Just In
- 9 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 10 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
- 12 hrs ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 12 hrs ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಂಟೆಗೆ 240 ಕಿ.ಮೀ ವೇಗದಲ್ಲಿ ಹಾರಾಡುತ್ತದೆ ಈ ಫ್ಲೈಯಿಂಗ್ ಟ್ಯಾಕ್ಸಿ
ಹಾರುವ ಟ್ಯಾಕ್ಸಿಗಳು ಭವಿಷ್ಯದಲ್ಲಿ ಹೆಚ್ಚು ಸದ್ದು ಮಾಡಲಿವೆ ಎಂದು ಹೇಳಲಾಗುತ್ತಿದೆ. ವಿಶ್ವದಾದ್ಯಂತ ಹಲವಾರು ಕಂಪನಿಗಳು ಕಮರ್ಷಿಯಲ್ ಆಗಬಹುದಾದ ಫ್ಲೈಯಿಂಗ್ ಟ್ಯಾಕ್ಸಿಗಳನ್ನು ಅಭಿವೃದ್ಧಿಪಡಿಸುತ್ತಿವೆ.
ಇತ್ತೀಚಿಗೆ ಅಮೆರಿಕಾ ಮೂಲದ ಆರ್ಚರ್ ಏವಿಯೇಷನ್ ತನ್ನ ಮೇಕರ್ ಫ್ಲೈಯಿಂಗ್ ಟ್ಯಾಕ್ಸಿಯನ್ನು ಪ್ರದರ್ಶಿಸಿತು. ಈ ಮೂಲಕ ಆರ್ಚರ್ ಏವಿಯೇಷನ್ ತನ್ನ ಹಾರುವ ಟ್ಯಾಕ್ಸಿಯ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಈ ಫ್ಲೈಯಿಂಗ್ ಟ್ಯಾಕ್ಸಿ ಗಂಟೆಗೆ 240 ಕಿ.ಮೀ ವೇಗದಲ್ಲಿ ಹಾರಾಡುವ ಸಾಮರ್ಥ್ಯವನ್ನು ಹೊಂದಿದೆ.
ಈ ಫ್ಲೈಯಿಂಗ್ ಟ್ಯಾಕ್ಸಿಯನ್ನು ಶೀಘ್ರದಲ್ಲೇ ಸಂಚಾರಕ್ಕಾಗಿ ಬಳಸಬಹುದು. ಈ ಫ್ಲೈಯಿಂಗ್ ಟ್ಯಾಕ್ಸಿ ಅತಿ ವೇಗದ ಸಂಚಾರ ಮಾರ್ಗವಾಗಿದೆ. ಒಮ್ಮೆ ಇಂಧನ ತುಂಬಿಸಿದ ಬಳಿಕ ಈ ಫ್ಲೈಯಿಂಗ್ ಟ್ಯಾಕ್ಸಿ ನಾಲ್ಕು ಪ್ರಯಾಣಿಕರೊಂದಿಗೆ 100 ಕಿ.ಮೀ ಹಾರಾಡಬಲ್ಲದು.
ಮೇಕರ್ ಫ್ಲೈಯಿಂಗ್ ಟ್ಯಾಕ್ಸಿಯನ್ನು ತಯಾರಿಸಿರುವ ಆರ್ಚರ್ ಏವಿಯೇಷನ್ ಸದ್ಯಕ್ಕೆ ಕಮರ್ಷಿಯಲ್ ವಾಯುಯಾನ ಕ್ಷೇತ್ರದಲ್ಲಿಲ್ಲ. ಆದರೆ ಕಂಪನಿಯು ಈ ಫ್ಲೈಯಿಂಗ್ ಟ್ಯಾಕ್ಸಿಯ ಮೂಲಕ ಈ ಉದ್ಯಮಕ್ಕೆ ಪಾದಾರ್ಪಣೆ ಮಾಡಲಿದೆ.
ಕಮರ್ಷಿಯಲ್ ಫ್ಲೈಯಿಂಗ್ ಟ್ಯಾಕ್ಸಿಗಳನ್ನು ನಗರಗಳಲ್ಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಸಾಗಣೆಗೆ ಬಳಸುವ ಗುರಿಯನ್ನು ಹೊಂದಲಾಗಿದೆ ಎಂದು ಆರ್ಚರ್ ಏವಿಯೇಷನ್ ಹೇಳಿದೆ.
ಫ್ಲೈಯಿಂಗ್ ಟ್ಯಾಕ್ಸಿಗಳು ಇಂಟರ್ ಸಿಟಿ ಸಾರಿಗೆಗೆ ಆಯ್ಕೆಯಾಗುವ ಸಾಮರ್ಥ್ಯವನ್ನು ಹೊಂದಿವೆ. ಆದರೆ ಇವುಗಳನ್ನು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವಂತೆ ಮಾಡುವುದು ನಿಜಕ್ಕೂ ಸವಾಲಿನ ಕೆಲಸವಾಗಿದೆ.
4 ಡಾಲರ್ ಪಾವತಿಸುವ ಮೂಲಕ ಈ ಫ್ಲೈಯಿಂಗ್ ಟ್ಯಾಕ್ಸಿಯಲ್ಲಿ ಒಂದು ಮೈಲಿ ಪ್ರಯಾಣಿಸಬಹುದು ಎಂದು ಆರ್ಚರ್ ಏವಿಯೇಷನ್ ಕಂಪನಿ ಹೇಳಿದೆ. ಈ ದರವು ತುಂಬಾ ಆರ್ಥಿಕವಾಗಿಲ್ಲ.
ಆದರೆ ಕಚೇರಿಗಳಿಗೆ ಸಮಯಕ್ಕೆ ಸರಿಯಾಗಿ ಹೋಗುವವರು ಅಥವಾ ಇನ್ನಿತರ ತುರ್ತು ಕೆಲಸಗಳಿಗೆ ಹೋಗುವವರು ಈ ಫ್ಲೈಯಿಂಗ್ ಟ್ಯಾಕ್ಸಿಯಲ್ಲಿ ಪ್ರಯಾಣಿಸುವ ಮೂಲಕ ತಮ್ಮ ಅಮೂಲ್ಯ ಸಮಯವನ್ನು ಉಳಿಸಬಹುದು.
ಆರ್ಚರ್ ಏವಿಯೇಷನ್ 2024ರಲ್ಲಿ ಅಮೆರಿಕಾದ ಲಾಸ್ ಏಂಜಲೀಸ್ ಹಾಗೂ ಮಿಯಾಮಿ ನಗರಗಳಲ್ಲಿ ಫ್ಲೈಯಿಂಗ್ ಟ್ಯಾಕ್ಸಿಗಳನ್ನು ಕಮರ್ಷಿಯಲ್ ಆಗಿ ಆರಂಭಿಸುವ ನಿರೀಕ್ಷೆಗಳಿವೆ. ಸರ್ಕಾರದಿಂದ ಫ್ಲೈಯಿಂಗ್ ಟ್ಯಾಕ್ಸಿಗಳಿಗೆ ಪರವಾನಗಿ ಪಡೆಯಲು ಸ್ವಲ್ಪ ತಡವಾಗಬಹುದು ಎಂದು ಕಂಪನಿ ಹೇಳಿದೆ.