ಹೊಸ ಬಗೆಯ ಸಾಮಾಜಿಕ ಅಂತರದ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಕರೋನಾ ಸಾಂಕ್ರಾಮಿಕದ ಈ ಸಮಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಫೇಸ್ ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜನರಿಗೆ ಪದೇ ಪದೇ ಮನವಿ ಮಾಡುತ್ತಿವೆ.

ಹೊಸ ಬಗೆಯ ಸಾಮಾಜಿಕ ಅಂತರದ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಈ ಸಂದರ್ಭಕ್ಕೆ ತಕ್ಕಂತೆ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಸರಾದ ಆನಂದ್ ಮಹೀಂದ್ರಾರವರು ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ತಮಾಷೆಯಿಂದ ಕೂಡಿರುವ ಈ ಫೋಟೋ ವೈರಲ್ ಆಗಿದೆ.

ಹೊಸ ಬಗೆಯ ಸಾಮಾಜಿಕ ಅಂತರದ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಈ ಫೋಟೋ ಶೇರ್ ಮಾಡಿರುವ ಆನಂದ್ ಮಹೀಂದ್ರಾ, ಈ ಪ್ರಯತ್ನವು ನನ್ನ ಮುಖದಲ್ಲಿ ಮಂದಹಾಸವನ್ನು ಮೂಡಿಸಿದೆ. ಆದರೆ ಕೆಲವು ಸಾಮಾಜಿಕ ಅಂತರಗಳು ಸುರಕ್ಷತೆಗಿಂತ ಹೆಚ್ಚು ಅಪಾಯಕಾರಿಯಾಗಿರುತ್ತವೆ ಎಂದು ಹೇಳಿದ್ದಾರೆ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಹೊಸ ಬಗೆಯ ಸಾಮಾಜಿಕ ಅಂತರದ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾರವರ ಈ ಪೋಸ್ಟ್‌ಗೆ ಇದುವರೆಗೂ 4 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿದ್ದು, 232 ಬಾರಿ ರಿಟ್ವೀಟ್ ಮಾಡಲಾಗಿದೆ. ಇದೇ ವೇಳೆ ಹಲವು ಟ್ವಿಟರ್ ಬಳಕೆದಾರರು ಈ ಪೋಸ್ಟ್ ಬಗ್ಗೆ ಹಾಸ್ಯ ಭರಿತ ಕಾಮೆಂಟ್'ಗಳನ್ನು ಮಾಡಿದ್ದಾರೆ.

ಹೊಸ ಬಗೆಯ ಸಾಮಾಜಿಕ ಅಂತರದ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾರವರು ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಕೆಲವೊಮ್ಮೆ ತಮಾಷೆಯ ಟ್ವೀಟ್'ಗಳನ್ನು ಶೇರ್ ಮಾಡುತ್ತಾರೆ. ಈ ಮೂಲಕ ಅವರ ಫಾಲೋವರ್'ಗಳನ್ನು ರಂಜಿಸುತ್ತಾರೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಹೊಸ ಬಗೆಯ ಸಾಮಾಜಿಕ ಅಂತರದ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಲೋಕೋಪಕಾರಿ ಕಾರ್ಯಗಳಿಗೂ ಹೆಸರುವಾಸಿಯಾಗಿದ್ದಾರೆ. ಸ್ಕೂಟರ್ ಮೂಲಕ ತಮ್ಮ ತಾಯಿಯನ್ನು ದೇಶ ಸುತ್ತಾಡಿಸಿದ್ದ ಮೈಸೂರಿನ ವ್ಯಕ್ತಿಗೆ ಆನಂದ್ ಮಹೀಂದ್ರಾ ತಮ್ಮ ಕಂಪನಿಯ ಕಾರ್ ಅನ್ನು ಉಡುಗೊರೆಯಾಗಿ ನೀಡಿದ್ದರು.

ಹೊಸ ಬಗೆಯ ಸಾಮಾಜಿಕ ಅಂತರದ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಇಷ್ಟು ಮಾತ್ರವಲ್ಲದೇ ಈ ವರ್ಷದ ಆರಂಭದಲ್ಲಿ ಭಾರತ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಜಯಿಸಲು ನೆರವಾದ ಆರು ಜನ ಯುವ ಕ್ರಿಕೆಟಿಗರಿಗೆ ಉದ್ಯಮಿ ಆನಂದ್ ಮಹೀಂದ್ರಾ ಹೊಸ ಥಾರ್ ಎಸ್‌ಯು‌ವಿಯನ್ನು ಉಡುಗೊರೆಯಾಗಿ ನೀಡಿದ್ದರು.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಹೊಸ ಬಗೆಯ ಸಾಮಾಜಿಕ ಅಂತರದ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಇತ್ತೀಚೆಗಷ್ಟೇ ಆನಂದ್ ಮಹೀಂದ್ರಾರವರು ದೆಹಲಿ, ಮುಂಬೈ ಹಾಗೂ ಪುಣೆ ಸೇರಿದಂತೆ ದೇಶದ ಹಲವು ಸಣ್ಣ ಹಾಗೂ ದೊಡ್ಡ ನಗರಗಳಿಗೆ ಮೆಡಿಕಲ್ ಆಕ್ಸಿಜನ್ ಪೂರೈಸುವ ಸಲುವಾಗಿ ಆಕ್ಸಿಜನ್ ಆನ್ ವ್ಹೀಲ್ಸ್ ಅಭಿಯಾನಕ್ಕೆ ಚಾಲನೆ ನೀಡಿದ್ದರು.

ಹೊಸ ಬಗೆಯ ಸಾಮಾಜಿಕ ಅಂತರದ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಆಕ್ಸಿಜನ್ ಆನ್ ವ್ಹೀಲ್ಸ್ ಅಭಿಯಾನದ ಮೂಲಕ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ಆಸ್ಪತ್ರೆ ಹಾಗೂ ರೋಗಿಗಳ ಮನೆಗಳಿಗೆ ಮೆಡಿಕಲ್ ಆಕ್ಸಿಜನ್ ಅನ್ನುಉಚಿತವಾಗಿ ತಲುಪಿಸುತ್ತಿದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಹೊಸ ಬಗೆಯ ಸಾಮಾಜಿಕ ಅಂತರದ ಫೋಟೋ ಶೇರ್ ಮಾಡಿದ ಆನಂದ್ ಮಹೀಂದ್ರಾ

ಮಹೀಂದ್ರಾ ಬೊಲೆರೊ ಪಿಕಪ್ ವಾಹನದ ಸಹಾಯದಿಂದ ಮಹೀಂದ್ರಾ ಕಂಪನಿಯು ದಿನಕ್ಕೆ 600ಕ್ಕೂ ಹೆಚ್ಚು ಆಕ್ಸಿಜನ್ ಸಿಲಿಂಡರ್‌ಗಳನ್ನು ಅಗತ್ಯವಿರುವವರ ಮನೆ ಬಾಗಿಲಿಗೆ ತಲುಪಿಸುತ್ತಿದೆ.

Most Read Articles

Kannada
English summary
Anand Mahindra shares unique social distancing photo on twitter. Read in Kannada.
Story first published: Monday, May 10, 2021, 20:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X