ವಿಜಯದಶಮಿ ಸಂಭ್ರಮದಲ್ಲಿ ಆಯುಧ ಪೂಜೆಯ ಮಹತ್ವ ಏನು ಗೊತ್ತಾ?

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ವಿಜಯದಶಮಿ ಸಂಭ್ರಮಕ್ಕೆ ನಮ್ಮಲ್ಲಿ ವಿಶೇಷ ಸ್ಥಾನಮಾನವಿದೆ. ಸತತ ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಪ್ರತಿ ದಿನವೂ ಒಂದೊಂದು ವಿಶೇಷ ಪೂಜೆ ಕೈಗೊಳ್ಳುವ ಪ್ರತೀತಿ ಇದ್ದು, ನವರಾತ್ರಿಯ ಕೊನೆಯ ದಿನದಂದು ಆಚರಿಸುವ ಆಯುಧ ಪೂಜಾ ಸಂಭ್ರಮಕ್ಕೆ ಹೆಚ್ಚಿನ ಮಹತ್ವದವಿದೆ.

ವಿಜಯದಶಮಿ ಸಂಭ್ರಮದಲ್ಲಿ ಆಯುಧ ಪೂಜೆಯ ಮಹತ್ವ ಏನು ಗೊತ್ತಾ?

ದೇಶದ್ಯಾಂತ ಸಾಂಪ್ರದಾಯಿಕವಾಗಿ ನವರಾತ್ರಿ ಮತ್ತು ವಿಜಯದಶಮಿ ಹಬ್ಬಗಳನ್ನು ಆಚರಿಸಲಾಗುತ್ತದೆ. ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ಆಯುಧ ಪೂಜೆಗೆ ಹೆಚ್ಚಿನ ಮಹತ್ವವಿದೆ. ಅಡುಗೆ ಮನೆಯಲ್ಲಿ ತರಕಾರಿ ಹೆಚ್ಚುವ ಚಾಕುವಿನಿಂದ ಹಿಡಿದು ದೇಶದ ಗಡಿ ಕಾಯುವ ಅತ್ಯಾಧುನಿಕ ಯುದ್ಧ ವಿಮಾನಗಳಿಗೂ ವಿಶೇಷ ಪೂಜೆ ನೇರವೇರಿಸಲಾಗುತ್ತದೆ. ಅದರಲ್ಲೂ ವಾಹನಗಳಿಗೆ ಪೂಜೆ ಸಲ್ಲಿಸುವುದೇ ಒಂದು ಸಂಭ್ರಮವಾಗಿದ್ದು, ವಾಹನಗಳ ಪೂಜೆ ಹಿಂದೆ ಹಲವಾರು ಇಂಟ್ರಸ್ಟಿಂಗ್ ವಿಚಾರಗಳಿವೆ.

ವಿಜಯದಶಮಿ ಸಂಭ್ರಮದಲ್ಲಿ ಆಯುಧ ಪೂಜೆಯ ಮಹತ್ವ ಏನು ಗೊತ್ತಾ?

ಆಯುಧ ಪೂಜೆಯಂದು ಮಾಲೀಕರು ತಮ್ಮ ವಾಹನಗಳನ್ನು ತೊಳೆದು, ಹೂವುಗಳಿಂದ ಶೃಂಗರಿಸಿ, ಕುಂಕುಮ, ಅರಶಿಣವನ್ನು ಹಚ್ಚಿ, ಅದಕ್ಕೆ ನಿಂಬೆ ಹಣ್ಣು ಇಲ್ಲವೆ ಬೂದುಗುಂಬಳ ಕಾಯಿ ಒಡೆದು ಪೂಜೆ ಸಲ್ಲಿಸುವುದು ವಾಡಿಕೆ.

ವಿಜಯದಶಮಿ ಸಂಭ್ರಮದಲ್ಲಿ ಆಯುಧ ಪೂಜೆಯ ಮಹತ್ವ ಏನು ಗೊತ್ತಾ?

ಜೊತೆಗೆ ಆಯುಧ ಪೂಜೆಯ ದಿನದಂದು ಮಾವಿನ ಸೊಪ್ಪು, ಬಾಳೆಕಂದು, ಕಬ್ಬು ಹಾಗೂ ಚಂಡು ಹೂವುಗಳಿಂದಲೂ ಆಲಂಕಾರವಾಗಿರುವ ವಾಹನಗಳು ಮದುವಣಗಿತ್ತಿಯಂತೆ ರಸ್ತೆಯೆಲ್ಲೆಡೆ ಓಡಾಡುತ್ತಿರುವ ದೃಶ್ಯ ಸರ್ವೇ ಸಾಮಾನ್ಯವಾಗಿರುತ್ತದೆ.

ವಿಜಯದಶಮಿ ಸಂಭ್ರಮದಲ್ಲಿ ಆಯುಧ ಪೂಜೆಯ ಮಹತ್ವ ಏನು ಗೊತ್ತಾ?

ಅದರಲ್ಲೂ ನೂತನವಾಗಿ ಖರೀದಿ ಮಾಡಲಾಗುವ ವಾಹನಗಳಿಂತಲೂ ತುಸು ಹೆಚ್ಚೆ ಎನ್ನುವಂತೆ ಪೂಜೆ ಮಾಡುವುದನ್ನು ನಾವು ನೋಡಬಹುದಾಗಿದ್ದು, ಪೂಜೆ ಸಲ್ಲಿಸಿಯೇ ತಮ್ಮ ಮೊದಲ ಪ್ರಯಾಣ ಆರಂಭಿಸುತ್ತಾರೆ. ಹೀಗೆ ಮಾಡುವುದರಿಂದ ವಾಹನಗಳಿಗೆ ದೀರ್ಘ ಬಾಳ್ವಿಕೆ ಪ್ರಾಪ್ತಿಯಾಗುವುದರೊಂದಿಗೆ ಆಗಬಹುದಾದ ಅನಾಹುತಗಳು ತಪ್ಪಲಿ ಎನ್ನುವಂತಹ ನಂಬಿಕೆಯ ಪ್ರತೀಕವಾಗಿ ಪೂಜೆ ಕೈಗೊಳ್ಳುತ್ತಾರೆ.

ವಿಜಯದಶಮಿ ಸಂಭ್ರಮದಲ್ಲಿ ಆಯುಧ ಪೂಜೆಯ ಮಹತ್ವ ಏನು ಗೊತ್ತಾ?

ಇದಲ್ಲದೇ ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ದೈವಿಕ ಶಕ್ತಿ ಇದೆ ಎಂಬುವುದು ಹಲವರ ನಂಬಿಕೆಯಾಗಿದ್ದು, ಇದರಿಂದಾಗಿ ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ ಎನ್ನಲಾಗುತ್ತೆ.

ವಿಜಯದಶಮಿ ಸಂಭ್ರಮದಲ್ಲಿ ಆಯುಧ ಪೂಜೆಯ ಮಹತ್ವ ಏನು ಗೊತ್ತಾ?

ಇನ್ನು ಗ್ರಾಮೀಣ ಪ್ರದೇಶದಲ್ಲೂ ಆಯುಧ ಪೂಜೆಗೆ ಅತಿ ಹೆಚ್ಚು ಮಹತ್ವವಿದ್ದು, ರೈತರು ತಮ್ಮ ಕೃಷಿ ಸಾಮಾಗ್ರಿಗಳನ್ನು ಪೂಜಿಸುತ್ತಾರೆ. ಅತ್ತ ಗ್ಯಾರೇಜ್ ನಲ್ಲಿ ಆಯುಧ ಪೂಜೆಯಂದು ವಿಶೇಷ ಪೂಜೆಯನ್ನು ನಡೆಸಿ ಮಾಲೀಕರು ತಮ್ಮ ಸಿಬ್ಬಂದಿಗೆ ಬೋನಸ್, ವಸ್ತ್ರ ಉಡುಗೊರೆಗಳನ್ನು ನೀಡಿ ಸಂಭ್ರಮವನ್ನು ಹಂಚಿಕೊಳ್ಳುತ್ತಾರೆ.

MOST READ: ಕರ್ನಾಟಕದ ಪ್ರಮುಖ ನಾಲ್ಕು ಇಂಟರ್ ಸಿಟಿ ಮಾರ್ಗಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್

ವಿಜಯದಶಮಿ ಸಂಭ್ರಮದಲ್ಲಿ ಆಯುಧ ಪೂಜೆಯ ಮಹತ್ವ ಏನು ಗೊತ್ತಾ?

ಹಾಗೆಯೇ ಜೀವನದಲ್ಲಿ ನಿತ್ಯ ಉಪಯೋಗಿಸುವ ಆಯುಧಗಳನ್ನು ದೇವರ ಮುಂದಿಟ್ಟು ಭಕ್ತಿಭಾವದಿಂದ ಪೂಜಿಸಲಾಗುತ್ತದೆ. ಸಾಫ್ಟ್ ವೇರ್ ಕಂಪನಿಗಳು ಕೂಡಾ ಆಯುಧ ಪೂಜೆಯನ್ನು ಸಂಭ್ರಮ ಸಡಗರದಿಂದ ಆಚರಿಸಿಕೊಳ್ಳುತ್ತಾರೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ವಿಜಯದಶಮಿ ಸಂಭ್ರಮದಲ್ಲಿ ಆಯುಧ ಪೂಜೆಯ ಮಹತ್ವ ಏನು ಗೊತ್ತಾ?

ಆಯುಧಗಳ ಪೂಜೆಯ ಹಿಂದಿನ ಸತ್ಯ

ದ್ವಾಪರ ಯುಗದಲ್ಲಿ ಪಾಂಡವರು 13 ವರ್ಷಗಳ ವನವಾಸ ಮುಗಿಸಿ ಬಂದ ಬಳಿಕ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನದಂದೆ ವಿಜಯದಶಮಿ ಆಚರಿಸಲಾಗುತ್ತೆ. ಅಜ್ಞಾತವಾಸದ ಸಮಯದಲ್ಲಿ ಪಾಂಡವರು ತಮ್ಮ ಶಸ್ತ್ರಾಸ್ತ್ರಗಳನ್ನು ಬನ್ನಿ ಮರದ ಕೆಳಗೆ ಬಚ್ಚಿಡುತ್ತಾರೆ. ವನವಾಸದ ನಂತರ ಬನ್ನಿ ಮರದ ಕೆಳಗೆ ಬಚ್ಚಿಡಲಾದ ಆಯುಧಗಳನ್ನು ತೆಗೆದು ಪೂಜಿಸಿದ್ದರು ಎಂಬ ಐತಿಹ್ಯವಿದೆ. ಬಳಿಕ ಅದೇ ಆಯುಧಗಳ ಮೂಲಕ ವಿರಾಟರಾಜನ ಶತ್ರುಗಳ ವಿರುದ್ಧ ವಿಜಯವನ್ನು ಸಾಧಿಸುತ್ತಾರೆ. ಹೀಗಾಗಿ ಇದೇ ಪ್ರತೀತಿ ಇನ್ನು ಮುಂದುವರಿದುಕೊಂಡು ಬಂದಿರುವುದು ವಿಶೇಷ.

MOST READ: ಅಚ್ಚರಿಯಾದ್ರು ಸತ್ಯ: ಎತ್ತಿನ ಗಾಡಿಗೂ ದುಬಾರಿ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು..!

ವಿಜಯದಶಮಿ ಸಂಭ್ರಮದಲ್ಲಿ ಆಯುಧ ಪೂಜೆಯ ಮಹತ್ವ ಏನು ಗೊತ್ತಾ?

ಇದರೊಂದಿಗೆ ದೇಶದೆಲ್ಲೆಡೆ ಆಯುಧ ಪೂಜೆಯ ಸಂಭ್ರಮದ ಮನೆ ಮಾಡಿರುವಂತೆಯೇ ಮುಂಚೂಣಿಯ ವಾಹನ ಸಂಸ್ಥೆಗಳು ಸಹ ತಮ್ಮ ಕಾರು, ಬೈಕ್ ಉತ್ಪನ್ನ ಖರೀದಿ ಮೇಲೆ ಆಕರ್ಷಕ ಆಫರ್‌ಗಳನ್ನು ನೀಡುತ್ತಲ್ಲದೇ ತನ್ಮೂಲಕ ಗರಿಷ್ಠ ಪ್ರಮಾಣದ ವಹಿವಾಟು ನಡೆಸುತ್ತವೆ.

Most Read Articles

Kannada
English summary
Significance of Ayudha Pooja & Worship of Vehicles. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X