ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪಡೆದ ರಾಬಿನ್ ಉತ್ತಪ್ಪ

ಇತ್ತೀಚೆಗೆ ಕೇಂದ್ರ ಸರ್ಕಾರವು ಈ ವರ್ಷದ ಐಪಿಎಲ್ ಆಯೋಜಿಸಲು ಬಿಸಿಸಿಐಗೆ ಅನುಮೋದನೆ ನೀಡಿದೆ. ಆಂಪಿಯರ್ ಕಂಪನಿಯು ಸ್ಪೋರ್ಟ್ಸ್ ಸ್ಟಾರ್ ಟಾಕ್ ಸೀರೀಸ್ ಎಂಬ ವೆಬಿನಾರ್ ಅನ್ನು ಆಯೋಜಿಸಿದೆ. ಈ ವೆಬಿನಾರ್ ನಲ್ಲಿ ಐಪಿಎಲ್ ಹಾಗೂ ಭಾರತೀಯ ಕ್ರಿಕೆಟಿಗರ ಭವಿಷ್ಯ ಎಂಬ ವಿಷಯದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪಡೆದ ರಾಬಿನ್ ಉತ್ತಪ್ಪ

ಈ ವೆಬಿನಾರ್ ನಲ್ಲಿ ಸುರೇಶ್ ರೈನಾ, ರಾಬಿನ್ ಉತ್ತಪ್ಪ, ಹೀತ್ ಸ್ಟ್ರೀಕ್, ದೆಹಲಿ ಕ್ಯಾಪಿಟಲ್ಸ್ ತಂಡದ ಸಿಇಒ ಧೀರಜ್ ಮಲ್ಹೋತ್ರಾ ಹಾಗೂ ದಿ ಹಿಂದೂ ಕ್ರೀಡಾ ಸಂಪಾದಕ ಕೆ.ಸಿ.ವಿಜಯ್ ಕುಮಾರ್ ಭಾಗಿಯಾಗಿದ್ದರು. ಈ ವೆಬಿನಾರ್ ನಲ್ಲಿ ಭಾಗಿಯಾಗಿದ್ದ ಆಂಪಿಯರ್ ಎಲೆಕ್ಟ್ರಿಕ್ ಕಂಪನಿಯು, ಭಾರತೀಯ ಕ್ರಿಕೆಟ್ ತಂಡ ಹಾಗೂ ಐಪಿಎಲ್ ತಂಡಗಳಿಗೆ ಶುಭ ಹಾರೈಸಿತು.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪಡೆದ ರಾಬಿನ್ ಉತ್ತಪ್ಪ

ಇದೇ ವೇಳೆ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿರುವವರ ಪೈಕಿ ಎಂಟನೇ ಸ್ಥಾನದಲ್ಲಿರುವ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರಿಗೆ ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ನೀಡಲಾಯಿತು. ಈ ಸ್ಕೂಟರ್ ಪಡೆಯಲು ರಾಬಿನ್ ಉತ್ತಪ್ಪ ತಮ್ಮ ಕುಟುಂಬದೊಂದಿಗೆ ಬಂದಿದ್ದರು. ಇದು ರಾಬಿನ್ ಉತ್ತಪ್ಪ ಹಾಗೂ ಆಂಪಿಯರ್ ಕಂಪನಿಗೆ ವಿಶೇಷವಾದ ಕ್ಷಣವಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪಡೆದ ರಾಬಿನ್ ಉತ್ತಪ್ಪ

ಆಂಪಿಯರ್ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಹೊಸದಾಗಿ ಬಿಡುಗಡೆಗೊಳಿಸಲಾಗಿದೆ. ಈ ಸ್ಕೂಟರಿನ ಬೆಲೆ ರೂ.73,990ಗಳಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಇಕೋ ಮೋಡ್‌ನಲ್ಲಿ 100 ಕಿ.ಮೀ ಹಾಗೂ ಕ್ರೂಸ್ ಮೋಡ್‌ನಲ್ಲಿ 80 ಕಿ.ಮೀಗಳವರೆಗೆ ಚಲಿಸುತ್ತದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪಡೆದ ರಾಬಿನ್ ಉತ್ತಪ್ಪ

ಆಂಪಿಯರ್ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್, ಆಕರ್ಷಕ ವಿನ್ಯಾಸ ಹಾಗೂ ಹಲವಾರು ಫೀಚರ್ ಗಳನ್ನು ಹೊಂದಿದೆ. ಆಂಪಿಯರ್ ಮ್ಯಾಗ್ನಸ್ ಪ್ರೊ ಕೇವಲ 10 ಸೆಕೆಂಡುಗಳಲ್ಲಿ 0 - 40 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪಡೆದ ರಾಬಿನ್ ಉತ್ತಪ್ಪ

ಈ ಎಲೆಕ್ಟ್ರಿಕ್ ಸ್ಕೂಟರ್‌ನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 55 ಕಿ.ಮೀಗಳಾಗಿದೆ. ಈ ಸ್ಕೂಟರ್ 5 - 6 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ. ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರಿನಲ್ಲಿ ಡ್ರಮ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪಡೆದ ರಾಬಿನ್ ಉತ್ತಪ್ಪ

ಆಂಪಿಯರ್ ಮ್ಯಾಗ್ನಸ್ ಪ್ರೊ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಗಳನ್ನು ಹೊಂದಿದೆ. ಮ್ಯಾಗ್ನಸ್ ಪ್ರೊ ಈ ಸೆಗ್ ಮೆಂಟಿನಲ್ಲಿರುವ ಹಗುರವಾದ ಸ್ಕೂಟರ್‌ಗಳಲ್ಲಿ ಒಂದಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪಡೆದ ರಾಬಿನ್ ಉತ್ತಪ್ಪ

ಈ ಸ್ಕೂಟರ್ ಕೀಲೆಸ್ ಎಂಟ್ರಿ, ಎಲ್ಇಡಿ ಹೆಡ್ ಲ್ಯಾಂಪ್, ಡಿಜಿಟಲ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಅಂಡರ್-ಸೀಟ್ ಸ್ಟೋರೇಜ್, ಆಂಟಿ ಥೆಫ್ಟ್ ಅಲಾರ್ಮ್ ಹಾಗೂ ಸಿಬಿಎಸ್ ಗಳಂತಹ ಫೀಚರ್ ಗಳನ್ನು ಹೊಂದಿದೆ.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪಡೆದ ರಾಬಿನ್ ಉತ್ತಪ್ಪ

ಈ ಸ್ಕೂಟರ್ ಲಿಂಪ್ ಹೋಮ್ ಫೀಚರ್ ಅನ್ನು ಸಹ ಹೊಂದಿದೆ. ಇದರಿಂದಾಗಿ ಬ್ಯಾಟರಿಯು 10%ನಲ್ಲಿದ್ದಾಗ 10 ಕಿ.ಮೀ ದೂರ ಚಲಿಸುತ್ತದೆ. 150 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ಮುಂಭಾಗದಲ್ಲಿ ಹೆಚ್ಚಿನ ಲೆಗ್ ರೂಂ ಹೊಂದಿರುವ ಮ್ಯಾಗ್ನಸ್ ಪ್ರೊ ಯಾವುದೇ ಪೆಟ್ರೋಲ್ ಸ್ಕೂಟರ್‌ಗೆ ಪೈಪೋಟಿ ನೀಡಬಲ್ಲದು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪಡೆದ ರಾಬಿನ್ ಉತ್ತಪ್ಪ

ಆಂಪಿಯರ್ ಮ್ಯಾಗ್ನಸ್ ಪ್ರೊ ಸ್ಕೂಟರ್ ಅನ್ನು ಸುಮಾರು ರೂ.1,500ಗಳ ಆಕರ್ಷಕ ಇಎಂಐನೊಂದಿಗೆ ಖರೀದಿಸಬಹುದು. ಈ ಸ್ಕೂಟರ್ ಅನ್ನು ವೈಟ್, ರೆಡ್, ಯೆಲ್ಲೋ ಹಾಗೂ ಬ್ಲಾಕ್ ಎಂಬ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್ ವಿತರಣೆ ಪಡೆದ ರಾಬಿನ್ ಉತ್ತಪ್ಪ

ಆಂಪಿಯರ್ ಕಂಪನಿಯು ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 200ಕ್ಕೂ ಹೆಚ್ಚು ಡೀಲರ್ ಗಳಲ್ಲಿ ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಗ್ರಾಹಕರು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆನ್‌ಲೈನ್‌ನಲ್ಲಿಯೂ ಸಹ ಖರೀದಿಸಬಹುದು.

Most Read Articles

Kannada
English summary
Ampere electric scooter delivered to cricketer Robin Uthappa. Read in Kannada.
Story first published: Tuesday, August 11, 2020, 10:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X