ಕರೋನಾ ಸೋಂಕಿತರಿಗೆ ನೆರವಾಗಲು ಆಟೋ ರಿಕ್ಷಾಗಳನ್ನು ಆಂಬ್ಯುಲೆನ್ಸ್‌ಗಳಾಗಿ ಬದಲಿಸಿದ ಆಟೋ ಚಾಲಕರು

ದೇಶಾದ್ಯಂತ ಕರೋನಾ ವೈರಸ್ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಿದೆ. ಕರೋನಾ ವೈರಸ್ ಎರಡನೇ ಅಲೆಯಲ್ಲಿ ಜನರು ಉಸಿರಾಟದ ತೊಂದರೆಯನ್ನು ಎದುರಿಸುತ್ತಿದ್ದಾರೆ. ಪ್ರತಿ ನಿತ್ಯ 3 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿರುವುದರಿಂದ ದೇಶದೆಲ್ಲೆಡೆ ಆಕ್ಸಿಜನ್ ಕೊರತೆ ಎದುರಾಗಿದೆ.

ಕರೋನಾ ಸೋಂಕಿತರಿಗೆ ನೆರವಾಗಲು ಆಟೋ ರಿಕ್ಷಾಗಳನ್ನು ಆಂಬ್ಯುಲೆನ್ಸ್‌ಗಳಾಗಿ ಬದಲಿಸಿದ ಆಟೋ ಚಾಲಕರು

ಸಕಾಲಕ್ಕೆ ಆಕ್ಸಿಜನ್ ದೊರಕದ ಕಾರಣ ಪ್ರತಿ ನಿತ್ಯ ಸಾಕಷ್ಟು ಜನರು ಸಾವನ್ನಪ್ಪುತ್ತಿದ್ದಾರೆ. ಸಂಕಷ್ಟದಲ್ಲಿರುವ ಭಾರತಕ್ಕೆ ನೆರವಾಗಲು ಹಲವಾರು ದೇಶಗಳು ಮುಂದೆ ಬಂದಿವೆ. ಅಮೆರಿಕಾ ಸೇರಿದಂತೆ ಹಲವು ದೇಶಗಳು ಮೆಡಿಕಲ್ ಆಕ್ಸಿಜನ್ ಟ್ಯಾಂಕರ್‌ಗಳನ್ನು ಹಡಗು ಹಾಗೂ ವಿಮಾನಗಳ ಮೂಲಕ ರವಾನಿಸುತ್ತಿವೆ.

ಕರೋನಾ ಸೋಂಕಿತರಿಗೆ ನೆರವಾಗಲು ಆಟೋ ರಿಕ್ಷಾಗಳನ್ನು ಆಂಬ್ಯುಲೆನ್ಸ್‌ಗಳಾಗಿ ಬದಲಿಸಿದ ಆಟೋ ಚಾಲಕರು

ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಂಬ್ಯುಲೆನ್ಸ್'ಗಳ ಕೊರತೆ ಎದುರಾಗಿದೆ. ಕರೋನಾ ವೈರಸ್ ಎರಡನೇ ಅಲೆ ಆರಂಭವಾದಾಗಿನಿಂದಲೂ ಈ ಪರಿಸ್ಥಿತಿ ಎದುರಾಗಿದೆ. ಇದು ಕೇವಲ ಒಂದು ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಕರೋನಾ ಸೋಂಕಿತರಿಗೆ ನೆರವಾಗಲು ಆಟೋ ರಿಕ್ಷಾಗಳನ್ನು ಆಂಬ್ಯುಲೆನ್ಸ್‌ಗಳಾಗಿ ಬದಲಿಸಿದ ಆಟೋ ಚಾಲಕರು

ದೇಶಾದ್ಯಂತ ಇದೇ ಪರಿಸ್ಥಿತಿ ಎದುರಾಗಿದೆ. ಸೋಂಕಿತರಿಗೆ ನೆರವಾಗಲು ಕೆಲವು ವ್ಯಕ್ತಿಗಳು ತಮ್ಮ ಕಾರುಗಳನ್ನು ಆಕ್ಸಿಜನ್ ಚಾಲಿತ ವಾಹನಗಳಾಗಿ ಬದಲಿಸಿದ್ದಾರೆ. ಈ ರೀತಿಯ ವಾಹನಗಳು ಜನರಿಗೆ ಕಡಿಮೆ ವೆಚ್ಚದಲ್ಲಿ ಸೇವೆ ಒದಗಿಸುತ್ತಿವೆ.

ಕರೋನಾ ಸೋಂಕಿತರಿಗೆ ನೆರವಾಗಲು ಆಟೋ ರಿಕ್ಷಾಗಳನ್ನು ಆಂಬ್ಯುಲೆನ್ಸ್‌ಗಳಾಗಿ ಬದಲಿಸಿದ ಆಟೋ ಚಾಲಕರು

ಈಗ ಮಹಾರಾಷ್ಟ್ರದ ಪುಣೆಯಲ್ಲಿ ಕೆಲವು ವಾಹನ ಚಾಲಕರು ತಮ್ಮ ಆಟೋರಿಕ್ಷಾಗಳನ್ನು ಆಕ್ಸಿಜನ್ ಹೊಂದಿರುವ ವಾಹನಗಳಾಗಿ ಬದಲಿಸಿ ಸೋಂಕಿತರಿಗೆ ನೆರವಾಗುತ್ತಿರುವ ಬಗ್ಗೆ ವರದಿಯಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಕರೋನಾ ಸೋಂಕಿತರಿಗೆ ನೆರವಾಗಲು ಆಟೋ ರಿಕ್ಷಾಗಳನ್ನು ಆಂಬ್ಯುಲೆನ್ಸ್‌ಗಳಾಗಿ ಬದಲಿಸಿದ ಆಟೋ ಚಾಲಕರು

ವೈರಸ್ ಪ್ರಭಾವವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಲವು ವಾಹನ ತಯಾರಕ ಕಂಪನಿಗಳು ಸಹ ತಮ್ಮದೇ ಆದ ರೀತಿಯಲ್ಲಿ ನೆರವು ನೀಡುತ್ತಿವೆ. ಪುಣೆ ಕರೋನಾದಿಂದ ಹೆಚ್ಚು ಬಾಧಿತವಾಗಿರುವ ನಗರಗಳಲ್ಲಿ ಒಂದಾಗಿದೆ.

ಕರೋನಾ ಸೋಂಕಿತರಿಗೆ ನೆರವಾಗಲು ಆಟೋ ರಿಕ್ಷಾಗಳನ್ನು ಆಂಬ್ಯುಲೆನ್ಸ್‌ಗಳಾಗಿ ಬದಲಿಸಿದ ಆಟೋ ಚಾಲಕರು

ಪುಣೆಯಲ್ಲಿ ಹಾಸಿಗೆ, ವೈದ್ಯಕೀಯ ಉಪಕರಣ ಹಾಗೂ ಆಕ್ಸಿಜನ್'ನಂತಹ ವೈದ್ಯಕೀಯ ಮೂಲ ಸೌಲಭ್ಯಗಳ ಕೊರತೆ ಎದುರಾಗಿದೆ. ಈ ಪರಿಸ್ಥಿತಿಯಲ್ಲಿ ಪುಣೆಯ ಆಟೋ ಚಾಲಕರು ತಮ್ಮ ಆಟೋರಿಕ್ಷಾಗಳನ್ನು ತಾತ್ಕಾಲಿಕ ಆಕ್ಸಿಜನ್ ಆಂಬ್ಯುಲೆನ್ಸ್‌ಗಳಾಗಿ ಪರಿವರ್ತಿಸುತ್ತಿದ್ದಾರೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕರೋನಾ ಸೋಂಕಿತರಿಗೆ ನೆರವಾಗಲು ಆಟೋ ರಿಕ್ಷಾಗಳನ್ನು ಆಂಬ್ಯುಲೆನ್ಸ್‌ಗಳಾಗಿ ಬದಲಿಸಿದ ಆಟೋ ಚಾಲಕರು

ಆಂಬ್ಯುಲೆನ್ಸ್‌ಗಳಾಗಿ ಮಾರ್ಪಟ್ಟ ಆಟೊಗಳ ಮಾಲೀಕರು ತಮ್ಮಲ್ಲಿರುವ ಆಕ್ಸಿಜನ್, ರೋಗಿಗಳಿಗೆ ಕನಿಷ್ಠ 6 ರಿಂದ 7 ಗಂಟೆಗಳ ಕಾಲ ಆಕ್ಸಿಜನ್ ಒದಗಿಸುತ್ತದೆ ಎಂದು ಹೇಳಿದ್ದಾರೆ. ನಮ್ಮ ಬೆಂಗಳೂರಿನಲ್ಲಿಯೂ ಕರ್ನಾಟಕ ಸರ್ಕಾರವು ಆಕ್ಸಿಜನ್ ಬಸ್ಸುಗಳನ್ನು ಆರಂಭಿಸಿದೆ.

ಕರೋನಾ ಸೋಂಕಿತರಿಗೆ ನೆರವಾಗಲು ಆಟೋ ರಿಕ್ಷಾಗಳನ್ನು ಆಂಬ್ಯುಲೆನ್ಸ್‌ಗಳಾಗಿ ಬದಲಿಸಿದ ಆಟೋ ಚಾಲಕರು

ನೆರೆಯ ತಮಿಳುನಾಡಿನಲ್ಲಿ ಚೆನ್ನೈ ಮಹಾನಗರ ಪಾಲಿಕೆಯ ನೂತನ ಆಯುಕ್ತರಾದ ಗಗನ್‌ದೀಪ್'ರವರು 250ಕ್ಕೂ ಹೆಚ್ಚು ಕಾರುಗಳನ್ನು ವಿಶೇಷ ಕಾರ್ ಆಂಬ್ಯುಲೆನ್ಸ್'ಗಳಾಗಿ ಬದಲಿಸಿದ್ದಾರೆ.

Most Read Articles

Kannada
English summary
Auto rickshaws converted as ambulance in Pune. Read in Kannada.
Story first published: Saturday, May 15, 2021, 15:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X