ಪಾರ್ಕಿಂಗ್ ಸಮಸ್ಯೆಯ ಪರಿಹಾರದ ಹೊಸ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಭಾರತದಲ್ಲಿ ವಾಹನಗಳ ಸಂಖ್ಯೆ ವಿಪರೀತವಾಗಿ ಏರಿಕೆಯಾಗಿದೆ. ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿರುವುದರಿಂದ ಪಾರ್ಕಿಂಗ್ ಸಮಸ್ಯೆಯು ತಲೆದೋರಿದೆ. ಸಾರ್ವಜನಿಕ ಸ್ಥಳಗಳಿರಲಿ, ಅಥವಾ ಮನೆಯಾಗಿರಲಿ ಪಾರ್ಕಿಂಗ್ ಹಲವು ಸಮಸ್ಯೆಗಳನ್ನು ತಂದಿಟ್ಟಿದೆ.

ಪಾರ್ಕಿಂಗ್ ಸಮಸ್ಯೆಯ ಪರಿಹಾರದ ಹೊಸ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಈ ಪಾರ್ಕಿಂಗ್ ಸಮಸ್ಯೆಯು ಬೆಂಗಳೂರಿನಂತಹ ಮಹಾನಗರಗಳಲ್ಲಿ ಹೆಚ್ಚು. ಶಾಪಿಂಗ್‍‍ಗಾಗಿಯೋ ಅಥವಾ ಇನ್ನು ಯಾವುದೋ ಕಾರಣಗಳಿಗಾಗಿಯೋ ವಾಹನಗಳನ್ನು ಹೊರ ತೆಗೆದಾಗ ಅವುಗಳನ್ನು ಪಾರ್ಕ್ ಮಾಡುವುದೇ ದೊಡ್ಡ ತಲೆ ನೋವು. ಇನ್ನು ಎಲ್ಲೆಂದರಲ್ಲಿ ಪಾರ್ಕ್ ಮಾಡಿದರೆ ಸಂಚಾರಿ ಪೊಲೀಸರು ಅವುಗಳನ್ನು ಟೋಯಿಂಗ್ ಮಾಡುತ್ತಾರೆ.

ಪಾರ್ಕಿಂಗ್ ಸಮಸ್ಯೆಯ ಪರಿಹಾರದ ಹೊಸ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಈ ಕಾರಣಕ್ಕೆ ಹಲವರು ತಮ್ಮ ವಾಹನಗಳನ್ನು ಹೊರ ತೆಗೆಯಲು ಹಿಂದೇಟು ಹಾಕುತ್ತಾರೆ. ಇದು ಮನೆಯ ಹೊರಗಿನ ಸಂಗತಿಯಾದರೆ, ವಾಹನಗಳನ್ನು ಹೊಂದಿರುವ ಮನೆಗಳ ಪರಿಸ್ಥಿತಿಯು ಇದಕ್ಕಿಂತ ಭಿನ್ನವಾಗಿಲ್ಲ.

ಪಾರ್ಕಿಂಗ್ ಸಮಸ್ಯೆಯ ಪರಿಹಾರದ ಹೊಸ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಬಹುತೇಕ ಮನೆಗಳಲ್ಲಿ ಪಾರ್ಕಿಂಗ್‍ ಮಾಡಲು ಜಾಗಗಳಿಲ್ಲ. ಆದ್ದರಿಂದ ಜನರು ತಮ್ಮ ವಾಹನಗಳನ್ನು ಮನೆಯ ಹೊರಗೆ ಹೇಗೆ ಬೇಕೊ ಹಾಗೆ ಪಾರ್ಕ್ ಮಾಡುತ್ತಾರೆ. ಈ ರೀತಿಯಾಗಿ ಪಾರ್ಕಿಂಗ್ ಮಾಡಲಾಗುವ ವಾಹನಗಳ ಕಳ್ಳತನದ ಸಾಧ್ಯತೆ ಹೆಚ್ಚಾಗಿರುತ್ತದೆ.

ಪಾರ್ಕಿಂಗ್ ಸಮಸ್ಯೆಯ ಪರಿಹಾರದ ಹೊಸ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಮುಖ್ಯ ರಸ್ತೆಗಳಲ್ಲಿ ಪಾರ್ಕಿಂಗ್ ಮಾಡಲಾದ ವಾಹನಗಳಿಂದ ಟ್ರಾಫಿಕ್ ಸಮಸ್ಯೆಯು ಸಹ ಉಂಟಾಗುತ್ತಿದೆ. ಚಿಕ್ಕ ಜಾಗದಲ್ಲಿ ವಾಹನವನ್ನು ಹೇಗೆ ಪಾರ್ಕ್ ಮಾಡಬಹುದೆಂಬುದರ ಬಗ್ಗೆ ಆನಂದ್ ಮಹೀಂದ್ರಾರವರು ವೀಡಿಯೊವೊಂದನ್ನು ಶೇರ್ ಮಾಡಿದ್ದಾರೆ.

ಪಾರ್ಕಿಂಗ್ ಸಮಸ್ಯೆಯ ಪರಿಹಾರದ ಹೊಸ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 1 ನಿಮಿಷ 22 ಸೆಕೆಂಡುಗಳ ಈ ವೀಡಿಯೊದಲ್ಲಿ ಚಿಕ್ಕ ಜಾಗದಲ್ಲಿ ಹೇಗೆ ಪಾರ್ಕಿಂಗ್ ಮಾಡಬಹುದೆಂಬುದನ್ನು ತೋರಿಸಲಾಗಿದೆ. ಈ ವೀಡಿಯೊ ಕಪ್ಪು ಬಣ್ಣದ ಕಾರು ಮನೆಯ ಗೇಟಿನೊಳಗೆ ಬರುವುದರೊಂದಿಗೆ ಆರಂಭವಾಗುತ್ತದೆ.

ಪಾರ್ಕಿಂಗ್ ಸಮಸ್ಯೆಯ ಪರಿಹಾರದ ಹೊಸ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಆಗ ಅಲ್ಲಿದ್ದ ವ್ಯಕ್ತಿಯೊಬ್ಬ ಟ್ರಾಕ್ ಅನ್ನು ಎಳೆದು ಕಾರಿನ ಮುಂದೆ ಇಡುತ್ತಾನೆ. ಕಾರ್ ಅನ್ನು ಚಾಲನೆ ಮಾಡುತ್ತಿದ್ದ ವ್ಯಕ್ತಿ ಕಾರ್ ಅನ್ನು ಆ ಟ್ರಾಕ್ ಮೇಲೆ ಹತ್ತಿಸುತ್ತಾರೆ. ನಂತರ ಕಾರು ಚಾಲನೆ ಮಾಡುತ್ತಿದ್ದ ವ್ಯಕ್ತಿ ಮತ್ತು ಇನ್ನೊಬ್ಬ ವ್ಯಕ್ತಿ ಇಬ್ಬರೂ ಸೇರಿ ಟ್ರಾಕ್ ಅನ್ನು ಹಿಂದೆ ತಳ್ಳುತ್ತಾರೆ.

ಇದರಿಂದ ಅತಿ ಚಿಕ್ಕ ಜಾಗದಲ್ಲಿ ಕಾರ್ ಅನ್ನು ಪಾರ್ಕ್ ಮಾಡುತ್ತಾರೆ. ಈ ವೀಡಿಯೊವನ್ನು ಅನೇಕ ಜನರು ಲೈಕ್ ಮಾಡಿ, ರಿಟ್ವೀಟ್ ಮಾಡಿದ್ದಾರೆ. ವಿಶೇಷವೆಂದರೆ ಆನಂದ್ ಮಹೀಂದ್ರಾರವರು ಸಹ ಈ ವೀಡಿಯೊವನ್ನು ರಿಟ್ವೀಟ್ ಮಾಡಿದ್ದಾರೆ.

ಪಾರ್ಕಿಂಗ್ ಸಮಸ್ಯೆಯ ಪರಿಹಾರದ ಹೊಸ ಐಡಿಯಾ ಮೆಚ್ಚಿದ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾರವರು ಟ್ವಿಟರ್‍‍ನಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಜನ ಸಾಮಾನ್ಯರ ಪ್ರಶ್ನೆಗಳಿಗೆ, ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ. ಈಗ ಇವರು ಶೇರ್ ಮಾಡಿರುವ ವೀಡಿಯೊ ಹಲವು ಸಾಧ್ಯತೆಗಳನ್ನು ತೆರೆದಿಟ್ಟಿದೆ. ಈ ಹೊಸ ವಿಧಾನವು ಜನರ ಮೆಚ್ಚುಗೆಗೆ ಪಾತ್ರವಾಗಿದೆ.

Most Read Articles

Kannada
English summary
Anand Mahindra shares a unique Indian car parking video. Read in Kannada.
Story first published: Friday, February 21, 2020, 15:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X