ಮೊದಲ ರಿಮೋಟ್ ನಿಯಂತ್ರಿತ ಅಗ್ನಿ ಶಾಮಕ ರೊಬೊಟ್ ಮೆಷಿನ್

By Nagaraja

ಪ್ರತಿ ಬಾರಿಯೂ ಅಗ್ನಿ ಆಕಸ್ಮಿಕ ಸಂಭವಿಸಿದಾಗ ತುರ್ತಾಗಿ ರಕ್ಷಣಾ ಕಾರ್ಯಾಚರಣೆ ನಡೆಸಬೇಕಾಗುತ್ತದೆ. ಸ್ವಲ್ಪವೂ ತಡವಾದ್ದಲ್ಲಿ ಭಾರಿ ದುರಂತ ಘಟಿಸುತ್ತವೆ. ಹಾಗಿರುವಾಗ ಅಗ್ನಿ ಶಾಮಕ ಯಂತ್ರಗಳಲ್ಲಿ ನಾವೀನ್ಯ ತಂತ್ರಗಾರಿಕೆಯ ಬೇಡಿಕೆ ಹೆಚ್ಚಾಗುತ್ತದೆ.

ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ಮೊದಲ ರಿಮೋಟ್ ನಿಯಂತ್ರಿತ ರೊಬೊಟ್ ಅಗ್ನಿ ಶಾಮಕ ಯಂತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇದು ಏಕಕಾಲಕ್ಕೆ ನೀರು ಹಾಗೂ ಅಗ್ನಿ ಶಮನಕಾರಿ ನೊರೆ ಸಿಂಪಡಿಸುವ ಸಾಮರ್ಥ್ಯ ಹೊಂದಿರುತ್ತದೆ.

ಮೊದಲ ರಿಮೋಟ್ ನಿಯಂತ್ರಿತ ಅಗ್ನಿ ಶಾಮಕ ರೊಬೊಟ್ ಮೆಷಿನ್

ಟಿಎಎಫ್20 ( Turbine Aided Firefighting) ಎಂಬ ಹೆಸರಿನಿಂದ ಗುರುತಿಸ್ಪಡುವ ಈ ಅಗ್ನಿ ಶಾಮಕ ಯಂತ್ರವನ್ನು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ತುರ್ತು ಕಾರ್ಯಾಚರಣೆಗೆ ಬಳಕೆ ಮಾಡಲಾಗುವುದು.

ಮೊದಲ ರಿಮೋಟ್ ನಿಯಂತ್ರಿತ ಅಗ್ನಿ ಶಾಮಕ ರೊಬೊಟ್ ಮೆಷಿನ್

90 ಮೀಟರ್ ಗಳಷ್ಟು ದೂರದ ವರೆಗೆ ನೀರುವ ಸಿಂಪಡನೆ ಮಾಡುವ ಸಾಮರ್ಥ್ಯವನ್ನು ಇದು ಹೊಂದಿದೆ. ಅಲ್ಲದೆ 60 ಮೀಟರ್ ಗಳ ವರೆಗೆ ಅಗ್ನಿ ಶಮನ ನೊರೆ ಸಿಂಪಡಿಸಲಿದೆ.

ಮೊದಲ ರಿಮೋಟ್ ನಿಯಂತ್ರಿತ ಅಗ್ನಿ ಶಾಮಕ ರೊಬೊಟ್ ಮೆಷಿನ್

ಅತ್ಯಂತ ಶಕ್ತಿಯುತ ಫ್ಯಾನ್ ಇದರಲ್ಲಿ ಆಳವಡಿಸಲಾಗಿದ್ದು, ಅಗ್ನಿ ಅನಾಹುತದ ವೇಳೆ ಆವರಿಸುವ ದಟ್ಟವಾದ ಹೊಗೆಯನ್ನು ನಿವಾರಿಸುವ ಶಕ್ತಿ ಹೊಂದಿರುತ್ತದೆ.

ಮೊದಲ ರಿಮೋಟ್ ನಿಯಂತ್ರಿತ ಅಗ್ನಿ ಶಾಮಕ ರೊಬೊಟ್ ಮೆಷಿನ್

500 ಮೀಟರ್ ದೂರದ ರಿಮೋಟ್ ಪ್ರದೇಶದಿಂದಲೂ ಇದನ್ನು ನಿರ್ವಹಿಸಬಹುದಾಗಿದೆ. ಇದರಲ್ಲಿ ಬುಲ್‌ಡೋಜರ್ ಬ್ಲೇಡ್ ಗಳಿದ್ದು, ಸುರಂಗ ಅಗ್ನಿ ಅನಾಹುತಗಳಲ್ಲೂ ಪರಿಣಾಮಕಾರಿಯೆನಿಸಲಿದೆ. ಈ ಮೂಲಕ ಸಿಬ್ಬಂದಿಗಳು ಹೆಚ್ಚು ಸುರಕ್ಷಿತವೆನಿಸಲಿದ್ದಾರೆ.

ಮೊದಲ ರಿಮೋಟ್ ನಿಯಂತ್ರಿತ ಅಗ್ನಿ ಶಾಮಕ ರೊಬೊಟ್ ಮೆಷಿನ್

ಪ್ರತಿ ಬಾರಿಯೂ ಅಗ್ನಿ ಅನಾಹುತ ಸಂಭವಿಸಿದಾಗ ಸಿಬ್ಬಂದಿಗಳು ತಮ್ಮ ಜೀವವನ್ನೇ ಮುಡಿಪಾಗಿಟ್ಟುಕೊಂಡು ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಂತಹ ಅಪಾಯಕಾರಿ ಸನ್ನಿವೇಶಗಳನ್ನು ಈ ರೊಬೊಟ್ ಮೆಷಿನ್ ಮೂಲಕ ತಪ್ಪಿಸಬಹುದಾಗಿದೆ.

ಮೊದಲ ರಿಮೋಟ್ ನಿಯಂತ್ರಿತ ಅಗ್ನಿ ಶಾಮಕ ರೊಬೊಟ್ ಮೆಷಿನ್

ಒಟ್ಟಿನಲ್ಲಿ ಇಂತಹ ನಾವೀನ್ಯ ತಂತ್ರಗಾರಿಕೆಯ ಅಗ್ನಿ ಶಾಮಕ ಯಂತ್ರಗಳು ಭಾರತದಲ್ಲೂ ಲಭ್ಯವಾದ್ದಲ್ಲಿ ಹೆಚ್ಚು ಉಪಯುಕ್ತವೆನಿಸಲಿದೆ. ಯಾಕೆಂದರೆ ಇಕ್ಕಟ್ಟಾದ ಪ್ರದೇಶಗಳಲ್ಲಿ ಹೆಚ್ಚು ಪರಿಣಾಮಕಾರಿಯೆನಿಸಲಿದೆ.

Most Read Articles

Kannada
English summary
Australia’s first remote controlled firefighting robot TAF 20
Story first published: Friday, December 18, 2015, 10:49 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X