Just In
Don't Miss!
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಐಷಾರಾಮಿ ಕಾರಿನಲ್ಲಿ ಚಲಿಸುವಾಗ ದಾರಿತಪ್ಪಿದ ಕ್ರಿಕೆಟ್ ದೇವರಿಗೆ ಸಹಾಯ ಮಾಡಿದ ಆಟೋರಿಕ್ಷಾ ಚಾಲಕ
ವಿಶ್ವದೆಲ್ಲೆಡೆ ಸಚಿನ್ ತೆಂಡೂಲ್ಕರ್ ಎನ್ನುವ ಕ್ರಿಕೆಟ್ ದಿಗ್ಗಜನ ಹೆಸರು ಚಿರಪರಿಚಿತ. ಶತಕಗಳ ಸರದಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಹಲವು ದಾಖಲೆಗಳ ಮೂಲಕ ಕ್ರಿಕೆಟ್ ಲೋಕದಲ್ಲೇ ಮರೆಯಲಾಗದ ಇತಿಹಾಸವನ್ನು ಸೃಷ್ಟಿಸಿದವರು.

ಕ್ರಿಕೆಟ್ ದೇವರೆಂದೇ ಕರೆಯಲಾಗುವ ಸಚಿನ್ ಕಾರುಗಳ ಪ್ರಿಯ, ಇವರ ಬಳಿ ದುಬಾರಿ ಮತ್ತು ಐಷಾರಾಮಿ ಕಾರುಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ಬಿಎಂಡಬ್ಲ್ಯು ಇಂಡಿಯಾ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ. ಇದರಿಂದ ಸಹಜವಾಗಿ ಅವರ ಬಳಿ ಬಾರಿ ಹಲವು ದುಬಾರಿ ಬಿಎಂಡಬ್ಲ್ಯು ಕಾರುಗಳ ಕಲೆಕ್ಷನ್ ಅನ್ನು ಹೊಂದಿದ್ದಾರೆ.

ಸಚಿನ್ ಅವರಿಗೆ ಡ್ರೈವ್ ಮಾಡುವ ಕ್ರೇಜ್ ಅನ್ನು ಹೊಂದಿದ್ದಾರೆ. ಅವರು ಹಲವು ಬಾರಿ ಕಾರು ಚಲಾಯಿಸುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದೆ. ಅವರು ಇತ್ತೀಚೆಗೆ ತಮ್ಮ ಬಿಎಂಡಬ್ಲ್ಯು ಎಕ್ಸ್5 ಎಂ ಕಾರಿನಲ್ಲಿ ಸಿಟಿ ಡ್ರೈವ್ ತೆರಳಿದ್ದಾರೆ.
MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಈ ಸಂದರ್ಭದಲ್ಲಿ ಸಚಿನ್ ಅವರಿಗೆ ದಾರಿತಪ್ಪಿದೆ. ಈ ಐಷಾರಾಮಿ ಕಾರಿನಲ್ಲಿರುವ ಮ್ಯಾಪ್ ಸಹಾಯ ಮಾಡುವುದನ್ನು ನಿಲ್ಲಿಸಿದಾಗ ಅವರು ಪಕ್ಕದಲ್ಲಿರುವ ಆಟೋರಿಕ್ಷಾ ಚಾಲಕನು ಅವರನ್ನು ಮಾತನಾಡಿಸುತ್ತಾರೆ. ಆಟೋರಿಕ್ಷಾ ಚಾಲಕನು ಕ್ರಿಕೆಟ್ ದೇವರನ್ನು ನೋಡಿರುವುದಕ್ಕೆ ಸಂತಸವನ್ನು ವ್ಯಕ್ತಪಡಿಸುತ್ತಾರೆ.

ನಂತರ ಆಟೋರಿಕ್ಷಾ ಚಾಲಕನು ಸಚಿನ್ ಅವರಿಗೆ ತಾನು ದಾರಿಯನ್ನು ತೋರಿಸುತ್ತೇನೆ. ತನ್ನ ಆಟೋರಿಕ್ಷಾ ಹಿಂಬಾಲಿಸಲು ತಿಳಿಸುತ್ತಾರೆ. ಸಚಿನ್ ತೆಂಡೂಲ್ಕರ್ ಅವರು ಆಟೋರಿಕ್ಷಾ ಚಾಲಕನ್ನು ತಮ್ಮ ಬಿಎಂಡಬ್ಲ್ಯು ಎಕ್ಸ್ 5 ಎಂ ಕಾರಿನಲ್ಲಿ ಹಿಂಬಾಲಿಸಿ ತೆರಳುತ್ತಾರೆ.
MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ನಂತರ ತಾವು ಹೇಳಿದ ಸ್ಥಳ ಬಂದಾಗ ಆಟೋರಿಕ್ಷಾ ಚಾಲಕನಿಗೆ ಧನ್ಯವಾದಗಳನ್ನು ತಿಳಿಸುತ್ತಾರೆ. ಈ ಸಂದರ್ಭದಲ್ಲಿ ಆಟೋರಿಕ್ಷಾ ಚಾಲಕನು ಸಚಿನ್ ತೆಂಡೂಲ್ಕರ್ ಅವರನ್ನು ನೋಡಿದ ಸಂತಸವನ್ನು ವ್ಯಕ್ತಪಡಿಸಿ ಅವರ ಜೊತೆ ಒಂದು ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡರು.

ಅಲ್ಲಿಂದ ಸಚಿನ್ ತೆಂಡೂಲ್ಕರ್ ಅವರು ಇನ್ನು ಮುಂದಕ್ಕೆ ದಾರಿ ಗೊತ್ತಿದೆ ಎಂದು ಮುಂದೆ ಸಾಗುತ್ತಾರೆ. ಈ ಎಲ್ಲಾ ಘಟನೆಗಳ ವೀಡಿಯೋವನ್ನು ಸಚಿನ್ ತೆಂಡೂಲ್ಕರ್ ಆವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
MOST READ: ಕ್ರ್ಯಾಶ್ ಟೆಸ್ಟ್ನಲ್ಲಿ ಶೂನ್ಯ ಸ್ಟಾರ್ ರೇಟಿಂಗ್ ಪಡೆದ ಜನಪ್ರಿಯ ಮಾರುತಿ ಎಸ್-ಪ್ರೆಸ್ಸೊ ಕಾರು

ಸಚಿನ್ ತೆಂಡೂಲ್ಕರ್ ಅವರು ಚಲಾಯಿಸುತ್ತಿದ್ದ ಬಿಎಂಡಬ್ಲ್ಯು ಎಕ್ಸ್5 ಎಂ ಕಾರಿನ ಬೆಲೆಯು ಬರೊಬ್ಬರಿ ರೂ.1.94 ಕೋಟಿಗಳಾಗಿದೆ, ಈ ಬಿಎಂಡಬ್ಲ್ಯು ಎಕ್ಸ್5 ಎಂ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಅತಿ ದುಬಾರಿ ಕಾರುಗಳಲ್ಲಿ ಒಂದಾಗಿದೆ.

ಸಚಿನ್ ತೆಂಡೂಲ್ಕರ್ ಅವರು ಫೆರಾರಿ 360 ಮೊಡೆನಾ, ನಿಸ್ಸಾನ್ ಜಿಟಿ-ಆರ್ ಇಗೋಯಿಸ್ಟ್, ಬಿಎಂಡಬ್ಲ್ಯೂ ಎಂ6 ಗ್ರ್ಯಾನ್ ಕೂಪೆ, ಬಿಎಂಡಬ್ಲ್ಯೂ 7 ಸಿರೀಸ್ 750 ಎಲ್ಐ, ಬಿಎಂಡಬ್ಲ್ಯೂ ಎಂ5 30 ಜಾಹ್ರೆ ಆವೃತ್ತಿ, ಬಿಎಂಡಬ್ಲ್ಯೂ ಐ8, ಮರ್ಸಿಡಿಸ್ ಬೆಂಜ್ ಸಿ36 ಎಎಂಜಿ ನಂತಹ ದುಬಾರಿ ಮತ್ತು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.