ಜಾಗ್ವಾರ್ ಬದಲು ಬಿ‍ಎಂ‍‍ಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?

ಹರಿಯಾಣದ ಯುವಕನೊಬ್ಬ ತನ್ನ ಪೋಷಕರಿಂದ ಬಿ‍ಎಂ‍‍ಡಬ್ಲ್ಯು ಸೆಡಾನ್ ಕಾರ್ ಅನ್ನು ಗಿಫ್ಟ್ ಆಗಿ ಪಡೆದಿದ್ದಾನೆ. ಈ ಯುವಕ ತನ್ನ ಪೋಷಕರಿಂದ ಜಾಗ್ವಾರ್ ಕಾರ್ ಅನ್ನು ಗಿಫ್ಟ್ ಪಡೆಯಲು ಬಯಸಿದ್ದ. ಅದರ ಬದಲಿಗೆ ಬಿ‍ಎಂ‍‍ಡಬ್ಲ್ಯು ಕಾರ್ ಪಡೆದಿದ್ದಾನೆ.

ಜಾಗ್ವಾರ್ ಬದಲು ಬಿ‍ಎಂ‍‍ಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?

ಇದರಿಂದ ಕುಪಿತಗೊಂಡ ಆತ ತನ್ನ ಹೊಸ ಕಾರ್ ಅನ್ನು ನದಿಗೆ ತಳ್ಳಿದ್ದಾನೆ. ಇಷ್ಟಕ್ಕೆ ಸುಮ್ಮನಾಗದೇ ಅದರ ವೀಡಿಯೊವನ್ನು ಮಾಡಿದ್ದಾನೆ. ಈ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಯುವಕನು ನದಿಗೆ ತಳ್ಳಿರುವ ಬಿಎಂಡಬ್ಲ್ಯು ಸೆಡಾನ್‌ನ ನಿಖರವಾದ ಮಾದರಿ ಬಗ್ಗೆ ತಿಳಿದು ಬಂದಿಲ್ಲ. ಆದರೆ ಈ ಕಾರು 3 ಸೀರಿಸ್ ಅಥವಾ 5 ಸೀರಿಸ್ ಕಾರಿನಂತೆ ಕಾಣುತ್ತದೆ. ಈ ಎರಡೂ ಮಾದರಿಯ ಕಾರುಗಳ ಬೆಲೆಯು ದುಬಾರಿಯಾಗಿದ್ದು ಸುಮಾರು ರೂ.50 ಲಕ್ಷ ಬೆಲೆಯನ್ನು ಹೊಂದಿವೆ.

ಜಾಗ್ವಾರ್ ಬದಲು ಬಿ‍ಎಂ‍‍ಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?

ಯಮುನಾ ನಗರದ ಯುವಕನು ಈ ಕಾರನ್ನು ತನ್ನ ಪೋಷಕರಿಂದ ಗಿಫ್ಟ್ ಆಗಿ ಪಡೆದಿದ್ದಾನೆ. ಯಾವ ಕಾರಣಕ್ಕಾಗಿ ಗಿಫ್ಟ್ ನೀಡಲಾಯಿತು ಎಂದು ತಿಳಿದು ಬಂದಿಲ್ಲ. ಕಳೆದ ಕೆಲವು ದಿನಗಳಿಂದ ವ್ಯಾಪಕವಾಗಿ ಮಳೆ ಬೀಳುತ್ತಿರುವುದರಿಂದ ನದಿಯು ತುಂಬಿದ್ದು, ಹೆಚ್ಚಿನ ಹರಿವಿನ್ನು ಹೊಂದಿದೆ.

ಜಾಗ್ವಾರ್ ಬದಲು ಬಿ‍ಎಂ‍‍ಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?

ಈ ಹರಿವಿನ ಕಾರಣದಿಂದಾಗಿ ಹೊಸ ಕಾರು ಕೊಚ್ಚಿ ಕೊಂಡು ಹೋಗಿದೆ. ಯುವಕನು ತನ್ನ ಹೊಸ ಕಾರನ್ನು ನದಿಗೆ ತಳ್ಳಿ ಅದರ ವೀಡಿಯೊವನ್ನು ಸಹ ಮಾಡಿದ್ದಾನೆ ಎಂದು ವರದಿಯಾಗಿದೆ. ತನ್ನ ಕೋಪವನ್ನು ತೋರಿಸಲು ಆ ವೀಡಿಯೊವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದಾನೆ.

ಆದರೆ ಆ ಕಾರು ನದಿಯ ಮಧ್ಯದಲ್ಲಿರುವ ನೈಸರ್ಗಿಕ ದ್ವೀಪವೊಂದರಲ್ಲಿದ್ದ ಎತ್ತರದ ಹುಲ್ಲಿನಲ್ಲಿ ಸಿಲುಕಿಕೊಂಡ ನಂತರ, ಯುವಕನು ಸ್ಥಳೀಯ ಜನರ ಸಹಾಯ ಪಡೆದು ಕಾರನ್ನು ಹಿಂದಕ್ಕೆ ತೆಗೆದುಕೊಂಡು ಹೋಗಲು ಯತ್ನಿಸಿದ್ದಾನೆ. ಇದೇ ವೀಡಿಯೊವನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದೆ.

ಜಾಗ್ವಾರ್ ಬದಲು ಬಿ‍ಎಂ‍‍ಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?

ಯುವಕನ ಬಗ್ಗೆ ಖಚಿತ ಮಾಹಿತಿ ತಿಳಿದು ಬಂದಿಲ್ಲ. ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಸಹ ಯುವಕನ ಬಗೆಗಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಈ ಯುವಕನು ಹರಿಯಾಣದ ಯಮುನಾ ನಗರಕ್ಕೆ ಸೇರಿದವನು ಎಂಬುದಾಗಿ ವರದಿಯಾಗಿದೆ.

ಜಾಗ್ವಾರ್ ಬದಲು ಬಿ‍ಎಂ‍‍ಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?

ಯುವಕನನ್ನು ಬಂಧಿಸಲಾಗಿದೆಯೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ. ಕಾರನ್ನು ವಶಪಡಿಸಿಕೊಳ್ಳಲಾಗಿದೆಯೇ ಎಂಬುದು ಸಹ ತಿಳಿದು ಬಂದಿಲ್ಲ. ಯುವಕನನ್ನು ಬಂಧಿಸಿದ ನಂತರ ಯಾವ ಪ್ರಕರಣಗಳನ್ನು ದಾಖಲಿಸಲಾಗುವುದು ಎಂಬುದರ ಬಗ್ಗೆ ಇನ್ನಷ್ಟೆ ತಿಳಿಯಬೇಕಿದೆ.

MOST READ: ಕಾರಿನೊಳಗೆ ಸಿಲುಕಿದ್ದ ಮಗು- ಕೊನೆಗೂ ಬಚಾವ್ ಆಗಿದ್ದು ಹೇಗೆ ಗೊತ್ತಾ?

ಜಾಗ್ವಾರ್ ಬದಲು ಬಿ‍ಎಂ‍‍ಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?

ಯುವಕನ ತಂದೆ ಹರಿಯಾಣದಲ್ಲಿ ಭೂಮಾಲೀಕರು ಎಂಬುದನ್ನು ಬಿಟ್ಟರೆ ಬೇರೆ ಮಾಹಿತಿಗಳು ತಿಳಿದು ಬಂದಿಲ್ಲ. ಯುವಕನು ಇನ್ನೂ ಚಿಕ್ಕ ವಯಸ್ಸಾವನಾಗಿದ್ದು, ತನ್ನ ಕೋಪವನ್ನು ತೋರಿಸಲು ಈ ರೀತಿಯಾಗಿ ಮಾಡಿದ್ದಾನೆ. ಐಷಾರಾಮಿ ಕಾರುಗಳಾದ ಬಿಎಂಡಬ್ಲ್ಯು, ಆಡಿ ಹಾಗೂ ಮರ್ಸಿಡಿಸ್ ಬೆಂಜ್, ಹರಿಯಾಣದ ಬಹುತೇಕ ಭಾಗಗಳಲ್ಲಿ ಸಾಮಾನ್ಯವಾಗಿವೆ.

MOST READ: ಸಾವಿನಂಚಿನಿಂದ ಬಚಾವ್ ಆದ ಕೆಟಿ‍ಎಂ ಬೈಕ್ ಸವಾರ

ಜಾಗ್ವಾರ್ ಬದಲು ಬಿ‍ಎಂ‍‍ಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?

ಮೂಲಸೌಕರ್ಯ ಯೋಜನೆಗಳಿಗಾಗಿ ಜಮೀನುಗಳನ್ನು ಸರ್ಕಾರಕ್ಕೆ ಮಾರಾಟ ಮಾಡುವ ಮೂಲಕ ಭೂಮಾಲೀಕರು ಹಾಗೂ ರೈತರು ಸರ್ಕಾರದಿಂದ ಭಾರಿ ಮೊತ್ತವನ್ನು ಪಡೆಯುತ್ತಿದ್ದಾರೆ. ಅನೇಕ ಜನ ಆ ಹಣದಿಂದಲೇ ಇಂತಹ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಖರೀದಿಸುತ್ತಿದ್ದಾರೆ.

MOST READ: ಕಳಪೆ ಕಾಮಗಾರಿ ಮಾಡಿದ ಎಂಜಿನಿಯರ್ ಮೇಲೆ ಕೆಸರು ಸುರಿದ ಶಾಸಕ

ಜಾಗ್ವಾರ್ ಬದಲು ಬಿ‍ಎಂ‍‍ಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?

ನಿರ್ವಹಣಾ ವೆಚ್ಚವು ತುಂಬಾ ಹೆಚ್ಚಾಗಿರುವುದರಿಂದ ಇಂತಹ ದುಬಾರಿ ಬೆಲೆಯ ವಾಹನಗಳನ್ನು ಖರೀದಿಸುವುದಕ್ಕೆ ಜನರು ಹಿಂದೇಟು ಹಾಕುತ್ತಿದ್ದು, ಹೊಸ ಕಾರುಗಳನ್ನು ಖರೀದಿಸುವಾಗ ಅವುಗಳನ್ನು ಪರಿಗಣಿಸುತ್ತಿಲ್ಲ.

ಜಾಗ್ವಾರ್ ಬದಲು ಬಿ‍ಎಂ‍‍ಡಬ್ಲ್ಯು ಗಿಫ್ಟ್ ಪಡೆದ ಯುವಕ ಮಾಡಿದ್ದೇನು ಗೊತ್ತಾ?

ಐಷಾರಾಮಿ ಕಾರುಗಳಾದ ಆಡಿ, ಜಾಗ್ವಾರ್, ಬಿಎಂಡಬ್ಲ್ಯು ಹೆಸರುಗಳನ್ನು ಸ್ಥಳೀಯ ಹಾಡುಗಳಲ್ಲಿ ಹಾಗೂ ಪಂಜಾಬಿ ಹಾಡುಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತಿದೆ. ಇದು ಯುವಕರು ಅಂತಹ ಕಾರುಗಳನ್ನು ಖರೀದಿಸಲು ಪ್ರಭಾವ ಬೀರುತ್ತವೆ.

Most Read Articles

Kannada
English summary
Angry youth dumps BMW sedan in a river as parents gift him a BMW instead of a Jaguar - Read in kannada
Story first published: Saturday, August 10, 2019, 18:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X