ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಕಳೆದ ಸೋಮವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾರವರು ಜಮ್ಮು ಕಾಶ್ಮೀರಕ್ಕೆ ವಿಶೇಷ ಸವಲತ್ತುಗಳನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಪಡಿಸಿ ಐ‍‍ತಿಹಾಸಿಕ ನಿರ್ಣಯವನ್ನು ಕೈಗೊಂಡಿದ್ದರು.

370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಲಿದೆ ಕೈಗಾರಿಕಾ ಕ್ರಾಂತಿ

ಸಂವಿಧಾನದ 370ನೇ ವಿಧಿಯ ಅನುಸಾರ ಹೊರಗಿನವರು ಜಮ್ಮು ಕಾಶ್ಮೀರದಲ್ಲಿ ಕಾರ್ಖಾನೆಗಳನ್ನು ತೆರೆಯುವುದಕ್ಕೆ, ಉದ್ಯೋಗಗಳನ್ನು ಪಡೆಯುವುದಕ್ಕೆ ಸಾಧ್ಯವಿರಲಿಲ್ಲ. ಕೇವಲ ಸ್ಠಳೀಯರಿಗೆ ಮಾತ್ರ ಈ ಸೌಲಭ್ಯಗಳು ದೊರೆಯುತ್ತಿದ್ದವು. 370ನೇ ವಿಧಿಯನ್ನು ರದ್ದು ಪಡಿಸಿದ ನಂತರ ಭಾರತದ ಯಾವುದೇ ರಾಜ್ಯದ ಜನರು ಜಮ್ಮು ಕಾಶ್ಮೀರದಲ್ಲಿ ಕಾರ್ಖಾನೆಗಳನ್ನು ಸ್ಥಾಪಿಸಬಹುದಾಗಿದೆ. ಸ್ಥಳೀಯರ ಜೊತೆಗೆ ಹೊರಗಿನವರು ಉದ್ಯೋಗಗಳನ್ನು ಪಡೆಯಬಹುದಾಗಿದೆ.

370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಲಿದೆ ಕೈಗಾರಿಕಾ ಕ್ರಾಂತಿ

ಈಗ ಸ್ಟೀಲ್‍‍ಬರ್ಡ್ ಹೈ ಟೆಕ್ ಇಂಡಿಯಾ ಲಿಮಿಟೆಡ್, ತನ್ನ ಉತ್ಪಾದನಾ ಘಟಕವನ್ನು ಜಮ್ಮು ಕಾಶ್ಮೀರದಲ್ಲಿ ಸ್ಥಾಪಿಸಲು ಮುಂದಾಗಿದೆ. ಇದರಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಹೊಸ ಕೈಗಾರಿಕಾ ಕ್ರಾಂತಿ ಶುರು ಮಾಡಲು ಹಾಗೂ ಅಲ್ಲಿರುವ ಜನರಿಗೆ ಉದ್ಯೋಗ ನೀಡಲು ಅನುಕೂಲವಾಗಲಿದೆ.

370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಲಿದೆ ಕೈಗಾರಿಕಾ ಕ್ರಾಂತಿ

ಸಂವಿಧಾನದ 370ನೇ ವಿಧಿಯನ್ನು ರದ್ದು ಪಡಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿರುವ ಸ್ಟೀಲ್‌ಬರ್ಡ್ ಹೆಲ್ಮೆಟ್‌‍‍ನ ಅಧ್ಯಕ್ಷರಾದ ಸುಭಾಷ್ ಕಪೂರ್‍‍ರವರು ಮಾತನಾಡಿ, 370ನೇ ವಿಧಿಯನ್ನು ರದ್ದುಗೊಳಿಸಿರುವ ಈ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಂದ ನಿರೀಕ್ಷಿಸಲಾಗಿತ್ತು.

370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಲಿದೆ ಕೈಗಾರಿಕಾ ಕ್ರಾಂತಿ

ಈ ಐ‍‍ತಿಹಾಸಿಕ ಕ್ರಮದಿಂದಾಗಿ ನಾವು ಕಾಶ್ಮೀರ ಕಣಿವೆಗೆ ಪ್ರವೇಶಿಸುವುದಕ್ಕೆ ಅನುಕೂಲವಾಗಲಿದೆ. ಇದರಿಂದಾಗಿ ಜಮ್ಮು ಕಾಶ್ಮೀರವು ಭಾರತದ ಮುಖ್ಯವಾಹಿನಿಗೆ ಬರಲಿದ್ದು, ದೇಶದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಲಿದೆ ಎಂದು ಹೇಳಿದ್ದಾರೆ.

370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಲಿದೆ ಕೈಗಾರಿಕಾ ಕ್ರಾಂತಿ

ಇಲ್ಲಿಯವರೆಗೆ ಜಮ್ಮು ಕಾಶ್ಮೀರದಲ್ಲಿ ಹೆಚ್ಚಿನ ಪ್ರಮಾಣದ ಉತ್ಪಾದನೆಯು ಕೃಷಿ ಹಾಗೂ ಕರಕುಶಲ ವಸ್ತುಗಳಿಗೆ ಮಾತ್ರ ಸೀಮಿತವಾಗಿತ್ತು. ಪೂರಕವಾದ ಪರಿಸರವನ್ನು ನಿರ್ಮಿಸಲು ಕಂಪನಿಗಳು ಈಗಾಗಲೇ ಜಮ್ಮು ಕಾಶ್ಮೀರದಲ್ಲಿ ನೆಲೆಯೂರಿರುವ ಸ್ಥಳೀಯರೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಸಹಾಯವಾಗಲಿದೆ.

370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಲಿದೆ ಕೈಗಾರಿಕಾ ಕ್ರಾಂತಿ

ಹೆಚ್ಚಿನ ನಗರಗಳು ಹಾಗೂ ರಾಜ್ಯಗಳು ಪ್ರಗತಿ ಹೊಂದುವುದೇ ಈ ರೀತಿಯಲ್ಲಿ. ಇದರಿಂದಾಗಿ ಮೊದಲಿಗೆ ಸ್ಥಳೀಯರಿಗೆ ಹೆಚ್ಚಿನ ಅವಕಾಶ ದೊರೆಯಲಿದೆ. ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಮುಂದಿನ ಹೂಡಿಕೆದಾರರ ಶೃಂಗಸಭೆಗೆ ಅನುಗುಣವಾಗಿ ಉತ್ಪಾದನಾ ಘಟಕವನ್ನು ತರಲು ನಾವು ಯೋಜಿಸಿದ್ದೇವೆ.

MOST READ: ಒ‍ಎಲ್‍ಎಕ್ಸ್ ನಲ್ಲಿ ಕಾರು ಮಾರಾಟ ಮಾಡುವ ಮುನ್ನ ಹುಷಾರು..!

370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಲಿದೆ ಕೈಗಾರಿಕಾ ಕ್ರಾಂತಿ

ಈ ನಿರ್ಧಾರಗಳಿಂದಾಗಿ ಜಮ್ಮು ಕಾಶ್ಮೀರದಲ್ಲಿ ಒಂದೇ ನಿಯಮಗಳ ಅಡಿಯಲ್ಲಿ ವ್ಯವಹಾರಗಳನ್ನು ಮುಕ್ತವಾಗಿ ನಿರ್ವಹಿಸಲು ಸಹಾಯವಾಗಲಿದೆ ಎಂಬ ಭರವಸೆಯಿದೆ ಎಂದು ಸ್ಟೀಲ್‌ಬರ್ಡ್ ಹೆಲ್ಮೆಟ್‌ ಎಂಡಿ ರಾಜೀವ್ ಕಪೂರ್ ಹೇಳಿದರು.

MOST READ: ಉಚಿತ ತರಬೇತಿಯೊಂದಿಗೆ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಿದ ಟೊಯೊಟಾ

370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಲಿದೆ ಕೈಗಾರಿಕಾ ಕ್ರಾಂತಿ

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿರುವುದರಿಂದ ಜಮ್ಮು ಕಾಶ್ಮೀರದ ಆರ್ಥಿಕತೆಗೆ ಅನುಕೂಲವಾಗಲಿದೆ. ಅನೇಕ ವರ್ಷಗಳಿಂದ ರಾಜ್ಯವು ಎದುರಿಸುತ್ತಿದ್ದ ಆರ್ಥಿಕ ಸಂಕಷ್ಟ ಪರಿಸ್ಥಿತಿಯು ಸುಧಾರಿಸಲಿದೆ. ಇದರ ಜೊತೆಗೆ ಜಮ್ಮು ಕಾಶ್ಮೀರದಲ್ಲಿ ಉದ್ಯೋಗ ಪಡೆಯಲು ಬಯಸುವ ಭಾರತದಾದ್ಯಂತವಿರುವ ವಿದ್ಯಾರ್ಥಿಗಳಿಗೆ ನಮ್ಮ ಉತ್ಪಾದನಾ ಘಟಕದಿಂದ ಅನುಕೂಲವಾಗಲಿದೆ.

MOST READ: ಟ್ರಾಫಿಕ್ ಪೊಲೀಸರನ್ನು ಕೆಣಕಿ ದಂಡ ವಿಧಿಸಿಕೊಂಡ ರಾಮ್ ಗೋಪಾಲ್ ವರ್ಮಾ

370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಲಿದೆ ಕೈಗಾರಿಕಾ ಕ್ರಾಂತಿ

ನಾವು ಜಮ್ಮು ಕಾಶ್ಮೀರದಲ್ಲಿ ಉದ್ಯೋಗಗಳನ್ನು ಸಹ ಸೃಷ್ಟಿಸುತ್ತೇವೆ ಎಂದು ರಾಜೀವ್ ಕಪೂರ್ ಹೇಳಿದರು. ಸ್ಟೀಲ್‍‍‍ಬರ್ಡ್ ಈಗಾಗಲೇ ಹಿಮಾಚಲ ಪ್ರದೇಶದ ಬಡ್ಡಿ ಎಂಬಲ್ಲಿ ಉತ್ಪಾದನಾ ಘಟಕಗಳ ನಿರ್ಮಾಣಕ್ಕಾಗಿ ರೂ.150 ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಲಿದೆ ಕೈಗಾರಿಕಾ ಕ್ರಾಂತಿ

ಸ್ಟೀಲ್‍‍ಬರ್ಡ್ ಕಂಪನಿಯು 3,000 ಉದ್ಯೋಗಿಗಳನ್ನು ನೇಮಿಸಿಕೊಂಡು, ದಿನಕ್ಕೆ 44,500 ಹೆಲ್ಮೆಟ್ ತಯಾರಿಸುವ ಗುರಿಯನ್ನಿಟ್ಟು ಕೊಂಡಿದೆ. ಇದರ ಜೊತೆಗೆ ಸುಮಾರು 1000 ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡಲು ಸ್ಟೀಲ್‌ಬರ್ಡ್ ಉದ್ದೇಶಿಸಿದೆ.

Most Read Articles

Kannada
English summary
Steelbird Helmets to Setup New Manufacturing Plant in J&K - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X