ಹಳ್ಳಿಹೈದನ ಆವಿಷ್ಕಾರ: 6-ಸೀಟರ್ ಎಲೆಕ್ಟ್ರಿಕ್ ಬೈಕಿಗೆ ಮನಸೋತ ಆನಂದ್ ಮಹೀಂದ್ರಾ

ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ವಾಲ್‌ನಲ್ಲಿ ಹಲವಾರು ಸ್ಪೂರ್ತಿದಾಯಕ ವೀಡಿಯೊಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ಆನಂದ್ ಮಹೀಂದ್ರಾ ಅವರು ಮತ್ತೊಂದು ಸ್ಪೂರ್ತಿದಾಯಕ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಆಸಕ್ತಿಕರವಾಗಿದ್ದು, ಇದು ಮಲ್ಟಿ-ರೈಡರ್ ಪ್ರಯಾಣಿಕರು ಸಂಚರಿಸಬಹುದಾದ ಎಲೆಕ್ಟ್ರಿಕ್ ವಾಹನವಾಗಿದೆ.

ಆನಂದ್ ಮಹೀಂದ್ರಾ ಅವರು ಹಂಚಿಕೊಂಡ ವೀಡಿಯೊದಲ್ಲಿರುವ ಈ ಎಲೆಕ್ಟ್ರಿಕ್ ವಾಹನದಲ್ಲಿ ಆರು ಜನರು ಪ್ರಯಾಣಿಸಬಹುದು. ಈ ಎಲೆಕ್ಟ್ರಿಕ್ ವಾಹನದ ಉತ್ಪಾದನಾ ವೆಚ್ಚ ರೂ. 12,000 ಆಗಿದೆ. ಈ ಎಲೆಕ್ಟ್ರಿಕ್ ವಾಹನ ಸಿಂಗಲ್ ಚಾರ್ಜ್‌ನಲ್ಲಿ 150 ಕಿಮೀ ವರೆಗೆ ಚಲಿಸುತ್ತದೆ ಎಂದು ವೀಡಿಯೊದಲ್ಲಿರುವ ವ್ಯಕ್ತಿ ಹೇಳಿಕೊಂಡಿದ್ದಾನೆ. ಇಷ್ಟೇ ಅಲ್ಲ ಕೇವಲ 10 ರೂಪಾಯಿಗೆ ಈ ಎಲೆಕ್ಟ್ರಿಕ್ ವಾಹನ ಸಂಪೂರ್ಣ ಚಾರ್ಜ್ ಮಾಡಲು ಸಾಧ್ಯವಿದೆ ಎಂದು ಹೇಳಿಕೊಂಡಿದ್ದಾನೆ.

6-ಸೀಟರ್ ಎಲೆಕ್ಟ್ರಿಕ್ ಬೈಕಿಗೆ ಮನಸೋತ ಆನಂದ್ ಮಹೀಂದ್ರಾ

ಸರಳವಾದ ವಿನ್ಯಾಸದ ಈ ವಾಹನ ಜಾಗತಿಕ ಮಟ್ಟದಲ್ಲಿ ಅಳವಡಿಸಲು ಸಾಧ್ಯವಿರುವ ತಂತ್ರಜ್ಞಾನವಾಗಿದೆ. ಕಿಕ್ಕಿರಿದ ಯುರೋಪಿಯನ್ ದೇಶಗಳ ಪ್ರವಾಸಿ ಕೇಂದ್ರಗಲ್ಲಿ ಪ್ರವಾಸಿ ಬಸ್ ಆಗಿ ಸಾಧ್ಯವಿದೆ. ಗ್ರಾಮೀಣ ಪ್ರದೇಶದಲ್ಲಿನ ಹೊಸ ಆವಿಷ್ಕಾರಗಳಿಂದ ನಾನು ಯಾವತ್ತೂ ಪ್ರಭಾವಿತನಾಗುತ್ತೇನೆ. ಕಾರಣ ಈ ಗ್ರಾಮೀಣ ಪ್ರದೇಶ ಆವಿಷ್ಕಾರವು 'Mother of invention': ಆಗಿರುತ್ತದೆ ಎಂದು ಆನಂದ್ ಮಹೀಂದ್ರಾ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಸಾಕಷ್ಟು ವೈರಲ್ ಆಗಿದ್ದು, ಸಾಕಷ್ಟು ಜನರು ಪ್ರಶಂಸಿದ್ದಾರೆ.

ಸೈಕಲ್ ರಿಕ್ಷಾ ಮಾದರಿಯಲ್ಲಿ ಸೀಟ್‌ಗಳನ್ನು ಮಾಡಲಾಗಿದೆ. ಒಬ್ಬರ ಹಿಂದೆ ಒಬ್ಬರಂತೆ ಒಟ್ಟು 6 ಮಂದಿ ಕುಳಿತು ಪ್ರಯಾಣಿಸಬಹುದು. ಆನಂದ್ ಮಹೀಂದ್ರಾ ಈ ವಿಡಿಯೋ ಹಂಚಿಕೊಂಡ ಬೆನ್ನಲ್ಲೇ ಮೆಚ್ಚುಗೆಗಳ ಸುರಿಮಳೆ ವ್ಯಕ್ತವಾಗಿದೆ. ಈ ಎಲೆಕ್ಟ್ರಿಕ್ ವಾಹನವು ಕೈಗಾರಿಕೋದ್ಯಮ, ಪ್ರಾಣಿಸಂಗ್ರಹಾಲಯ, ಜನನಿಬಿಡ ಸ್ಥಳಗಳಲ್ಲಿ ಓಡಾಡಲು ಹೆಚ್ಚು ಅನುಕೂಲಕರವಾಗಿರುತ್ತದೆ. ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಕಡಿಮೆ ವೆಚ್ಚದಲ್ಲಿ ಸಂಚರಿಸಬಹುದು. ಇನ್ನು ದೂರದಲ್ಲಿರುವ ಶಾಲೆಗೆ ತೆರಳಲು ಶಾಲಾ ಮಕ್ಕಳಿಗೆ ಉಪಯೋಗವಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. .

ಇನ್ನು ಕೆಲವರು, ಹಳ್ಳಿಗಳಲ್ಲಿ ನೀರಿಗಾಗಿ ದಿನವೂ ಮೈಲಿಗಳಷ್ಟು ನಡೆದುಕೊಂಡೇ ಪ್ರಯಾಣಿಸುತ್ತಾರೆ. ಅವರಿಗೆ ಇದು ಪ್ರಯೋಜನಕಾರಿ ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಇಂತಹ ಆವಿಷ್ಕಾರಗಳಿಗೆ ಹೆಚ್ಚಿನ ಪ್ರೊತ್ಸಾಹವನ್ನು ನೀಡಬೇಕು. ಇತ್ತೀಚೆಗೆ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಾಗುತ್ತದೆ. ಇದು ಉತ್ತಮ ಬೆಳವಣಿಗೆಯಾಗಿದೆ. ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿ ಮತ್ತು ಕಡಿಮೆ ವೆಚ್ಚದಲ್ಲಿ ಖರ್ಚು ಆಗಿರುತ್ತದೆ, ಹೆಚ್ಚಿನ ಹಣ ಉಳಿತಾಯ ಮಾಡಬಹುದು. ಆದರೆ ಜಾರ್ಜಿಂಗ್ ಸ್ಟೇಷನ್ ಗಳ ಸಂಖ್ಯೆಯನ್ನು ಹೆಚ್ಚಿಸಬೇಕಿದೆ.

ಇನ್ನು ತಿಂಗಳ ಹಿಂದೆ, ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಆನಂದ್ ಮಹೀಂದ್ರಾ ತಮ್ಮ ಹೊಸ ಸ್ಕಾರ್ಪಿಯೋ-ಎನ್ ಕಾರಿಗೆ ಒಳ್ಳೆಯ ಹೆಸರು ಸೂಚಿಸುವಂತೆ ಟ್ವಿಟ್ಟರ್‌ನಲ್ಲಿ ಕೇಳಿದ್ದರು. ಈ ಟ್ವೀಟ್‌ಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು. ಹಲವು ಹೆಸರುಗಳನ್ನು ಸೂಚಿಸಿದ್ದರು. ಇವುಗಳಲ್ಲಿ ಎರಡನ್ನು ಆಯ್ಕೆ ಮಾಡಿಕೊಂಡಿರುವ ಅವರು ಮತ್ತೆ ಅಭಿಮಾನಿಗಳ ಮೊರೆಹೋಗಿದ್ದರು. ಇದಕ್ಕಾಗಿ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದರು. ಬಂದಿರುವ ಹಲವು ಹೆಸರುಗಳಲ್ಲಿ ಭೀಮ್ ಹಾಗೂ ಬಿಚ್ಚೂ ಎಂಬ ಎರಡು ಹೆಸರುಗಳನ್ನು ಆಯ್ಕೆ ಮಾಡಲಾಗಿದೆ

ಈ ಎರಡು ಹೆಸರುಗಳಲ್ಲಿ ನಿಮ್ಮ ಆಯ್ಕೆ ಯಾವುದು ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್‌ಗೆ ಈಗಾಗಲೇ 25 ಸಾವಿರಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿತ್ತು. ವಿಶೇಷವೇನೆಂದರೆ ಇಲ್ಲಿ ಹಲವರು ಭೀಮ್ ಎಂಬ ಹೆಸರನ್ನು ಆಯ್ಕೆ ಮಾಡಿದ್ದಾರೆ. ಭೀಮ್ ಇಸ್ ಸಿಂಬಲ್ ಆಫ್ ಕಿಂಗ್ ಹಾಗೂ ಸ್ಕಾರ್ಪಿಯೋಗೆ ಅದೇ ಹೆಸರು ಸೂಕ್ತವಾಗಿದೆ. ಈ ಹೆಸರಿನಲ್ಲಿ ಕರಿಯುವುದು ಕೂಡ ತುಂಬ ಸುಲಭವಾಗಿರುತ್ತದೆ ಎಂದು ಹಲವರು ಕಾಮೆಂಟ್ ಅನ್ನು ಮಾಡಿದ್ದಾರೆ.

ಮಹೀಂದ್ರಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಅವರು ಹೊಸ ಸ್ಕಾರ್ಪಿಯೋ-ಎನ್ ಎಸ್‌ಯುವಿಯ ವಿತರಣೆಯನ್ನು ಇತ್ತೀಚೆಗೆ ಪಡೆದುಕೊಂಡಿದ್ದರು. ಆನಂದ್ ಮಹೀಂದ್ರಾ ಅವರ ಕಾರು ಸಂಗ್ರಹದಲ್ಲಿ ಟಾಪ್-ಆಫ್-ಲೈನ್ ಅಲ್ಟುರಾಸ್ ಐಷಾರಾಮಿ ಎಸ್‍ಯುವಿ ಮತ್ತು ಟಿಯುವಿ300 ಪ್ಲಸ್ ಮಲ್ಟಿ-ಯುಟಿಲಿಟಿ ವೆಹಿಕಲ್ ಕೂಡ ಇವೆ. ಆನಂದ್ ಮಹೀಂದ್ರಾ ಅವರು ಮಹೀಂದ್ರಾ ಬೊಲೆರೊ ಇನ್‌ವೇಡರ್ ಲೈಫ್‌ಸ್ಟೈಲ್ ಎಸ್‌ಯುವಿ, ಟಿಯುವಿ300 ಸಬ್-4 ಮೀಟರ್ ಎಸ್‌ಯುವಿ ಮತ್ತು ಮೊದಲ ತಲೆಮಾರಿನ ಸ್ಕಾರ್ಪಿಯೊ ಎಸ್‌ಯುವಿಯನ್ನು ಸಹ ಹೊಂದಿದ್ದಾರೆ.

Most Read Articles

Kannada
English summary
Anand mahindra praised this 6 seater ev mother of invention details
Story first published: Friday, December 2, 2022, 13:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X