ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಒಂದು ದೇಶದ ಆರ್ಥಿಕತೆಯ ಅಭಿವೃದ್ದಿಯು ಆ ರಾಷ್ಟ್ರದ ಸಾರಿಗೆ ಸಂಪರ್ಕ ಮೇಲೆ ಅವಂಬಲನೆಯಾಗಿರುತ್ತದೆ ಎಂದರೆ ತಪ್ಪಾಗುವುದಿಲ್ಲ. ಇದೇ ಕಾರಣಕ್ಕೆ ಸಾರಿಗೆ ಸಂಪರ್ಕವನ್ನು ಬಲಪಡಿಸಲು ವಿಶ್ವದ ಪ್ರಮುಖ ರಾಷ್ಟ್ರಗಳು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದ್ದು, ಭಾರತವು ಕೂಡಾ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದಲ್ಲಿ ಮುಂಚೂಣಿ ಸಾಧಿಸುತ್ತಿದೆ.

ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಅತ್ಯುತ್ತಮ ರಾಷ್ಟ್ರೀಯ ಹೆದ್ದಾರಿಗಳ ಮೂಲಕ ಸಾರಿಗೆ ಸಂಪರ್ಕವನ್ನು ಸರಳಗೊಳಿಸಿ ಆರ್ಥಿಕತೆಗೆ ಉತ್ತೇಜನ ನೀಡಲಾಗುತ್ತಿದ್ದು, ಸ್ವತಂತ್ರ ಭಾರತದ ನಂತರ ಅಂತರ್‌ರಾಜ್ಯ ಸಂಪರ್ಕಕ್ಕಾಗಿ ಹಲವಾರು ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಯ್ತು.

ಕೇಂದ್ರ ಸರ್ಕಾರವು ಸದ್ಯ ಹೊಸ ರಾಷ್ಟ್ರೀಯ ಹೆದ್ದಾರಿ

ಇತ್ತೀಚೆಗೆ ಕಳೆದ ಒಂದು ದಶಕ ಅವಧಿಯಲ್ಲಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ, ನಿರ್ವಹಣೆಯಲ್ಲಿ ಹಲವಾರು ಬದಲಾವಣೆಗಳನ್ನು ಪರಿಚಯಿಸಲಾಗಿದೆ.

ಅತ್ಯುತ್ತಮ ರಾಷ್ಟ್ರೀಯ ಹೆದ್ದಾರಿಗಳ

ಈ ಮೂಲಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗುತ್ತಿದ್ದು, ಸಾರಿಗೆ ಸಂಪರ್ಕದಲ್ಲಿ ಹೊಸ ಕ್ರಾಂತಿಗೆ ಕಾರಣವಾಗುತ್ತಿದೆ.

ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಕೇಂದ್ರ ಸರ್ಕಾರವು ಸದ್ಯ ಹೊಸ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸಲು ಹಾಗೂ ಅಸ್ತಿತ್ವದಲ್ಲಿರುವ ರಸ್ತೆಗಳನ್ನು ಮೇಲ್ದರ್ಜೆಗೇರಿಸಲು ಉತ್ಸುಕವಾಗಿದ್ದು, ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವಲ್ಲಿ ದಿಟ್ಟ ಹೆಜ್ಜೆಯನ್ನಿಡುತ್ತಿದೆ.

ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಭಾರತದಲ್ಲಿ ಸದ್ಯ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಹೆದ್ದಾರಿ 44 ಮಾರ್ಗವು ದೇಶದ ಅತಿ ಉದ್ದದ ಹೆದ್ದಾರಿ ಎಂಬ ಹೆಗ್ಗಳಿಕೆ ಪಡೆದುಕೊಂಡಿದ್ದು, ಇದು ಉತ್ತರದ ತುದಿಯಿಂದ ಮತ್ತು ದಕ್ಷಿಣದ ತುದಿಯಲ್ಲಿರುವ ಪ್ರಮುಖ ಹೆದ್ದಾರಿಗಳನ್ನು ಸಂಪರ್ಕಿಸುವ ಅತಿ ಉದ್ದದ ಹೆದ್ದಾರಿಯಾಗಿ ಗುರುತಿಸಿಕೊಂಡಿದೆ.

ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ದೇಶದ ಪ್ರಮುಖ ಏಳು ರಾಷ್ಟ್ರೀಯ ಹೆದ್ದಾರಿಗಳನ್ನು (ಕೆಲವು ಸಂಪೂರ್ಣ ಮತ್ತು ಕೆಲವು ಭಾಗಶಃ) ಸಂಯೋಜಿಸುವ ಮೂಲಕ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿಯನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರವು ನಿರ್ವಹಣೆಯನ್ನು ಸರಳಗೊಳಿಸಿದ್ದು, ಕೈಗಾರಿಕಾ ಕಾರಿಡಾರ್‌ಗಳನ್ನು ಉತ್ತೇಜಿಸಲು ಈ ಬೃಹತ್ ಯೋಜನೆಗೆ ಚಾಲನೆ ನೀಡಲಾಯ್ತು.

ಅತ್ಯುತ್ತಮ ರಾಷ್ಟ್ರೀಯ ಹೆದ್ದಾರಿಗಳ

ಎನ್‌ಹೆಚ್ 1ಎ, ಎನ್‌ಹೆಚ್ 1, ಎನ್‌ಹೆಚ್ 2, ಎನ್‌ಹೆಚ್ 3, ಎನ್‌ಹೆಚ್ 75 ಮತ್ತು ಎನ್‌‌ಹೆಚ್ 26 ಮಾರ್ಗಗಳನ್ನು ಸಂಯೋಜಿಸಿ ಎನ್‌ಹೆಚ್ 7 ಅಥವಾ ಎನ್‌ಹೆಚ್ 44 ಮಾರ್ಗವನ್ನು ಅಭಿವೃದ್ದಿಪಡಿಸಲಾಗಿದೆ.

ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ರಾಷ್ಟ್ರೀಯ ಹೆದ್ದಾರಿ 44ರ ಮಾರ್ಗವು ಭಾರತದ ಉತ್ತರ ಮತ್ತು ದಕ್ಷಿಣದ ಕಾರಿಡಾರ್‌ಗಳನ್ನು ಸಂಪರ್ಕಿಸುವ ಮೂಲಕ ಒಟ್ಟು 3745 ಕಿ.ಮೀ ದೂರ ಹೊಂದಿದ್ದು, ಈ ಮಾರ್ಗವು ಸರಕು ಸಾಗಾಣಿಕೆಯಲ್ಲಿ ಮಹತ್ವದ ಪಾತ್ರವಹಿಸುತ್ತಿದೆ.

ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಜಮ್ಮು ಮತ್ತು ಕಾಶ್ಮೀರದಿಂದ ಆರಂಭವಾಗಿ ದೇಶದ ಅತಿ ಉದ್ದದ ಹೆದ್ದಾರಿಯು ಪಂಜಾಬ್, ಹರಿಯಾಣ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ ಮತ್ತು ತಮಿಳುನಾಡು ಸೇರಿದಂತೆ 11 ರಾಜ್ಯಗಳಲ್ಲಿ ಹಾಯ್ದುಹೋಗುತ್ತದೆ.

MOST READ: ವಿಮಾನಗಳಲ್ಲಿ ಬಿಳಿ ಬಣ್ಣವನ್ನೇ ಬಳಕೆ ಮಾಡುವುದರ ಹಿಂದಿನ ವೈಜ್ಞಾನಿಕ ಕಾರಣವೇನು?

ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ದೇಶದ ಪ್ರಮುಖ ನಗರಗಳಾದ ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಜಲಂಧರ್, ಲುಧಿಯಾನ, ಪಾಣಿಪತ್, ದೆಹಲಿ, ಫರಿದಾಬಾದ್, ಮಥುರಾ, ಆಗ್ರಾ, ಗ್ವಾಲಿಯರ್, ನಾಗ್ಪುರ, ಹೈದರಾಬಾದ್, ಕರ್ನೂಲ್, ಅನಂತಪುರ, ಬೆಂಗಳೂರು, ನಮಕ್ಕಲ್, ದಿಂಡಿಗಲ್, ಮಧುರೈ, ತಿರುನೆಲ್ವೇಲಿ, ಕನ್ಯಾಕುಮಾರಿಗೆ ಸಂಪರ್ಕಿಸುತ್ತದೆ.

ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಕರ್ನಾಟಕ ಮತ್ತು ತಮಿಳುನಾಡನ್ನು ಸಂಪರ್ಕಿಸುವ ಬೆಂಗಳೂರು-ಹೊಸೂರು ರಸ್ತೆ ಕೂಡಾ ರಾಷ್ಟ್ರೀಯ ಹೆದ್ದಾರಿ 44ರ ಒಂದು ಭಾಗವಾಗಿದೆ.

MOST READ: ಹೈವೇನಲ್ಲಿ ಡ್ರೈವಿಂಗ್ ಮಾಡಲು ವಾಹನ ಸವಾರರಿಗೆ 11 ಬಹುಮೂಲ್ಯ ಟಿಪ್ಸ್

ಅತ್ಯುತ್ತಮ ರಾಷ್ಟ್ರೀಯ ಹೆದ್ದಾರಿ

ಹೊಸರಿಗೆ ಸಾಕಷ್ಟು ಹತ್ತಿರದಲ್ಲಿರುವ ಅತಿ ಉದ್ದದ ಹೆದ್ದಾರಿ ಪರಿಣಾಮವೇ ಇಂದು ಹೊಸೂರು ಕೈಗಾರಿಕೆಗಳ ಸ್ಥಾಪನೆಯಲ್ಲಿ ದೇಶದ ಪ್ರಮುಖ ನಗರಗಳಿಗೆ ಸೆಡ್ಡು ಹೊಡೆಯುತ್ತಿದೆ.

ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಕರ್ನಾಟಕದಲ್ಲಿ ವಿವಿಧ ರಾಷ್ಟ್ರೀಯ ಹೆದ್ದಾರಿಗಳ ಕಾರ್ಯನಿರ್ವಹಣೆಯ ನಡುವೆಯೂ 125 ಕಿ.ಮೀ ಮಾರ್ಗವನ್ನು ಹಂಚಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಹಲವಾರು ಕೈಗಾರಿಕಾ ಕಾರಿಡಾರ್‌ಗಳು ಅಭಿವೃದ್ದಿಗೊಂಡಿದ್ದು, ಪ್ರವಾಸೋದ್ಯಮ ಅಭಿವೃದ್ದಿ ಮಹತ್ವದ ಪಾತ್ರವಹಿಸುತ್ತಿವೆ.

ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಇನ್ನು ಯಾವುದೇ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಅಲ್ಲಿನ ರಾಷ್ಟ್ರೀಯ ಹೆದ್ದಾರಿಗಳ ಪಾತ್ರ ಪ್ರಮುಖವಾಗಿರುತ್ತದೆ. ಸರಕು ವಾಹನಗಳ ತ್ವರಿತ ಚಲನೆಗೆ ಈ ಹೆದ್ದಾರಿಗಳು ನೆರವಾಗುತ್ತವೆ. ಈ ಕಾರಣಕ್ಕೆ ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಿಸುವ ಬಗ್ಗೆ ಕೇಂದ್ರ ಸರ್ಕಾರವು ದಿಟ್ಟ ಹೆಜ್ಜೆಯನ್ನಿಡುತ್ತಿದೆ.

ದೇಶದ ಅತಿ ಉದ್ದದ ರಾಷ್ಟ್ರೀಯ ಹೆದ್ದಾರಿ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿಗಳಿವು!

ಕೇಂದ್ರ ಸರ್ಕಾರವು ಹೆದ್ದಾರಿ ನಿರ್ಮಾಣ ಕಾರ್ಯಗಳನ್ನು ವೇಗಗೊಳಿಸುವುದರ ಜೊತೆಗೆ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅಪಘಾತಗಳನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದ್ದು, ಟೋಲ್ ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆಯೊಂದಿಗೆ ವಾಹನಗಳ ಚಲನೆಯನ್ನು ವೇಗಗೊಳಿಸಲಾಗುತ್ತಿದೆ.

Most Read Articles

Kannada
English summary
Amazing Facts About India's Longest Highway. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X