Just In
- 15 min ago ಟಿವಿಎಸ್ ಐಕ್ಯೂಬ್ಗೆ ನಡುಕ ಶುರು!: ಸದ್ಯದಲ್ಲೇ ಕಡಿಮೆ ಬೆಲೆ ಮಾರುಕಟ್ಟೆಗೆ ಬಜಾಜ್ ಚೇತಕ್ ಎಲೆಕ್ಟ್ರಿಕ್
- 49 min ago ರಾಜ್ಯದಲ್ಲಿ ತಯಾರಾಗುವ ಟೊಯೊಟಾ ಇನ್ನೋವಾ ಹೈಕ್ರಾಸ್ಗೆ ಸೆಲೆಬ್ರಿಟಿಗಳು ಫಿಧಾ: ಈ ಕಾರು ಖರೀದಿಸಿದ ನಟಿ
- 57 min ago ಹ್ಯುಂಡೈನ ಈ ಕಾರಿಗೆ ಭಾರತದಲ್ಲಿ ಭರ್ಜರಿ ಡಿಸ್ಕೌಂಟ್: ಇದಕ್ಕಿಂತ ಉತ್ತಮ ಆಫರ್ ಸದ್ಯಕ್ಕಿಲ್ಲ!
- 1 hr ago ರೈತರ ವಿಶ್ವಾಸದೊಂದಿಗೆ 40 ಲಕ್ಷ ಟ್ರ್ಯಾಕ್ಟರ್ ಮಾರಾಟ ಮೈಲಿಗಲ್ಲು ಸಾಧಿಸಿದ ಮಹೀಂದ್ರಾ
Don't Miss!
- News Lok Sabha Election 2024: ಈ 6 ಜಿಲ್ಲೆಗಳಲ್ಲಿ 0% ಮತದಾನ-ಎಲ್ಲಿ ಹಾಗೂ ಕಾರಣ ಏನು?
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Movies ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಟ ದರ್ಶನ್ ಪ್ರಚಾರ; ಸುಮಲತಾ ಅಂಬರೀಶ್ ಪ್ರತಿಕ್ರಿಯೆ
- Lifestyle 5 ನಿಮಿಷದಲ್ಲಿ ಪಾತ್ರೆಯನ್ನು ಹೊಳೆಯುವಂತೆ ಮಾಡಿ..! ಸುಲಭದ ಟಿಪ್ಸ್ ಇಲ್ಲಿದೆ
- Sports LSG vs CSK IPL 2024: ಲಕ್ನೋ vs ಚೆನ್ನೈ ಪಂದ್ಯದ ವರದಿ, ಫ್ಯಾಂಟಸಿ ಡ್ರೀಮ್ ಟೀಂ, ಸಂಭಾವ್ಯ ಆಡುವ 11ರ ಬಳಗ
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬೆಂಗಳೂರಿನ ಜನ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಈ ಕಾರಿನ ಹಿಂದೆ ಓಡಿದರು!!
ಕೆಲವು ದಿನಗಳ ಹಿಂದೆಯಷ್ಟೇ ಭಾರತದಲ್ಲಿಯೇ ಮೊದಲ ಬಾರಿಗೆ ಮೆಕ್ಲರೇನ್ 720ಎಸ್ ಐಷಾರಾಮಿ ದುಬಾರಿ ಕಾರು ಬೆಂಗಳೂರು ಮೂಲದ ಗ್ರಾಹಕರೊಬ್ಬರು ಖರೀದಿ ಮಾಡಿದ್ದರು ಎಂದು ಸುದ್ದಿಯಾಗಿತ್ತು.
ಕೆಲವು ದಿನಗಳ ಹಿಂದೆಯಷ್ಟೇ ಭಾರತದಲ್ಲಿಯೇ ಮೊದಲ ಬಾರಿಗೆ ಮೆಕ್ಲರೇನ್ 720ಎಸ್ ಐಷಾರಾಮಿ ದುಬಾರಿ ಕಾರು ಬೆಂಗಳೂರು ಮೂಲದ ಗ್ರಾಹಕರೊಬ್ಬರು ಖರೀದಿ ಮಾಡಿದ್ದರು ಎಂದು ಸುದ್ದಿಯಾಗಿತ್ತು.
ಈ ಕಾರು ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದು, ಕಾರು ಹೋದಲೆಲ್ಲಾ ಸಿಹಿ ಪದಾರ್ಥಕ್ಕೆ ಇರುವೆ ಮುತ್ತಿಕೊಳ್ಳುವ ರೀತಿಯಲ್ಲಿ ಜನರು ಕಾರಿನತ್ತ ಧಾವಿಸುತ್ತಿರುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ ಎನ್ನಬಹುದು. ನಾವೇನಾದರೂ ಸುಳ್ಳು ಹೇಳುತ್ತಿದ್ದೇವೆ ಎಂದು ನಿಮಗನ್ನಿಸಿದರೆ ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ.
Recommended Video
ಬೆಂಗಳೂರು ಮೂಲದ ರಂಜಿತ್ ಸುಂದರಮೂರ್ತಿ ಎಂಬ ಹೆಸರಿನ ವ್ಯಾಪಾರಿಯೊಬ್ಬರು, ಕೆಂಪು ಬಣ್ಣದ ಮೆಕ್ಲರೇನ್ 720ಎಸ್ ಬ್ರಿಟಿಷ್ ಸೂಪರ್ ಕಾರನ್ನು ತನ್ನದಾಗಿಸಿಕೊಂಡು ಟ್ವಿಟ್ಟರ್ ಖಾತೆಯಲ್ಲಿ ಚಿತ್ರವನ್ನು ಪ್ರಕಟಿಸಿದ್ದರು.
ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ, ಟ್ರಾಫಿಕ್ ಸಿಗ್ನಲ್ನಲ್ಲಿ ಎಲ್ಲರೂ ತಮ್ಮ ಕಣ್ಣುಗಳನ್ನು ಈ ಕಾರಿನ ಮೇಲೆ ನೆಟ್ಟಿದ್ದರು, ಇನ್ನೂ ಕೆಲವು ಜನರು ತಾವು ಹೋಗುತ್ತಿದ್ದ ಕೆಲಸಕಾರ್ಯಗಳನ್ನು ಬಿಟ್ಟು, ಕಾರನ್ನು ಹಿಂಬಾಲಿಸಿದರು.
ಉದ್ಯಾನ ನಗರಿ ತುಂಬೆಲ್ಲಾ ಮೆಕ್ಲರೇನ್ 720ಎಸ್ ಮೇನಿಯಾ ಕಂಡು ಸ್ವತಃ ಕಾರಿನ ಒಡೆಯ ರಂಜಿತ್ ಸುಂದರಮೂರ್ತಿ ಒಂದು ಕ್ಷಣ ನಿಬ್ಬೆರಗಾಗಿದ್ದರೆ ಖಂಡಿತ ಅಚ್ಚರಿಯ ವಿಚಾರ ಅಲ್ಲವೇ ಅಲ್ಲವೆನ್ನುವಸ್ಟು ಪ್ರತಿಕ್ರಿಯೆ ಜನರಿಂದ ವ್ಯಕ್ತವಾಗಿದೆ. ಯುವಕರು ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಕಾರಿನ ಚಿತ್ರ ಕ್ಲಿಕ್ಕಿಸಿ ಸಂಭ್ರಮ ಪಟ್ಟರು.
ಇನ್ನು ಬೆಂಗಳೂರು ಮೂಲದ ಗ್ರಾಹಕ ಕೊಂಡಿರುವ ಈ ಕಾರಿನ ಬಗ್ಗೆ ಹೇಳುವುದಾದರೆ, ಬಲಿಷ್ಠ 4.0-ಲೀಟರ್ ಅವಳಿ ಟರ್ಬೊ ವಿ8 ಎಂಜಿನ್ ಹೊಂದಿದ್ದು, 770 ಎನ್ಎಂ ತಿರುಗುಬಲದಲ್ಲಿ 710 ಬಿಎಚ್ಪಿ ಶಕ್ತಿ ಉತ್ಪಾದನೆ ಮಾಡಲಿದೆ ಹಾಗು 7-ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್ಬಾಕ್ಸ್ ಹೊಂದಿರಲಿದೆ.
ಬೆಂಗಳೂರಿನಲ್ಲಿ ತನ್ನ ಕಮಲ್ ತೋರಿಸಿರುವ ಈ ಕಾರು ಕೇವಲ 2.9 ಸೆಕೆಂಡುಗಳಲ್ಲಿ 200 ಕಿ.ಮೀ ವೇಗದಲ್ಲಿ 100 ವೇಗ ತಲುಪುವಷ್ಟು ಬಲಿಷ್ಠವಾಗಿದೆ ಹಾಗು ಮೆಕ್ಲರೇನ್ 720ಎಸ್ ಕಾರು 341 ಕಿ.ಮೀ ಗರಿಷ್ಠ ವೇಗ ಮಿತಿ ಪಡೆದುಕೊಂಡಿದೆ.