ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

ನಮ್ಮೆ ದೇಶದ ರೈತರು ಮನಸ್ಸು ಮಾಡಿದರೆ ಏನನ್ನಾದರೂ ಮಾಡಬಲ್ಲರು ಎನ್ನಲು ನಮ್ಮಲ್ಲಿ ಹಲವರು ಉದಾಹರಣೆಗಳಿವೆ. ಅವುಗಳಲ್ಲಿ ದೇಶದಲ್ಲಿರುವ ಕೆಲ ರೈತರು ತಮ್ಮ ಬಳಿ ಇರುವ ಐಷಾರಾಮಿ ಕಾರುಗಳನ್ನು ತಮ್ಮ ವ್ಯವಸಾಯದ ಕೆಲಸಗಳಿಗಾಗಿ ಬಳಸಿಕೊಂಡಿರುವ ಉದಾಹರಣೆ ಬಗ್ಗೆ ಕೂಡಾ ನಾವೀಗಾಗಲೇ ನಿಮಗೆ ತಿಳಿಸಿದ್ದೇವೆ.

ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

ಇದೀಗ ಇಲ್ಲಿಯೂ ಕೂಡಾ ಅದೇ ರೀತಿಯಾದ ಘಟನೆ ನಡಿಸಿದ್ದು, ನಮ್ಮ ದೇಶದ ರೈತನೊಬ್ಬ ಸುಮಾರು ರೂ. 50 ಲಕ್ಷ ಬೆಲೆಬಾಳುವ ಆಡಿ ಸಂಸ್ಥೆಯ ಐಷಾರಾಮಿ ಎಸ್‍ಯುವಿ ಕಾರನ್ನು ತನ್ನ ವ್ಯವಸಾಯದ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರಂತೆ. ಈತ ಆಡಿ ಸಂಸ್ಥೆಯ ಆಡಿ ಸಂಸ್ಥೆಯ ಜನಪ್ರೀಯ ಕ್ಯೂ 5 ಐಷಾರಾಮಿ ಎಸ್‍ಯುವಿ ಕಾರನ್ನು ತನ್ನ ವ್ಯವಸಾಯಕ್ಕೆ ಬಳಸಿಕ್ಕೊಳ್ಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

ಆಡಿ ಸಂಸ್ಥೆಯಲ್ಲಿ ಕಾರುಗಳು ಎಂದರೆ ನಮ್ಮ ತಲೆಯಲ್ಲಿ ಮೊದಲು ಬರುವುದು ದುಬಾರಿ ಬೆಲೆ ಮತ್ತು ಅವುಗಳಲ್ಲಿರುವ ಐಷಾರಾಮಿ ಸೌಲತ್ತುಗಳು. ಈ ಸಂಸ್ಥೆಯಲ್ಲಿನ ಕ್ಯೂ5 ಎಸ್‍ಯುವಿ ಕಾರು ಕೂಡಾ ಅಷ್ಟೆ ದುಬಾರಿ ಮತ್ತು ಮಾರುಕಟ್ಟೆಯಲ್ಲಿ ಜನಪ್ರೀಯತೆಯನ್ನು ಪಡೆದಿದೆ. ಈ ಕಾರು ಬಾಲಿವುಡ್‍ನಲ್ಲಿರುವ ಸೆಲೆಬ್ರಿಟಿಗಳಿಗೆ ಫೇವರೇಟ್ ಅಂತಾನೇ ಹೇಳ್ಬೋದು.

ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

ಸಾಧಾರಣವಾಗಿ ಐಷಾರಾಮಿ ಕಾರುಗಳನ್ನು ಖರೀದಿ ಮಾಡಿದ ಮಾಲೀಕರು ಮಳೆಗಾಲದಲ್ಲಂತು ಹೊರಕ್ಕೆ ತರುವುದಿಲ್ಲ. ಏಕೆಂದರೆ ರಸ್ತೆಯಲ್ಲಿರುವ ಕೆಸರು ಕಾರಿಗಿ ಅಂಟೊಕೊಳ್ಳುತ್ತೆ ಎನ್ನುವ ಭಯ ಕೆಲವರಿಗೆ. ಕೊಳೆ ಅಂಟಿಕೊಂಡರೆ ಅದನ್ನು ಕ್ಲೀನ್ ಮಾಡಲು ಅದಕ್ಕೆ ಬೇರೆ ಅಷ್ಟು ಹಣ ಸುರಿಯಬೇಕು ಎಂಬುದು ಕೆಲವರ ಭಾವನೆ.

ಆದರೆ ಇಲ್ಲೊಬ್ಬ ರೈತ ಮೇಲೆ ಹೇಳಿರುವ ಹಾಗೆ ಸುಮಾರು ರೂ. 50 ಲಕ್ಷ ಬೆಲೆ ಬಾಳುವ ಆಡಿ ಕ್ಯೂ5 ಐಷಾರಾಮಿ ಎಸ್‍ಯುವಿ ಕಾರನ್ನು ತನ್ನ ವ್ಯವಸಾಯಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಐಷಾರಮಿ ಕಾರಿನ ಹಿಂಭಾಗದಲ್ಲಿ ನೇಗಿಲನ್ನು ಬಿಗಿಸಿಕೊಂಡು ಹೊಲ ಊಳಲು ಮುಂದಾಗಿರುವ ಚಿತ್ರಗಳನ್ನು ನೀವಿ ಈ ವಿಡಿಯೋನಲ್ಲಿ ಕಾಣಬಹುದಾಗಿದೆ.

ಆದರೇ ನೇಗಿಲನ್ನು ವ್ಯವಸಾಯದ ಸಮಯದಲ್ಲಿ ಕೇವಲ ಟ್ರ್ಯಾಕ್ಟರ್‍‍ಗಳು ಮಾತ್ರವೇ ಅವುಗಳನ್ನು ಎಳೆದುಕೊಂಡು ಹೋಗುವ ಸಾಮರ್ಥ ಇರುತ್ತದೆ ಮತ್ತು ಮಾರುಕಟ್ಟೆಯಲ್ಲಿರುವ ಹಲವಾರು ವ್ಹೀಲ್ ಡ್ರೈವ್ ಹೊಂದಿರುವ ಕಾರುಗಳು ಮಾತ್ರ ಅವುಗಳನ್ನು ಎಳೆದುಕೊಂಡು ಹೋಗಲು ಸಾಧ್ಯ.

ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

ಅಂತಹ ಕಾರುಗಳಲ್ಲಿ ಆಡಿ ಕ್ಯು 5 ಐಷಾರಾಮಿ ಎಸ್‍ಯುವಿ ಕಾರು ಕೂಡಾ ಒಂದು. ನೀವು ವಿಡಿಯೋವನ್ನು ಗಮನಿಸಿದ್ದಲ್ಲಿ ಈ ಕಾರು ಎಲ್ಲಿವೂ ನಿಲ್ಲದೇ ನೇಗಿಲನ್ನು ಸಲೀಸಾಗಿ ಎಳುದುಕೊಂಡು ಹೋಗುತ್ತಿರುವುದನ್ನು ನೀವು ನೋಡಬಹುದು. ಇದರರಲ್ಲಿಯೇ ತಿಳಿಯುತ್ತೆ ಆಡೀ ಕ್ಯೂ5 ಕಾರಿನ ಸಾಮರ್ಥ್ಯ ಎಂತಹದ್ದು ಅಂತ.

ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

ಇನ್ನು ಆಡೀ ಕ್ಯೂ5 ಎಸ್‍ಯುವಿ ಕಾರಿನ ಬೆಗ್ಗೆ ಹೆಳುವುದಾದ್ರೆ ಈ ಕಾರು ಪೆಟ್ರೋಲ್ ಮತ್ತು ಡೀಸೆಲ್ ಮಾದರಿಯಲ್ಲಿಯು ಸಹ ಖರೀದಿಗೆ ಲಭ್ಯವಿರಲಿದ್ದು, ಇನ್ನೇನು ಈ ಕಾರಿನ ಹೈಬ್ರಿಡ್ ಮಾದರಿಯು ಸಹ ಬಿಡೂಗಡೆಗೊಳ್ಳಲಿದೆ. ಪೆಟ್ರೋಲ್ ಮಾರದಿಯ ಆಡೀ ಕ್ಯೂ5 ಕಾರಿನಲ್ಲಿ ಮ್ಯಾಟ್ರಿಕ್ ಎಲ್‍ಇಡಿ ಹೆಡ್‍ಲ್ಯಾಂಪ್ಸ್, ಸಿಂಗಲ್ ಫ್ರೇಮ್ ಗ್ರಿಲ್ ಅನ್ನು ಒದಗಿಸಲಾಗಿದೆ.

ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

ಡೀಸೆಲ್ ಮಾದರಿಯಲ್ಲಿ ಬಳಸಲಾದ ಅಲಾಯ್ ಚಕ್ರಗಳನ್ನು ಪಟ್ರೋಲ್ ಮಾದರಿಯ ಕಾರಿನಲ್ಲಿಯು ಸಹ ಬಳಸಲಾಗಿದೆ. ಈ ಪೆಟ್ರೋಲ್ ಮಾದರಿಯ ಆಡಿ ಕ್ಯೂ5 ಎಸ್‍ಯುವಿ ಕಾರು 2 ಲೀಟರ್ ಟರ್ಬೋಚಾರ್ಜ್ಡ್ ಟಿಎಸ್ಎಸ್ಐ ಪೆಟ್ರೋಲ್ ಎಂಜಿನ್ ಸಹಾಯದಿಂದ 248 ಬಿಹೆಚ್‍ಪಿ ಮತ್ತು 370 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

ಇನ್ನು ಆಡಿ ಈ ವರ್ಷಾರಂಭದಲ್ಲಿ ನಡೆದ ಜಿನೀವಾ ಮೋಟಾರ್ ಶೋದಲ್ಲಿ ಹೈಬ್ರಿಡ್ ಮಾದರಿಯ ಕಾರನ್ನು ಅನಾವರಣಗೊಳಿಸಿತ್ತು. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿಗಳಿರಲಿಲ್ಲ. ಆಡಿ ಕಂಪನಿಯು ಈಗ ಅಧಿಕೃತವಾಗಿ ತನ್ನ ಕ್ಯೂ5 ಪ್ಲಗ್ - ಇನ್ ಹೈಬ್ರಿಡ್ ವಾಹನದ ಬಗ್ಗೆ ಘೋಷಿಸಿದ್ದು, 55 ಟಿ‍ಎಫ್‍‍ಸಿ‍ಐ ಕ್ವಾಟ್ರೋ ಎಂದು ಹೆಸರಿಡಲಾಗಿದೆ.

ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

ಹೊಸ ಕ್ಯೂ5 ಪ್ಲಗ್ ಇನ್ ವಾಹನದಲ್ಲಿ 2.0 ಲೀಟರಿನ ಟರ್ಬೊಚಾರ್ಜ್ 4 ಸಿಲಿಂಡರ್ ಎಂಜಿನ್ ಇದ್ದು, ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಪ್ರೊಪಲ್‍‍ಷನ್ ಹೊಂದಿದೆ. 367 ಬಿಹೆಚ್‍‍ಪಿ ಮತ್ತು 500 ಎನ್‍ಎಂ ಟಾರ್ಕ್ ಉತ್ಪಾದಿಸಿ, ಕ್ಯೂ5 ವಾಹನವನ್ನು 5.3 ಸೆಕೆಂಡುಗಳಲ್ಲಿ 100 ಕಿ.ಮೀ ವೇಗದಲ್ಲಿ ಚಲಿಸುವಂತೆ ಮಾಡುತ್ತದೆ. ಈ ಕಾರಿನ ಗರಿಷ್ಟ ವೇಗವು ಪ್ರತಿ ಗಂಟೆಗೆ 238 ಕಿ.ಮೀ ಆಗಿದೆ. ಮೊದಲಿದ್ದ ಎಸ್‍‍ಕ್ಯೂ 5 ವಾಹನಕ್ಕಿಂತ 13 ಬಿ‍‍ಹೆಚ್‍‍ಪಿ ಹೆಚ್ಚು ಉತ್ಪಾದಿಸುತ್ತದೆ. ಎಸ್‍‍ಕ್ಯೂ5 ವಾಹನವು, 3.0 ಲೀಟರ್ ಟರ್ಬೊಚಾರ್ಜ್‍‍ನ ವಿ6 ಎಂಜಿನ್ ಹೊಂದಿತ್ತು.

ವ್ಯವಸಾಯಕ್ಕಾಗಿ ರೂ.50 ಲಕ್ಷ ಬೆಲೆ ಬಾಳುವ ಐಷಾರಾಮಿ ಕಾರನ್ನು ಬಳಸಿದ ರೈತ

ಕ್ಯೂ5 ಹೈಬ್ರಿಡ್ ಕಾರು, ಎಸ್ ಸರಣಿಯ ಕಾರಿಗಿಂತ ಅಧಿಕ ಪವರ್ ಹೊಂದಿದೆ. ಎಲೆಕ್ಟ್ರಿಕ್ ಗೇರ್ ಗಳನ್ನು ಹೊಂದಿದೆ. ಆಡಿ ಕಂಪನಿಯ ಪ್ರಕಾರ ಕ್ಯೂ 5 ಪ್ಲಗ್ ಇನ್ ಕಾರು, ಎಲೆಕ್ಟ್ರಿಕ್ ಚಾರ್ಜ್ ಹೊಂದಿದ್ದಾಗ 40 ಕಿ.ಮೀ ವರೆಗೆ ಚಲಿಸುತ್ತವೆ. ಈ ಕಾರಿನ ಬೂಟ್ ಕಂಪಾರ್ಟ್‍‍ಮೆಂಟ್ ಕೆಳಗೆ 14.1 ಕಿಲೋ ವ್ಯಾಟ್‍‍ನ ಬ್ಯಾಟರಿ ಅಳವಡಿಸಲಾಗಿದೆ.

Most Read Articles

Kannada
English summary
Audi Q5 Luxury SUV Working As A Tractor In India. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X