ಲಾಕ್‌ಡೌನ್ ಎಫೆಕ್ಟ್: ಆಟೋ ರಿಕ್ಷಾವನ್ನೆ ದಿನಸಿ ಅಂಗಡಿಯಾಗಿ ಬದಲಿಸಿದ ಆಟೋ ಡ್ರೈವರ್

ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಇದರಿಂದಾಗಿ ಎಲ್ಲಾ ರೀತಿಯ ವ್ಯವಹಾರಗಳು ಕುಂಟಿತಗೊಂಡಿದ್ದು, ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ಆಟೋ ರಿಕ್ಷಾವನ್ನೆ ದಿನಸಿ ಅಂಗಡಿಯಾಗಿ ಬದಲಿಸಿದ ಆಟೋ ಡ್ರೈವರ್

ಭಾರತದಲ್ಲಿ ಮಾರ್ಚ್ 24ರಂದು ಮೊದಲ ಲಾಕ್‌ಡೌನ್ ಜಾರಿಗೊಳಿಸಲಾಯಿತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಾರ್ವಜನಿಕ ಸಾರಿಗೆ ಸೇವೆಗಳನ್ನು ರದ್ದುಗೊಳಿಸಲಾಯಿತು. ಆಟೋ ಹಾಗೂ ಟ್ಯಾಕ್ಸಿಗಳ ಸೇವೆಯನ್ನು ಸಹ ಸ್ಥಗಿತಗೊಳಿಸಲಾಯಿತು.

ಲಾಕ್‌ಡೌನ್ ಎಫೆಕ್ಟ್: ಆಟೋ ರಿಕ್ಷಾವನ್ನೆ ದಿನಸಿ ಅಂಗಡಿಯಾಗಿ ಬದಲಿಸಿದ ಆಟೋ ಡ್ರೈವರ್

ಬಹುತೇಕ ಆಟೋ ಹಾಗೂ ಟ್ಯಾಕ್ಸಿ ಚಾಲಕರು ದೈನಂದಿನ ಆದಾಯದ ಮೇಲೆ ಜೀವನ ನಡೆಸುತ್ತಾರೆ. ಇದ್ದಕ್ಕಿದ್ದಂತೆ ಆಟೋ, ಟ್ಯಾಕ್ಸಿಗಳ ಸೇವೆಯನ್ನು ಸ್ಥಗಿತಗೊಳಿಸಿದ ಕಾರಣಕ್ಕೆ ಇವುಗಳನ್ನೇ ನಂಬಿದ್ದವರು ಆದಾಯವಿಲ್ಲದೆ ಇರುವಂತಾಯಿತು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಎಫೆಕ್ಟ್: ಆಟೋ ರಿಕ್ಷಾವನ್ನೆ ದಿನಸಿ ಅಂಗಡಿಯಾಗಿ ಬದಲಿಸಿದ ಆಟೋ ಡ್ರೈವರ್

ಇವರಲ್ಲಿ ಅಬ್ದುಲ್ ಸಮದ್ ಸಹ ಒಬ್ಬರು. ಕೊಯಮತ್ತೂರು ಮೂಲದ ಅಬ್ದುಲ್ ಸಮದ್ ಸುಮಾರು 8 ವರ್ಷಗಳಿಂದ ಆಟೋ ಚಾಲನೆ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಲ್ಲಿ ಇತರ ಆಟೋ ಚಾಲಕರಂತೆ ಅಬ್ದುಲ್ ಸಮದ್ ಕೂಡ ಸಂಕಷ್ಟಕ್ಕೆ ಸಿಲುಕಿದರು.

ಲಾಕ್‌ಡೌನ್ ಎಫೆಕ್ಟ್: ಆಟೋ ರಿಕ್ಷಾವನ್ನೆ ದಿನಸಿ ಅಂಗಡಿಯಾಗಿ ಬದಲಿಸಿದ ಆಟೋ ಡ್ರೈವರ್

ಸುಮಾರು 2 ತಿಂಗಳು ಆಟೋ ಓಡಿಸದ ಕಾರಣ, ಅಬ್ದುಲ್ ಸಮದ್‌ರವರಿಗೆ ಯಾವುದೇ ಆದಾಯವಿರಲಿಲ್ಲ. ಇದರಿಂದ ದೃತಿಗೆಡದ ಅವರು ತಮ್ಮ ಆಟೋದಿಂದಲೇ ಆದಾಯಗಳಿಸಲು ಮುಂದಾದರು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಎಫೆಕ್ಟ್: ಆಟೋ ರಿಕ್ಷಾವನ್ನೆ ದಿನಸಿ ಅಂಗಡಿಯಾಗಿ ಬದಲಿಸಿದ ಆಟೋ ಡ್ರೈವರ್

ತಮ್ಮ ಆಟೋವನ್ನೇ ಬಾಕ್ಸ್ ಅಂಗಡಿಯಾಗಿ ಪರಿವರ್ತಿಸಿ ನೀರಿನ ಬಾಟಲ್ ಹಾಗೂ ಸ್ನ್ಯಾಕ್ಸ್‌ಗಳ ಮಾರಾಟವನ್ನು ಆರಂಭಿಸಿದರು. ಇದರಿಂದ ಅವರು ಆದಾಯ ಗಳಿಸುತ್ತಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ಆಟೋ ರಿಕ್ಷಾವನ್ನೆ ದಿನಸಿ ಅಂಗಡಿಯಾಗಿ ಬದಲಿಸಿದ ಆಟೋ ಡ್ರೈವರ್

ಈಗ ಆಟೋ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಕರೋನಾ ಹರಡಬಹುದೆಂಬ ಭಯದಿಂದಾಗಿ ಪ್ರಯಾಣಿಕರು ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಹೆಚ್ಚು ಪ್ರಯಾಣಿಸುತ್ತಿಲ್ಲ. ಈ ಕಾರಣಕ್ಕೆ ಆಟೋ ಡ್ರೈವರ್‌ಗಳಿಗೆ ಮೊದಲಿನಂತೆ ಆದಾಯವಿಲ್ಲದಂತಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಎಫೆಕ್ಟ್: ಆಟೋ ರಿಕ್ಷಾವನ್ನೆ ದಿನಸಿ ಅಂಗಡಿಯಾಗಿ ಬದಲಿಸಿದ ಆಟೋ ಡ್ರೈವರ್

ಈ ಕಾರಣಕ್ಕೆ ಅಬ್ದುಲ್ ಸಮದ್‌ರವರು ಇನ್ನೂ ತಮ್ಮ ಆಟೋದಲ್ಲಿ ಅಂಗಡಿಯನ್ನು ಮುಂದುವರೆಸುತ್ತಿದ್ದಾರೆ. ಈಗ ಅವರು ಆಟೋ ಚಾಲನೆಯನ್ನು ಆರಂಭಿಸಿದ್ದಾರೆ. ಪ್ರಯಾಣಿಕರು ಇಲ್ಲದ ವೇಳೆಯಲ್ಲಿ ಆಟೋದ ಹಿಂಬದಿಯ ಕರ್ಟೇನ್ ಮೇಲಕ್ಕೆತ್ತಿ ಬಾಕ್ಸ್ ಅಂಗಡಿಯಾಗಿ ಬಳಸುತ್ತಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ಆಟೋ ರಿಕ್ಷಾವನ್ನೆ ದಿನಸಿ ಅಂಗಡಿಯಾಗಿ ಬದಲಿಸಿದ ಆಟೋ ಡ್ರೈವರ್

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಬ್ದುಲ್ ಸಮದ್‌ರವರು ಆಟೋ ಹಿಂಭಾಗವನ್ನು ಬಾಕ್ಸ್ ಅಂಗಡಿಯಂತೆ ಸಿದ್ದಪಡಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗುವುದಿಲ್ಲಎಂದು ಹೇಳಿದ್ದಾರೆ. ಅಬ್ದುಲ್ ಸಮದ್‌ರವರ ಈ ವೀಡಿಯೊವನ್ನು ದಿನಮಲರ್ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಎಫೆಕ್ಟ್: ಆಟೋ ರಿಕ್ಷಾವನ್ನೆ ದಿನಸಿ ಅಂಗಡಿಯಾಗಿ ಬದಲಿಸಿದ ಆಟೋ ಡ್ರೈವರ್

ಮುಂದಿನ ದಿನಗಳಲ್ಲಿ ಸಾರ್ವಜನಿಕರು ತಮ್ಮದೇ ಆದ ವಾಹನಗಳಲ್ಲಿ ಓಡಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಆಟೋ, ಟ್ಯಾಕ್ಸಿಗಳನ್ನೇ ಅವಲಂಬಿಸಿರುವವರು ಈ ರೀತಿಯಲ್ಲಿ ಆಲೋಚನೆ ಮಾಡುವುದು ಅವಶ್ಯಕ.

Most Read Articles

Kannada
English summary
Auto driver in Coimbatore converts rickshaw into grocery store. Read in Kannada.
Story first published: Monday, June 8, 2020, 11:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X