ಅಪ್ಪು ಸ್ಮರಣಾರ್ಥ ಪ್ರಕಾಶ್ ರೈ ಫೌಂಡೇಶನ್‌ನಿಂದ ಆಂಬುಲೆನ್ಸ್ ಕೊಡುಗೆ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದಾರೆ. ಆದರೆ ಅವರ ಅವರ ನಟನೆ, ಸಾಮಾಜಿಕ ಕೆಲಸ, ಮಾನವೀಯ ಕೆಲಸಗಳಿಂದ ಅಪ್ಪು ನೆನಪು ಮಾತ್ರ ಮಾಸದು. ಅಪ್ಪು ಮೇಲಿನ ಅಭಿಮಾನ ಸ್ಮರಣೆ, ಗೌರವ ಶ್ರದ್ಧಾಂಜಲಿ ಕಾರ್ಯ, ಅವರ ಹೆಸರಲ್ಲಿ ಸಾಮಾಜಿಕ ಕಾರ್ಯಗಳು ಮಾತ್ರ ಕಡಿಮೆಯಾಗಿಲ್ಲ.

ಅಪ್ಪು ಸ್ಮರಣಾರ್ಥ ಪ್ರಕಾಶ್ ರೈ ಫೌಂಡೇಶನ್‌ನಿಂದ ಆಂಬುಲೆನ್ಸ್ ಕೊಡುಗೆ: ರಾಜ್ಯದ ಎಲ್ಲಾ ಜಿಲ್ಲೆಗೂ 'ಅಪ್ಪು ಎಕ್ಸ್​ಪ್ರೆಸ್'

ಇದೀಗ ಸ್ಮರಣಾರ್ಥ ನಟ ಪ್ರಕಾಶ್ ರೈ ಅವರು ಸಾಮಾಜಿಕ ಸೇವಾ ಕಾರ್ಯ ಆರಂಭಿಸಿದ್ದಾರೆ. ಮೈಸೂರಿನ ಮಿಷನ್ ಆಸ್ಪತ್ರೆಗೆ ಸುಸಜ್ಜಿತ ಅಂಬುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ. ಪ್ರಕಾಶ್ ರೈ ಫೌಂಡೇಶನ್ ಅಪ್ಪು ಸ್ಮರಣಾರ್ಥ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಅಪ್ಪು ಎಕ್ಸ್ಪ್ರೆಸ್ ಆ್ಯಂಬುಲನ್ಸ್ ನೀಡಲಾಗುತ್ತಿದೆ. ಅಪ್ಪು ಹೆಸರಲ್ಲಿ ಪ್ರಕಾಶ್ ರಾಜ್ ಫೌಂಡೇಷನ್ ಶೀಘ್ರದಲ್ಲೇ ಮೈಸೂರಲ್ಲಿ ಬ್ಲಡ್ ಬ್ಯಾಂಕ್ ಕೂಡ ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಮೈಸೂರಿನ ಮಿಷನ್ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲ ಆಂಬುಲೆನ್ಸ್ ನೀಡಲಾಗಿದೆ.

ಅಪ್ಪು ಸ್ಮರಣಾರ್ಥ ಪ್ರಕಾಶ್ ರೈ ಫೌಂಡೇಶನ್‌ನಿಂದ ಆಂಬುಲೆನ್ಸ್ ಕೊಡುಗೆ: ರಾಜ್ಯದ ಎಲ್ಲಾ ಜಿಲ್ಲೆಗೂ 'ಅಪ್ಪು ಎಕ್ಸ್​ಪ್ರೆಸ್'

ಆ್ಯಂಬುಲೆನ್ಸ್ ಸಕಾಲಕ್ಕೆ ಸಿಕ್ಕಿದ್ದರೆ ಅಪ್ಪು ಬದುಕುತ್ತಿದ್ದರೇನೋ ಎಂಬ ಸ್ಥಿತಿ ಜನ ಸಾಮಾನ್ಯರಿಗೆ ಬರಬಾರದು ಎಂಬ ಉದ್ದೇಶದಿಂದ ಪುನೀತ್ ರಾಜ್ಕುಮಾರ ಹೆಸರಿನಲ್ಲಿ ಅಪ್ಪು ಎಕ್ಸ್ಪ್ರೆಸ್ ಎಂಬ ಆ್ಯಂಬುಲೆನ್ಸ್ ಅನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರಕಾಶ್ ರಾಜ್ ಫೌಂಡೇಷನ್ ನೀಡಲಿದೆ" ಎಂದು ತಿಳಿಸಿದರು.

ಅಪ್ಪು ಸ್ಮರಣಾರ್ಥ ಪ್ರಕಾಶ್ ರೈ ಫೌಂಡೇಶನ್‌ನಿಂದ ಆಂಬುಲೆನ್ಸ್ ಕೊಡುಗೆ: ರಾಜ್ಯದ ಎಲ್ಲಾ ಜಿಲ್ಲೆಗೂ 'ಅಪ್ಪು ಎಕ್ಸ್​ಪ್ರೆಸ್'

ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರಾಜ್ ಮಾತನಾಡಿ, ನಾವು ಇಲ್ಲಿ ಸೇರಲು ಕಾರಣ ಅಪ್ಪು. ಆಗ ಆ್ಯಂಬುಲೆನ್ಸ್ ಸಿಕ್ಕಿದ್ದರೆ ಅಪ್ಪು ಉಳಿದು ಬಿಡುತ್ತಿದ್ದರು ಎಂದು ಅನಿಸಿತು. ಅದೇ ಉದ್ದೇಶದಿಂದ ಅಪ್ಪು ಹೆಸರಲ್ಲಿ ಆ್ಯಂಬುಲೆನ್ಸ್ ನೀಡಲು ನಿರ್ಧಾರ ಮಾಡಿದ್ದೇನೆ.

ಅಪ್ಪು ಸ್ಮರಣಾರ್ಥ ಪ್ರಕಾಶ್ ರೈ ಫೌಂಡೇಶನ್‌ನಿಂದ ಆಂಬುಲೆನ್ಸ್ ಕೊಡುಗೆ: ರಾಜ್ಯದ ಎಲ್ಲಾ ಜಿಲ್ಲೆಗೂ 'ಅಪ್ಪು ಎಕ್ಸ್​ಪ್ರೆಸ್'

ಇದು ಕೇವಲ ಆರಂಭ ಮುಂದೆ ಅಪ್ಪು ಹೆಸರಿನಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಉಚಿತ ಆ್ಯಂಬುಲೆನ್ಸ್ ನೀಡುವ ಕಾರ್ಯವನ್ನು ನಮ್ಮ ಫೌಂಡೇಶನ್ ಹಮ್ಮಿಕೊಂಡಿದೆ. ಈ ಕೆಲಸಕ್ಕೆ ಪುನೀತ್ ರಾಜಕುಮಾರ್ ಅವರ ಮಾನವೀಯತೆಯ ಕೆಲಸವೇ ಸ್ಫೂರ್ತಿಯಾಗಿದೆ" ಎಂದು ಹೇಳಿದರು.

ಅಪ್ಪು ಸ್ಮರಣಾರ್ಥ ಪ್ರಕಾಶ್ ರೈ ಫೌಂಡೇಶನ್‌ನಿಂದ ಆಂಬುಲೆನ್ಸ್ ಕೊಡುಗೆ: ರಾಜ್ಯದ ಎಲ್ಲಾ ಜಿಲ್ಲೆಗೂ 'ಅಪ್ಪು ಎಕ್ಸ್​ಪ್ರೆಸ್'

ಪುನೀತ್ ರಾಜಕುಮಾರ್ ಚಿಕ್ಕ ವಯಸ್ಸಿನಲ್ಲಿ ಮಾಡಿದ ಕೆಲಸ ದೊಡ್ಡದು. ಅವರ ಹೆಸರನ್ನು ಶಾಶ್ವತವಾಗಿ ಉಳಿಸುವ ಆಸೆ ನಮ್ಮದು. ಇದರಿಂದ ಅವರು ನಮ್ಮಲ್ಲಿ ಜೀವಂತಾಗಿ ಇರಬೇಕಾದರೆ, ಅವರು ಮಾಡಿರುವ ಒಳ್ಳೆಯ ಕೆಲಸಗಳನ್ನು ಸ್ಮರಿಸುತ್ತಾ ಕೂರದೇ ಅವುಗಳನ್ನು ನಾವು ಮುಂದುವರೆಸಿಕೊಂಡು ಹೋಗಬೇಕಿದೆ ಆ ದೃಷ್ಟಿಯಿಂದ ಎಲ್ಲ ಜಿಲ್ಲೆಗಳಿಗೂ ಅಪ್ಪು ಎಕ್ಸ್ಪ್ರೆಸ್ ಆ್ಯಂಬುಲೆನ್ಸ್ ನೀಡಲು ಮುಂದಾಗಿದ್ದೇವೆ.

ಅಪ್ಪು ಸ್ಮರಣಾರ್ಥ ಪ್ರಕಾಶ್ ರೈ ಫೌಂಡೇಶನ್‌ನಿಂದ ಆಂಬುಲೆನ್ಸ್ ಕೊಡುಗೆ: ರಾಜ್ಯದ ಎಲ್ಲಾ ಜಿಲ್ಲೆಗೂ 'ಅಪ್ಪು ಎಕ್ಸ್​ಪ್ರೆಸ್'

ನಾವಿಬ್ಬರೂ ಜೊತೆಗೆ ಮೂರು ಚಿತ್ರ ಮಾತ್ರ ಮಾಡಿದ್ದರೂ ಅವರ ಜೊತೆ ಉತ್ತಮ ಒಡನಾಟ ಇತ್ತು. ಕೋವಿಡ್ ಸಂದರ್ಭದಲ್ಲಿ ಅಪ್ಪು ನನಗೆ ದೇಣಿಗೆ ರೂಪದಲ್ಲಿ ಸಹಾಯ ಮಾಡಿದ್ದರು. ಅದನ್ನು ಎಲ್ಲಿಯೂ ಹೇಳಿರಲಿಲ್ಲ. ಆ್ಯಂಬುಲೆನ್ಸ್ ಕೊಡಲು ಕಾರಣವೇನೆಂದರೆ ಅಪ್ಪುಗೆ ಸಕಾಲದಲ್ಲಿ ಆ್ಯಂಬುಲೆನ್ಸ್ ಸಿಕ್ಕಿದ್ದರೆ ಬದುಕುತ್ತಿದ್ದರೇನೋ ಎಂಬ ಮಾತು ಕೇಳಿ ಬರುತ್ತಿದ್ದು, ಇಂತಹ ಸ್ಥಿತಿ ಬಡ ಜನರಿಗೆ ಬರಬಾರದು ಎಂಬ ಕಾರಣದಿಂದ ಅಪ್ಪು ಹೆಸರಿನಲ್ಲಿ ಆ್ಯಂಬುಲೆನ್ಸ್ ನೀಡಲಾಗುತ್ತಿದೆ" ಎಂದರು.

ಅಪ್ಪು ಸ್ಮರಣಾರ್ಥ ಪ್ರಕಾಶ್ ರೈ ಫೌಂಡೇಶನ್‌ನಿಂದ ಆಂಬುಲೆನ್ಸ್ ಕೊಡುಗೆ: ರಾಜ್ಯದ ಎಲ್ಲಾ ಜಿಲ್ಲೆಗೂ 'ಅಪ್ಪು ಎಕ್ಸ್​ಪ್ರೆಸ್'

ಮೈಸೂರಿನ ಮಿಷನ್ ಆಸ್ಪತ್ರೆಯವರು ಮಿಷನ್ ಆಸ್ಪತ್ರೆ ಬ್ಲಡ್ ಬ್ಯಾಂಕ್ ಕೇಳಿದ್ದಾರೆ. ಅದಕ್ಕೆ ನಾನು ಒಪ್ಪಿದ್ದೇನೆ ಸದ್ಯದಲ್ಲೇ ಅಪ್ಪು ಹೆಸರಿನಲ್ಲಿ ಬ್ಲಡ್ ಬ್ಯಾಂಕ್ ಆರಂಭವಾಗುತ್ತದೆ. ಈ ಮೂಲಕ ಅಪ್ಪು ಕೆಲಸಗಳಿಗೆ ಧನ್ಯವಾದ ಹೇಳುವ ಕೆಲಸ ಅಷ್ಟೇ. ಜಾತಿ, ಭಾಷೆ, ಧರ್ಮವನ್ನು ಮೀರಿ ಕೆಲಸ ಮಾಡೋಣ ಎರಡು ಮೂರು ತಿಂಗಳಿನಲ್ಲಿ ಬ್ಲಡ್ ಬ್ಯಾಂಕ್ ಸ್ಥಾಪನೆ ಮಾಡಲಾಗುವುದು" ಎಂದು ಇದೇ ಸಂದರ್ಭದಲ್ಲಿ ನಟ ಪ್ರಕಾಶ್ ರಾಜ್ ಹೇಳಿಕೆ ನೀಡಿದರು.

ಅಪ್ಪು ಸ್ಮರಣಾರ್ಥ ಪ್ರಕಾಶ್ ರೈ ಫೌಂಡೇಶನ್‌ನಿಂದ ಆಂಬುಲೆನ್ಸ್ ಕೊಡುಗೆ: ರಾಜ್ಯದ ಎಲ್ಲಾ ಜಿಲ್ಲೆಗೂ 'ಅಪ್ಪು ಎಕ್ಸ್​ಪ್ರೆಸ್'

ನಿರ್ದೇಶಕ ಆನಂದರಾಮ್ ಮಾತನಾಡಿ, ಅಂಬುಲೆನ್ಸ್‍ಗೆ ರಾಜಕುಮಾರ್ ಚಿತ್ರದ ಅಪ್ಪು ಅವರ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಇಡೀ ರಾಜ್ಯಾದ್ಯಂತ ಇಂತಹ ಅಂಬುಲೆನ್ಸ್ ಗಳನ್ನು ನೀಡಲಾಗುತ್ತದೆ. ಪ್ರಕಾಶ್ ರಾಜ್ ಫೌಂಡೇಶನ್ ನಿಂದ ಅಪ್ಪು ಅವರ ಸ್ಮರಣೆ ಆಗುತ್ತಿದೆ. ಅಪ್ಪು ಬಲಗೈನಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗುತ್ತಿರಲಿಲ್ಲ.10 ವರ್ಷದ ಹಿಂದೆ ನಮ್ಮ ತಂದೆಯ ಹೃದಯದ ಶಸ್ತ್ರ ಚಿಕಿತ್ಸೆಗೆ ಅಪ್ಪು ಅವರು ಹಣ ಕೊಟ್ಟರು ಎಂದು ಮೊನ್ನೆ ಹೋಟೆಲ್ ಸಪ್ಲೈಯರ್ ಒಬ್ಬ ಹೇಳಿದ. ಎಲ್ಲಿಯ ಹೋಟೆಲ್ ಸಪ್ಲೈಯರ್ ಎಲ್ಲಿಯಾ ಅಪ್ಪು, ಒಳ್ಳೆ ಕೆಲಸ ಮಾಡುವವರನ್ನೂ ಟ್ರೋಲ್ ಮಾಡಿಕೊಂಡು ತಿರುಗಾಡುವ ಸಮಾಜದಲ್ಲಿ ಅಪ್ಪು ಅವರು ಸದ್ದಿಲ್ಲದೆ ಸಾಮಾಜಿಕವಾಗಿ ಜನರಿಗೆ ನೆರವಾದರು.

ಅಪ್ಪು ಸ್ಮರಣಾರ್ಥ ಪ್ರಕಾಶ್ ರೈ ಫೌಂಡೇಶನ್‌ನಿಂದ ಆಂಬುಲೆನ್ಸ್ ಕೊಡುಗೆ: ರಾಜ್ಯದ ಎಲ್ಲಾ ಜಿಲ್ಲೆಗೂ 'ಅಪ್ಪು ಎಕ್ಸ್​ಪ್ರೆಸ್'

ಅಪ್ಪು ಮಾಡಿದ ಕೆಲಸ ಆಪ್ತ ವಲಯಕ್ಕೂ ಗೊತ್ತಿರಲಿಲ್ಲ. ನಾನು ತುಂಬಾ ಆಪ್ತ ವಲಯದಲ್ಲಿದ್ದೆ ಆದರೆ ನನಗೂ ಅವರ ಸೇವಾ ಕಾರ್ಯದ ಬಗ್ಗೆ ಗೊತ್ತಿರಲಿಲ್ಲ. ಜಾತಿ, ಧರ್ಮವನ್ನು ಮೀರಿ ಕೆಲಸ ಮಾಡಿದರು. ಅದನ್ನು ಉಳಿಸುವ ಆಶಯ ಪ್ರಕಾಶ್ ರಾಜ್ ಅವರದ್ದು. ರಾಜಕುಮಾರ ಹೆಸರಲ್ಲ ಅದು ಶಕ್ತಿ. ಒಳ್ಳೆ ಕೆಲಸ ಮಾಡುವವರ ಕಾಲೆಳೆಯುವ ಮನಸ್ಥಿತಿ ಜಾಸ್ತಿಯಾಗಿದೆ. ಅಂತಹ ಕಾಲಘಟ್ಟದಲ್ಲಿ ಪುನೀತ್ ಎಲ್ಲರಿಗೂ ಮಾದರಿ ಎಂದು ಹೇಳಿದರು.

ಅಪ್ಪು ಸ್ಮರಣಾರ್ಥ ಪ್ರಕಾಶ್ ರೈ ಫೌಂಡೇಶನ್‌ನಿಂದ ಆಂಬುಲೆನ್ಸ್ ಕೊಡುಗೆ: ರಾಜ್ಯದ ಎಲ್ಲಾ ಜಿಲ್ಲೆಗೂ 'ಅಪ್ಪು ಎಕ್ಸ್​ಪ್ರೆಸ್'

ಆಜಾದಿ ಕಾ ಅಮೃತ ಮಹೋತ್ಸವ್ ಹಿನ್ಲೆಲೆಯಲ್ಲಿ ಬೆಂಗಳೂರಿನ ಲಾಲ್​ಬಾಗ್​ನಲ್ಲಿ ಫ್ಲಾವರ್ ಶೋ ಶುಕ್ರವಾರದಿಂದ ಅರಂಭಗೊಂಡಿದೆ. ಕೊರೋನಾದಿಂದ ಎರಡು ವರ್ಷಗಳ ಕಾಲ ಫ್ಲಾವರ್ ಶೋ ನಡೆದಿರಲಿಲ. ಹನ್ನೊಂದು ದಿನಗಳ ಕಾಲ ನಡೆಯುವ ಹೂಗಳ ಪ್ರದರ್ಶನ ಈ ಬಾರಿಯ ಥೀಮ್ ದಿವಂಗತ ಡಾ ರಾಜ್ ಕುಮಾರ್ ಮತ್ತು ಪುನೀತ್ ರಾಜಕುಮಾರ ಅವರು ನಟಿಸಿದ ಚಿತ್ರಗಳಾಗಿವೆ

ಅಪ್ಪು ಸ್ಮರಣಾರ್ಥ ಪ್ರಕಾಶ್ ರೈ ಫೌಂಡೇಶನ್‌ನಿಂದ ಆಂಬುಲೆನ್ಸ್ ಕೊಡುಗೆ: ರಾಜ್ಯದ ಎಲ್ಲಾ ಜಿಲ್ಲೆಗೂ 'ಅಪ್ಪು ಎಕ್ಸ್​ಪ್ರೆಸ್'

ಇನ್ನು ಪುನೀತ್ ರಾಜಕುಮಾರ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿ ನವೆಂಬರ್​ 1ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಈ ಕುರಿತು ಬೊಮ್ಮಾಯಿ ಟ್ವೀಟ್​ ಮಾಡಿ. 'ಕನ್ನಡ ಚಿತ್ರರಂಗದ ಮೇರುನಟ ದಿ. ಡಾ. ಪುನೀತ್ ರಾಜ್‍ಕುಮಾರ್ ಅವರಿಗೆ 'ಕರ್ನಾಟಕ ರತ್ನ' ಪ್ರಶಸ್ತಿಯನ್ನು ನವೆಂಬರ್ 1ರಂದು ಪ್ರದಾನ ಮಾಡಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

Most Read Articles

Kannada
English summary
Ambulance distribute in the name of appu express by prakash raj foundation details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X