂಬಾಸಿಡರ್ 1800 ಐಎಸ್ ಝಡ್ ವರ್ಷಗಳನ್ನು ಕಂಡಿತ್ತು.

ಭಾರತೀಯ ರಸ್ತೆಗಳ ರಾಜ 'ಅಂಬಾಸಿಡರ್' ಮರೆಯಲಾಗದ 10 ಸತ್ಯಗಳು

ಆಧುನಿಕ ಕಾಲಘಟ್ಟದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೆಚ್ಚು ಪರಿಷ್ಕೃತ ಅಂಬಾಸಿಡರ್ ಕ್ಲಾಸಿಕ್ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿತ್ತು. 2003ರಲ್ಲಿ ಇದು ಅಂಬಾಸಿಡರ್ ಗ್ರಾಂಡ್, 2004 ಅವಿಗೊ, 2013ರಲ್ಲಿ ಅಂಬಾಸಿಡರ್ ಎನ್ ಕೋರ್ ಪರಿಚಯವಾಗಿತ್ತು. ಇದಲ್ಲದೆ ವಿಸೃತ ಆವೃತ್ತಿ ಹಾಗೂ ದಿಲೀಪ್ ಛಾಬ್ರಿಯಾ ಅವರ ಕಸ್ಟಮೈಸ್ಡ್ ವರ್ಷನ್ ರೂಪವನ್ನು ಕಂಡಿತ್ತು.

Most Read Articles

Kannada
English summary
All you want to know about Hindustan Ambassador
Story first published: Wednesday, June 10, 2015, 12:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X