ಕಾರುಗಳ ರೇರ್ ವಿಂಡ್‌ಶೀಲ್ಡ್‌ ಲೈನ್‌ಗಳಿಂದಾಗುವ ಪ್ರಯೋಜನಗಳಿವು

ಕಾರುಗಳಲ್ಲಿರುವ ರೇರ್ ವಿಂಡ್‌ಶೀಲ್ಡ್‌ಗಳು ಲೈನ್‌ಗಳನ್ನು ಹೊಂದಿರುತ್ತವೆ. ಬಹುತೇಕ ಜನರು ಈ ಲೈನ್‌ಗಳನ್ನು ವಿನ್ಯಾಸ ಸ್ಟಿಕ್ಕರ್‌ಗಳೆಂದು ಭಾವಿಸುತ್ತಾರೆ. ಆದರೆ ಅವು ವಿನ್ಯಾಸ ಸ್ಟಿಕ್ಕರ್‌ಗಳಿಲ್ಲ. ಈ ಲೈನ್‌ಗಳನ್ನು ಸುರಕ್ಷತಾ ಕಾರಣಗಳಿಗಾಗಿ ನೀಡಲಾಗಿರುತ್ತದೆ.

ಕಾರುಗಳ ರೇರ್ ವಿಂಡ್‌ಶೀಲ್ಡ್‌ ಲೈನ್‌ಗಳಿಂದಾಗುವ ಪ್ರಯೋಜನಗಳಿವು

ಯಾವ ಕಾರಣಕ್ಕೆ ಈ ಲೈನ್‌ಗಳನ್ನು ನೀಡಲಾಗಿರುತ್ತದೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಸಾಮಾನ್ಯವಾಗಿ ಚಳಿಗಾಲದಲ್ಲಿ ಕಾರಿನ ರೇರ್ ವಿಂಡ್‌ಶೀಲ್ಡ್ ಹಿಮದಿಂದ ಆವೃತವಾಗಿರುತ್ತದೆ. ಇದರಿಂದ ಚಾಲಕನಿಗೆ ಕಾರಿನ ಹಿಂಭಾಗವನ್ನು ರೇರ್ ವೀವ್ ಮಿರರ್ ಮೂಲಕ ಸ್ಪಷ್ಟವಾಗಿ ನೋಡಲು ಸಾಧ್ಯವಾಗುವುದಿಲ್ಲ. ಇದರಿಂದ ಕಾರು ಅಪಘಾತಕ್ಕೆ ಸಿಲುಕುವ ಸಾಧ್ಯತೆಗಳಿರುತ್ತವೆ.

ಕಾರುಗಳ ರೇರ್ ವಿಂಡ್‌ಶೀಲ್ಡ್‌ ಲೈನ್‌ಗಳಿಂದಾಗುವ ಪ್ರಯೋಜನಗಳಿವು

ಕಾರಿನ ರೇರ್ ವಿಂಡ್‌ಶೀಲ್ಡ್‌ನಲ್ಲಿರುವ ಹಿಮವನ್ನು ತೆಗೆದುಹಾಕಲು ಈ ಲೈನ್‌ಗಳನ್ನು ನೀಡಲಾಗುತ್ತದೆ. ಇದರಿಂದ ಚಾಲಕನಿಗೆ ಹಿಂಭಾಗವನ್ನು ಸ್ಪಷ್ಟವಾಗಿ ನೋಡಲುಹಾಗೂ ಕಾರನ್ನು ಸುರಕ್ಷಿತವಾಗಿ ಚಾಲನೆ ಮಾಡಲು ಸಾಧ್ಯವಾಗುತ್ತದೆ.

ಕಾರುಗಳ ರೇರ್ ವಿಂಡ್‌ಶೀಲ್ಡ್‌ ಲೈನ್‌ಗಳಿಂದಾಗುವ ಪ್ರಯೋಜನಗಳಿವು

ವಾಸ್ತವವಾಗಿ ಇವುಗಳು ಲೈನ್‌ಗಳಲ್ಲ. ಇವು ಸಣ್ಣ ತಂತಿಗಳು. ಕಾರುಗಳಲ್ಲಿನ ಈ ವ್ಯವಸ್ಥೆಯನ್ನು ಡಿಫ್ರಾಸ್ಟರ್ಸ್ ಎಂದು ಕರೆಯಲಾಗುತ್ತದೆ. ಇದನ್ನು ಡಿಫಾಗರ್ ಹಾಗೂ ಡಿಮಿಸ್ಟರ್ ಎಂದೂ ಸಹ ಕರೆಯಲಾಗುತ್ತದೆ. ಕಾರಿನ ಹಿಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಸಂಗ್ರಹವಾಗಿರುವ ಹಿಮ ಹಾಗೂ ನೀರಿನ ಹನಿಗಳನ್ನು ತೆಗೆದುಹಾಕುವುದು ಈ ವ್ಯವಸ್ಥೆಯ ಕೆಲಸ.

ಕಾರುಗಳ ರೇರ್ ವಿಂಡ್‌ಶೀಲ್ಡ್‌ ಲೈನ್‌ಗಳಿಂದಾಗುವ ಪ್ರಯೋಜನಗಳಿವು

ಹಿಂಭಾಗದ ವಿಂಡ್‌ಶೀಲ್ಡ್‌ನಲ್ಲಿರುವ ಸಣ್ಣ ತಂತಿಗಳು ಹಿಮವನ್ನು ಬೇಗನೆ ತೆಗೆದುಹಾಕುತ್ತವೆ. ಕಾರಿನ ಹಿಂಭಾಗದ ವಿಂಡ್‌ಶೀಲ್ಡ್‌ನಲ್ಲಿರುವುದು ಸೆಕೆಂಡರಿ ಡಿಫ್ರಾಸ್ಟರ್. ಈ ಡಿಫ್ರಾಸ್ಟರ್ ವ್ಯವಸ್ಥೆಯನ್ನು ಬಳಸಲು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಸ್ವಿಚ್ ನೀಡಲಾಗುತ್ತದೆ.

ಕಾರುಗಳ ರೇರ್ ವಿಂಡ್‌ಶೀಲ್ಡ್‌ ಲೈನ್‌ಗಳಿಂದಾಗುವ ಪ್ರಯೋಜನಗಳಿವು

ಹಿಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಹಿಮ ಅಥವಾ ನೀರು ಇದ್ದಾಗ ಈ ಸ್ವಿಚ್ ಆನ್ ಮಾಡಿದಾಗ ಈ ತಂತಿಗಳಿಗೆ ವಿದ್ಯುತ್ ಹರಿದು, ಬಿಸಿಯಾಗಿ ಹಿಮ ಹಾಗೂ ನೀರಿನ ಹನಿಗಳನ್ನು ತೆಗೆದುಹಾಕುತ್ತದೆ. ಆದರೆ ಕಾರಿನ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಯಾವುದೇ ಲೈನ್‌ಗಳಿರುವುದಿಲ್ಲ.

ಕಾರುಗಳ ರೇರ್ ವಿಂಡ್‌ಶೀಲ್ಡ್‌ ಲೈನ್‌ಗಳಿಂದಾಗುವ ಪ್ರಯೋಜನಗಳಿವು

ಪ್ರೈಮರಿ ಡಿಫ್ರಾಸ್ಟರ್ (ಹಿಂಭಾಗದ ವಿಂಡ್‌ಶೀಲ್ಡ್ ಅನ್ನು ಸೆಕೆಂಡರಿ ಡಿಫ್ರಾಸ್ಟರ್ ಎಂದು ಕರೆಯಲಾಗುತ್ತದೆ) ಕಾರಿನ ಮುಂಭಾಗದ ವಿಂಡ್‌ಶೀಲ್ಡ್ ಅನ್ನು ಬಿಸಿ ಮಾಡಿ ಹಿಮ ಹಾಗೂ ನೀರಿನ ಹನಿಗಳನ್ನು ತೆಗೆದುಹಾಕಲು ನೆರವಾಗುತ್ತದೆ.

ಕಾರುಗಳ ರೇರ್ ವಿಂಡ್‌ಶೀಲ್ಡ್‌ ಲೈನ್‌ಗಳಿಂದಾಗುವ ಪ್ರಯೋಜನಗಳಿವು

ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ಮುಂಭಾಗದ ವಿಂಡ್‌ಶೀಲ್ಡ್‌ಗೆ ಕೆಲವು ವೆಂಟ್'ಗಳು ಅಂಟಿಕೊಂಡಿರುವುದನ್ನು ಗಮನಿಸಬಹುದು. ಇವು ಬೆಚ್ಚಗಿನ ಗಾಳಿಯನ್ನು ಕಳುಹಿಸಿ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿರುವ ಯಾವುದೇ ಹಿಮ ಹಾಗೂ ನೀರಿನ ಹನಿಗಳನ್ನು ತೆಗೆದುಹಾಕುತ್ತವೆ.

ಕಾರುಗಳ ರೇರ್ ವಿಂಡ್‌ಶೀಲ್ಡ್‌ ಲೈನ್‌ಗಳಿಂದಾಗುವ ಪ್ರಯೋಜನಗಳಿವು

ಕಾರಿನ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿರುವ ಹಿಮ ಹಾಗೂ ನೀರಿನ ಹನಿಗಳನ್ನು ತೆಗೆದುಹಾಕುವ ಪ್ರಾಥಮಿಕ ಡಿಫ್ರಾಸ್ಟರ್ ವ್ಯವಸ್ಥೆಯನ್ನು ನಿರ್ವಹಿಸಲು ಸ್ವಿಚ್ ಅನ್ನು ಡ್ಯಾಶ್‌ಬೋರ್ಡ್‌ನಲ್ಲಿ ನೀಡಲಾಗಿರುತ್ತದೆ.

ಕಾರುಗಳ ರೇರ್ ವಿಂಡ್‌ಶೀಲ್ಡ್‌ ಲೈನ್‌ಗಳಿಂದಾಗುವ ಪ್ರಯೋಜನಗಳಿವು

ಮುಂಭಾಗದ ಬದಿಯ ವಿಂಡ್‌ಶೀಲ್ಡ್‌ನಲ್ಲಿ ಮಾತ್ರ ಈ ವಿಧಾನವನ್ನು ಏಕೆ ಬಳಸಬೇಕು ಎಂಬ ಪ್ರಶ್ನೆ ಉದ್ಭವಿಸಬಹುದು. ಹಿಂಭಾಗದ ವಿಂಡ್‌ಶೀಲ್ಡ್‌ನಂತೆ ಮುಂಭಾಗದ ವಿಂಡ್‌ಶೀಲ್ಡ್ ಸಹ ಚಾಲಕನ ದೃಷ್ಟಿಗೆ ಹಾನಿ ಮಾಡುವ ಸಾಧ್ಯತೆಗಳಿರುತ್ತವೆ. ಇದಕ್ಕಾಗಿಯೇ ಈ ವಿಧಾನವನ್ನು ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಬಳಸಲಾಗುತ್ತದೆ.

ಕಾರುಗಳ ರೇರ್ ವಿಂಡ್‌ಶೀಲ್ಡ್‌ ಲೈನ್‌ಗಳಿಂದಾಗುವ ಪ್ರಯೋಜನಗಳಿವು

ಕೆಲವು ಕಾರುಗಳಲ್ಲಿ ಮುಂಭಾಗದ ವಿಂಡ್‌ಶೀಲ್ಡ್ ಹಾಗೂ ಹಿಂಭಾಗದ ವಿಂಡ್‌ಶೀಲ್ಡ್‌ಗಳಲ್ಲಿ ಲೈನ್‌ಗಳನ್ನು ನೀಡಲಾಗಿರುತ್ತದೆ. ಆದರೆ ಅವು ಕಣ್ಣಿಗೆ ಕಾಣಿಸುವುದಿಲ್ಲ. ಇದರಿಂದ ಚಾಲಕನ ದೃಷ್ಟಿಗೂ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಕೆಲವು ಕಾರುಗಳಲ್ಲಿ ಮಾತ್ರ ಈ ಲೈನ್‌ಗಳು ಕಂಡು ಬರುತ್ತವೆ.

ಕಾರುಗಳ ರೇರ್ ವಿಂಡ್‌ಶೀಲ್ಡ್‌ ಲೈನ್‌ಗಳಿಂದಾಗುವ ಪ್ರಯೋಜನಗಳಿವು

ಇದೇ ವೇಳೆ ಹಿಮ ಹಾಗೂ ನೀರಿನ ಹನಿಗಳನ್ನು ತೆಗೆದುಹಾಕುವ ಸಮಯವನ್ನು ಕಡಿಮೆ ಮಾಡಲು ಕೆಲವು ಪ್ರಮುಖ ಕಾರು ಕಂಪನಿಗಳು ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಕಣ್ಣಿಗೆ ಕಾಣಿಸದ ವಿದ್ಯುತ್ ವ್ಯವಸ್ಥೆಯನ್ನು ಒದಗಿಸಲು ಮುಂದಾಗಿವೆ.

Most Read Articles

Kannada
English summary
Benefits from the lines present on rear windshield of the cars. Read in Kannada.
Story first published: Saturday, July 24, 2021, 19:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X