Just In
- 10 min ago
ವಿನೂತನ ವೈಶಿಷ್ಟ್ಯತೆಯೊಂದಿಗೆ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾದ ರಾಯಲ್ ಎನ್ಫೀಲ್ಡ್ ಮಿಟಿಯೊರ್ 350
- 47 min ago
ಹೊಸ ಜೀಪ್ ರ್ಯಾಂಗ್ಲರ್ ರೂಬಿಕಾನ್ 392 ಲಾಂಚ್ ಎಡಿಷನ್ ಬಿಡುಗಡೆ
- 1 hr ago
ಸ್ಪ್ಲೆಂಡರ್ ಬೈಕುಗಳ ಮೇಲೆ ಭರ್ಜರಿ ಡಿಸ್ಕೌಂಟ್ ನೀಡುತ್ತಿದೆ ಹೀರೋ ಮೋಟೊಕಾರ್ಪ್
- 2 hrs ago
2021ರ ಸ್ವಿಫ್ಟ್ ಕಾರಿನ ಆಕ್ಸೆಸರಿಸ್ ಪ್ಯಾಕೇಜ್ ಬಿಡುಗಡೆ ಮಾಡಿದ ಮಾರುತಿ ಸುಜುಕಿ
Don't Miss!
- News
ಅಂತರರಾಷ್ಟ್ರೀಯ ವಿಮಾನ ಸಂಚಾರದ ಮೇಲಿನ ನಿರ್ಬಂಧ ಮುಂದುವರಿಕೆ
- Movies
ನಿರ್ದೇಶಕನಿಗೆ ಅವಮಾನ: ಸ್ಟಾರ್ ನಟ ಆಗಿದ್ರೆ ಸುಮ್ಮನೆ ಬಿಡುತ್ತಿದ್ರಾ? ಚಂದ್ರಶೇಖರ್ ಅಸಮಾಧಾನ
- Finance
ಮುಂದಿನ 6 ತಿಂಗಳಿನಲ್ಲಿ ದೆಹಲಿಯ ಎಲ್ಲಾ ಸರ್ಕಾರಿ ಕಾರುಗಳು, ಎಲೆಕ್ಟ್ರಿಕ್ ಕಾರುಗಳಾಗಿ ಬದಲಾಗಲಿವೆ!
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ಜೊತೆ ಇಶ್ ಸೋಧಿ ಒಪ್ಪಂದ
- Lifestyle
ಅರಿಶಿನದ ಈ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ, ನೀವೂ ಶಾಕ್ ಆಗ್ತೀರಾ!
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮಾರುತಿ ಕಾರಿಗೂ ಮುನ್ನ ಭಾರೀ ಜನಪ್ರಿಯವಾಗಿತ್ತು ಭಾರತದ ಮೊದಲ ಸ್ವದೇಶಿ ಕಾರು
ಕ್ಲಾಸಿಕ್ ಕಾರುಗಳ ವಿಷಯಕ್ಕೆ ಬಂದಾಗ ಮೊದಲು ನೆನಪಿಗೆ ಬರುವುದು ಅಂಬಾಸಿಡರ್ ಕಾರು. ಈ ಕಾರು ಭಾರತದ ಇತಿಹಾಸದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದೆ. ಅಂಬಾಸಿಡರ್ ಕಾರಿನ ಜೊತೆಗೆ ಮತ್ತೊಂದು ಕಾರ್ ಅನ್ನು ನಿರ್ಮಿಸಲಾಗಿತ್ತು. ಆ ಸಮಯದಲ್ಲಿ ಈ ಕಾರು ಭಾರತೀಯ ವಾಹನ ಉದ್ಯಮದ ಸ್ವಾವಲಂಬನೆಗೆ ಉದಾಹರಣೆಯಾಗಿತ್ತು.

ಅರವಿಂದ್ ಮೋಟಾರ್ಸ್ನ ಈ ಮಾಡೆಲ್ -3 ಕಾರ್ ಅನ್ನು ಕೇರಳದ ತಿರುವನಂತಪುರಂನಲ್ಲಿ 1966ರಲ್ಲಿ ನಿರ್ಮಿಸಲಾಗಿತ್ತು. ಈ ಕಾರನ್ನು ಕೇರಳದ ಸ್ಥಳೀಯ ಮೆಕಾನಿಕ್ ಕೆಎಬಿ ಮೆನನ್ ಎಂಬುವವರು ಅಭಿವೃದ್ಧಿಪಡಿಸಿದರು. ವೃತ್ತಿಪರ ಮೆಕಾನಿಕ್ ಆಗಿದ್ದ ಅವರು ಸ್ವಂತ ಕಾರ್ ಕಂಪನಿಯನ್ನು ಆರಂಭಿಸಿ ಕಾರುಗಳನ್ನು ನಿರ್ಮಿಸಿದರು. ಈ ಕಾರು ತಯಾರಿಸಲು ಅವರು ಬೇರೆ ಯಾವ ಕಂಪನಿಯ ನೆರವನ್ನೂ ಸಹ ಪಡೆಯಲಿಲ್ಲ. ಕೆಎಬಿ ಮೆನನ್ ಈ ಕಾರನ್ನು ಭಾರತದ ಸಾಮಾನ್ಯ ನಾಗರಿಕರಿಗಾಗಿ ಪರಿಚಯಿಸಲು ಬಯಸಿದ್ದರು.

1960ರ ದಶಕದಲ್ಲಿ ಭಾರತದಲ್ಲಿದ್ದ ಹೆಚ್ಚಿನ ಕಾರು ಕಂಪನಿಗಳು ಅಮೆರಿಕಾ ಹಾಗೂ ಯುರೋಪಿಗೆ ಸೇರಿದ್ದವು. ಆ ಸಮಯದಲ್ಲಿ ಸಾಮಾನ್ಯ ಭಾರತೀಯನೊಬ್ಬ ಕಾರು ಕಂಪನಿಯನ್ನು ತೆರೆಯುವುದು ದೊಡ್ಡ ವಿಷಯವಾಗಿತ್ತು. ಮಾಡೆಲ್ -3 ಕಾರಿನ ವಿನ್ಯಾಸವು ಅಮೆರಿಕಾದ ಕಾರ್ ಕ್ಯಾಡಿಲಾಕ್'ನಿಂದ ಸ್ವಲ್ಪಮಟ್ಟಿಗೆ ಸ್ಫೂರ್ತಿ ಪಡೆದಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ಕಾರಿನಲ್ಲಿ ಉದ್ದವಾದ ಬಾನೆಟ್ ಹಾಗೂ ಅಷ್ಟೇ ಉದ್ದವಾದ ಬೂಟ್ ಸ್ಪೇಸ್ ನೀಡಲಾಗಿದೆ. ಆ ಸಮಯದಲ್ಲಿ ಅಮೆರಿಕಾ ಹಾಗೂ ಯುರೋಪ್ ದೇಶಗಳಲ್ಲಿ ಮಾತ್ರ ಲಭ್ಯವಿದ್ದ ದೊಡ್ಡ ಸೆಡಾನ್ ಕಾರುಗಳ ಗಾತ್ರಕ್ಕೆ ಈ ಕಾರಿನ ಗಾತ್ರವನ್ನು ಹೋಲಿಸಬಹುದು.

ಈ ಕಾರಿನ ವಿನ್ಯಾಸ ಸರಳವಾಗಿದ್ದರೂ ಆಕರ್ಷಕವಾಗಿತ್ತು. ಕಾರಿನಲ್ಲಿ ಹೆಡ್ಲೈಟ್, ಗ್ರಿಲ್, ವಿಂಡೋ ಜೊತೆಗೆ ಹಲವು ಭಾಗಗಳಲ್ಲಿ ಕ್ರೋಮ್ ಫಿನಿಶಿಂಗ್'ಗಳನ್ನು ನೀಡಲಾಗಿದೆ. ಕಾರಿನ ಮುಂಭಾಗದಲ್ಲಿರುವ ಬಾನೆಟ್ನಲ್ಲಿ ಸ್ಯಾಂಡ್ ಕಾಸ್ಟಿಂಗ್'ನಿಂದ ತಯಾರಿಸಿದ ಅರವಿಂದ್ ಲೋಗೋವನ್ನು ಕಾಣಬಹುದು.
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಈ ಕಾರಿನಲ್ಲಿ ಫಿಯೆಟ್ನ 1100 ಮಾದರಿ ಡೀಸೆಲ್ ಎಂಜಿನ್ ಅನ್ನು ಬಳಸಲಾಗುತ್ತಿತ್ತು. ಈ ಎಂಜಿನ್ ಆ ಸಮಯದಲ್ಲಿ ಹೆಚ್ಚು ಉತ್ತಮವಾದ ಎಂಜಿನ್ ಎಂದು ಪರಿಗಣಿತವಾಗಿತ್ತು. ನಂತರ ಈ ಕಾರಿನಲ್ಲಿ ಮರ್ಸಿಡಿಸ್ ಬೆಂಝ್ ಎಂಜಿನ್ ಅನ್ನು ಬಳಸಲಾಯಿತು.

ಈ ಕಾರಿನ ಬಹುತೇಕ ಭಾಗಗಳನ್ನು ಅರವಿಂದ್ ಮೋಟಾರ್ಸ್ ಸ್ಥಾವರದಲ್ಲಿ ತಯಾರಿಸಲಾಯಿತು. ಬಂಡವಾಳ ಹೂಡಿಕೆಯ ಕೊರತೆಯಿಂದಾಗಿ ಮೆನನ್ ತಮ್ಮ ವ್ಯವಹಾರವನ್ನು ವಿಸ್ತರಿಸಲು ತೊಂದರೆ ಎದುರಿಸಿದರು.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

1970ರ ದಶಕದ ಆರಂಭದಲ್ಲಿ ಧನ ಸಹಾಯಕ್ಕಾಗಿ ಮೆನನ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. ಜೊತೆಗೆ ಕಂಪನಿಯನ್ನು ವಿಸ್ತರಿಸಲು ಪರವಾನಗಿ ಕೋರಿದರು. ಆದರೆ ಸರ್ಕಾರವು ಅರವಿಂದ ಮೋಟಾರ್ಸ್ ಅನ್ನು ನಿರ್ಲಕ್ಷಿಸಿ ಮಾರುತಿ ಕಂಪನಿಗೆ ಪರವಾನಗಿ ನೀಡಿತು. ಸರ್ಕಾರದ ಈ ನಿರ್ಧಾರವು ಕಂಪನಿಯ ಬೆಳವಣಿಗೆಯ ಮೇಲೆ ಪರಿಣಾಮ ಬೀರಿತು.

ಮೆನನ್ ಅವರ ಅರವಿಂದ ಮೋಟಾರ್ಸ್ ಅನ್ನು ಸದ್ಯಕ್ಕೆ ಅವರ ಮೊಮ್ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. ಮಾಡೆಲ್ -3 ಕಾರನ್ನು ಆ ಸಮಯದಲ್ಲಿ ರೂ.5,000ಗಳಿಗೆ ಮಾರಾಟ ಮಾಡಲಾಗುತ್ತಿತ್ತು. ಈ ಕಾರು ತಿರುವನಂತಪುರದಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿತ್ತು. ಈ ಕಾರನ್ನು ಹಲವು ಚಿತ್ರ ನಟರು ಖರೀದಿಸಿದ್ದರು.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಡಿಮೆ ಮಾರಾಟ ಹಾಗೂ ಹೂಡಿಕೆಯ ಕೊರತೆಯಿಂದಾಗಿ 1971ರಲ್ಲಿ ಅರವಿಂದ್ ಮೋಟಾರ್ಸ್ ವ್ಯವಹಾರವನ್ನು ಸ್ಥಗಿತಗೊಳಿಸಲಾಯಿತು. ಅದೇ ವರ್ಷ ಕೆಎಬಿ ಮೆನನ್ ಹೃದಯಾಘಾತದಿಂದ ನಿಧನರಾದರು. ಅವರ ನಂತರ ಅವರ ಪತ್ನಿ ಕಂಪನಿಯ ವ್ಯವಹಾರವನ್ನು ನೋಡಿಕೊಳ್ಳಲು ಆರಂಭಿಸಿದರು. ಕಂಪನಿಯು ಎಲೆಕ್ಟ್ರಿಕ್ ಕಾರಿನೊಂದಿಗೆ ಮತ್ತೆ ಮಾರುಕಟ್ಟೆಗೆ ಬರಲು ತಯಾರಿ ನಡೆಸುತ್ತಿದೆ.