ಹೀಗಿರಬೇಕು ನೋಡಿ ಸಚಿವೆ ಅಂದ್ರೆ: ಆಟೋ ಓಡಿಸಿ ಚಾಲಕರೊಂದಿಗೆ ಸಮಯ ಕಳೆದ ರೋಜಾ

ಆಂಧ್ರಪ್ರದೇಶದ ವೈಎಸ್ ಜಗನ್ ಅವರ ನೇತೃತ್ವದ ವೈಎಸ್ಆರ್ ಸರ್ಕಾರವು ವಾಹನ ಮಿತ್ರ ಯೋಜನೆಯ ನಾಲ್ಕನೇ ಹಂತದ ಹಣವನ್ನು ವಿತರಿಸಿದ ಹಿನ್ನೆಲೆ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರವಾಸೋದ್ಯಮ ಸಚಿವೆ ಆರ್.ಕೆ.ರೋಜಾ ಅವರು ಚಾಲಕನ ಆಸನದಲ್ಲಿ ಕುಳಿತು ಆಟೋ ಓಡಿಸಿದರು.

ಹೀಗಿರಬೇಕು ನೋಡಿ ಸಚಿವೆ ಅಂದ್ರೆ: ಆಟೋ ಓಡಿಸಿ ಚಾಲಕರೊಂದಿಗೆ ಸಮಯ ಕಳೆದ ರೋಜಾ

ಆರ್ಥಿಕವಾಗಿ ದುರ್ಬಲವಾಗಿರುವ ಟ್ಯಾಕ್ಸಿ ಚಾಲಕರಿಗೆ ಹಣಕಾಸಿನ ನೆರವು ನೀಡುವ ಮೂಲಕ ಆದಾಯವನ್ನು ಹೆಚ್ಚಿಸಲು ಮತ್ತು ಟ್ಯಾಕ್ಸಿ ರಿಪೇರಿ ವೆಚ್ಚವನ್ನು ಕಡಿಮೆ ಮಾಡಲು ಆಂಧ್ರಪ್ರದೇಶ ಸರ್ಕಾರದ ಯೋಜನೆಯಾದ ವಾಹನ ಮಿತ್ರದ ನಾಲ್ಕನೇ ಹಂತದ ಕಾರ್ಯಕ್ರಮಕ್ಕೆ ಶುಕ್ರವಾರ ತಿರುಪತಿಯಲ್ಲಿ ಚಾಲನೆ ನೀಡಲಾಯಿತು.

ಹೀಗಿರಬೇಕು ನೋಡಿ ಸಚಿವೆ ಅಂದ್ರೆ: ಆಟೋ ಓಡಿಸಿ ಚಾಲಕರೊಂದಿಗೆ ಸಮಯ ಕಳೆದ ರೋಜಾ

ತಿರುಪತಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಚಿವೆ ರೋಜಾ ಭಾಗವಹಿಸಿದ್ದು, ಆಟೋ ಚಾಲಕರು ಅವರಿಗೆ ಆಟೋ ಸಮವಸ್ತ್ರ ನೀಡಿದರು. ನಂತರ ರೋಜಾ ಡ್ರೈವರ್ ಸೀಟಿನಲ್ಲಿ ಕುಳಿತು ಇತರರನ್ನು ಕರೆದುಕೊಂಡು ಆಟೋ ಓಡಿಸಿದರು. ಇದೀಗ ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.

ವಿಡಿಯೋ ವರದಿಯನ್ನು ಸಾಕ್ಷಿ ಟಿವಿ ಲೈವ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ತಿರುಪತಿಯಲ್ಲಿ ಕಾರ್ಯಕ್ರಮ ನಡೆದಿದ್ದು, ಸಚಿವೆ ಪ್ರಯಾಣಿಕರೊಂದಿಗೆ ಆಟೋ ಓಡಿಸುವುದನ್ನು ವಿಡಿಯೋದಲ್ಲಿ ನೋಡಬಹುದು. ಅವರು ಒಳಾಂಗಣ ಪ್ರದೇಶದಲ್ಲಿ ಆಟೋ ಓಡಿಸುತ್ತಿರುವುದು ಕಾಣಿಸುತ್ತಿದೆ. ಇದು ಬಹುಶಃ ಈವೆಂಟ್ ನಡೆಸಿದ ಸ್ಥಳದ ಪಕ್ಕದ ಪ್ರದೇಶವಾಗಿದೆ.

ಹೀಗಿರಬೇಕು ನೋಡಿ ಸಚಿವೆ ಅಂದ್ರೆ: ಆಟೋ ಓಡಿಸಿ ಚಾಲಕರೊಂದಿಗೆ ಸಮಯ ಕಳೆದ ರೋಜಾ

ಆರಂಭದಲ್ಲಿ ಸಚಿವೆ ಆರ್.ಕೆ.ರೋಜಾ ವೃತ್ತಿಪರ ಆಟೋ ಚಾಲಕರ ಜೊತೆಗಿದ್ದರು. ಡ್ರೈವರ್‌ ಒಬ್ಬರು ಅವರಿಗೆ ಆಟೋ ಓಡಿಸುವ ಸೂಚನೆಗಳನ್ನು ನೀಡುತ್ತಿದ್ದರು. ಹಿಂಬದಿ ಸೀಟಿನಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಪ್ರಯಾಣಿಕರೇ ಕಂಡು ಬಂದಿದ್ದಾರೆ. ಸಚಿವರು ಕೆಲಹೊತ್ತು ಆವರಣದೊಳಗೆ ಆಟೋ ಓಡಿಸಿ ಚಾಲಕರು ಹಾಗೂ ಕಾರ್ಯಕರ್ತರಂದಿಗೆ ಸಮಯ ಕಳೆದರು.

ಹೀಗಿರಬೇಕು ನೋಡಿ ಸಚಿವೆ ಅಂದ್ರೆ: ಆಟೋ ಓಡಿಸಿ ಚಾಲಕರೊಂದಿಗೆ ಸಮಯ ಕಳೆದ ರೋಜಾ

ವಾಹನ ಮಿತ್ರ ಯೋಜನೆಯು ಆಂಧ್ರಪ್ರದೇಶ ಸರ್ಕಾರದಿಂದ ರಾಜ್ಯದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಹಣಕಾಸಿನ ನೆರವಿಗಾಗಿ ಉದ್ದೇಶಿಸಲಾದ ಯೋಜನೆಯಾಗಿದೆ. ಈ ಯೋಜನೆಯಡಿ ರಾಜ್ಯದ ಆಟೋ ಮತ್ತು ಟ್ಯಾಕ್ಸಿ ಚಾಲಕರು ವಾರ್ಷಿಕ 10,000 ರೂಪಾಯಿಗಳನ್ನು ಆರ್ಥಿಕ ಸಹಾಯವಾಗಿ ಪಡೆಯಬಹುದಾಗಿದೆ.

ಹೀಗಿರಬೇಕು ನೋಡಿ ಸಚಿವೆ ಅಂದ್ರೆ: ಆಟೋ ಓಡಿಸಿ ಚಾಲಕರೊಂದಿಗೆ ಸಮಯ ಕಳೆದ ರೋಜಾ

ವೈಎಸ್ಆರ್ ವಾಹನ ಮಿತ್ರ ಯೋಜನೆಯಡಿ ಆನ್‌ಲೈನ್‌ನಲ್ಲಿ ನೋಂದಾಯಿಸಿದ ಎಲ್ಲಾ ಚಾಲಕರಿಗೆ ಪ್ರಯೋಜನವನ್ನು ನೀಡಲಾಗುತ್ತದೆ. ಯೋಜನೆಯಡಿ ಪ್ರಯೋಜನಗಳನ್ನು ನೇರವಾಗಿ ಚಾಲಕರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ. ಆಸಕ್ತ ಚಾಲಕರು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಹೀಗಿರಬೇಕು ನೋಡಿ ಸಚಿವೆ ಅಂದ್ರೆ: ಆಟೋ ಓಡಿಸಿ ಚಾಲಕರೊಂದಿಗೆ ಸಮಯ ಕಳೆದ ರೋಜಾ

ಯೋಜನೆಯ ನಾಲ್ಕನೇ ಹಂತದಲ್ಲಿ 12,137 ಫಲಾನುಭವಿಗಳ ಖಾತೆಗೆ 12.13 ಕೋಟಿ ರೂ. ನೀಡಲಾಗಿದ್ದು, ಫಲಾನುಭವಿಗಳ ಪಟ್ಟಿಯನ್ನು ವಾರ್ಡ್ ಮತ್ತು ಗ್ರಾಮ ಕಾರ್ಯದರ್ಶಿಗಳು ಕಾರ್ಯಕ್ರಮದಲ್ಲಿ ಪ್ರದರ್ಶಿಸಿದರು. ಸ್ವಯಂ ಸ್ವಾಮ್ಯದ ಆಟೋರಿಕ್ಷಾ ಅಥವಾ ಟ್ಯಾಕ್ಸಿ ಓಡಿಸುವ ಚಾಲಕರಿಗೆ ಮಾತ್ರ ಈ ಯೋಜನೆ ಅನ್ವಯಿಸುತ್ತದೆ.

ಹೀಗಿರಬೇಕು ನೋಡಿ ಸಚಿವೆ ಅಂದ್ರೆ: ಆಟೋ ಓಡಿಸಿ ಚಾಲಕರೊಂದಿಗೆ ಸಮಯ ಕಳೆದ ರೋಜಾ

ಬಸ್‌ ಚಾಲಕರಾದ ಕ್ರಿಕೆಟಿಗರು

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಇಬ್ಬರು ಶ್ರೀಲಂಕಾ ಕ್ರಿಕೆಟಿಗರ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿತ್ತು. ಶ್ರೀಲಂಕಾದ ಮಾಜಿ ಸ್ಪಿನ್ನರ್ ಸೂರಜ್ ರಣದೀವ್ ಮತ್ತು ಜಯಸಿಂಗ್ ಈಗ ಆಸ್ಟ್ರೇಲಿಯಾದಲ್ಲಿ ಬಸ್ ಚಾಲಕರಾಗಿದ್ದಾರೆ. ಈ ಆಟಗಾರರು ಬಸ್ ಚಾಲನೆಯನ್ನು ಪೂರ್ಣ ಸಮಯದ ಉದ್ಯೋಗವಾಗಿ ಆಯ್ಕೆ ಮಾಡಲು ಯಾವಾಗ ನಿರ್ಧರಿಸಿದರು ಎಂಬುದು ಸ್ಪಷ್ಟವಾಗಿಲ್ಲ.

ಹೀಗಿರಬೇಕು ನೋಡಿ ಸಚಿವೆ ಅಂದ್ರೆ: ಆಟೋ ಓಡಿಸಿ ಚಾಲಕರೊಂದಿಗೆ ಸಮಯ ಕಳೆದ ರೋಜಾ

ಶ್ರೀಲಂಕಾ ಪ್ರಸ್ತುತ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹೆಣಗಾಡುತ್ತಿದೆ. ಈ ಆಟಗಾರರು ತಮ್ಮ ದೇಶವನ್ನು ತೊರೆದು ವಿದೇಶಿ ನೆಲದಲ್ಲಿ ಕೆಲಸ ಮಾಡಲು ಆಯ್ಕೆ ಮಾಡಲು ಇದು ಒಂದು ಕಾರಣವೇ ಎಂಬುದು ಸ್ಪಷ್ಟವಾಗಿಲ್ಲ. ಸೂರಜ್ ರಂದೀವ್‌ ಶ್ರೀಲಂಕಾ ಪರ ಒಟ್ಟು 12 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, 43 ವಿಕೆಟ್‌ಗಳನ್ನು ಪಡೆದಿದ್ದಾರೆ.

ಹೀಗಿರಬೇಕು ನೋಡಿ ಸಚಿವೆ ಅಂದ್ರೆ: ಆಟೋ ಓಡಿಸಿ ಚಾಲಕರೊಂದಿಗೆ ಸಮಯ ಕಳೆದ ರೋಜಾ

ಇನ್ನು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲೂ ಮಿಂಚಿರುವ ಆಫ್‌ ಸ್ಪಿನ್ನರ್‌ 31 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿ 36 ವಿಕೆಟ್‌ಗಳನ್ನು ಗಳಿಸಿದ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ ನಲ್ಲೂ ಮೂರು ಪಂದ್ಯಗಳನ್ನು ಆಡಿ 7 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.

Most Read Articles

Kannada
English summary
Andhra Pradesh Tourism Minister RK Roja is an auto driver
Story first published: Friday, August 5, 2022, 17:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X