ದಂಡ ಪಾವತಿಸಲು ಹಣವಿಲ್ಲದ ಮಹಿಳೆ ಕೊನೆಗೆ ಮಾಡಿದ್ದು ಹೀಗೆ

ಬೆಳಗಾವಿಯ 30 ವರ್ಷದ ಮಹಿಳೆಯೊಬ್ಬರು ತಮ್ಮ ಮಂಗಳ ಸೂತ್ರವನ್ನು ಪೊಲೀಸರಿಗೆ ನೀಡಿದ ಘಟನೆ ವರದಿಯಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಅವರಿಗೆ ದಂಡ ವಿಧಿಸಲಾಗಿತ್ತು.

ದಂಡ ಪಾವತಿಸಲು ಹಣವಿಲ್ಲದ ಮಹಿಳೆ ಕೊನೆಗೆ ಮಾಡಿದ್ದು ಹೀಗೆ

ದಂಡ ಪಾವತಿಸಲು ಹಣ ಇಲ್ಲದ ಕಾರಣ ಅವರು ತಮ್ಮ ಮಂಗಳ ಸೂತ್ರವನ್ನು ಪೊಲೀಸರಿಗೆ ನೀಡಿದ್ದಾರೆ. ಹೀಗೆ ತಮ್ಮ ಮಂಗಳಸೂತ್ರವನ್ನು ಪೊಲೀಸರಿಗೆ ಒಪ್ಪಿಸಿದ ಮಹಿಳೆಯ ಹೆಸರು ಭಾರತಿ ವಿಬುಧಿ. ಅವರು ಹಾಸಿಗೆಯೊಂದನ್ನು ಖರೀದಿಸಲು ತಮ್ಮ ಪತಿಯೊಂದಿಗೆ ಸ್ಕೂಟರಿನಲ್ಲಿ ಮಾರುಕಟ್ಟೆಗೆ ತೆರಳಿದ್ದರು.

ದಂಡ ಪಾವತಿಸಲು ಹಣವಿಲ್ಲದ ಮಹಿಳೆ ಕೊನೆಗೆ ಮಾಡಿದ್ದು ಹೀಗೆ

ದಂಪತಿ ತಮ್ಮ ಬಳಿ ರೂ.1,800ಗಳನ್ನು ಹೊಂದಿದ್ದರು. ಇದರಲ್ಲಿ ಹಾಸಿಗೆ ಖರೀದಿಸಲು ರೂ.1,700 ಖರ್ಚು ಮಾಡಿದ್ದಾರೆ. ಉಳಿದ 100 ರೂಪಾಯಿಗಳನ್ನು ಉಪಾಹಾರಕ್ಕೆಂದು ಖರ್ಚು ಮಾಡಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ದಂಡ ಪಾವತಿಸಲು ಹಣವಿಲ್ಲದ ಮಹಿಳೆ ಕೊನೆಗೆ ಮಾಡಿದ್ದು ಹೀಗೆ

ಮನೆಗೆ ಹಿಂದಿರುವಾಗ ಪೊಲೀಸರು ಸಿಟಿ ಬಸ್ ನಿಲ್ದಾಣದ ಬಳಿ ಅವರ ಸ್ಕೂಟರ್ ಅನ್ನು ನಿಲ್ಲಿಸಿದ್ದಾರೆ. ಹೆಲ್ಮೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕಾಗಿ ರೂ.500 ದಂಡ ಪಾವತಿಸುವಂತೆ ಪೊಲೀಸರು ಹೇಳಿದ್ದಾರೆ.

ದಂಡ ಪಾವತಿಸಲು ಹಣವಿಲ್ಲದ ಮಹಿಳೆ ಕೊನೆಗೆ ಮಾಡಿದ್ದು ಹೀಗೆ

ಆದರೆ ತಮ್ಮ ಬಳಿ ಇದ್ದ ಹಣ ಖರ್ಚಾಗಿದೆ ಎಂದು ಭಾರತಿ ವಿಬುಧಿ ಪೊಲೀಸರಿಗೆ ತಿಳಿಸಿದ್ದಾರೆ. ತಮ್ಮನ್ನು ಬಿಟ್ಟು ಬಿಡುವಂತೆ ಮನವಿ ಮಾಡಿಕೊಂಡಿದ್ದಾರೆ. ಆದರೆ ಪೊಲೀಸರು ಹಣ ಪಾವತಿಸಲೇ ಬೇಕೆಂದು ಪಟ್ಟು ಹಿಡಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ದಂಡ ಪಾವತಿಸಲು ಹಣವಿಲ್ಲದ ಮಹಿಳೆ ಕೊನೆಗೆ ಮಾಡಿದ್ದು ಹೀಗೆ

ಈ ವೇಳೆ ಪೊಲೀಸರು ಹಾಗೂ ಭಾರತಿ ವಿಬುಧಿರವರ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವಾಗ್ವಾದವು ಸುಮಾರು 2 ಗಂಟೆಗಳ ಕಾಲ ನಡೆದಿದೆ ಎಂದು ಹೇಳಲಾಗಿದೆ. ಈ ವೇಳೆ ಘಟನಾ ಸ್ಥಳದಲ್ಲಿದ್ದ ಸಾರ್ವಜನಿಕರು ಘಟನೆಯನ್ನು ರೆಕಾರ್ಡ್ ಮಾಡಲು ಮುಂದಾಗಿದ್ದಾರೆ.

ದಂಡ ಪಾವತಿಸಲು ಹಣವಿಲ್ಲದ ಮಹಿಳೆ ಕೊನೆಗೆ ಮಾಡಿದ್ದು ಹೀಗೆ

ಕೊನೆಗೆ ತನ್ನ ಭಾರತಿ ವಿಬುಧಿ ತಮ್ಮ ಮಂಗಳಸೂತ್ರವನ್ನು ತೆಗೆದು ಪೊಲೀಸ್ ಅಧಿಕಾರಿಗೆ ನೀಡಿದ್ದಾರೆ. ಅದನ್ನು ಮಾರಾಟ ಮಾಡಿ ಸಂಚಾರ ನಿಯಮ ಉಲ್ಲಂಘನೆಯ ದಂಡವನ್ನು ಪಾವತಿಸಿಕೊಳ್ಳುವಂತೆ ಹೇಳಿದ್ದಾರೆ ಎಂದು ವರದಿಯಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ದಂಡ ಪಾವತಿಸಲು ಹಣವಿಲ್ಲದ ಮಹಿಳೆ ಕೊನೆಗೆ ಮಾಡಿದ್ದು ಹೀಗೆ

ಈ ವೇಳೆ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ಆ ರಸ್ತೆಯ ಮೂಲಕ ಹಾದು ಹೋಗುವ ಈ ದೃಶ್ಯವನ್ನು ಗಮನಿಸಿದ್ದಾರೆ. ಹಿರಿಯ ಅಧಿಕಾರಿಗಳು ಮಧ್ಯಪ್ರವೇಶಿಸಿ ಭಾರತಿ ವಿಬುಧಿ ಹಾಗೂ ಅವರ ಪತಿಗೆ ಅಲ್ಲಿಂದ ತೆರಳಲು ಅವಕಾಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ದಂಡ ಪಾವತಿಸಲು ಹಣವಿಲ್ಲದ ಮಹಿಳೆ ಕೊನೆಗೆ ಮಾಡಿದ್ದು ಹೀಗೆ

ಪೊಲೀಸರು ವಿಧಿಸುವ ದಂಡದಿಂದ ಸಾರ್ವಜನಿಕರು ಈ ರೀತಿ ನಿರಾಶೆಗೊಳ್ಳುತ್ತಿರುವುದು ಭಾರತದಲ್ಲಿ ಇದೇ ಮೊದಲಲ್ಲ. ಇದಕ್ಕೂ ಮೊದಲು ಹೆಚ್ಚು ದಂಡ ವಿಧಿಸಿದ್ದರು ಎಂಬ ಕಾರಣಕ್ಕೆ ದ್ವಿಚಕ್ರ ವಾಹನ ಸವಾರನೊಬ್ಬ ತನ್ನ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿದ್ದ.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Belagavi woman hands over Mangalsutra to cops to pay traffic fine. Read in Kannada.
Story first published: Monday, March 1, 2021, 12:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X