ವಿಶೇಷ ಸೇವೆ ನೀಡಿದ ಭಾರತೀಯ ರೈಲ್ವೆಗೆ ಕೃತಜ್ಞತೆ ಸಲ್ಲಿಸಿದ ಆನಂದ್ ಮಹೀಂದ್ರಾ

ಮಹೀಂದ್ರಾ ಅಂಡ್ ಮಹೀಂದ್ರಾ ಭಾರತದ ಅತಿದೊಡ್ಡ ವಾಹನ ತಯಾರಕ ಕಂಪನಿಗಳಲ್ಲಿ ಒಂದು. ಮಹೀಂದ್ರಾ ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ, ದೇಶದ ಅತಿದೊಡ್ಡ ನೆಟ್‌ವರ್ಕ್ ಹೊಂದಿರುವ ರೈಲ್ವೆ ಕ್ಷೇತ್ರಕ್ಕೆ ಟ್ವಿಟರ್‌ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

ವಿಶೇಷ ಸೇವೆ ನೀಡಿದ ಭಾರತೀಯ ರೈಲ್ವೆಗೆ ಕೃತಜ್ಞತೆ ಸಲ್ಲಿಸಿದ ಆನಂದ್ ಮಹೀಂದ್ರಾ

ಮಹೀಂದ್ರಾ ಕಂಪನಿಯು ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ವಿವಿಧ ದೇಶಗಳಲ್ಲಿಯೂ ವಹಿವಾಟು ನಡೆಸುತ್ತಿದೆ. ಅದೇ ರೀತಿ ಮಹೀಂದ್ರಾ ಕಂಪನಿಯು ತನ್ನ ವಾಹನಗಳನ್ನು ಬಾಂಗ್ಲಾದೇಶದಲ್ಲಿಯೂ ಮಾರಾಟ ಮಾಡುತ್ತಿದೆ. ಮಹೀಂದ್ರಾ ಕಂಪನಿಯು ಇತ್ತೀಚೆಗೆ ತನ್ನ ಬೊಲೆರೊ ಕಾರುಗಳನ್ನು ಭಾರತೀಯ ರೈಲ್ವೆ ಮೂಲಕ ಸಾಗಿಸಿ ಬಾಂಗ್ಲಾದೇಶದಲ್ಲಿ ಮಾರಾಟ ಮಾಡಿದೆ ಎಂದು ಹೇಳಲಾಗಿದೆ.

ವಿಶೇಷ ಸೇವೆ ನೀಡಿದ ಭಾರತೀಯ ರೈಲ್ವೆಗೆ ಕೃತಜ್ಞತೆ ಸಲ್ಲಿಸಿದ ಆನಂದ್ ಮಹೀಂದ್ರಾ

ಈ ಕಾರಣಕ್ಕೆ ಆನಂದ್ ಮಹೀಂದ್ರಾ ಭಾರತೀಯ ರೈಲ್ವೆಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಈ ಕಾರುಗಳನ್ನು ಮೇಡ್ ಇನ್ ಇಂಡಿಯಾ ಯೋಜನೆಯಡಿ ಭಾರತೀಯ ರೈಲ್ವೆಯ ಮೂಲಕ ರವಾನಿಸಲಾಗುತ್ತದೆ. ಮಹೀಂದ್ರಾ ಕಂಪನಿಯು ಮಹಾರಾಷ್ಟ್ರದಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ವಿಶೇಷ ಸೇವೆ ನೀಡಿದ ಭಾರತೀಯ ರೈಲ್ವೆಗೆ ಕೃತಜ್ಞತೆ ಸಲ್ಲಿಸಿದ ಆನಂದ್ ಮಹೀಂದ್ರಾ

ಮಹೀಂದ್ರಾ ಕಂಪನಿಯು ತನ್ನ ಬೊಲೆರೊ ಎಂಪಿವಿ ಕಾರುಗಳನ್ನು ಮುಂಬೈನಿಂದ ಬಾಂಗ್ಲಾದೇಶಕ್ಕೆ ರಫ್ತು ಮಾಡಿದೆ. ಈ ಎಲ್ಲಾ ಕಾರುಗಳನ್ನು ಬಾಂಗ್ಲಾದೇಶದ ಪೆನಾಪೋಲ್‌ನಲ್ಲಿ ಆಮದು ಮಾಡಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯ ಮಹೀಂದ್ರಾ ಕಾರುಗಳನ್ನು ರೈಲಿನಲ್ಲಿ ರಫ್ತು ಮಾಡಲಾಗಿದೆ.

ವಿಶೇಷ ಸೇವೆ ನೀಡಿದ ಭಾರತೀಯ ರೈಲ್ವೆಗೆ ಕೃತಜ್ಞತೆ ಸಲ್ಲಿಸಿದ ಆನಂದ್ ಮಹೀಂದ್ರಾ

ಆನಂದ್ ಮಹೀಂದ್ರಾ, ಬೊಲೆರೊ ಕಾರುಗಳನ್ನು ರೈಲಿನೊಳಗೆ ಲೋಡ್ ಮಾಡುತ್ತಿರುವ ವೀಡಿಯೊವನ್ನು ಶೇರ್ ಮಾಡಿದ್ದಾರೆ. ಈ ವೀಡಿಯೊಗೆ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಟ್ಯಾಗ್ ಮಾಡಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ವಿಶೇಷ ಸೇವೆ ನೀಡಿದ ಭಾರತೀಯ ರೈಲ್ವೆಗೆ ಕೃತಜ್ಞತೆ ಸಲ್ಲಿಸಿದ ಆನಂದ್ ಮಹೀಂದ್ರಾ

ಮುಂಬೈನ ಬೊಲೆರೊ ಕಾರುಗಳು ಬಾಂಗ್ಲಾದೇಶದ ಬೆನಾಪೋಲ್ ಗೆ ಹೋಗುತ್ತಿವೆ. ಈ ಶಬ್ದ ನನಗೆ ತುಂಬಾ ಇಷ್ಟವಾಗಿದೆ. ಭಾರತೀಯ ರೈಲ್ವೆಗೆ ಧನ್ಯವಾದಗಳು ಎಂದು ಪೋಸ್ಟ್ ಮಾಡಿದ್ದಾರೆ.

ವಿಶೇಷ ಸೇವೆ ನೀಡಿದ ಭಾರತೀಯ ರೈಲ್ವೆಗೆ ಕೃತಜ್ಞತೆ ಸಲ್ಲಿಸಿದ ಆನಂದ್ ಮಹೀಂದ್ರಾ

ಈ ಹಿಂದೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹಾಗೂ ರೈಲ್ವೆ ಇಲಾಖೆಯು ತಮ್ಮ ಟ್ವಿಟರ್ ಹಾಗೂ ಫೇಸ್‌ಬುಕ್ ಪೇಜ್ ಗಳಲ್ಲಿ ಇದೇ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಅವರ ಪೋಸ್ಟ್ ಗಳ ಪ್ರಕಾರ, 87 ಪಿಕ್ ಅಪ್ ವ್ಯಾನ್‌ಗಳನ್ನು ನವೀ ಮುಂಬಯಿನಿಂದ ಬಾಂಗ್ಲಾದೇಶಕ್ಕೆ ರಫ್ತು ಮಾಡಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ವಿಶೇಷ ಸೇವೆ ನೀಡಿದ ಭಾರತೀಯ ರೈಲ್ವೆಗೆ ಕೃತಜ್ಞತೆ ಸಲ್ಲಿಸಿದ ಆನಂದ್ ಮಹೀಂದ್ರಾ

ಮಹೀಂದ್ರಾ ಕಂಪನಿ ಮಾತ್ರವಲ್ಲದೆ ಭಾರತದ ಇತರ ವಾಹನ ತಯಾರಕ ಕಂಪನಿಗಳು ಸಹ ತಮ್ಮ ಉತ್ಪನ್ನಗಳನ್ನು ದೇಶದ ಇತರ ಭಾಗಗಳಿಗೆ ರಫ್ತು ಮಾಡಲು ರೈಲುಗಳನ್ನು ಬಳಸುತ್ತಿವೆ. ಮಾರುತಿ ಸುಜುಕಿ, ಹ್ಯುಂಡೈ ಹಾಗೂ ಕಿಯಾ ಕಂಪನಿಗಳು ತಮ್ಮ ವಾಹನಗಳನ್ನು ರಫ್ತು ಮಾಡಲು ಭಾರತೀಯ ರೈಲ್ವೆಯನ್ನು ಬಳಸುತ್ತಿವೆ.

ವಿಶೇಷ ಸೇವೆ ನೀಡಿದ ಭಾರತೀಯ ರೈಲ್ವೆಗೆ ಕೃತಜ್ಞತೆ ಸಲ್ಲಿಸಿದ ಆನಂದ್ ಮಹೀಂದ್ರಾ

ಸಾಮಾನ್ಯವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಾಹನಗಳನ್ನು ಸಾಗಿಸಲು ಕಂಟೇನರ್ ಟ್ರಕ್‌ಗಳನ್ನು ಬಳಸಲಾಗುತ್ತದೆ. ಇದಕ್ಕೆ ಹೆಚ್ಚು ಖರ್ಚಾಗುವುದರ ಜೊತೆಗೆ ಹೆಚ್ಚು ಸಮಯ ಬೇಕಾಗುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವಿಶೇಷ ಸೇವೆ ನೀಡಿದ ಭಾರತೀಯ ರೈಲ್ವೆಗೆ ಕೃತಜ್ಞತೆ ಸಲ್ಲಿಸಿದ ಆನಂದ್ ಮಹೀಂದ್ರಾ

ಆದರೆ ರೈಲುಗಳ ಮೂಲಕ ವಾಹನಗಳನ್ನು ರಫ್ತು ಮಾಡುವುದರಿಂದ ಸಾಕಷ್ಟು ಹಣ ಉಳಿತಾಯವಾಗುವುದರ ಜೊತೆಗೆ ಸಮಯವೂ ಉಳಿತಾಯವಾಗುತ್ತದೆ. ಈ ಕಾರಣಕ್ಕಾಗಿಯೇ ವಾಹನ ತಯಾರಕ ಕಂಪನಿಗಳು ತಮ್ಮ ಹೊಸ ವಾಹನಗಳನ್ನು ರೈಲುಗಳ ಮೂಲಕ ಸಾಗಿಸುತ್ತಿವೆ.

ವಾಹನ ತಯಾರಕ ಕಂಪನಿಗಳನ್ನು ಆಕರ್ಷಿಸಲು ಭಾರತೀಯ ರೈಲ್ವೆಯು ವಿವಿಧ ಕೊಡುಗೆಗಳನ್ನು ನೀಡುತ್ತಿರುವುದು ಗಮನಾರ್ಹ. ಇದರಿಂದಾಗಿ ರೈಲು ಮೂಲಕ ವಾಹನಗಳನ್ನು ಸಾಗಿಸುವುದು ಹಿಂದಿಗಿಂತ ಈಗ ಹೆಚ್ಚಾಗುತ್ತಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ವಿಶೇಷ ಸೇವೆ ನೀಡಿದ ಭಾರತೀಯ ರೈಲ್ವೆಗೆ ಕೃತಜ್ಞತೆ ಸಲ್ಲಿಸಿದ ಆನಂದ್ ಮಹೀಂದ್ರಾ

ಮಾರುತಿ ಸುಜುಕಿ ಕಂಪನಿಯು 2019-2020ರವರೆಗೆ ಭಾರತೀಯ ರೈಲ್ವೆ ಮೂಲಕ 1.78 ಲಕ್ಷ ವಾಹನಗಳನ್ನು ರವಾನಿಸಿದೆ. ಆಂಧ್ರಪ್ರದೇಶದಲ್ಲಿ ಉತ್ಪಾದನಾ ಘಟಕವನ್ನು ಹೊಂದಿರುವ ಕಿಯಾ ಮೋಟಾರ್ಸ್ ಸಹ ತನ್ನ ಸಾವಿರಾರು ಸೆಲ್ಟೋಸ್ ಹಾಗೂ ಸೊನೆಟ್ ಎಸ್‌ಯುವಿಗಳನ್ನು ರಫ್ತು ಮಾಡಿದೆ. ಕಿಯಾ ಇತ್ತೀಚೆಗೆ ರೈಲು ಮೂಲಕ ದೇಶದ ಇತರ ಭಾಗಗಳಿಗೆ ಸೊನೆಟ್‌ ಎಸ್‌ಯುವಿಗಳನ್ನು ಸಾಗಿಸಿದೆ.

Most Read Articles

Kannada
English summary
Anand Mahindra thanks Indian Railways for its special service. Read in Kannada.
Story first published: Tuesday, October 27, 2020, 14:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X