ಕೋವಿಡ್ 19: ಸಾಮಾಜಿಕ ಅಂತರ ಕಾಯ್ದಕೊಳ್ಳಲು ಈ ರಿಕ್ಷಾ ಮಾಲೀಕನ ಐಡಿಯಾ ಹೇಗಿದೆ ನೋಡಿ..

ಕರೋನಾ ವೈರಸ್ ಹರಡುವಿಕೆಯನ್ನು ತಡೆಯುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸಾಕಷ್ಟು ಸಹಕಾರಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಜನದಟ್ಟಣೆಯಾಗುವ ಪ್ರತಿ ಸ್ಥಳದಲ್ಲೂ ಇದೀಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಪ್ರಮುಖ ಸವಾಲಾಗಿದೆ.

ಸಾಮಾಜಿಕ ಅಂತರ ಕಾಯ್ದಕೊಳ್ಳಲು ಈ ರಿಕ್ಷಾ ಮಾಲೀಕನ ಐಡಿಯಾ ಹೇಗಿದೆ ನೋಡಿ..

ಇಡೀ ವಿಶ್ವವೇ ಇದೀಗ ಮಹಾಮಾರಿ ಕರೋನಾ ವೈರಸ್ ಅಟ್ಟಹಾಸಕ್ಕೆ ನಲುಗಿ ಹೋಗಿದ್ದು, ವೈರಸ್ ತಡೆಗಾಗಿ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕರೋನಾ ವೈರಸ್‌ಗೆ ಸೂಕ್ತವಾದ ಔಷಧಿಗಳಿಲ್ಲದಿರುವುದು ಸಾಕಷ್ಟು ಸಾವು-ನೋವಿಗೆ ಕಾರಣವಾಗಿದ್ದು, ವೈರಸ್ ಹರಡುವಿಕೆಯನ್ನು ತಡೆಯುವುದಕ್ಕಾಗಿ ಸದ್ಯಕ್ಕೆ ಸಾಮಾಜಿಕ ಅಂತರ ಕಾಯ್ದಕೊಳ್ಳುತ್ತಿದ್ದಕ್ಕಿಂತ ಮತ್ತೊಂದು ಉತ್ತಮ ಮುಂಜಾಗ್ರತೆ ಇಲ್ಲ ಎನ್ನಬಹುದು.

ಸಾಮಾಜಿಕ ಅಂತರ ಕಾಯ್ದಕೊಳ್ಳಲು ಈ ರಿಕ್ಷಾ ಮಾಲೀಕನ ಐಡಿಯಾ ಹೇಗಿದೆ ನೋಡಿ..

ತರಕಾರಿ ಖರೀದಿಯಿಂದ ಹಿಡಿದು ಸಾರಿಗೆ ವ್ಯವಸ್ಥೆಯ ಬಳಕೆಯ ತನಕವು ಇದೀಗ ಸಾಮಾಜಿಕ ಅಂತರ ಕಾಯ್ದಕೊಳ್ಳುವುದರ ಬಗೆಗೆ ಹೆಚ್ಚು ಗಮನಹರಿಸಲಾಗುತ್ತಿದ್ದು, ಇಲ್ಲೊಬ್ಬ ಎಲೆಕ್ಟ್ರಿಕ್ ಆಟೋ ರಿಕ್ಷಾ ಮಾಲೀಕ ಕೂಡಾ ಇದೇ ವಿಚಾರವಾಗಿ ಆಟೋ ಉದ್ಯಮದ ದಿಗ್ಗಜ ಆನಂದ್ ಮಹೀಂದ್ರಾ ಅವರ ಮೆಚ್ಚುಗೆಗೆ ಕಾರಣನಾಗಿದ್ದಾನೆ.

MOST READ: ಲಾಕ್‌ಡೌನ್ ಸಂಕಷ್ಟ- ಆಟೋ ಚಾಲಕರ ಬ್ಯಾಂಕ್ ಖಾತೆ ಸೇರಿದ ರೂ.5 ಸಾವಿರ ಪರಿಹಾರ..!

ಸಾಮಾಜಿಕ ಅಂತರ ಕಾಯ್ದಕೊಳ್ಳಲು ಈ ರಿಕ್ಷಾ ಮಾಲೀಕನ ಐಡಿಯಾ ಹೇಗಿದೆ ನೋಡಿ..

ಲಾಕ್‌ಡೌನ್ ತೆರುವು ನಂತರ ಸಾಮಾಜಿಕ ಬದುಕು ಹೇಗಿರಲಿದೆ ಎನ್ನುವುದರ ಕುರಿತು ಮಾತನಾಡಿರುವ ಆನಂದ್ ಮಹೀಂದ್ರಾ ಅವರು, ಸೋಂಕು ನಿಯಂತ್ರಿಸುವಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಬಗೆಗೆ ಆಟೋ ರಿಕ್ಷಾ ಮಾಲೀಕನೊಬ್ಬ ತೆಗೆದುಕೊಂಡಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಅಂತರ ಕಾಯ್ದಕೊಳ್ಳಲು ಈ ರಿಕ್ಷಾ ಮಾಲೀಕನ ಐಡಿಯಾ ಹೇಗಿದೆ ನೋಡಿ..

ದೆಹಲಿ ಹೊರವಲಯದಲ್ಲಿ ಆಟೋ ರಿಕ್ಷಾ ಮಾಲೀಕನೊಬ್ಬ ಪ್ರಯಾಣಿಕರ ನಡುವೆ ಸಾಮಾಜಿಕ ಅಂತರ ಕಾಯ್ದಕೊಳ್ಳುವಂತೆ ವಿಶೇಷವಾಗಿ ಒಳವಿನ್ಯಾಸ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಆನಂದ್ ಮಹೀಂದ್ರಾ ಅವರು, ಸಂಕಷ್ಟ ಸಮಯದಲ್ಲೂ ಜನಸಾಮಾನ್ಯರ ಮುಂದಾಲೋಚನೆಗಳನ್ನು ಕೊಂಡಾಡಿದ್ದಾರೆ.

MOST READ: ಲಾಕ್‌ಡೌನ್ ವೇಳೆ ಕಾರು ಚಾಲನೆ ಮಾಡಿ ಸಿಕ್ಕಿಬಿದ್ದ ಮಹಿಳೆಯಿಂದ ಹೈಡ್ರಾಮಾ..

ಸಾಮಾಜಿಕ ಅಂತರ ಕಾಯ್ದಕೊಳ್ಳಲು ಈ ರಿಕ್ಷಾ ಮಾಲೀಕನ ಐಡಿಯಾ ಹೇಗಿದೆ ನೋಡಿ..

ಆಟೋ ರಿಕ್ಷಾದಲ್ಲಿ ಸೋಂಕು ಹರಡದಂತೆ ಪ್ರತಿ ಪ್ರಯಾಣಿಕರಿಗೂ ಪ್ರತ್ಯೇಕ ಆಸನದೊಂದಿಗೆ ವ್ಯವಸ್ಥೆ ಮಾಡಿರುವುದಲ್ಲದೆ ಸೋಂಕು ಹರಡದಂತೆ ಪರದೆ ಹಾಕಿರುವುದು ಆನಂದ್ ಮಹೀಂದ್ರಾ ಅವರ ಗಮನಸೆಳೆದಿದೆ.

ಸಾಮಾಜಿಕ ಅಂತರ ಕಾಯ್ದಕೊಳ್ಳಲು ಈ ರಿಕ್ಷಾ ಮಾಲೀಕನ ಐಡಿಯಾ ಹೇಗಿದೆ ನೋಡಿ..

ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಆನಂದ್ ಮಹೀಂದ್ರಾ ಅವರು ಸೋಂಕು ಹರಡದಂತೆ ರಿಕ್ಷಾ ಮಾಲೀಕ ತೆಗೆದುಕೊಂಡ ಸುರಕ್ಷಾ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ತಮ್ಮ ಮುಂದಿನ ಆಟೋ ರಿಕ್ಷಾ ಉತ್ಪನ್ನಗಳಲ್ಲಿ ಇಂತಹ ಮಹತ್ವದ ಬದಲಾವಣೆಯನ್ನು ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಸಾಮಾಜಿಕ ಅಂತರ ಕಾಯ್ದಕೊಳ್ಳಲು ಈ ರಿಕ್ಷಾ ಮಾಲೀಕನ ಐಡಿಯಾ ಹೇಗಿದೆ ನೋಡಿ..

ಹೀಗಾಗಿ ಮಾರಕ ವೈರಸ್ ತಡೆಯಲು ಸಾಮಾಜಿಕ ಅಂತರ ಕಾಯ್ದಕೊಳ್ಳುವುದನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲನೆ ಮಾಡಲೇಬೇಕಿದ್ದು, ಸಾರ್ವಜನಿಕ ಸಾರಿಗೆ ಬಳಕೆ ಮಾಡುವಾಗ ಇನ್ಮುಂದೆ ಪ್ರತಿ ಪ್ರಯಾಣಿಕರ ಮಧ್ಯದಲ್ಲೂ ಇಂತಿಷ್ಟು ಅಂತರ ಇರಲೇಬೇಕಾದ ಅನಿವಾರ್ಯತೆಗಳಿವೆ.

ಜೊತೆಗೆ ಕರೋನಾ ವೈರಸ್ ಹರಡುವ ಭಯದಿಂದ ಬಹುತೇಕರು ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಬಳಕೆಯನ್ನು ಕಡಿಮೆ ಮಾಡಬಹುದೆನ್ನುವ ವಿಚಾರವು ಟ್ಯಾಕ್ಸಿ ಮಾಲೀಕರಲ್ಲಿ ಆತಂಕ ಉಂಟು ಮಾಡುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಕರಿಗೆ ಸೇವೆ ನೀಡುವುದು ಆರ್ಥಿಕವಾಗಿ ಭಾರೀ ಹೊಡೆತ ನೀಡುವ ಸಾಧ್ಯತೆಗಳಿವೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಸಾಮಾಜಿಕ ಅಂತರ ಕಾಯ್ದಕೊಳ್ಳಲು ಈ ರಿಕ್ಷಾ ಮಾಲೀಕನ ಐಡಿಯಾ ಹೇಗಿದೆ ನೋಡಿ..

ಈ ನಿಟ್ಟಿನಲ್ಲಿ ಆಟೋ ರಿಕ್ಷಾ ಮಾಲೀಕರೊಬ್ಬರು ಕೈಗೊಂಡ ಕಾರ್ಯವು ಸಾರ್ವಜನಿಕರ ಮೆಚ್ಟುಗೆ ಕಾರಣವಾಗಿದ್ದು, ಇತ್ತ ಸಾಮಾಜಿಕ ಅಂತರದೊಂದಿಗೆ ಪ್ರಯಾಣಿಕರಿಗೆ ಸುರಕ್ಷತೆಯ ಸೇವೆ ನೀಡುವಲ್ಲಿ ಇದು ಸಾಕಷ್ಟು ಸಹಕಾರಿಯಾಗಿದೆ.

Most Read Articles

Kannada
English summary
E-Rickshaw follows social distancing new way Anand Mahindra praises video. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X