ಮತ್ತೆ ಎಡವಟ್ಟು ಮಾಡಿದ ಸಂಚಾರಿ ಪೊಲೀಸರು, ಈ ಬಾರಿ ಆಟೋ ಚಾಲಕನಿಗೆ ಬಿತ್ತು ಭಾರೀ ದಂಡ

ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಪೊಲೀಸರು ದಂಡ ವಿಧಿಸುವುದು ಸಹಜ. ದಂಡ ವಿಧಿಸಿ ಕೆಲವೊಮ್ಮೆ ಕೈಯಲ್ಲಿ ಬರೆದ ರಶೀದಿಗಳನ್ನು ನೀಡಲಾಗುತ್ತದೆ.

ಮತ್ತೆ ಎಡವಟ್ಟು ಮಾಡಿದ ಸಂಚಾರಿ ಪೊಲೀಸರು, ಈ ಬಾರಿ ಆಟೋ ಚಾಲಕನಿಗೆ ಬಿತ್ತು ಭಾರೀ ದಂಡ

ಇನ್ನೂ ಕೆಲವೊಮ್ಮೆ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನಗಳ ರಿಜಿಸ್ಟ್ರೇಷನ್ ನಂಬರ್ ಆಧಾರದ ಮೇಲೆ ಇ-ಚಲನ್ ನೀಡಲಾಗುತ್ತದೆ. ಆದರೆ ದಂಡ ವಿಧಿಸುವ ಸಂದರ್ಭಗಳಲ್ಲಿ ಪೊಲೀಸರು ಕೆಲವೊಮ್ಮೆ ಎಡವಟ್ಟು ಮಾಡುತ್ತಾರೆ. ಕಾರು ಚಾಲನೆ ಮಾಡುವವರಿಗೆ ಹೆಲ್ಮೆಟ್ ಧರಿಸಿಲ್ಲವೆಂದು, ದ್ವಿಚಕ್ರ ವಾಹನ ಚಾಲನೆ ಮಾಡುವವರಿಗೆ ಸೀಟ್ ಬೆಲ್ಟ್ ಧರಿಸಿಲ್ಲವೆಂದು ದಂಡ ವಿಧಿಸುತ್ತಾರೆ.

ಮತ್ತೆ ಎಡವಟ್ಟು ಮಾಡಿದ ಸಂಚಾರಿ ಪೊಲೀಸರು, ಈ ಬಾರಿ ಆಟೋ ಚಾಲಕನಿಗೆ ಬಿತ್ತು ಭಾರೀ ದಂಡ

ಈ ಹಿಂದೆ ಈ ರೀತಿಯ ಅನೇಕ ಘಟನೆಗಳು ವರದಿಯಾಗಿವೆ. ಈಗ ಇದೇ ರೀತಿಯ ಘಟನೆಯೊಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದಿದೆ. ಈ ಬಾರಿ ಆಟೋ ಚಾಲಕರೊಬ್ಬರಿಗೆ ತಪ್ಪಾಗಿ ದಂಡ ವಿಧಿಸಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಮತ್ತೆ ಎಡವಟ್ಟು ಮಾಡಿದ ಸಂಚಾರಿ ಪೊಲೀಸರು, ಈ ಬಾರಿ ಆಟೋ ಚಾಲಕನಿಗೆ ಬಿತ್ತು ಭಾರೀ ದಂಡ

ಸೆಲ್ವಕರನ್, ಕನ್ಯಾಕುಮಾರಿ ಜಿಲ್ಲೆಯ ಕುಲಶೇಖರ ಮೂಲದ ಆಟೋ ಚಾಲಕರಾಗಿದ್ದು, ಕೆಲ ದಿನಗಳ ಹಿಂದೆ ಅವರ ಮೊಬೈಲ್ ಪೋನ್ ಗೆ ಎಸ್ಎಂಎಸ್ ಬಂದಿದೆ. ಈ ಎಸ್ಎಂಎಸ್ ನಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ದಂಡ ವಿಧಿಸಲಾಗಿದೆ ಎಂದು ತಿಳಿಸಲಾಗಿತ್ತು.

ಮತ್ತೆ ಎಡವಟ್ಟು ಮಾಡಿದ ಸಂಚಾರಿ ಪೊಲೀಸರು, ಈ ಬಾರಿ ಆಟೋ ಚಾಲಕನಿಗೆ ಬಿತ್ತು ಭಾರೀ ದಂಡ

ಹೆಲ್ಮೆಟ್ ಧರಿಸದ ಕಾರಣಕ್ಕೆ, ವೇಗವಾಗಿ ಚಲಿಸಿದ ಕಾರಣಕ್ಕೆ ಹಾಗೂ ಸರಿಯಾದ ದಾಖಲೆಗಳಿಲ್ಲದೆ ಪ್ರಯಾಣಿಸಿದ ಕಾರಣಕ್ಕೆ ರೂ.1,600 ದಂಡ ವಿಧಿಸಲಾಗಿದೆ ಎಂದು ಈ ಎಸ್ಎಂಎಸ್ ನಲ್ಲಿ ಹೇಳಲಾಗಿತ್ತು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಮತ್ತೆ ಎಡವಟ್ಟು ಮಾಡಿದ ಸಂಚಾರಿ ಪೊಲೀಸರು, ಈ ಬಾರಿ ಆಟೋ ಚಾಲಕನಿಗೆ ಬಿತ್ತು ಭಾರೀ ದಂಡ

ಆದರೆ ಪೊಲೀಸರು ಎಸ್ಎಂಎಸ್ ನಲ್ಲಿ ನಮೂದಿಸಿರುವ ರಿಜಿಸ್ಟ್ರೇಷನ್ ನಂಬರ್ ವಾಹನವು ದ್ವಿಚಕ್ರ ವಾಹನವಲ್ಲ. ಬದಲಿಗೆ ಸೆಲ್ವಕರನ್ ಅವರು ಚಾಲನೆ ಮಾಡುವ ಆಟೋ ಆಗಿದೆ. ಪೊಲೀಸರಿಂದ ಎಸ್ಎಂಎಸ್ ಬಂದ ನಂತರ ಸೆಲ್ವಕರನ್ ಗೊಂದಲಕ್ಕೀಡಾಗಿದ್ದಾರೆ.

ಮತ್ತೆ ಎಡವಟ್ಟು ಮಾಡಿದ ಸಂಚಾರಿ ಪೊಲೀಸರು, ಈ ಬಾರಿ ಆಟೋ ಚಾಲಕನಿಗೆ ಬಿತ್ತು ಭಾರೀ ದಂಡ

ಈ ಬಗ್ಗೆ ಮಾತನಾಡಿರುವ ಸೆಲ್ವಕರನ್, ಲಾಕ್ ಡೌನ್ ಹಿನ್ನೆಲೆಯಲ್ಲಿ ನನ್ನ ಆಟೋವನ್ನು ಮನೆಯಲ್ಲಿಯೇ ನಿಲ್ಲಿಸಲಾಗಿದೆ. ಆದರೂ ನಮ್ಮ ಮನೆಯಿಂದ 30 ಕಿ.ಮೀ ದೂರವಿರುವ ಕುಲಶೇಖರದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ್ದೇನೆ ಎಂದು ಹೇಳಿ ತಪ್ಪಾಗಿ ದಂಡ ವಿಧಿಸಿದ್ದಾರೆ ಎಂದು ಹೇಳಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮತ್ತೆ ಎಡವಟ್ಟು ಮಾಡಿದ ಸಂಚಾರಿ ಪೊಲೀಸರು, ಈ ಬಾರಿ ಆಟೋ ಚಾಲಕನಿಗೆ ಬಿತ್ತು ಭಾರೀ ದಂಡ

ಲಾಕ್ ಡೌನ್ ಕಾರಣದಿಂದಾಗಿ ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದೇನೆ. ಇಂತಹ ಪರಿಸ್ಥಿತಿಯಲ್ಲಿ ನನಗೆ ದಂಡ ವಿಧಿಸಿ ಆಘಾತ ನೀಡಲಾಗಿದೆ. ಪೊಲೀಸರು ಈ ಅವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಅವರು ಹೇಳಿದರು.

ಮತ್ತೆ ಎಡವಟ್ಟು ಮಾಡಿದ ಸಂಚಾರಿ ಪೊಲೀಸರು, ಈ ಬಾರಿ ಆಟೋ ಚಾಲಕನಿಗೆ ಬಿತ್ತು ಭಾರೀ ದಂಡ

ಕರೋನಾ ವೈರಸ್ ನಂತರ ಬಹುತೇಕ ಆಟೋ ಚಾಲಕರು ಆದಾಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅನ್ ಲಾಕ್ ನಂತರ ಆಟೋಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಆದರೆ ಮೊದಲಿನಂತೆ ಜನರು ಆಟೋಗಳಲ್ಲಿ ಸಂಚರಿಸುತ್ತಿಲ್ಲ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮತ್ತೆ ಎಡವಟ್ಟು ಮಾಡಿದ ಸಂಚಾರಿ ಪೊಲೀಸರು, ಈ ಬಾರಿ ಆಟೋ ಚಾಲಕನಿಗೆ ಬಿತ್ತು ಭಾರೀ ದಂಡ

ಕರೋನಾ ವೈರಸ್ ಹರಡ ಬಹುದೆಂಬ ಭೀತಿಯಿಂದಾಗಿ ಸಾರ್ವಜನಿಕರು ಆಟೋಗಳಲ್ಲಿ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ. ಬದಲಿಗೆ ತಮ್ಮ ಸ್ವಂತ ಕಾರು ಅಥವಾ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವುದಕ್ಕೆ ಆದ್ಯತೆ ನೀಡುತ್ತಿದ್ದಾರೆ.

ಮತ್ತೆ ಎಡವಟ್ಟು ಮಾಡಿದ ಸಂಚಾರಿ ಪೊಲೀಸರು, ಈ ಬಾರಿ ಆಟೋ ಚಾಲಕನಿಗೆ ಬಿತ್ತು ಭಾರೀ ದಂಡ

ಇಂತಹ ಪರಿಸ್ಥಿತಿಯಲ್ಲಿ ಹೆಲ್ಮೆಟ್ ಧರಿಸಿಲ್ಲವೆಂದು ಆಟೋ ಚಾಲಕನಿಗೆ ದಂಡ ವಿಧಿಸಿರುವ ಪೊಲೀಸರು ಆತನಿಗೆ ಮತ್ತಷ್ಟು ಆಘಾತ ನೀಡಿದ್ದಾರೆ. ಕನ್ಯಾಕುಮಾರಿ ಪೊಲೀಸರು ಆಟೋ ಚಾಲಕನಿಗೆ ವಿಧಿಸಿರುವ ದಂಡವನ್ನು ರದ್ದುಗೊಳಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಬಗ್ಗೆ ಪುಥಿಯಾತಲೈಮುರೈ ವರದಿ ಮಾಡಿದೆ.

Most Read Articles

Kannada
English summary
Auto rickshaw driver fined for not wearing helmet in Kanyakumari. Read in Kannada.
Story first published: Thursday, September 24, 2020, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X