ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

ಆಟೋ ಮೊಬೈಲ್ ಉದ್ಯಮವು ಪ್ರತಿ ದಿನವೂ ಹೊಸತನಕ್ಕೆ ತೆರೆದು ಕೊಳ್ಳುತ್ತಿದೆ. ಈ ಬೆಳವಣಿಗೆಯನ್ನು ಗಮನಿಸಿದರೆ ಭವಿಷ್ಯದಲ್ಲಿ ರಸ್ತೆಯ ಮೇಲೆ ಚಲಿಸುವ ಕಾರುಗಳು ಮಾತ್ರವಲ್ಲದೆ ಆಕಾಶ ಹಾಗೂ ನೀರಿನಲ್ಲಿ ಚಲಿಸುವ ಕಾರುಗಳು ಸಹ ಉತ್ಪಾದನೆಯಾಗಲಿವೆ.

ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

ಈಗಾಗಲೇ ಪ್ರತಿ ಗಂಟೆಗೆ 400 ಕಿ.ಮೀ ವೇಗದಲ್ಲಿ ಚಲಿಸುವ ಕಾರುಗಳು ಉತ್ಪಾದನೆಯಾಗಿವೆ. ಈ ಹಿನ್ನೆಲೆಯಲ್ಲಿ ಆಕಾಶದಲ್ಲಿ ಹಾರುವ ಕಾರುಗಳು ಹಾಗೂ ನೀರಿನ ಮೇಲೆ ತೇಲುವ ಕಾರುಗಳು ಉತ್ಪಾದನೆಯಾಗುವ ಸಮಯ ದೂರವಿಲ್ಲ ಎಂದೇ ಹೇಳಬಹುದು. ತೇಲುವ ಕಾರುಗಳು ಸಂಪೂರ್ಣವಾಗಿ ಹೊಸದು ಎಂದು ಭಾವಿಸಬಾರದು. ಎರಡನೇಯ ಮಹಾಯುದ್ಧದ ಸಂದರ್ಭದಲ್ಲಿಯೇ ತೇಲುವ ಕಾರನ್ನು ವಿನ್ಯಾಸಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು.

ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

ಈ ಯೋಜನೆಯಲ್ಲಿ ಜರ್ಮನಿ ಮೂಲದ ಕಂಪನಿಯೊಂದು ಭಾಗಿಯಾಗಿತ್ತು. ಯುದ್ಧ ಕಾಲದ ಅಗತ್ಯಗಳಿಗಾಗಿ ಭೂಮಿ ಹಾಗೂ ನೀರು ಎರಡರಲ್ಲೂ ಚಲಿಸಬಲ್ಲ ಕಾರುಗಳನ್ನು ಅಭಿವೃದ್ಧಿಪಡಿಸಿದ ಮೊದಲ ಕಂಪನಿ ಇದಾಗಿರಬಹುದು.

ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

ಆ ಕಂಪನಿಯ ಹೆಸರು, ಆ ಕಂಪನಿ ತಯಾರಿಸಿದ ವಾಹನಗಳ ಹೆಸರು, ಮತ್ತಿತರ ವಿವರಗಳು ತಿಳಿದು ಬಂದಿಲ್ಲ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಕೆಲವು ಜರ್ಮನ್ ಕಂಪನಿಗಳು ಇಂತಹ ದ್ವಿ ಉದ್ದೇಶದ ವಾಹನಗಳನ್ನು ಅಭಿವೃದ್ಧಿಪಡಿಸುತ್ತಿದ್ದವು.

ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

ಹೀಗೆ ಅಭಿವೃದ್ಧಿಪಡಿಸಲಾದ ಕಾರಿನ ಬಗ್ಗೆ ಈ ಲೇಖನದಲ್ಲಿ ನೋಡೋಣ. ಆಂಫಿಕಾರ್ ಮಾಡೆಲ್ 770 ಕ್ಯಾಬ್ರಿಯೊಲೆಟ್ ಕಾರ್ ಅನ್ನು 1965 ರಲ್ಲಿ ನಿರ್ಮಿಸಲಾಯಿತು. ಈ ಕಾರ್ ಅನ್ನು ಜರ್ಮನಿಯ ಡಿಸೈನರ್ ಹ್ಯಾನ್ಸ್ ಟ್ರಿಪಲ್ ವಿನ್ಯಾಸಗೊಳಿಸಿದರು.

ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

ಈ ಕಾರಿನ ಹರಾಜು ಇದೇ ಆಗಸ್ಟ್ 13 ರಂದು ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ. ಈ ವಾಹನವು ಹಿಂಭಾಗದಲ್ಲಿ 1147 ಸಿಸಿ, ಟ್ರಯಂಫ್ 4 ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ.

ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

ಈ ಎಂಜಿನ್ ಗರಿಷ್ಠ 47 ಬಿಹೆಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈಗ ಈ ಎಂಜಿನ್‌ನ ಪವರ್ ಉತ್ಪಾದಿಸುವ ಶಕ್ತಿ ಸ್ವಲ್ಪ ಕಡಿಮೆಯಾಗಿದೆ. ಆದರೆ ಈ ಎಂಜಿನ್ ಸುಮಾರು 56 ವರ್ಷಗಳಷ್ಟು ಹಳೆಯದು.

ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

1965 ರ ಆಂಫಿಕಾರ್ ಮಾಡೆಲ್ 770 ಕ್ಯಾಬ್ರಿಯೊಲೆಟ್ ಕಾರು 4 ಸ್ಪೀಡ್ ಗೇರ್ ಬಾಕ್ಸ್ ರೇರ್ ವ್ಹೀಲ್ ಡ್ರೈವ್ ಸಿಸ್ಟಂನಿಂದ ನಿಯಂತ್ರಿಸಲ್ಪಡುತ್ತದೆ. ರಸ್ತೆಯಲ್ಲಿ ಸಂಚರಿಸಲು ಇದನ್ನು ಬಳಸಲಾಗುತ್ತದೆ.

ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

ನೀರಿನಲ್ಲಿ ಚಲಿಸಲು ಎರಡು ಪ್ರೊಪೆಲ್ಲರ್ ಗಳನ್ನು ಒದಗಿಸಲಾಗಿದೆ. ಇವುಗಳು ಹೆಚ್ಚು ತೂಕದೊಂದಿಗೆ ಕಾರು ನೀರಿನಲ್ಲಿ ತೇಲಲು ನೆರವಾಗುತ್ತವೆ. ರಸ್ತೆಯಲ್ಲಿ ಚಾಲನೆ ಮಾಡಲು ಬಳಸುವ ಸ್ಟೀಯರಿಂಗ್ ವ್ಹೀಲ್ ಅನ್ನೇ ನೀರಿನ ಮೇಲೆ ಚಲಿಸುವುದಕ್ಕೂ ಸಹ ಬಳಸಲಾಗುತ್ತದೆ.

ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

ನೀರಿನ ಮೂಲಕ ಚಲಿಸುವಾಗ ಈ ವಾಹನವು ಪ್ರಯಾಣದ ದಿಕ್ಕನ್ನು ಬದಲಿಸಲು ವ್ಹೀಲ್ ಗಳನ್ನು ಬಳಸುತ್ತದೆ. ಈ ಕಾರು ರಸ್ತೆಯಲ್ಲಿ 70 ಎಂಪಿಹೆಚ್ ವೇಗದಲ್ಲಿ ಚಲಿಸಿದರೆ, ನೀರಿನ ಮೇಲೆ 7 ಎಂಪಿಹೆಚ್ ವೇಗದಲ್ಲಿ ಚಲಿಸುತ್ತದೆ.

ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

ಈ ವಾಹನದ ಗರಿಷ್ಠ ವೇಗ ನೀರಿನ ಮೇಲೆ 7 ಎಂಪಿಹೆಚ್ ಹಾಗೂ ರಸ್ತೆಯ ಮೇಲೆ 70 ಎಂಪಿಹೆಚ್ ಆಗಿರುವ ಕಾರಣಕ್ಕೆ ಈ ಕಾರಿಗೆ 770 ಎಂದು ಹೆಸರಿಡಲಾಗಿದೆ. ಆಂಫಿಕಾರ್ ಮಾಡೆಲ್ 770 ಕ್ಯಾಬ್ರಿಯೊಲೆಟ್ ಕಾರ್ ಅನ್ನು 1961 ರಿಂದ 1968 ರವರೆಗೆ ಉತ್ಪಾದಿಸಲಾಗುತ್ತಿತ್ತು.

ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

ಈ 7 ವರ್ಷಗಳಲ್ಲಿ ಆಂಫಿಕಾರ್ ಮಾಡೆಲ್ 770 ಕಾರಿನ ಒಟ್ಟು 4,000 ಯುನಿಟ್'ಗಳನ್ನು ಮಾರಾಟ ಮಾಡಲಾಗಿದೆ. ಅವುಗಳಲ್ಲಿ 1965 ರಲ್ಲಿ ಉತ್ಪಾದನೆಯಾದ ಕಾರ್ ಅನ್ನು ಇದೇ ತಿಂಗಳ 13 ರಂದು ಅಮೆರಿಕಾದಲ್ಲಿ ಹರಾಜು ಹಾಕಲಾಗುತ್ತಿದೆ.

ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

ಈ ಕಾರಿನ ಹರಾಜು ಬೆಲೆ 40,000 ಡಾಲರ್ ನಿಂದ 50,000 ಡಾಲರ್ ಗಳವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ. ಇದರ ಮೌಲ್ಯ ಭಾರತದ ರೂಪಾಯಿಗಳಲ್ಲಿ ಸುಮಾರು ರೂ. 30 ಲಕ್ಷಗಳಿಂದ ರೂ. 37 ಲಕ್ಷಗಳಾಗಲಿದೆ.

ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

ಈ ಕಾರಿನ ಹೊರಭಾಗವನ್ನು ಕೆಂಪು ಬಣ್ಣದಲ್ಲಿ ವಿನ್ಯಾಸಗೊಳಿಸಲಾಗಿದೆ. ಇನ್ನು ಕ್ಯಾಬಿನ್ ಅನ್ನು ಬಿಳಿ ಹಾಗೂ ಕೆಂಪು ಬಣ್ಣದಲ್ಲಿ ಅಲಂಕರಿಸಲಾಗಿದೆ. ಹಳೆಯ ಕ್ಲಾಸಿಕ್ ವಾಹನಗಳನ್ನು ಪ್ರೀತಿಸುವವರಿಗೆ, ಆಂಫಿಕಾರ್ ಮಾಡೆಲ್ 770 ಪರಿಪೂರ್ಣ ವಾಹನವಾಗಿದೆ.

ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

ಈ ಕಾರು ನೀರಿನ ಮೇಲೂ ಚಲಿಸಬಹುದು ಎನ್ನುವುದು ಇದಕ್ಕೆ ಕಾರಣ. ಹರಾಜು ಪ್ರಕ್ರಿಯೆಯನ್ನು ನಡೆಸುತ್ತಿರುವ ಅಮೆರಿಕಾ ಕಂಪನಿಯು ಈ ಕಾರ್ ಅನ್ನು ನೀರಿಗೆ ಇಳಿಸುವ ಮುನ್ನ ನೀರಿನ ಸಾಂದ್ರತೆಯನ್ನು ಅಳೆಯುವುದು ಅಗತ್ಯ ಎಂದು ಹೇಳಿದೆ.

ಇದೇ ತಿಂಗಳ 13ರಂದು ಹರಾಜಾಗಲಿದೆ ನೀರಿನ ಮೇಲೂ ಚಲಿಸಬಲ್ಲ 56 ವರ್ಷ ಹಳೆಯ ಆಂಫಿಕಾರ್

ಈ ಹರಾಜಿನಲ್ಲಿ ಭಾರತೀಯರು ಸಹ ಭಾಗವಹಿಸುವ ಮೂಲಕ ಈ ದ್ವಿ ಬಳಕೆಯ ಕಾರನ್ನು ಖರೀದಿಸ ಬಹುದು. ಈ ಬಗ್ಗೆ ಬಾನ್ ಹಾಮ್ಸ್ ವರದಿ ಮಾಡಿದೆ.

Most Read Articles

Kannada
English summary
Amphicar which moves also on water goes for auction details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X