Just In
Don't Miss!
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
300 ಕಿ.ಮೀ ಸ್ಪೀಡ್‌ನಲ್ಲಿ ಬೈಕ್ ರೈಡ್ ಮಾಡಿದವನನ್ನು ಕೊನೆಗೂ ಲಾಕ್ ಮಾಡಿದ ಬೆಂಗಳೂರು ಪೊಲೀಸರು
ದೇಶಾದ್ಯಂತ ಕರೋನಾ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಿವಿಧ ರಾಜ್ಯ ಸರ್ಕಾರಗಳು 2ನೇ ಹಂತದ ಲಾಕ್‌ಡೌನ್ ಜಾರಿಗೆ ತಂದಿದ್ದು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಒಂದು ವಾರಗಳ ಕಾಲ ಲಾಕ್‌ಡೌನ್ ವಿಧಿಸಲಾಗಿದೆ.

ಲಾಕ್‌ಡೌನ್ ವೇಳೆ ನಿರ್ದಿಷ್ಟ ಅವಧಿಯೊಳಗೆ ಅಗತ್ಯ ವಸ್ತುಗಳ ಖರೀದಿಗಾಗಿ ಸಮಯಾವಕಾಶ ನೀಡಲಾಗಿದ್ದು, ನಿಗದಿಪಡಿಸಿದ ಅವಧಿ ಹೊರತುಪಡಿಸಿ ಹೊರಗೆ ತಿರುಗುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ವಾಹನಗಳ ಓಡಾಡಕ್ಕೂ ಬ್ರೇಕ್ ಹಾಕಲಾಗಿದ್ದು, ಅಗತ್ಯ ಸೇವೆಗಳ ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದರಿಂದ ಬಹುತೇಕ ನಗರಗಳ ರಸ್ತೆಗಳು ಸ್ತಬ್ಧಗೊಂಡಿದ್ದು, ಈ ನಡುವೆ ಬೈಕ್ ಸ್ಟಂಟ್ ಹಾವಳಿ ಹೆಚ್ಚುತ್ತಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ರಸ್ತೆ ಖಾಲಿ ಇರುವುದರಿಂದ ಬೈಕ್ ಸ್ಟಂಟ್ ಮತ್ತು ಓವರ್ ಸ್ಪೀಡಿಂಗ್ ಪ್ರಕರಣಗಳು ಹೆಚ್ಚುತ್ತಿದ್ದು, ನಮ್ಮ ಬೆಂಗಳೂರಿನಲ್ಲೂ ಕೂಡಾ ಈಗಾಗಲೇ ಇಂತದ್ದೆ ಹಲವು ಪ್ರಕರಣಗಳು ದಾಖಲೆವೆ.

ಬೈಕ್ ಸ್ಟಂಟ್ ಮತ್ತು ಓವರ್ ಸ್ಟೀಡ್‌ನಿಂದಾಗಿ ಈಗಾಗಲೇ ಹಲವರು ಪ್ರಾಣಕಳೆದುಕೊಂಡಿದ್ದು, ಹಲವು ಅಪಘಾತ ಪ್ರಕರಣಗಳಲ್ಲಿ ತಪ್ಪು ಮಾಡಿದವರಿಗಿಂತಲೂ ಅಮಾಯಕರೇ ಹೆಚ್ಚು ಪ್ರಾಣ ಕಳೆದುಕೊಂಡಿದ್ದಾರೆ.

ಸಾರ್ವಜನಿಕ ಪ್ರದೇಶಗಳಲ್ಲಿ ಮತ್ತು ಮುಖ್ಯ ರಸ್ತೆಗಳಲ್ಲಿ ಸ್ಟಂಟ್ ಮಾಡುವುದು, ಓವರ್ ಸ್ಪೀಡಿಂಗ್ ಮಾಡುವುದು ತಪ್ಪು ಎಂದು ಗೊತ್ತಿದ್ದರು ಕೆಲವು ಬೈಕ್‌ರ್ಸ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಲೈಕ್ಸ್ ಮತ್ತು ಫ್ಯಾನ್ಸ್ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ದುಸ್ಸಾಹಸಕ್ಕೆ ಮುಂದಾಗುತ್ತಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

ಇತ್ತೀಚೆಗೆ ಭಾರತದಲ್ಲಿ ಸೂಪರ್ ಬೈಕ್‌ಗಳ ಸಂಖ್ಯೆಯು ವೇಗವಾಗಿ ಹೆಚ್ಚುತ್ತಿದ್ದು, ಬಹುತೇಕ ಸೂಪರ್ ಬೈಕ್ ಮಾಲೀಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಜೊತೆಗೆ ಫೇಸ್‌ಬುಕ್ ಪೇಜ್ ಮತ್ತು ಇನ್ಸ್ಟಾಗ್ರಾಮ್ ಹ್ಯಾಂಡಲ್ ಮೂಲಕ ರೈಡಿಂಗ್ ಅನುಭವಗಳನ್ನು ಹಂಚಿಕೊಳ್ಳುವುದು ಸಾಮಾನ್ಯವಾಗಿದೆ.
ಆದರೆ ಕೆಲವು ಬೈಕ್ ಮಾಲೀಕರು ತಮ್ಮ ರೈಡಿಂಗ್ ಕೌಶಲ್ಯವನ್ನು ಬೇರೆಯವರಿಗೆ ತೋರ್ಪಡಿಸಲು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಪ್ರಮುಖ ರಸ್ತೆಗಳಲ್ಲೇ ಅತಿ ವೇಗದ ಚಾಲನೆ ಜೊತೆಗೆ ವ್ಹೀಲಿಂಗ್ ಮಾಡುವ ಮೂಲಕ ಸಾರ್ವಜನಿಕರಲ್ಲಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.

ಓವರ್ ಸ್ಪೀಡ್ ಬೈಕ್ ರೈಡಿಂಗ್ ಮತ್ತು ಬೈಕ್ ಸ್ಟಂಟ್ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಆರಂಭಿಸಿರುವ ಬೆಂಗಳೂರು ಪೊಲೀಸರು ನಿಯಮ ಮೀರಿ ಬೈಕ್ ರೈಡ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದ್ದು, ನಿನ್ನೆಯು ಕೂಡಾ ಓವರ್ ಸ್ಪೀಡ್ ಬೈಕ್ ರೈಡ್ ಮಾಡುತ್ತಿದ್ದ ಯಮಹಾ ಬೈಕ್ ಮಾಲೀಕನನ್ನು ಲಾಕ್ ಮಾಡಿದ್ದಾರೆ.
MOST READ: ಖರೀದಿಸಿದ ಕೆಲ ನಿಮಿಷಗಳಲ್ಲೇ ಅಪಘಾತಕ್ಕೀಡಾದ ಕೋಟಿ ಬೆಲೆಯ ಐಷಾರಾಮಿ ಕಾರು

ಲಾಕ್‌ಡೌನ್ ಸಂಧರ್ಭದಲ್ಲಿ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಪ್ರತಿ ಗಂಟೆಗೆ ಗರಿಷ್ಠ 299ಕಿ.ಮೀ ವೇಗದಲ್ಲಿ ಬೈಕ್ ರೈಡ್ ಮಾಡುತ್ತಿದ್ದ ಯಮಹಾ ಆರ್1 ಮಾಲೀಕನ್ನು ಬಂಧನ ಮಾಡಲಾಗಿದ್ದು, ಓವರ್ ಸ್ಪೀಡ್ ಪ್ರಕರಣವನ್ನು ಪತ್ತೆ ಹಚ್ಚಿರುವ ಸಿಸಿ ಪೊಲೀಸರು ಟ್ರಾಫಿಕ್ ಪೊಲೀಸರಿಗೆ ಪ್ರಕರಣವನ್ನು ಹಸ್ತಾಂತರಿಸಿದ್ದಾರೆ.

ಸಾರ್ವಜನಿಕರ ದೂರಗಳ ಆಧಾರದ ಮೇಲೆ ಬ್ಲ್ಯೂಬೀಸ್ಟ್46(bluebeast46) ಎನ್ನುವ ಇನ್ಸ್ಟಾಗ್ರಾಮ್ ಹ್ಯಾಂಡಲ್ ಜಾಲಾಡಿರುವ ಸಿಸಿಬಿ ಪೊಲೀಸರು ಬೈಕ್ ಮಾಲೀಕನ ಮಾಹಿತಿ ಕಲೆ ಹಾಕಿ ಟ್ರಾಫಿಕ್ ನಿರ್ವಹಣಾ ವಿಭಾಗಕ್ಕೆ ಪ್ರಕರಣವನ್ನು ಹಸ್ತಾಂತರಿಸಿದ್ದು, ಪ್ರಕರಣ ಮಾಹಿತಿ ಸಿಕ್ಕ ಕೆಲವೇ ಗಂಟೆಗಳಲ್ಲಿ ಬೈಕ್ ಮಾಲೀಕನ್ನು ಬಂಧನ ಮಾಡಲಾಗಿದೆ.
MOST READ: ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಜೊತೆಗೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ರೈಡಿಂಗ್‌ಗೆ ಬಳಕೆ ಮಾಡಲಾಗಿದ್ದ ದುಬಾರಿ ಬೆಲೆಯ ಆರ್1 ಬೈಕ್ ಮಾದರಿಯನ್ನು ಸಹ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಬಂಧನಕ್ಕೆ ಒಳಗಾದ ಕೆಲವೇ ಗಂಟೆಗಳಲ್ಲಿ ಹಲವು ಸೂಪರ್ ಬೈಕ್ ಮಾಲೀಕರು ಸಾಮಾಜಿಕ ಜಾಲತಾಣದಲ್ಲಿನ ನೂರಾರು ವೇಗದ ಚಾಲನೆಯ ವಿಡಿಯೋಗಳನ್ನು ಅಳಿಸಿಹಾಕಿದ್ದಾರೆ.

ಇನ್ನು ಬೆಂಗಳೂರು ಟ್ರಾಫಿಕ್ ಪೊಲೀಸರು ಸದ್ಯ ವಶಪಡಿಸಿಕೊಂಡಿರುವ ಆರ್1 ಬೈಕ್ ಮಾದರಿಯು ಯಮಹಾ ನಿರ್ಮಾಣದ ದುಬಾರಿ ಬೈಕ್ ಆವೃತ್ತಿಯಾಗಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಹೊಸ ಬೈಕ್ ಸದ್ಯ ರೂ. 20.39 ಲಕ್ಷ ಬೆಲೆ ಹೊಂದಿದೆ.
MOST READ: ಗಂಡ ಹೆಂಡತಿ ಜಗಳದಲ್ಲಿ ಪರದಾಡಿದ ವಾಹನ ಸವಾರರು

ಆರ್1 ಬೈಕ್ ಮಾದರಿಯು 998-ಸಿಸಿ ಫೋರ್ ಸಿಲಿಂಡರ್ ಫೋರ್ ವೆವ್ ಎಂಜಿನ್‌ನೊಂದಿಗೆ 200-ಬಿಎಚ್‌ಪಿ ಉತ್ಪಾದನಾ ಸಾಮಾರ್ಥ್ಯ ಹೊಂದಿದ್ದು, ಯಮಹಾ ಕಂಪನಿಯು ಹೊಸ ಬೈಕ್ ಅನ್ನು ವಿಶೇಷವಾಗಿ ಟ್ರ್ಯಾಕ್ ಪರ್ಫಾಮೆನ್ಸ್‌ಗಾಗಿ ಉತ್ಪಾದನೆ ಮಾಡುತ್ತಿದೆ. ಆದರೆ ಹಲವಾರು ಸೂಪರ್ ಬೈಕ್ ಟ್ರ್ಯಾಕ್ ಪರ್ಫಾಮೆನ್ಸ್ ಬಿಟ್ಟು ಸಾರ್ವಜನಿಕ ಸ್ಥಳಗಳಲ್ಲಿ ವೇಗದ ರೈಡಿಂಗ್ ಮುಂದಾಗುತ್ತಿರುವುದು ಅಪಘಾತ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದೆ.