ಕಾರುಗಳಿಗಾಗಿ ವಿಶಿಷ್ಟ ಡ್ಯಾಶ್ ಕ್ಯಾಮರಾ ಬಿಡುಗಡೆಗೊಳಿಸಲಿದೆ ಅಮೆಜಾನ್ ಒಡೆತನದ ಕಂಪನಿ

ಜನಪ್ರಿಯ ಇ ಕಾಮರ್ಸ್ ಕಂಪನಿಯಾದ ಅಮೆಜಾನ್ ವಾಹನಗಳಿಗಾಗಿ ಕ್ಯಾಮೆರಾಗಳನ್ನು ತಯಾರಿಸಿದೆ ಎಂದು ವರದಿಯಾಗಿದೆ. ಅಮೆಜಾನ್ ಕಂಪನಿಯು ಸ್ವಾಧೀನಪಡಿಸಿಕೊಂಡ ಹಲವು ಕಂಪನಿಗಳಲ್ಲಿ ರಿಂಗ್-ಎಂ ಕೂಡ ಸೇರಿದೆ. ಈ ಕಂಪನಿ ಎಲೆಕ್ಟ್ರಿಕ್ ವಸ್ತುಗಳನ್ನು ಉತ್ಪಾದಿಸುತ್ತದೆ.

ಕಾರುಗಳಿಗಾಗಿ ವಿಶಿಷ್ಟ ಡ್ಯಾಶ್ ಕ್ಯಾಮರಾ ಬಿಡುಗಡೆಗೊಳಿಸಲಿದೆ ಅಮೆಜಾನ್ ಒಡೆತನದ ಕಂಪನಿ

ಕಂಪನಿಯು ಈಗ ವಾಹನ ಸವಾರರಿಗಾಗಿ ಕ್ಯಾಮೆರಾವನ್ನು ಪರಿಚಯಿಸಿದೆ. ಇದು ಡ್ಯಾಶ್ ಕ್ಯಾಮೆರಾವಾಗಿದ್ದು, ಕಾರುಗಳ ಒಳಗೆ ಅಳವಡಿಸಬಹುದಾದ ಸಣ್ಣ ರೀತಿಯ ವಿಶಿಷ್ಟ ಕ್ಯಾಮೆರಾ ಆಗಿದೆ. ಅಮೆಜಾನ್‌ನ ವರ್ಚುವಲ್ ಅಸಿಸ್ಟೆಂಟ್ ಅಲೆಕ್ಸಾ ತಂತ್ರಜ್ಞಾನವನ್ನು ಈ ಕ್ಯಾಮೆರಾದಲ್ಲಿ ವಿಶೇಷ ಫೀಚರ್ ಆಗಿ ಸೇರಿಸಲಾಗಿದೆ.

ಕಾರುಗಳಿಗಾಗಿ ವಿಶಿಷ್ಟ ಡ್ಯಾಶ್ ಕ್ಯಾಮರಾ ಬಿಡುಗಡೆಗೊಳಿಸಲಿದೆ ಅಮೆಜಾನ್ ಒಡೆತನದ ಕಂಪನಿ

ಅಲೆಕ್ಸಾದಂತೆ ಈ ಕ್ಯಾಮೆರಾವನ್ನು ವಾಯ್ಸ್ ಕಮ್ಯಾಂಡ್ ಮೂಲಕ ನಿಯಂತ್ರಿಸಬಹುದು ಎಂದು ತಿಳಿದುಬಂದಿದೆ. ವಿಷುಯಲ್ ರೆಕಾರ್ಡಿಂಗ್ ಹಾಗೂ ವಿಷುಯಲ್ ರೆಕಾರ್ಡಿಂಗ್ ರದ್ದತಿಯನ್ನು ವಾಯ್ಸ್ ಕಮ್ಯಾಂಡ್ ಮೂಲಕ ತಕ್ಷಣವೇ ಮಾಡಬಹುದು.

ಕಾರುಗಳಿಗಾಗಿ ವಿಶಿಷ್ಟ ಡ್ಯಾಶ್ ಕ್ಯಾಮರಾ ಬಿಡುಗಡೆಗೊಳಿಸಲಿದೆ ಅಮೆಜಾನ್ ಒಡೆತನದ ಕಂಪನಿ

ಕೆಲವು ದಿನಗಳ ಹಿಂದೆ ಅಮೆಜಾನ್ ಕಂಪನಿಯು ಶೀಘ್ರದಲ್ಲೇ ಕಾರುಗಳಿಗಾಗಿ ಕ್ಯಾಮೆರಾವನ್ನು ಪರಿಚಯಿಸುವುದಾಗಿ ತಿಳಿಸಿತ್ತು. ಈ ಕ್ಯಾಮರಾ ಸೆಪ್ಟೆಂಬರ್‌ನಲ್ಲಿ ಮಾರಾಟಕ್ಕೆ ಬರಲಿದೆ ಎಂದು ಹೇಳಲಾಗಿತ್ತು. ಈ ಕ್ಯಾಮರಾದಲ್ಲಿ ಕಾರಿನ ಒಳಗೆ ಹಾಗೂ ಹೊರಗೆ ರೆಕಾರ್ಡ್ ಮಾಡುವ ಸೌಲಭ್ಯ ನೀಡಲಾಗಿದೆ ಎಂದು ಕಂಪನಿ ಹೇಳಿದೆ.

ಕಾರುಗಳಿಗಾಗಿ ವಿಶಿಷ್ಟ ಡ್ಯಾಶ್ ಕ್ಯಾಮರಾ ಬಿಡುಗಡೆಗೊಳಿಸಲಿದೆ ಅಮೆಜಾನ್ ಒಡೆತನದ ಕಂಪನಿ

ಈ ಕ್ಯಾಮರಾ ಬೆಲೆ 199 ಡಾಲರ್'ಗಳಾಗಿರಲಿದೆ ಎಂದು ಕಂಪನಿ ತಿಳಿಸಿತ್ತು. ಈಗ ಕಂಪನಿಯು ಡ್ಯಾಶ್ ಕ್ಯಾಮೆರಾವನ್ನು ಪರಿಚಯಿಸಿದೆ. ವಿಂಡ್ ಷೀಲ್ಡ್'ನಲ್ಲಿ ಈ ಕ್ಯಾಮೆರಾವನ್ನು ಹೊಂದಿಸಲು ಅಮೆಜಾನ್ ರಿಂಗ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಕಾರುಗಳಿಗಾಗಿ ವಿಶಿಷ್ಟ ಡ್ಯಾಶ್ ಕ್ಯಾಮರಾ ಬಿಡುಗಡೆಗೊಳಿಸಲಿದೆ ಅಮೆಜಾನ್ ಒಡೆತನದ ಕಂಪನಿ

ಈ ಕ್ಯಾಮೆರಾ ಅಮೆಜಾನ್ ಅಲೆಕ್ಸಾ ಮಾತ್ರವಲ್ಲದೆ ಇತರ ಕೆಲವು ತಾಂತ್ರಿಕ ಫೀಚರ್'ಗಳನ್ನು ಸಹ ಹೊಂದಿರಲಿದೆ ಎಂದು ಹೇಳಲಾಗಿದೆ. ಕಂಪನಿಯು ಈ ಬಗ್ಗೆ ಇದುವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.

ಕಾರುಗಳಿಗಾಗಿ ವಿಶಿಷ್ಟ ಡ್ಯಾಶ್ ಕ್ಯಾಮರಾ ಬಿಡುಗಡೆಗೊಳಿಸಲಿದೆ ಅಮೆಜಾನ್ ಒಡೆತನದ ಕಂಪನಿ

ಈ ರಿಂಗ್, ಸೆಲ್ ಫೋನ್ ಪ್ರೊಸೆಸರ್ ಮೂಲಕ ಕ್ಯಾಮೆರಾವನ್ನು ನಿಯಂತ್ರಿಸಬಹುದು. ವೈಫೈ ಮೂಲಕ ಸಂಪರ್ಕಗೊಂಡರೆ ಎಲ್ಲಾ ವೀಡಿಯೊಗಳನ್ನು ಸೆಲ್ ಫೋನ್ ಮೂಲಕ ವೀಕ್ಷಿಸಬಹುದು ಎಂದು ಹೇಳಲಾಗಿದೆ.

ಕಾರುಗಳಿಗಾಗಿ ವಿಶಿಷ್ಟ ಡ್ಯಾಶ್ ಕ್ಯಾಮರಾ ಬಿಡುಗಡೆಗೊಳಿಸಲಿದೆ ಅಮೆಜಾನ್ ಒಡೆತನದ ಕಂಪನಿ

ವೀಡಿಯೊಗಳನ್ನುಈ ಕ್ಯಾಮರಾದಲ್ಲಿ ಆಂತರಿಕವಾಗಿ ಸಂಗ್ರಹಿಸಬಹುದು. ಈ ಕಾರಣಕ್ಕೆ ಮೆಮೊರಿ ಕಾರ್ಡ್‌ ಅನ್ನು ಅಳವಡಿಸುವ ಅಗತ್ಯವಿಲ್ಲ. ಆದರೆ ಹೆಚ್ಚುವರಿ ಮೆಮೊರಿಗಾಗಿ ಮೆಮೊರಿ ಕಾರ್ಡ್ ಸೇರಿಸುವ ಸೌಲಭ್ಯವನ್ನು ನೀಡಲಾಗಿದೆ.

ಕಾರುಗಳಿಗಾಗಿ ವಿಶಿಷ್ಟ ಡ್ಯಾಶ್ ಕ್ಯಾಮರಾ ಬಿಡುಗಡೆಗೊಳಿಸಲಿದೆ ಅಮೆಜಾನ್ ಒಡೆತನದ ಕಂಪನಿ

ಈ ಕ್ಯಾಮೆರಾವನ್ನು ಕಾರಿನಲ್ಲಿ ಅಳವಡಿಸುವ ಮೂಲಕ ಅನಗತ್ಯ ಚಟುವಟಿಕೆಗಳಿಂದ ರಕ್ಷಿಸಿಕೊಳ್ಳಬಹುದು. ಈ ಕ್ಯಾಮೆರಾ ತಪ್ಪು ಮಾಡದೆ ಇದ್ದರೂ ಪೊಲೀಸರು ದಂಡ ವಿಧಿಸುವ ಸಮಯದಲ್ಲಿ ನೆರವಿಗೆ ಬರಲಿದೆ.

ಕಾರುಗಳಿಗಾಗಿ ವಿಶಿಷ್ಟ ಡ್ಯಾಶ್ ಕ್ಯಾಮರಾ ಬಿಡುಗಡೆಗೊಳಿಸಲಿದೆ ಅಮೆಜಾನ್ ಒಡೆತನದ ಕಂಪನಿ

ಈ ಕ್ಯಾಮೆರಾದ ಸಹಾಯದಿಂದ ವಾಹನ ಕಳ್ಳತನ ಹಾಗೂ ಇನ್ನಿತರ ಕಹಿ ಅನುಭವಗಳಿಂದ ಪಾರಾಗಬಹುದು. ಅಪಘಾತದ ಸಂದರ್ಭಗಳಲ್ಲಿ ಈ ಕ್ಯಾಮೆರಾಆಟೋಮ್ಯಾಟಿಕ್ ಆಗಿ ತುರ್ತು ಕರೆ ಮಾಡುವ ನಿರೀಕ್ಷೆಗಳಿವೆ.

ಕಾರುಗಳಿಗಾಗಿ ವಿಶಿಷ್ಟ ಡ್ಯಾಶ್ ಕ್ಯಾಮರಾ ಬಿಡುಗಡೆಗೊಳಿಸಲಿದೆ ಅಮೆಜಾನ್ ಒಡೆತನದ ಕಂಪನಿ

ಅಮೆಜಾನ್‌ನ ರಿಂಗ್ ಕಂಪನಿ ವಿಶೇಷ ಕ್ಯಾಮೆರಾವನ್ನು ವಿನ್ಯಾಸಗೊಳಿಸಿದ್ದು ಶೀಘ್ರದಲ್ಲೇ ವಿಶ್ವದಾದ್ಯಂತ ಬಿಡುಗಡೆಗೊಳಿಸಲು ಸಿದ್ಧತೆ ನಡೆಸಿದೆ. ಈಕ್ಯಾಮೆರಾವನ್ನು ಕಂಪನಿಯ ಆನ್‌ಲೈನ್ ಪ್ಲಾಟ್ ಫಾರಂ ಮೂಲಕವೂ ಖರೀದಿಸಬಹುದು ಎಂಬುದು ಗಮನಾರ್ಹ.

ಗಮನಿಸಿ: ಮೊದಲ ಎರಡು ಚಿತ್ರಗಳನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Amazon owned ring company to launch a dashcam for cars. Read in Kannada.
Story first published: Monday, June 21, 2021, 21:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X