ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

2017ರಲ್ಲಿ ಬಜಾಜ್ ಡೊಮಿನರ್ 400 ಬೈಕ್ ಯಶಸ್ವಿಯಾಗಿ ಟ್ರಾನ್ಸ್ ಸೈಬಿರಿಯನ್ ಒಡಿಸ್ಸಿ ಟೂರ್ ಅನ್ನು ಮುಗಿಸಿತ್ತು. ಪ್ರಪಂಚದ ಅತಿ ಕಠಿಣವಾದ ಈ ಟೂರ್ ಅನ್ನು ಯಶಸ್ವಿಯಾಗಿ ಮುಗಿಸಿದ ಭಾರತದ ಏಕೈಕ ಬೈಕ್ ಎಂಬ ಹೆಗ್ಗಳಿಕೆಯನ್ನು ಡೊಮಿನರ್ 400 ಬೈಕ್ ಹೊಂದಿದೆ.

ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ಈಗ ಒಂದು ಹೆಜ್ಜೆ ಮುಂದಿಟ್ಟಿರುವ ಡೊಮಿನರ್ ಬೈಕ್ ತನ್ನದೇ ಆದ ದಾಖಲೆಯನ್ನು ಮುರಿದಿದೆ. ಈಗ ಪೋಲಾರ್ ಒಡಿಸ್ಸಿ ಟೂರ್ ಅನ್ನು ಯಶಸ್ವಿಯಾಗಿ ಮುಗಿಸಿದ ಮೊದಲ ಭಾರತೀಯ ಬೈಕ್ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಈ ಟೂರ್ ಆರ್ಕ್ಟಿಕ್‍‍ನಲ್ಲಿರುವ ಟುಕ್ಟೊಯಾಕ್‍‍ಟುಕ್‍‍ನಿಂದ ಆರಂಭವಾಗಿ ಅಂಟಾರ್ಕ್ಟಿಕ್ ವರೆಗೆ ಯಾವುದೇ ತೊಂದರೆಯಿಲ್ಲದೇ ಮುಗಿದಿದೆ. ಈ ಯಾತ್ರೆಯನ್ನು ಮೂವರು ಸಾಹಸಿ ಭಾರತೀಯರು ಕೈಗೊಂಡಿದ್ದರು.

ಈ ಯಾತ್ರೆಗಾಗಿಯೇ ಮಾಡಿಫೈ ಮಾಡಲಾದ ಡೊಮಿನರ್ 400 ಬೈಕುಗಳನ್ನು ಬಳಸಲಾಗಿತ್ತು. 99 ದಿನಗಳ ಅವಧಿಯಲ್ಲಿ 51,000 ಕಿ.ಮೀ ಪ್ರಯಾಣದಲ್ಲಿ 15 ದೇಶ, 3 ಖಂಡಗಳಲ್ಲಿ ಪ್ರಯಾಣಿಸಿದ್ದಾರೆ. ಪ್ರತಿ ದಿನ ಸುಮಾರು 515 ಕಿ.ಮೀ ಪ್ರಯಾಣ ಮಾಡಿದ್ದಾರೆ.

ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ತಮ್ಮ ಪ್ರಯಾಣದ ಈ ಅವಧಿಯಲ್ಲಿ ಈ ಸಾಹಿಸಿಗಳು ಉತ್ತರ ಹಾಗೂ ದಕ್ಷಿಣ ಅಮೇರಿಕಾದ ಉದ್ದಗಲಕ್ಕೂ ಪ್ರಯಾಣ ಬೆಳೆಸಿದ್ದಾರೆ. ಅಂಕೋರೇಜ್‍‍ನಿಂದ ಹಿಡಿದು ಆರ್ಕ್ಟಿಕ್‍‍‍ನಲ್ಲಿರುವ ಟುಕ್ಟೊಯಾಕ್‍‍ಟುಕ್ ವರೆಗೆ, ಪ್ರಪಂಚದ ಕೊನೆಯ ಭಾಗವೆಂದು ಪರಿಗಣಿಸಲಾಗುವ ಅರ್ಜೆಂಟಿನಾದ ಉಶುಯಿಯಾ ದಿಂದ ಅಂಟಾರ್ಕ್ಟಿಕ್‍‍ವರೆಗೂ ಪ್ರಯಾಣಿಸಿದ್ದಾರೆ.

ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ದೀಪಕ್ ಕಾಮತ್, ಅವಿನಾಶ್ ಪಿ ಎಸ್ ಹಾಗೂ ದೀಪಕ್ ಗುಪ್ತಾ ಎಂಬುವವರೇ ಈ ಯಾತ್ರೆ ಕೈಗೊಂಡಿದ್ದ ಸಾಹಸಿಗಳು. ದೀಪಕ್ ಕಾಮತ್‍‍ರವರು ಸುಮಾರು 30 ವರ್ಷಗಳಿಂದ ಬೈಕ್ ಚಲಾಯಿಸುತ್ತಿದ್ದು, ಡೊಮಿನಾರ್ ಪೋಲಾರ್ ಒಡಿಸ್ಸಿಯ ಟೀಂನ ನಾಯಕರಾಗಿದ್ದರು. ಅವಿನಾಶ್ ಪಿ ಎಸ್ ವೃತ್ತಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿದ್ದು, ಬೈಕುಗಳ ಹಾಗೂ ಫೋಟೊಗ್ರಾಫಿಯ ಹವ್ಯಾಸವನ್ನು ಹೊಂದಿದ್ದಾರೆ. ದೀಪಕ್ ಗುಪ್ತಾರವರು ದೆಹಲಿಯಲ್ಲಿರುವ ಗ್ರೂಪ್ ಆಫ್ ಸೂಪರ್ ಬೈಕಿನ ಸದಸ್ಯರಾಗಿದ್ದಾರೆ.

ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ಡೊಮಿನಾರ್ ಪೋಲಾರ್ ಒಡಿಸ್ಸಿಯ ಯಾತ್ರೆ ಯಶಸ್ವಿಯಾಗಿ ಮುಗಿದ ನಂತರ ಮಾತನಾಡಿದ, ಬಜಾಜ್ ಆಟೋ ಲಿಮಿಟೆಡ್‍‍ನ ಉಪಾಧ್ಯಕ್ಷರಾದ ನಾರಾಯಣ್ ಸುಂದರರಾಮನ್‍‍ರವರು, ಡೊಮಿನಾರ್ ಪೋಲಾರ್ ಒಡಿಸ್ಸಿಯು ಮನುಷ್ಯ ಹಾಗೂ ಮೆಷಿನ್ನಿನ ನಡುವಿನ ಸಂಗಮದ ಮಹಾಕಾವ್ಯದಂತಿದೆ.

ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ತಂಡದಲ್ಲಿದ್ದ ದೀಪಕ್ ಕಾಮತ್, ಅವಿನಾಶ್ ಪಿ ಎಸ್ ಹಾಗೂ ದೀಪಕ್ ಗುಪ್ತಾರವರಿಗೆ ಅಭಿನಂದನೆಗಳು. 99 ದಿನಗಳ ಅವಧಿಯ ಡೊಮಿನಾರ್ ಬೈಕಿನ ಪರ್ಫಾಮೆನ್ಸ್ ಉತ್ತಮವಾದ ಗುಣಮಟ್ಟ ಹಾಗೂ ಅಸಾಧಾರಣವಾದ ಸಾಮರ್ಥ್ಯವನ್ನು ತೋರಿಸುತ್ತದೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

51,000 ಕಿ.ಮೀ ಪ್ರಯಾಣದ ಅವಧಿಯಲ್ಲಿ ಯಾವುದೇ ಬಿಡಿಭಾಗಗಳನ್ನು ಬದಲಿಸದೇ ಹಾಗೂ ಯಾವುದೇ ಸಿಬ್ಬಂದಿಯ ಸಹಾಯವನ್ನು ಪಡೆಯದೇ ಗುಡ್ಡಗಾಡುಗಳಲ್ಲಿ ಹಾಗೂ ಕಠಿಣಕರ ಪರಿಸ್ಥಿತಿಗಳಲ್ಲಿ ನಿಭಾಯಿಸಿರುವುದು ನಿಜಕ್ಕೂ ಮಹತ್ಸಾಧನೆಯಾಗಿದೆ ಎಂದು ತಿಳಿಸಿದರು.

ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ಈ ಬೈಕ್ ಸವಾರರು ತಮ್ಮ ಪ್ರಯಾಣದಲ್ಲಿ 4 ಅತಿ ಅಪಾಯಕಾರಿಯಾದ ರಸ್ತೆಗಳಲ್ಲಿ ಹಾಗೂ 3 ಮುಖ್ಯವಾದ ಲ್ಯಾಟಿಟ್ಯೂಡ್ (ಅಕ್ಷಾಂಶ)ಗಳಲ್ಲಿ ಪ್ರಯಾಣ ಮಾಡಿದ್ದಾರೆ. ಡೊಮಿನಾರ್ ಪೋಲಾರ್‍‍ನ ಇಡೀ ಪ್ರಯಾಣದಲ್ಲಿ ಎಲ್ಲಾ ತರಹದ ಪ್ರದೇಶಗಳಲ್ಲಿ, ಹವಾಗುಣಗಳಲ್ಲಿ, ಪರಿಸ್ಥಿತಿಗಳಲ್ಲಿ ಯಾವುದೇ ಪ್ರಮುಖ ತೊಂದರೆಗಳು ಉಂಟಾಗದೇ, ಯಾವುದೇ ಸಿಬ್ಬಂದಿಯ ಸಹಾಯವಿಲ್ಲದೇ, ಬ್ಯಾಕ್ ಅಪ್ ಟೀಂಗಳಿಲ್ಲದೇ ಪ್ರಯಾಣಿಸಿದ್ದಾರೆ.

MOST READ: ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸಿದ್ರೆ ಬೈಕ್ ಬ್ಲಾಸ್ಟ್ ಆಗುತ್ತಾ?

ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ಈ ಕಠಿಣ ಪ್ರಯಾಣದಲ್ಲಿ 3 ಖಂಡಗಳಾದ - ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ ಹಾಗೂ ಅಂಟಾರ್ಕ್ಟಿಕ್‍‍ಗಳನ್ನು, 15 ದೇಶಗಳಾದ ಕೆನಡಾ, ಅಮೇರಿಕಾ, ಮೆಕ್ಸಿಕೊ, ಗ್ವಾಟೆಮಾಲಾ, ಹೊಂಡುರಾಸ್, ಎಲ್ ಸಲ್ವಾಡಾರ್, ನಿಕಾರಾಗುವಾ, ಕೊಸ್ಟಾರಿಕಾ, ಪನಾಮಾ, ಕೊಲಂಬಿಯಾ, ಇಕ್ವೆಡರ್, ಪೆರು, ಬೊಲಿವಿಯಾ, ಚಿಲಿ ಹಾಗೂ ಅರ್ಜೆಂಟಿನಾ ದೇಶಗಳಲ್ಲಿ ಪ್ರಯಾಣಿಸಲಾಗಿದೆ.

ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ಈ ಸಾಹಸಿಗಳು ತಮ್ಮ ಬೈಕುಗಳೊಂದಿಗೆ ಅಲಾಕ್ಸಾ ರಾಜ್ಯಾದ್ಯಂತ ಅಧಿಕ ಹಿಮಪಾತ, ಜೋರು ಮಳೆಗಳಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸಿದ್ದಾರೆ. ಅಂಟಾರ್ಕ್ಟಿಕ್ ನಲ್ಲಿ - 22 ಡಿಗ್ರಿಯಷ್ಟು ತಾಪಮಾನವನ್ನು, ಭೂಮಿಯ ಮೇಲೆ ಅತಿ ಹೆಚ್ಚು ತಾಪಮಾನವಿರುವ ಅಮೇರಿಕಾದ ಡೆತ್ ವ್ಯಾಲಿಯಲ್ಲಿ + 54 ಡಿಗ್ರಿ ಉಷ್ಣಾಂಶವನ್ನು ಎದುರಿಸಿದ್ದಾರೆ.

MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ಈ ಯುವಕರು ಮಾಡಿರುವ ಈ ಯಾತ್ರೆಯು ಸುಲಭವಾದುದು ಅಲ್ಲ. ಎಲ್ಲರಿಂದಲೂ ಆಗುವುದು ಇಲ್ಲ. ಈ ಯಾತ್ರೆಯಲ್ಲಿ ಬಜಾಜ್ ಡೊಮಿನಾರ್‍‍ನ ಸಾಮರ್ಥ್ಯವನ್ನು ಸಹ ಅಳೆದಂತಾಗಿದೆ.

Most Read Articles

Kannada
English summary
Bajaj Dominar becomes the first Indian bike to complete a trip from Arctic to Antarctic - Read in kannada
Story first published: Friday, June 7, 2019, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X